ರೆನಾಲ್ಟ್ ಕ್ಯಾಪ್ಚರ್ ಕಾರುಗಳ ಖರೀದಿ ಮೇಲೆ ರೂ.2 ಲಕ್ಷ ಡಿಸ್ಕೌಂಟ್

ಎಸ್‌ಯುವಿ ವಿಭಾಗದಲ್ಲಿ ಭಾರೀ ನೀರಿಕ್ಷೆಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದ ರೆನಾಲ್ಟ್ ಕ್ಯಾಚ್ಚರ್ ಕಾರುಗಳು ಹೇಳಿಕೊಳ್ಳುವಷ್ಟು ಬೇಡಿಕೆ ಗಿಟ್ಟಿಸಿಕೊಳ್ಳುವಲ್ಲಿ ವಿಫಲವಾಯ್ತು.

By Praveen Sannamani

ಎಸ್‌ಯುವಿ ವಿಭಾಗದಲ್ಲಿ ಭಾರೀ ನೀರಿಕ್ಷೆಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದ ರೆನಾಲ್ಟ್ ಕ್ಯಾಪ್ಚರ್ ಕಾರುಗಳು ಹೇಳಿಕೊಳ್ಳುವಷ್ಟು ಬೇಡಿಕೆ ಗಿಟ್ಟಿಸಿಕೊಳ್ಳುವಲ್ಲಿ ವಿಫಲವಾಯ್ತು. ಹೀಗಾಗಿ ಗ್ರಾಹಕರನ್ನು ಸೆಳೆಯುವ ಉದ್ದೇಶದಿಂದ ಕ್ಯಾಪ್ಚರ್ ಕಾರುಗಳ ಮೇಲೆ ಹೊಸ ಆಫರ್‌ಗಳನ್ನು ಘೋಷಣೆ ಮಾಡಲಾಗಿದ್ದು, ಗರಿಷ್ಠವಾಗಿ 2 ಲಕ್ಷ ರೂಪಾಯಿ ಡಿಸ್ಕೌಂಟ್ ಪಡೆಯಬಹುದಾಗಿದೆ.

ರೆನಾಲ್ಟ್ ಕ್ಯಾಚ್ಟರ್ ಕಾರುಗಳ ಖರೀದಿ ಮೇಲೆ ರೂ.2 ಲಕ್ಷ ಡಿಸ್ಕೌಂಟ್

ಕ್ಯಾಪ್ಚರ್ ಕಾರುಗಳು ಸದ್ಯ ವಿವಿಧ 10 ವೆರಿಯಂಟ್‌ ಜೊತೆಗೆ 5 ಪ್ರಮುಖ ಬಣ್ಣಗಳ ಆಯ್ಕೆಯೊಂದಿಗೆ ಗ್ರಾಹಕರನ್ನು ಸಳೆಯುತ್ತಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಪ್ರಮುಖ ತಾಂತ್ರಿಕ ಅಂಶಗಳನ್ನು ಒಳಗೊಂಡಿದೆ. ಹೀಗಿದ್ದರೂ ನೀದಿಷ್ಟ ಮಟ್ಟದ ಬೇಡಿಕೆ ಪಡೆಯುವಲ್ಲಿ ಹಿನ್ನೆಡೆ ಅನುಭವಿಸುತ್ತಿದ್ದು, ಈ ಕಾರಣಕ್ಕೆ ಹೊಸ ಕ್ಯಾಪ್ಚರ್ ಕಾರುಗಳ ಮೇಲೆ ಬರೋಬ್ಬರಿ ರೂ. 2 ಲಕ್ಷ ಡಿಸ್ಕೌಂಟ್ ಘೋಷಣೆ ಮಾಡಲಾಗಿದೆ.

ರೆನಾಲ್ಟ್ ಕ್ಯಾಚ್ಟರ್ ಕಾರುಗಳ ಖರೀದಿ ಮೇಲೆ ರೂ.2 ಲಕ್ಷ ಡಿಸ್ಕೌಂಟ್

ಡಿಸ್ಕೌಂಟ್ ದರ ಗ್ರಾಹಕರು ಖರೀದಿಸುವ ವೆರಿಯೆಂಟ್‌ಗಳ ಮೇಲೆ ನಿರ್ಧಾರವಾಗಲಿದ್ದು, ಇದು ಒಂದು ನಗರದಿಂದ ಮತ್ತೊಂದು ನಗರಕ್ಕೂ ಸಹ ಬೇರೆ ಬೇರೆ ದರಗಳು ಅನ್ವಯವಾಗುತ್ತವೆ. ಇದರಲ್ಲಿ ಹೈ ಎಂಡ್ ಮಾದರಿಯ ಪ್ಲ್ಯಾಟೆನಿ ಡೀಸೆಲ್ ಮಾದರಿಯ ಮೇಲೆ ಗರಿಷ್ಠ ಡಿಸ್ಕೌಂಟ್ ದೊರತಲ್ಲಿ ಆರಂಭಿಕ ಮಾದರಿಯಾದ ಆರ್‌ಎಕ್ಸ್‌ಇ ಪೆಟ್ರೋಲ್ ವರ್ಷನ್ ಮೇಲೆ ಕಡಿಮೆ ಪ್ರಮಾಣ ಡಿಸ್ಕೌಂಟ್ ಅನ್ವಯವಾಗುತ್ತೆ.

