ಡಸ್ಟರ್ ಎಸ್‌ಯುವಿ ಕಾರಿನ ಮೇಲೆ ಭಾರೀ ಪ್ರಮಾಣದ ರಿಯಾಯ್ತಿ ಘೋಷಿಸಿದ ರೆನಾಲ್ಟ್
ಮಧ್ಯಮ ಗಾತ್ರದ ಎಸ್‌ಯುವಿ ಕಾರುಗಳಲ್ಲಿ ರೆನಾಲ್ಟ್ ನಿರ್ಮಾಣ ಡಸ್ಟರ್ ಅತ್ಯುತ್ತಮ ಬೇಡಿಕೆ ಹೊಂದಿದ್ದು, ಮತ್ತಷ್ಟು ಗ್ರಾಹಕರನ್ನು ಸೆಳೆಯುವ ಉದ್ದೇಶದಿಂದ ಡಸ್ಟರ್ ಖರೀದಿ ಮೇಲೆ ರೆನಾಲ್ಟ್ ಭಾರೀ ಪ್ರಮಾಣದ ರಿಯಾಯ್ತಿ ಘೋಷಣೆ ಮಾಡಿದೆ.
ಮಧ್ಯಮ ಗಾತ್ರದ ಎಸ್‌ಯುವಿ ಕಾರುಗಳಲ್ಲಿ ರೆನಾಲ್ಟ್ ನಿರ್ಮಾಣ ಡಸ್ಟರ್ ಅತ್ಯುತ್ತಮ ಬೇಡಿಕೆ ಹೊಂದಿದ್ದು, ಮತ್ತಷ್ಟು ಗ್ರಾಹಕರನ್ನು ಸೆಳೆಯುವ ಉದ್ದೇಶದಿಂದ ಡಸ್ಟರ್ ಖರೀದಿ ಮೇಲೆ ರೆನಾಲ್ಟ್ ಭಾರೀ ಪ್ರಮಾಣದ ರಿಯಾಯ್ತಿ ಘೋಷಣೆ ಮಾಡಿದೆ.

ಸದ್ಯ ಡಸ್ಟರ್ ಎಸ್‌ಯುವಿ ಮಾದರಿಗಳು ಕಾರು ಪ್ರಿಯರ ಆಯ್ಕೆಯಲ್ಲಿ ಮುಂಚೂಣಿಯಲ್ಲಿದ್ದು, ಇದೇ ಉದ್ದೇಶದಿಂದ ಮಹತ್ವದ ನಿರ್ಧಾರ ಕೈಗೊಂಡಿರುವ ರೆನಾಲ್ಟ್ ಸಂಸ್ಥೆಯು ಕಾರು ಖರೀದಿ ಮೇಲೆ ಬರೋಬ್ಬರಿ 1 ಲಕ್ಷದ ತನಕ ರಿಯಾಯ್ತಿ ನೀಡುವುದಾಗಿ ಪ್ರಕಟಣೆ ಹೊರಡಿಸಿದೆ.
Recommended Video


ಸದ್ಯ ದೆಹಲಿ ಎಕ್ಸ್‌ಶೋರಂ ಪ್ರಕಾರ ರೆನಾಲ್ಟ್ ಡಸ್ಟರ್ ಕಾರುಗಳು ಆರಂಭಿಕವಾಗಿ ರೂ. 7.95 ಲಕ್ಷ ಮತ್ತು ಉನ್ನತ ಮಾದರಿಯು 12.79 ಲಕ್ಷ ಬೆಲೆ ಹೊಂದಿದ್ದು, ನೀವು ಖರೀದಿಸುವ ಕಾರು ಮಾದರಿಯ ಮೇಲೆ ವಿವಿಧ ಪ್ರಮಾಣದ ಡಿಸ್ಕೌಂಟ್ ದೊರೆಯಲಿದೆ.

ಹೊಸ ದರ ಪಟ್ಟಿಗಳು ಮಾರ್ಚ್ 1ರಿಂದ ಅನ್ವಯವಾಗುವಂತೆ ಪ್ರಕಟಣೆ ಹೊರಡಿಸಿರುವ ರೆನಾಲ್ಟ್ ಸಂಸ್ಥೆಯು, ಆರಂಭಿಕ ಆವೃತ್ತಿಗಳಿಗೆ ರೂ. 55, 925 ಮತ್ತು ಉನ್ನತ ಮಾದರಿಯ ಮೇಲೆ ರೂ. 1,00,761 ಡಿಸ್ಕೌಂಟ್ ನೀಡಲಿದೆ.

