ಮಾರುಕಟ್ಟೆಗೆ ಮತ್ತೆ ಎಂಟ್ರಿ ಕೊಡಲಿದೆ ರೆನಾಲ್ಟ್ ಕ್ವಿಡ್ ಕಾರು..
2015ರಲ್ಲಿ ಫ್ರೆಂಚ್ ವಾಹನ ತಯಾರಕ ಸಂಸ್ಥೆಯಾದ ರೆನಾಲ್ಟ್ ಮಾರುತಿ ಆಲ್ಟೊ ಕಾರಿಗೆ ಪೈಪೋಟಿಯಾಗಿ ಎಂಟ್ರಿ ಲೆವೆಲ್ ಕ್ವಿಡ್ ಕಾರನ್ನು ಬಿಡುಗಡೆಗೊಳಿಸಿತ್ತು.
2015ರಲ್ಲಿ ಫ್ರೆಂಚ್ ವಾಹನ ತಯಾರಕ ಸಂಸ್ಥೆಯಾದ ರೆನಾಲ್ಟ್ ಮಾರುತಿ ಆಲ್ಟೊ ಕಾರಿಗೆ ಪೈಪೋಟಿಯಾಗಿ ಎಂಟ್ರಿ ಲೆವೆಲ್ ಕ್ವಿಡ್ ಕಾರನ್ನು ಬಿಡುಗಡೆಗೊಳಿಸಿತ್ತು. ಆದರೆ ಸಂಸ್ಥೆಯು ಇದೀಗ ರೆನಾಲ್ಟ್ ಕ್ವಿಡ್‍ನ ಯಶಸ್ಸಿನ ನಂತರ ಕ್ವಿಡ್ ಕಾರಿನ ಫೇಸ್‍ಲಿಫ್ಟ್ ಮಾದರಿಯನ್ನು ಪರಿಚಯಿಸಲು ಮುಂದಾಗಿದೆ.

ಬಿಡುಗಡೆಗೊಳ್ಳಲಿರುವ 2019ರ ರೆನಾಲ್ಟ್ ಕ್ವಿಡ್ ಫೆಸ್‍ಲಿಫ್ಟ್ ಕಾರಿನ ಸ್ಪೈ ಚಿತ್ರಗಳು ದೊರಕಿದ್ದು, ಇದೇ ವರ್ಷದ ಕೊನೆಯ ತ್ರೈಮಾಸಿಕ ಅವಧಿ ಅಥವಾ 2019ರ ಮೊದಲನೆಯ ತ್ರೈಮಾಸಿಕ ಅವಧಿಯಲ್ಲಿ ಮಾರುಕಟ್ಟೆಗೆ ಲಗ್ಗೆಯಿಡಲಿದೆ ಎನ್ನಲಾಗಿದೆ.

ಕಡಿಮೆ ಬೆಲೆಯಲ್ಲಿ ಆಕರ್ಷಣೆಯ ವಿನ್ಯಾಸ, ಅಧಿಕ ಮೈಲೇಜ್ ಮತ್ತು ಇನ್ನಿತರೆ ಸೌಲತ್ತುಗಳನ್ನು ಹೊತ್ತು ಬಿಡುಗಡೆಗೊಂಡ ರೆನಾಲ್ಟ್ ಕ್ವಿಡ್, ಸುಮಾರು ಮೂರು ವರ್ಷಗಳ ನಂತರ ಮತ್ತೆ ಜನಪ್ರಿಯತೆಯನ್ನು ಪಡೆಯಲು ಫೇಸ್‍ಲಿಫ್ಟ್ ಮಾದರಿಯಲ್ಲಿ ಬರಲಿದೆ.

ಕೆಲ ದಿನಗಳಿಂದ ರೆನಾಲ್ಟ್ ಕ್ವಿಡ್ ಕಾರಿನ ಮಾರಾಟವು ಕಡಿಮೆಯಾಗಿದ್ದು, ಗ್ರಾಹಕರನ್ನು ಹಿಂಪಡೆಯಲು ಸಂಸ್ಥೆಯು ತೀರ್ಮಾನಿಸಿದ್ದು, ಅಪ್ಡೇಟ್ ಅನ್ನು ಅಳವಡಿಸಿ ಬಿಡುಗಡೆಗೊಳಿಸಲಿದೆ. ಮಾಹಿತಿಗಳ ಪ್ರಕಾರ ರೆನಾಲ್ಟ್ ಕ್ವಿಡ್ ಫೇಸ್‍ಲಿಫ್ಟ್ ಕಾರು ಹೊಸ ಬಂಪರ್, ಹೆಡ್‍ಲ್ಯಾಂಪ್ಸ್ ಮತ್ತು ಫ್ರಂಟ್ ಗ್ರಿಲ್ ಅನ್ನು ಪಡೆಯಲಿದೆ ಎನ್ನಲಾಗಿದೆ.

