ಅರ್ಕಾನಾ ಕೂಪೆ ಕಾರನ್ನು ಅನಾವರಣಗೊಳಿಸಿದ ರೆನಾಲ್ಟ್..
ಪ್ರೆಂಚ್ ವಾಹನ ತಯಾರಕ ಸಂಸ್ಥೆಯಾದ ರೆನಾಲ್ಟ್ ಕೆಲ ದಿನಗಳ ಹಿಂದೆ ಅರ್ಕಾನಾ ಎಂಬ ಹೆಸರಿನಲ್ಲಿ ಒಂದು ಟೀಸರ್ ಅನ್ನು ಬಿಡುಗಡೆಗೊಳಿಸಿತ್ತು. ಇದೀಗ ಸಂಸ್ಥೆಯು ಹೊಸ ಅರ್ಕಾನಾ ಕೂಪೆ ಕಾರನ್ನು 2018ರ ಮಾಸ್ಕೊ ಮೋಟರ್ ಶೋನಲ್ಲಿ ಅನಾವರಣಾಗೊಳಿಸಿದೆ.
ಪ್ರೆಂಚ್ ವಾಹನ ತಯಾರಕ ಸಂಸ್ಥೆಯಾದ ರೆನಾಲ್ಟ್ ಕೆಲ ದಿನಗಳ ಹಿಂದೆ ಅರ್ಕಾನಾ ಎಂಬ ಹೆಸರಿನಲ್ಲಿ ಒಂದು ಟೀಸರ್ ಅನ್ನು ಬಿಡುಗಡೆಗೊಳಿಸಿತ್ತು. ಇದೀಗ ಸಂಸ್ಥೆಯು ಹೊಸ ಅರ್ಕಾನಾ ಕೂಪೆ ಕಾರನ್ನು 2018ರ ಮಾಸ್ಕೊ ಮೋಟರ್ ಶೋನಲ್ಲಿ ಅನಾವರಣಾಗೊಳಿಸಿದೆ. ಈ ಕ್ರಾಸ್ಓವರ್ ಮಾಡಲ್ ಪೂರ್ತಿಯಾಗಿ ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡಲ್ಲಿ ರೆನಾಲ್ಟ್ ನ ಮುಖ್ಯವಾದ ಉತ್ಪಾದನೆಯಾಗಲಿದೆ.

ಸೆಡಾನ್ ಮತ್ತು ಎಸ್‍ಯುವಿ ವಿನ್ಯಾಸಗಳ ಅಂಶವನ್ನು ಬಳಸಿ ತಯಾರು ಮಾಡಲಾದ ಕ್ರಾಸ್ಓವರ್ ಕಾರು ಈ ಅರ್ಕಾನಾ. 5 ಸೀಟರ್ ಕೂಪೆ ಕ್ರಾಸ್‍ಓವರ್ ರೆನಾಲ್ಟ್ ಕ್ಯಾಪ್ಚುರ್ ಆಧಾರವಾಗಿ ನಿರ್ಮಿಸಲಾಗಿದೆ. ಕಾರಿನ ಮುಂಭಾಗದಲ್ಲಿ ಆಕರ್ಷಕವಾದ ಸ್ಟೈಲಿಂಗ್ ಮತ್ತು ಆಧುನಿಕ ಎಲ್ಇಡಿ ಹೆಡ್‍ಲ್ಯಾಂಪ್ ಅನ್ನು ಅಳವಡಿಸಲಾಗಿದೆ.

ರೆನಾಲ್ಟ್ ಕ್ರಾಸ್ಓವರ್‍ನಲ್ಲಿ ಸ್ಲೋಪಿಂಗ್ ರೂಫ್ ಟಾಪ್ ಡಿಕ್ಕಿಯನ್ನು ಅದ್ಭುತ್ವಾಗಿ ವಿನ್ಯಾಸಗೊಳಿಸಲಾಗಿದೆ. ಅಧಿಕವಾದ ಗ್ರೌಡ್ ಕ್ಲಿಯರೆನ್ಸ್ ಮತ್ತು 19 ಇಂಚಿನ ಅಲಾಯ್ ವ್ಹೀಲ್‍ಗಳನ್ನು ಅಳವಡಿಸಲಾಗಿದೆ. ಅರ್ಕಾನಾ ಒಟ್ಟಾರೆಯಾಗಿ ಸೆಡಾನ್ ಹೌಗು ಎಸ್‍ಯುವಿ ಕಾರಿನ ವಿನ್ಯಾಸವನ್ನು ಹೋಲುತ್ತದೆ.

ರೆನಾಲ್ಟ್ ಅರ್ಕಾನಾ ಕಾರಿನ ಹಿಂಭಾಗದಲ್ಲಿ ಸ್ಪೋರ್ಟಿವ್ ಬಂಪರ್, ಎರಡು ಎಕ್ಸಾಸ್ಟ್ ಮತ್ತು ಎರಡು ಕಡೆ ಇರುವ ಟೈಲ್ ಲೈಟ್‍ಗಳನ್ನು ಅನುಸಂಧಾನ ಮಾಡುತ್ತಾ ಡಿಕ್ಕಿಯ ಬಾಗಿಲಿನ ಮೇಲೆ ಹೋಗುವ ಎಲ್ಇಡಿ ಟಲ್ ಲ್ಯಾಂಪ್ ಸ್ಟಿಪ್ ಇದೆ. ಮುಂದೆ ಮತ್ತೆ ಹಿಂಭಾಗದಲ್ಲಿರುವ ಸ್ಕಿಡ್ ಪ್ಲೆಟ್‍ಗಳು ಸಣ್ಣದಾಗಿ ಕಾಣಿಸುವ ಔಟ್ ಸೈಡ್ ರಿಯರ್ ವ್ಯೂ ಮಿರರ್‍ಗಳನ್ನು ನೋಡಬಹುದಾಗಿದೆ.