ರೆನಾಲ್ಟ್ ಕ್ಯಾಚ್ಟರ್ ಕಾರುಗಳ ಖರೀದಿ ಮೇಲೆ ರೂ.2 ಲಕ್ಷ ಡಿಸ್ಕೌಂಟ್

ಕಡಿಮೆ ಬೆಲೆಗಳಲ್ಲೇ ಕ್ಯಾಪ್ಚರ್ ಎಸ್‌ಯುವಿ ಕಾರುಗಳಲ್ಲಿ ಆಲ್ ವಿಲ್ಹ್ ಡ್ರೈವ್ ಟೆಕ್ನಾಲಜಿ ಸೌಲಭ್ಯವನ್ನು ಒದಗಿಸುವ ಮೂಲಕ ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಅಧ್ಯಾಯ ಶುರು ಮಾಡಿರುವ ರೆನಾಲ್ಟ್ ಸಂಸ್ಥೆಯು, ಕ್ಯಾಪ್ಚರ್ ಕಾರಿನ ಆರಂಭಿಕ ಬೆಲೆಯನ್ನು ಬೆಂಗಳೂರು ಎಕ್ಸ್‌ಶೋರಂ ಪ್ರಕಾರ ಆರಂಭಿಕವಾಗಿ ರೂ.9.99 ಲಕ್ಷಕ್ಕೆ ಹಾಗೂ ಟಾಪ್ ವೆರಿಯಂಟ್‌ಗಳು ರೂ.14.11 ಲಕ್ಷಕ್ಕೆ ಲಭ್ಯವಿವೆ.

ರೆನಾಲ್ಟ್ ಕ್ಯಾಚ್ಟರ್ ಕಾರುಗಳ ಖರೀದಿ ಮೇಲೆ ರೂ.2 ಲಕ್ಷ ಡಿಸ್ಕೌಂಟ್

ರೆನಾಲ್ಟ್ ನಿರ್ಮಾಣದ ಮೊದಲ ಕ್ರಾಸ್ ಓವರ್ ಆವೃತ್ತಿಯಾಗಿರುವ ಕ್ಯಾಪ್ಚರ್ ಕಾರುಗಳು ಉಳಿದೆಲ್ಲಾ ಮಧ್ಯಮ ಗಾತ್ರದ ಎಸ್‌ಯುವಿಯಲ್ಲೇ ಉತ್ತಮ ಚಾರ್ಸಿ ವ್ಯವಸ್ಥೆಯನ್ನು ಹೊಂದಿರುವ ಕಾರು ಮಾದರಿಯಾಗಿದ್ದು, ಆರಂಭದಲ್ಲಿ ಹ್ಯುಂಡೈ ಕ್ರೇಟಾ ಹಾಗೂ ಟಾಟಾ ಹೆಕ್ಸಾ ಆವೃತ್ತಿಗಳಿಗೆ ತೀವ್ರ ಪೈಪೋಟಿ ನೀಡಿತ್ತು. ಆದ್ರೆ ಇತ್ತೀಚೆಗೆ ಕ್ಯಾಪ್ಚರ್ ಕಾರಿನ ಬೇಡಿಕೆಯಲ್ಲಿ ಇಳಿಕೆಯಾಗುತ್ತಿದ್ದು, ಕಾರು ಖರೀದಿಗಾಗಿ ರೆನಾಲ್ಟ್ ಸಂಸ್ಥೆಯು ಅತ್ಯುತ್ತಮ ಆಫರ್ ಘೋಷಣೆ ಮಾಡಿದೆ.

ರೆನಾಲ್ಟ್ ಕ್ಯಾಚ್ಟರ್ ಕಾರುಗಳ ಖರೀದಿ ಮೇಲೆ ರೂ.2 ಲಕ್ಷ ಡಿಸ್ಕೌಂಟ್

ಈ ಮೂಲಕ ಎಸ್‌ಯುವಿ ಪ್ರಿಯರನ್ನು ಸೆಳೆಯಲು ಸಜ್ಜುಗೊಂಡಿರುವ ರೆನಾಲ್ಟ್ ಕ್ಯಾಪ್ಚರ್ ಕಾರು ಡೀಸೆಲ್ ಮತ್ತು ಪೆಟ್ರೋಲ್ ಆವೃತ್ತಿಗಳಲ್ಲಿ ಲಭ್ಯವಿದ್ದು, ಗ್ರಾಹಕರ ಬೇಡಿಕೆಯಂತೆ ವಿವಿಧ ಮಾದರಿಗಳನ್ನು ಆಯ್ಕೆ ಮಾಡಬಹುದಾಗಿದೆ.