ಎಂಜಿನ್ ಸಾಮರ್ಥ್ಯ
ಬಿಡುಗಡೆಗೊಳ್ಳಲಿರುವ ಹೊಸ ರೆನಾಲ್ಟ್ ಕ್ವಿಡ್ ಫೇಸ್‍ಲಿಫ್ಟ್ ಕಾರು 799ಸಿಸಿ ಇಂದ 1000ಸಿಸಿ ಎಂಜಿನ್ ಪಡೆದಿರಬಹುದಾಗಿದ್ದು, 52 ಬಿಹೆಚ್‍ಪಿ ಇಂದ 67ಬಿಹೆಚ್‍ಪಿ ಮತ್ತು 72ಎನ್ಎಮ್ ಟಾರ್ಕ್ ಇಂದ 91ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿರಲಿದೆ ಎಂದು ಊಹಿಸಲಾಗಿದೆ. ಎಂಜಿನ್ ಅನ್ನು 5 ಸ್ಪೀಡ್ ಮ್ಯಾನುವಲ್ ಅಥವಾ ಆಟೋಮ್ಯಾಟಿಕ್ ಗೇರ್‍ಬಾಕ್ಸ್ ಆಯ್ಕೆಯಲ್ಲಿ ದೊರೆಯಲಿದೆ ಎನ್ನಲಾಗಿದೆ.

ಕಾರಿನ ಒಳವಿನ್ಯಾಸ
ರೆನಾಲ್ಟ್ ಕ್ವಿಡ್ ಫೇಸ್‍ಲಿಫ್ಟ್ ಕಾರು ತನ್ನ ಹಿಂದಿನ ಮಾದರಿಯಂತೆಯೆ ಡ್ಯಾಶ್‍ಬೋರ್ಡ್ ಮತ್ತು ನ್ಸ್ಟ್ರೂಮೆಂಟ್ ಕ್ಲಸ್ಟರ್ ಅನ್ನು ಪಡೆಯಲಿದ್ದು, ಹೊಸ ಇಂಟೀರಿಯರ್ ಥೀಮ್ ಅನ್ನು ಪಡೆದುಕೊಂಡಿರಲಿದೆ. ಜೊತೆಗೆ ಬ್ಲೂಟೂತ್ ಮತ್ತು ನಾವಿಗೇಷನ್ ಅನ್ನು ಒಳಗೊಂಡ ಟಚ್‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಅನ್ನು ಅಳವಡಿಸಲಾಗಿದೆ.

ರೆನಾಲ್ಟ್ ಕ್ವಿಡ್ ಫೇಸ್‍ಲಿಫ್ಟ್ ಕಾರು 3679ಎಮ್ಎಮ್ ಉದ್ದ, 1579ಎಮ್ಎಮ್ ಅಗಲ, 1478ಎಮ್ಎಮ್ ಎತ್ತರ ಹಾಗು 2422ಎಮ್ಎಮ್‍ನ ವ್ಹೀಲ್ ಬೇಸ್ ಅನ್ನು ಹೊಂದಿರಲಿದೆ. ಹಾಗು 28 ಲೀಟರ್‍ನ ಫ್ಯುಯಲ್ ಟ್ಯಾಂಕ್ ಮತ್ತು 180ಎಮ್ಎಮ್‍ನ ಗ್ರೌಂಡ್ ಕ್ಲಿಯರೆನ್ಸ್ ಅನ್ನು ಪಡೆದಿರಲಿದೆ.

ರೆನಾಲ್ಟ್ ಕ್ವಿಡ್ ಫೇಸ್‍ಲಿಫ್ಟ್ ಕಾರು ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 3.05 ಲಕ್ಷದಿಂದ ಪ್ರಾರಂಭಿಕ ಬೆಲೆಯನ್ನು ಪಡೆಯಲಿದ್ದು, ಒಮ್ಮೆ ಬಿಡುಗಡೆಗೊಂಡಲ್ಲಿ ಮಾರುತಿ ಆಲ್ಟೊ, ಹ್ಯುಂಡೈ ಐಯಾನ್ ಮತ್ತು ಡಟ್ಸನ್ ರೆಡಿ ಗೋ ಕಾರುಗಳಿಗೆ ಪೈಪೋಟಿ ನೀಡಲಿದೆ.


Click it and Unblock the Notifications