ಇನ್ಮುಂದೆ ಅಪಘಾತಗಳಲ್ಲಿ ಸತ್ತವರಿಗೆಲ್ಲಾ ಸರ್ಕಾರದಿಂದಲೇ ಪರಿಹಾರವಂತೆ?

ಅಪಘಾತ ಪ್ರಕರಣಗಳಲ್ಲಿ ಸಾವನ್ನಪ್ಪಿದವರಿಗೆ ಸಂಬಂಧಪಟ್ಟ ಸರ್ಕಾರಗಳು ಪರಿಹಾರ ಒದಗಿಸುವುದರ ಬಗ್ಗೆ ನಮಗೆಲ್ಲಾ ಗೊತ್ತಿರುವ ವಿಚಾರ. ಆದ್ರೆ ಕೆಲದಿನಗಳಿಂದ ವಾಟ್ಸಪ್‌ನಲ್ಲಿ ಹರಿದಾಟುತ್ತಿರುವ ಸಂದೇಶ ಒಂದರ ಬಗ್ಗೆ ನೀವೆಲ್ಲಾ ತಿಳಿದುಕೊಳ್ಳಲೇಬೇಕು.

By Praveen Sannamani

ದೇಶಾದ್ಯಂತ ಪ್ರತಿದಿನ ಹತ್ತಾರು ಭೀಕರ ಅಪಘಾತ ಪ್ರಕರಣಗಳು ನಡೆಯುತ್ತಲೇ ಇರುತ್ತವೆ. ಬಹುತೇಕ ಪ್ರಕರಣಗಳಲ್ಲಿ ಸುರಕ್ಷಾ ಸೌಲಭ್ಯಗಳ ಕೊರತೆ ಹಿನ್ನೆಲೆ ಅನೇಕ ವಾಹನ ಸಾವರರು ಮತ್ತು ಪ್ರಯಾಣಿಕರು ಪ್ರಾಣ ಕಳೆದುಕೊಳ್ಳುತ್ತಾರೆ. ಹೀಗಾಗಿ ಕೆಲ ಅಪಘಾತ ಪ್ರಕರಣಗಳಲ್ಲಿ ಸಾವನ್ನಪ್ಪಿದವರಿಗೆ ಸಂಬಂಧಪಟ್ಟ ಸರ್ಕಾರಗಳು ಪರಿಹಾರ ಒದಗಿಸುವುದರ ಬಗ್ಗೆ ನಮಗೆಲ್ಲಾ ಗೊತ್ತಿರುವ ವಿಚಾರ. ಆದ್ರೆ ಕೆಲದಿನಗಳಿಂದ ವಾಟ್ಸಪ್‌ನಲ್ಲಿ ಹರಿದಾಟುತ್ತಿರುವ ಸಂದೇಶ ಒಂದರ ಬಗ್ಗೆ ನೀವೆಲ್ಲಾ ತಿಳಿದುಕೊಳ್ಳಲೇಬೇಕು.

ಇನ್ಮುಂದೆ ಅಪಘಾತಗಳಲ್ಲಿ ಸತ್ತರಿಗೆಲ್ಲಾ ಸರ್ಕಾರದಿಂದಲೇ ಪರಿಹಾರವಂತೆ?

ಸಾಮಾನ್ಯವಾಗಿ ಅಪಘಾತಗಳಲ್ಲಿ ಸಾವನ್ನಪ್ಪಿದವರಿಗೆ ವಾಹನಕ್ಕೆ ಸಂಬಂಧಪಟ್ಟ ವಿಮಾ ಸಂಸ್ಥೆಗಳು ಪರಿಹಾರ ಒದಗಿಸುತ್ತವೆ. ಇದೆಲ್ಲಾ ಬಹುತೇಕರಿಗೆ ಗೊತ್ತಿರುವ ವಿಚಾರ. ಇನ್ನು ಕೆಲ ಸರ್ಕಾರಿ ಬಸ್‌ಗಳು, ರೈಲ್ವೆ ದುರಂತಗಳಲ್ಲಿ ಸರ್ಕಾರಗಳೇ ಸಂತ್ರಸ್ತರಿಗೆ ಪರಿಹಾರ ನೀಡುವುದು ವಾಡಿಕೆ.

Recommended Video

[Kannada] Maruti Swift 2018 - Full Specifications, Features, Price, Mileage, Colours - DriveSpark
ಇನ್ಮುಂದೆ ಅಪಘಾತಗಳಲ್ಲಿ ಸತ್ತರಿಗೆಲ್ಲಾ ಸರ್ಕಾರದಿಂದಲೇ ಪರಿಹಾರವಂತೆ?