ರೆನಾಲ್ಟ್ ಕ್ಯಾಚ್ಟರ್ ಕಾರುಗಳ ಖರೀದಿ ಮೇಲೆ ರೂ.2 ಲಕ್ಷ ಡಿಸ್ಕೌಂಟ್

ಕಾರು ಮಾದರಿಗಳು ಮತ್ತು ಕಾರಿನ ಬೆಲೆ(ಬೆಂಗಳೂರು ಎಕ್ಸ್‌ಶೋರಂ ಪ್ರಕಾರ)

ಕ್ಯಾಪ್ಚರ್ ಆರ್‌ಎಕ್ಸ್‌ಇ ಪೆಟ್ರೋಲ್ -ರೂ. 999999

ಕ್ಯಾಪ್ಚರ್ ಆರ್‌ಎಕ್ಸ್‌ಎಲ್ ಪೆಟ್ರೋಲ್ -ರೂ. 1112499

ಕ್ಯಾಪ್ಚರ್ ಆರ್‌ಎಕ್ಸ್‌ಟಿ ಮೊನೊ ಪೆಟ್ರೋಲ್ -ರೂ. 1174499

ಕ್ಯಾಪ್ಚರ್ ಆರ್‌ಎಕ್ಸ್‌ಟಿ ಪೆಟ್ರೋಲ್ -ರೂ. 1191499

ಕ್ಯಾಪ್ಚರ್ ಆರ್‌ಎಕ್ಸ್‌ಇ ಡೀಸೆಲ್ -ರೂ. 1139999

ಕ್ಯಾಪ್ಚರ್ ಆರ್‌ಎಕ್ಸ್‌ಎ ಡೀಸೆಲ್ -ರೂ. 1252499

ಕ್ಯಾಪ್ಚರ್ ಆರ್‌ಎಕ್ಸ್‌ಟಿ ಮೊನೊ ಡಿಸೇಲ್ -ರೂ. 1314499

ಕ್ಯಾಪ್ಚರ್ ಆರ್‌ಎಕ್ಸ್‌ಟಿ ಡೀಸೆಲ್ -ರೂ. 1331499

ಕ್ಯಾಪ್ಚರ್ ಪ್ಲ್ಯಾಟಿನಿ ಮೊನೊ ಡಿಸೇಲ್ -ರೂ. 1393499

ಕ್ಯಾಪ್ಚರ್ ಪ್ಲ್ಯಾಟಿನಿ ಡಿಸೇಲ್ -ರೂ. 1410499

ರೆನಾಲ್ಟ್ ಕ್ಯಾಚ್ಟರ್ ಕಾರುಗಳ ಖರೀದಿ ಮೇಲೆ ರೂ.2 ಲಕ್ಷ ಡಿಸ್ಕೌಂಟ್

ಎಂಜಿನ್ ಸಾಮರ್ಥ್ಯ

ಡಸ್ಟರ್ ಕಾರು ಮಾದರಿಯಲ್ಲೇ ಕ್ಯಾಪ್ಚರ್ ಕಾರುಗಳು ಕೂಡಾ 1.5-ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಪಡೆದುಕೊಂಡಿದ್ದು, ಪೆಟ್ರೋಲ್ ಕಾರುಗಳು 105-ಬಿಎಚ್‌ಪಿ, 142-ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದಲ್ಲಿ ಡೀಸೆಲ್ ಕಾರುಗಳು 119-ಬಿಎಚ್‌ಪಿ ಮತ್ತು 240-ಎನ್ಎಂ ಟಾರ್ಕ್ ಉತ್ಪಾದಿಸುತ್ತವೆ.

ರೆನಾಲ್ಟ್ ಕ್ಯಾಚ್ಟರ್ ಕಾರುಗಳ ಖರೀದಿ ಮೇಲೆ ರೂ.2 ಲಕ್ಷ ಡಿಸ್ಕೌಂಟ್

ಜೊತೆಗೆ ಪೆಟ್ರೋಲ್ ಕಾರುಗಳಲ್ಲಿ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಒದಗಿಸಲಾಗಿದ್ದು, ಡೀಸೆಲ್ ಆವೃತ್ತಿಗಳಲ್ಲಿ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್, 17-ಇಂಚಿನ ಅಲಾಯ್ ಚಕ್ರಗಳನ್ನು ಅಳವಡಿಕೆ ಮಾಡಲಾಗಿದೆ.

