ರೆನಾಲ್ಟ್ ಕ್ವಿಡ್ ಸೂಪರ್ ಹೀರೋ ಎಡಿಷನ್ ಬಿಡುಗಡೆ- ಬೆಲೆ ರೂ.4.34 ಲಕ್ಷ

Written By:
Recommended Video - Watch Now!
Fire Accident In Chengicherla, Telangana | Petrol Tanker Blast

ಹ್ಯಾಚ್‌ಬ್ಯಾಕ್ ಆವೃತ್ತಿಗಳಲ್ಲಿ ಅತಿಹೆಚ್ಚು ಬೇಡಿಕೆ ಹೊಂದಿರುವ ಕಾರುಗಳಲ್ಲಿ ರೆನಾಲ್ಟ್ ಕ್ವಿಡ್ ಕೂಡಾ ಉತ್ತಮ ಮಾರಾಟ ದಾಖಲಿಸುತ್ತಿದ್ದು, ಇದೀಗ ಪ್ರಸ್ತುತ ಮಾರುಕಟ್ಟೆಯಲ್ಲಿನ ಗ್ರಾಹಕರನ ಬೇಡಿಕೆಗೆ ಅನುಗುಣವಾಗಿ ಕ್ವಿಡ್ ಸೂಪರ್ ಹೀರೋ ಎಡಿಷನ್ ಆವೃತ್ತಿಯನ್ನು ಪರಿಚಯಿಸಿದೆ.

ರೆನಾಲ್ಟ್ ಕ್ವಿಡ್ ಸೂಪರ್ ಹೀರೋ ಎಡಿಷನ್ ಬಿಡುಗಡೆ- ಬೆಲೆ ರೂ.4.34 ಲಕ್ಷ

ಈ ಹಿಂದಿನ ಕ್ವಿಡ್ ಆವೃತ್ತಿಗಳು ಉತ್ತಮ ಎಂಜಿನ್ ಕಾರ್ಯಕ್ಷಮತೆ ಪಡೆದಿದ್ದರು ಗ್ರಾಹಕರನ್ನು ನಿಗದಿತ ಮಟ್ಟದಲ್ಲಿ ಸೆಳೆಯುವಲ್ಲಿ ವಿಫಲವಾಗಿದ್ದವು. ಈ ಹಿನ್ನೆಲೆ ಹೊಸ ಯೋಜನೆ ರೂಪಿಸಿರುವ ರೆನಾಲ್ಟ್ ಸಂಸ್ಧೆಯು ಮಾರ್ವೆಲ್ ಒನರ್ಸ್ ಡಿಸ್ನಿ ಸಂಸ್ಥೆಯ ಜೊತೆಗೂಡಿ ಗ್ರಾಹಕರ ಬೇಡಿಕೆ ಮೇರೆಗೆ ಸೂಪರ್ ಹೀರೋ ಎಡಿಷನ್ ಅಭಿವೃದ್ಧಿ ಮಾಡಿದೆ.

ರೆನಾಲ್ಟ್ ಕ್ವಿಡ್ ಸೂಪರ್ ಹೀರೋ ಎಡಿಷನ್ ಬಿಡುಗಡೆ- ಬೆಲೆ ರೂ.4.34 ಲಕ್ಷ

ಕ್ವಿಡ್ ಕಾರುಗಳಲ್ಲಿ ಪ್ರಮುಖವಾಗಿ 2 ವಿವಿಧ ಮಾದರಿಗಳನ್ನು ಬಿಡುಗಡೆ ಮಾಡಲಾಗಿದ್ದು, ಮೊದಲ ಮಾದರಿಯಾಗಿ ಕ್ವಿಡ್ ಕ್ಯಾಪ್ಟನ್ ಅಮೆರಿಕ್ ಎಡಿಷನ್ ಮತ್ತು ಎರಡನೇ ಮಾದರಿಯಾಗಿ ಕ್ವಿಡ್ ಐರಾನ್ ಮ್ಯಾನ್ ಎಡಿಷನ್ ಸಿದ್ಧಗೊಳಿಸಲಾಗಿದೆ.