ಆದರೇ ಕಳೆದ 1 ವಾರದಿಂದ ವಾಟ್ಸಪ್‌ನಲ್ಲಿ ಹರಿದಾಟುತ್ತಿರುವ ಸಂದೇಶ ಒಂದು ಜನಸಾಮಾನ್ಯರಿಗೆ ತಪ್ಪು ಮಾಹಿತಿಯನ್ನು ರವಾನೆಯಾಗುತ್ತಿರುವುದು ಪತ್ತೆಯಾಗಿದೆ. ವಾಟ್ಸಾಪ್ ಸಂದೇಶದ ಪ್ರಕಾರ ಯಾವುದೇ ರೀತಿಯ ಅಪಘಾತ ಪ್ರಕರಣಗಳಲ್ಲಿ ಯಾರಾದರೂ ಸಾವನ್ನಪ್ಪಿದರೂ ಸರ್ಕಾರವೇ ಪರಿಹಾರ ಒದಗಿಸಲಿದೆ ಎಂಬ ಮಾಹಿತಿ ನೀಡಲಾಗಿದೆ.

ಇನ್ಮುಂದೆ ಅಪಘಾತಗಳಲ್ಲಿ ಸತ್ತರಿಗೆಲ್ಲಾ ಸರ್ಕಾರದಿಂದಲೇ ಪರಿಹಾರವಂತೆ?

ಅಪಘಾತದಲ್ಲಿ ಸಾವನ್ನಪ್ಪಿದ ವ್ಯಕ್ತಿಯ ಆದಾಯಕ್ಕೆ ಅನುಗುಣವಾಗಿ ಸರ್ಕಾರದಿಂದ ಗರಿಷ್ಠ 5 ಲಕ್ಷ ಪರಿಹಾರ ದೊರೆಯಲಿದ್ದು, ಅನೇಕರಿಗೆ ಈ ವಿಚಾರ ಗೊತ್ತಾದೇ ಪರಿಹಾರ ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂಬ ಮಾಹಿತಿಯನ್ನು ಹರಿಬಿಟ್ಟಿದ್ದಾರೆ.

ಇನ್ಮುಂದೆ ಅಪಘಾತಗಳಲ್ಲಿ ಸತ್ತರಿಗೆಲ್ಲಾ ಸರ್ಕಾರದಿಂದಲೇ ಪರಿಹಾರವಂತೆ?

ಜೊತೆಗೆ ಮೋಟಾರ್ ವೆಹಿಕಲ್ ಆಕ್ಟ್ 1988ರ ಅಧಿನಿಯಮ ಅಡಿ ನೀವು ಪರಿಹಾರಕ್ಕಾಗಿ ಅರ್ಜಿ ಕೂಡಾ ಸಲ್ಲಿಸಬಹುದಾಗಿದ್ದು, ಯಾವುದೇ ಮಾದರಿಯ ಅಪಘಾತ ಪ್ರಕರಣವಾದ್ರು ನೀವು ಪರಿಹಾರಕ್ಕೆ ಅರ್ಹರೂ ಎನ್ನಲಾಗಿದೆ.

ಇನ್ಮುಂದೆ ಅಪಘಾತಗಳಲ್ಲಿ ಸತ್ತರಿಗೆಲ್ಲಾ ಸರ್ಕಾರದಿಂದಲೇ ಪರಿಹಾರವಂತೆ?

ವಾಸ್ತವಾಂಶಕ್ಕೆ ಬಂದರೇ, ಮೋಟಾರ್ ವೆಹಿಕಲ್ ಆಕ್ಟ್ 1988 ಅಧಿನಿಯಮವು ಹೇಳುವ ಪ್ರಕಾರ, ಯಾವುದೇ ಮಾದರಿಯ ಅಪಘಾತ ಪ್ರಕರಣಗಳಲ್ಲಿ ಕಾನೂನಾತ್ಮಕ ಪ್ರಕ್ರಿಯೆಗಳು ನಿಖರವಾಗಿದ್ದರೇ ಮಾತ್ರ ಸಂತ್ರಸ್ತರು ಪರಿಹಾರಕ್ಕೆ ಅರ್ಹ ಎಂಬುವುದನ್ನ ಸ್ಪಷ್ಟಪಡಿಸುತ್ತದೆ.

ಇನ್ಮುಂದೆ ಅಪಘಾತಗಳಲ್ಲಿ ಸತ್ತರಿಗೆಲ್ಲಾ ಸರ್ಕಾರದಿಂದಲೇ ಪರಿಹಾರವಂತೆ?