ರೆನಾಲ್ಟ್ ಕ್ಯಾಚ್ಟರ್ ಕಾರುಗಳ ಖರೀದಿ ಮೇಲೆ ರೂ.2 ಲಕ್ಷ ಡಿಸ್ಕೌಂಟ್

ಇನ್ನು ಒಳ ಮತ್ತು ಹೊರ ವಿನ್ಯಾಸದಲ್ಲಿ ಗುರುತರ ಬದಲಾವಣೆ ತಂದಿರುವ ರೆನಾಲ್ಟ್ ಸಂಸ್ಥೆಯು, 310-ಲೀಟರ್ ಬೂಟ್ ಸ್ಪೆಸ್, 50 ಲೀಟರ್ ಸಾಮರ್ಥ್ಯದ ಫ್ಯೂಲ್ ಟ್ಯಾಂಕ್, 210 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ.

ರೆನಾಲ್ಟ್ ಕ್ಯಾಚ್ಟರ್ ಕಾರುಗಳ ಖರೀದಿ ಮೇಲೆ ರೂ.2 ಲಕ್ಷ ಡಿಸ್ಕೌಂಟ್

ವೈಶಿಷ್ಟ್ಯತೆಗಳು

ಡ್ಯುಯಲ್ ಟೋನ್ ಬಣ್ಣದೊಂದಿಗೆ ಹೊಸ ಲುಕ್ ಪಡೆದುಕೊಂಡಿರುವ ಕ್ಯಾಪ್ಚರ್ ಕಾರುಗಳು ಬ್ಲ್ಯಾಕ್ ಆ್ಯಂಡ್ ವೈಟ್ ಥೀಮ್ ಪಡೆದಿವೆ. ಜೊತೆಗೆ ಸುರಕ್ಷತೆಗಾಗಿ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್, ಎಬಿಎಸ್, ಇಬಿಡಿ, ಎಲೆಕ್ಟ್ರಾನಿಕ್ ಸ್ಟ್ಯಾಬಿಲಿಟಿ ಕಂಟ್ರೊಲರ್, ಬ್ಲ್ಯೂಟಥ್ ಕನೆಕ್ವಿಟಿ, ಧ್ವನಿ ನಿಯಂತ್ರಣ ಘಟಕ ಪಡೆದುಕೊಂಡಿದೆ.

ರೆನಾಲ್ಟ್ ಕ್ಯಾಚ್ಟರ್ ಕಾರುಗಳ ಖರೀದಿ ಮೇಲೆ ರೂ.2 ಲಕ್ಷ ಡಿಸ್ಕೌಂಟ್

ಲಭ್ಯವಿರುವ ಕಾರಿನ ಬಣ್ಣಗಳು- ಮೂನ್ ಲೈಟ್ ಸಿಲ್ವರ್, ಪ್ಲ್ಯಾನೆಟ್ ಗ್ರೇ, ಕೆಯೆನಿ ಆರೆೇಂಜ್, ಮೊಹೊಗೆನಿ ಬ್ರೌನ್ ಮತ್ತು ಪರ್ಲ ವೈಟ್

ರೆನಾಲ್ಟ್ ಕ್ಯಾಚ್ಟರ್ ಕಾರುಗಳ ಖರೀದಿ ಮೇಲೆ ರೂ.2 ಲಕ್ಷ ಡಿಸ್ಕೌಂಟ್

ಒಟ್ಟಿನಲ್ಲಿ ರೆನಾಲ್ಟ್ ಸಂಸ್ಥೆಯು ಎಸ್‌ಯುವಿ ಪ್ರಿಯರನ್ನು ಸೆಳೆಯುವ ಉದ್ದೇಶದೊಂದಿಗೆ ಕ್ಯಾಪ್ಚರ್ ಕಾರುಗಳ ಖರೀದಿ ಮೇಲೆ ವಿಶೇಷ ಡಿಸ್ಕೌಂಟ್ ಘೋಷಣೆ ಮಾಡಿದ್ದು, ಮುಂಬರುವ ದಿನಗಳಲ್ಲಿ ಕ್ಯಾಪ್ಚರ್ ಕಾರು ಯಾವ ಮಟ್ಟದಲ್ಲಿ ಬೇಡಿಕೆ ಪಡೆದುಕೊಳ್ಳಲಿವೆ ಎಂಬುವುದನ್ನು ಕಾಯ್ದುನೋಡಬೇಕಿದೆ.

Article Published On: Friday, July 13, 2018, 16:30 [IST]
English summary
Renault Captur SUV Gets Rs 2 Lakh Discount.
Read more on renault suv
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+