ರೆನಾಲ್ಟ್ ಅರ್ಕಾನಾ ಕ್ರಾಸ್‍ಓವರ್ ಕಾರನ್ನು ರಷ್ಯಾ ವರ್ಷನ್ ಡಸ್ಟರ್ ಮತ್ತು ಡಾಸಿಯಾ ಎಸ್‍ಯುವಿಯನ್ನು ನಿರ್ಮಾಣಿಸಿದ ಅದೇ ಪ್ಲಾಟ್‍ಫಾರ್ಮ್‍ನ ಅಡಿಯಲ್ಲಿ ನಿರ್ಮಿಸಲಾಗಿದೆ. ಪ್ರಸ್ತುತ ರೆನಾಲ್ಟ್ ಅರ್ಕಾನಾ ಕಾರಿನ ತಾಂತ್ರಿಕ ಅಂಶಗಳನ್ನು ಬಹಿರಂಗ ಪಡಿಸಲಿಲ್ಲ. ಆದರೆ ರಷ್ಯಾ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ರೆನಾಲ್ಟ್ ಕಾರಿನಲ್ಲಿನ ಎಂಜಿನ್ ಅನ್ನು ಬಳಸುವ ಅವಕಾಶಗಳಿವೆ.

ಮತ್ತೊಂದು ಆಸಕ್ತಿಕರವಾದ ವಿಷಯವೇನೆಂದರೆ.. ಇದು ಆಲ್-ವ್ಹೀಲ್-ಡ್ರೈವ್ ಸಿಸ್ಟಮ್ ಅನ್ನು ಕೂಡಾ ಅಳವಡಿಸಲಾಗಿದ್ದು, ರೆನಾಲ್ಟ್ ಅರ್ಕಾನಾ ಕೂಪೆ ಕ್ರಾಸ್‍ಓವರ್ ಕಾರನ್ನು ಮೊದಲಿಗೆ 2019ರ ಪ್ರಾರಂಭದಲ್ಲಿ ರಷ್ಯ ಮಾರುಕಟ್ಟೆಯನ್ನು ಪ್ರವೇಶಿಸಲಿದೆ. ನಂತರ ಕೆಲ ಸಮಯದ ನಂತರ ಭಾರತೀಯ ಮಾರುಕಟ್ಟೆಗೆ ಎಂಟ್ರಿ ನೀಡಲಿದೆ.

ಡ್ರೈವ್‍ಸ್ಪಾರ್ಕ್ ಕನ್ನಡ ಅಭಿಪ್ರಾಯ
ರೆನಾಲ್ಟ್ ಅರ್ಕಾನಾ ಸ್ಟೈಲಿಷ್ ಸೆಡಾನ್ ಮತ್ತು ಧೃಡವಾದ ಎಸ್‍ಯುವಿ ವಿನ್ಯಾಸದ ಕಾಂಬಿನೇಶನ್ ಅನ್ನು ಪದೆದಿರುವ ಕೂಪೆ ಕಾರಾಗಿದೆ. ರೆನಾಲ್ಟ್ ಅರ್ಕಾನಾ ವಿನ್ಯಾಸದ ಪರವಾಗಿ ಬಹಳ ವಿಭಿನ್ನವಾದ ಮಾಡಲ್ ಆಗಿದೆ. ರೆನಾಲ್ಟ್ ಅರ್ಕಾನಾ ನಿಜವಾಗಿಯು ಭಾರತೀಯರು ಮೆಚ್ಚುವ ಮಾಡಲ್ ಆಲಾವಾಗಿದ್ದು, ಭಾರತದಲ್ಲಿ ಇಲ್ಲಿಯ ವರೆಗು ಇಂತಹ ಕಾರು ಬಂದಿಲ್ಲ.

ಆದರೆ ಕ್ರಾಸ್ಓವರ್ ವಾಹನಗಳನ್ನು ಅಧಿಕವಾಗಿ ಇಷ್ಟ ಪಡುವ ಯೂರೋಪಿಯನ್ ಮಾರುಕಟ್ಟೆಗಾಗಿ ವಿಶೇಷವಾಗಿ ಇದನ್ನು ವಿನ್ಯಾಸಗೊಳಿಸಲಾಗಿದೆ. ಏನೇ ಆದರೂ ವಿದೇಶದ ಮಾರಕ್ಟೆಯಲ್ಲಿ ಹೆಚ್ಚು ಪಡೆದ ನಂತರವೇ ಭಾರತೀಯ ಮಾರುಕಟ್ಟೆಗೆ ಇದು ಕಾಲಿಡಲಿದೆ.


Click it and Unblock the Notifications