ಹೀಗಿದ್ದಾಗ ಎಲ್ಲಾ ಪ್ರಕರಣಗಳಲ್ಲೂ ಸರ್ಕಾರ ಹೇಗೆ ಪರಿಹಾರ ನೀಡುತ್ತದೆ ಎಂಬುದು ನಾವು ಯೋಚಿಸಬೇಕಾಗುತ್ತದೆ. ಒಂದು ವೇಳೆ ಪ್ರತಿಯೊಂದು ಅಪಘಾತ ಪ್ರಕರಣಗಳಲ್ಲೂ ಪರಿಹಾರ ನೀಡುತ್ತಾ ಹೊದಲ್ಲಿ ದಿನಕ್ಕೆ ಎಷ್ಟು ಪ್ರಮಾಣದ ಪರಿಹಾರ ಬೇಕು ನೀವೇ ನಿರ್ಧರಿಸಿ.

ಇನ್ಮುಂದೆ ಅಪಘಾತಗಳಲ್ಲಿ ಸತ್ತರಿಗೆಲ್ಲಾ ಸರ್ಕಾರದಿಂದಲೇ ಪರಿಹಾರವಂತೆ?

ಹೀಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಟುವ ಕೆಲವು ಸುಳ್ಳುಸುದ್ದಿಗಳಿಗೆ ಕಿವಿಗೊಡಬೇಡಿ. ಇದಲ್ಲದೇ ಸಂದೇಹ ಕೆಳಗೆ ನೀಡಲಾಗುವ "ಇದನ್ನು ತಪ್ಪದೇ ಶೇರ್ ಮಾಡಿ ಹತ್ತಾರು ಜನಕ್ಕೆ ಉಪಯೋಗವಾಗುವುದು" ಎಂಬ ಶೀರ್ಷಿಕೆಗಳನ್ನು ನೋಡಿ ಶೇರ್ ಮಾಡುವ ಮೊದಲು ಸಂದೇಶಗಳ ವಾಸ್ತವಾಂಶ ತಿಳಿದುಕೊಳ್ಳಿ.

ಇನ್ಮುಂದೆ ಅಪಘಾತಗಳಲ್ಲಿ ಸತ್ತರಿಗೆಲ್ಲಾ ಸರ್ಕಾರದಿಂದಲೇ ಪರಿಹಾರವಂತೆ?

ಅದರ ಬದಲಾಗಿ ಸುರಕ್ಷತೆ ಪ್ರಯಾಣಕ್ಕೆ ಹೆಚ್ಚು ಒತ್ತು ನೀಡಿ. ಜೊತೆಗೆ ಅಪಘಾತಗಳಲ್ಲಿ ಕೆಲ ವೇಳೆ ಪ್ರಾಣಹಾನಿಯಾಗುವ ಸಂದರ್ಭಗಳು ಬಂದೇ ಬರುತ್ತವೆ. ಇದಕ್ಕಾಗಿ ಅಗತ್ಯ ವಾಹನ ವಿಮೆಗಳನ್ನು ಮಾಡಿಸಿಕೊಳ್ಳುವುದು ಒಳಿತು. ಇದರಿಂದ ಆರ್ಥಿಕ ಮುಗ್ಗಟ್ಟ ತಗ್ಗಿಸುವುದಲ್ಲೇ ನಿಮ್ಮನ್ನು ನಂಬಿದವರಿಗೂ ಪರಿಹಾರ ಸಿಗುವುದರಲ್ಲಿ ಯಾವುದೇ ಅನುಮಾನವಿಲ್ಲ.

Trending On DriveSpark Kannada:

ಸುಖಕರ ಕಾರು ಪ್ರಯಾಣಕ್ಕಾಗಿ ಕಡ್ಡಾಯವಾಗಿ ಈ 9 ಆಕ್ಸೆಸರಿಗಳ ಬಗ್ಗೆ ಗಮನಹರಿಸಿ..

ಕಾರಿನ ಗೇರ್ ಸ್ಕಿಪ್ ಮಾಡುವುದರಿಂದ ಗೇರ್‌ಬಾಕ್ಸ್ ಹಾಳಾಗುತ್ತಾ ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ಕಾರು ಶುಚಿಯಾಗಿಡಲು 10 ಸುಲಭ ವಿಧಾನಗಳು

Most Read Articles

Kannada
Read more on accident off beat
English summary
Fake News Alert! Does The Government Really Pay Compensation For All Accident Victims?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X