ರೆನಾಲ್ಟ್ ಡಸ್ಟರ್ ಕಾರುಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಆವೃತ್ತಿಗಳು ಸೇರಿ ಒಟ್ಟು 10 ಮಾದರಿಗಳಿದ್ದು, ಇವುಗಳಲ್ಲಿ ನೀವು ಖರೀದಿಸುವ ಕಾರು ಆವೃತ್ತಿಯ ಆಧಾರದ ಮೇಲೆ ರಿಯಾಯ್ತಿ ದೊರೆಯಲಿದ್ದು, ಎಲ್ಲಾ ಬೆಲೆಗಳು ದೆಹಲಿ ಎಕ್ಸ್ ಶೋರಂ ಪ್ರಕಾರ ಬೆಲೆ ನಿಗದಿಯಾಗಿರುತ್ತವೆ.

ಈ ಬಗ್ಗೆ ಮಾತನಾಡಿರುವ ರೆನಾಲ್ಟ್ ಇಂಡಿಯಾ ಎಂಡಿ ಸುಮಿತ್ ಸ್ವಾನಿ, "ಕ್ವಿಡ್ ಮಾರಾಟದಲ್ಲಿ ಈಗಾಗಲೇ ಹೊಸ ದಾಖಲೆ ಮಾಡುತ್ತಿರುವ ರೆನಾಲ್ಟ್ ಸಂಸ್ಥೆಯು ಡಸ್ಟರ್ ಮಾರಾಟದಲ್ಲೂ ಮುಂಚೂಣಿ ಸಾಧಿಸುವ ಪ್ರಯತ್ನದಲ್ಲಿದೆ. ಹೀಗಾಗಿ ಗ್ರಾಹಕರ ಆಯ್ಕೆ ಹೆಚ್ಚಿಸಲು ಹೆಚ್ಚಿನ ಮಟ್ಟದ ಡಿಸ್ಕೌಂಟ್ ನೀಡಲಾಗುತ್ತಿದ್ದು, ಈ ಅವಕಾಶವನ್ನು ಗ್ರಾಹಕರನ್ನು ಬಳಸಿಕೊಳ್ಳಲಿ" ಎಂದಿದ್ದಾರೆ.

ಇನ್ನು ರೆನಾಲ್ಟ್ ಡಸ್ಟರ್ ಆವೃತ್ತಿಗಳು 1.5-ಲೀಟರ್ ಪೆಟ್ರೋಲ್ ಎಂಜಿನ್ ಮತ್ತು 1.5-ಡೀಸೆಲ್ ಎಂಜಿನ್ ಹೊಂದಿದ್ದು, ಪೆಟ್ರೋಲ್ ಆವೃತ್ತಿಗಳು 104.5 ಬಿಎಚ್‌ಪಿ ಮತ್ತು 143 ಎನ್ಎಂ ಟಾರ್ಕ್ ಉತ್ಪಾದಿಸುತ್ತವೆ.

ಹಾಗೆಯೇ 1.5-ಲೀಟರ್ ಡಿಸೇಲ್ ಎಂಜಿನ್‌ಗಳು 108.5 ಬಿಎಚ್‌ಪಿ ಮತ್ತು 245ಎನ್ಎಂ ಟಾರ್ಕ್ ಉತ್ಪಾದಿಸುವುದಲ್ಲದೇ, ಎರಡು ಮಾದರಿಯ ಕಾರುಗಳಲ್ಲೂ 5-ಸ್ಪೀಡ್ ಮ್ಯಾನುವಲ್ ಗೇರ್ ಮತ್ತು 6-ಸ್ಪೀಡ್ ಗೇರ್‌ಬಾಕ್ಸ್ ಆವೃತ್ತಿಗಳನ್ನು ಆಯ್ಕೆ ಮಾಡಬಹುದು.
Trending On DriveSpark Kannada:
ಇನ್ಮುಂದೆ ಅಪಘಾತಗಳಲ್ಲಿ ಸತ್ತವರಿಗೆಲ್ಲಾ ಸರ್ಕಾರದಿಂದಲೇ ಪರಿಹಾರವಂತೆ?
10 ಲಕ್ಷದೊಳಗೆ ಖರೀದಿಸಬಹುದಾದ ಟಾಪ್ 10 ಕಾರುಗಳಿವು..
ಹೊಸ ಕೆಟಿಎಂ ಡ್ಯೂಕ್ 390 ಖರೀದಿಸಿದ ತಪ್ಪಿಗೆ ಅಲೆದಾಡುತ್ತಿರುವ ಬೈಕರ್...


Click it and Unblock the Notifications