ರೆನಾಲ್ಟ್ ಕ್ವಿಡ್ ಸೂಪರ್ ಹೀರೋ ಎಡಿಷನ್ ಬಿಡುಗಡೆ- ಬೆಲೆ ರೂ.4.34 ಲಕ್ಷ

ಹೀಗಾಗಿ ಪ್ರಸ್ತುತ ಮಾದರಿಗಳಿಂತ 29 ಸಾವಿರ ರೂಪಾಯಿ ಹೆಚ್ಚು ಬೆಲೆ ಹೊಂದಿದ್ದು, ಅಮೆಜಾನ್ ಡಾಟ್ ಕಾಮ್‌ನಲ್ಲಿ ಹೊಸ ಕಾರು ಬುಕ್ಕಿಂಗ್ ಮಾಡಿದಲ್ಲಿ 9 ಸಾವಿರ ರೂಪಾಯಿ ರಿಯಾಯ್ತಿ ಪಡೆಯುವ ಸೌಲಭ್ಯ ಕೂಡಾ ಲಭ್ಯವಿದೆ.

ರೆನಾಲ್ಟ್ ಕ್ವಿಡ್ ಸೂಪರ್ ಹೀರೋ ಎಡಿಷನ್ ಬಿಡುಗಡೆ- ಬೆಲೆ ರೂ.4.34 ಲಕ್ಷ

ಎಂಜಿನ್ ಸಾಮರ್ಥ್ಯ

1.0-ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿರುವ ಕ್ವಿಡ್ ಹೀರೋ ಎಡಿಷನ್‌ಗಳು 67-ಬಿಎಚ್‌ಪಿ ಮತ್ತು 91 ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿ ಹೊಂದಿದ್ದು, ಆಯ್ಕೆ ರೂಪದಲ್ಲಿ 5-ಸ್ಪೀಡ್ ಆಟೋ ಮ್ಯಾಟಿಕ್ ಗೇರ್‌ಬಾಕ್ಸ್ ಮತ್ತು 5-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಆವೃತ್ತಿಯನ್ನು ಆಯ್ಕೆ ಮಾಡಬಹುದು.

ರೆನಾಲ್ಟ್ ಕ್ವಿಡ್ ಸೂಪರ್ ಹೀರೋ ಎಡಿಷನ್ ಬಿಡುಗಡೆ- ಬೆಲೆ ರೂ.4.34 ಲಕ್ಷ

ಜೊತೆಗೆ ಹೊಸ ಕಾರುಗಳಲ್ಲಿ 7-ಇಂಚಿನ ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ ಅಳವಡಿಸಲಾಗಿದ್ದು, ಕಡಿಮೆ ಬೆಲೆಗಳಲ್ಲಿ ಬೆಸ್ಟ್ ಹ್ಯಾಕ್‌ಬ್ಯಾಕ್ ಖರೀದಿಸುವ ಗ್ರಾಹಕರಿಗೆ ಉತ್ತಮ ಆಯ್ಕೆಯಾಗಲಿದೆ ಎಂದು ಹೇಳಬಹುದು.

ರೆನಾಲ್ಟ್ ಕ್ವಿಡ್ ಸೂಪರ್ ಹೀರೋ ಎಡಿಷನ್ ಬಿಡುಗಡೆ- ಬೆಲೆ ರೂ.4.34 ಲಕ್ಷ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಅಮೆರಿಕದಲ್ಲಿ ಜನಪ್ರಿಯಗೊಂಡಿರುವ ಮಾರ್ವೆಲ್ ಒನರ್ಸ್ ಡಿಸ್ನಿ ಸಂಸ್ಥೆಯು ಮೊದಲ ಬಾರಿಗೆ ಭಾರತದಲ್ಲಿ ತನ್ನ ಕಾರ್ಯಚರಣೆ ಆರಂಭಿಸಿದ್ದು, ರೆನಾಲ್ಟ್ ಜೊತೆಗೂಡಿ ಜನಪ್ರಿಯ ಕ್ವಿಡ್ ಮಾದರಿಗಳನ್ನು ಮತ್ತಷ್ಟು ಸುಧಾರಿತ ತಂತ್ರಜ್ಞಾನಗಳ ಜೊತೆಗೆ ಅಭಿವೃದ್ಧಿಗೆ ಯೋಜನೆ ರೂಪಿಸಿದೆ.

Trending DriveSpark YouTube Videos

Subscribe To DriveSpark Kannada YouTube Channel - Click Here

English summary
Renault Kwid Superhero Edition Launched In India.
Story first published: Monday, February 5, 2018, 19:08 [IST]

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark