ಕ್ರ್ಯಾಶ್ ಟೆಸ್ಟಿಂಗ್; ರೆನಾಲ್ಟ್ ಲೊಡ್ಜಿ ಖರೀದಿಗೆ ಎಷ್ಟು ಸುರಕ್ಷಿತ?
ಕಾರಿನ ಸುರಕ್ಷಾ ವಿಚಾರವಾಗಿ ನಡೆಸಲಾಗುವ ಗ್ಲೋಬಲ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ರೆನಾಲ್ಡ್ ಎಂಪಿವಿ ಮಾದರಿಯಾದ ಲೊಡ್ಜಿ ಕಾರು ಆವೃತ್ತಿಯು ಕಳಪೆ ಸಾಧನೆ ತೊರಿದ್ದು, ಕಾರಿನಲ್ಲಿರುವ ಸುರಕ್ಷಾ ಸೌಲಭ್ಯಗಳು ಸಂಪೂರ್ಣ ಕಳಪೆಯಾಗಿದೆ.
ಕಾರಿನ ಸುರಕ್ಷಾ ವಿಚಾರವಾಗಿ ನಡೆಸಲಾಗುವ ಗ್ಲೋಬಲ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ರೆನಾಲ್ಡ್ ಎಂಪಿವಿ ಮಾದರಿಯಾದ ಲೊಡ್ಜಿ ಕಾರು ಆವೃತ್ತಿಯು ಕಳಪೆ ಸಾಧನೆ ತೊರಿದ್ದು, ಕಾರಿನಲ್ಲಿರುವ ಸುರಕ್ಷಾ ಸೌಲಭ್ಯಗಳು ಸಂಪೂರ್ಣ ಕಳಪೆಯಾಗಿರುವುದು ದೃಡಪಟ್ಟಿದೆ.

ಹೊಸ ಕಾರು ಖರೀದಿಗೂ ಮುನ್ನ ಅದರ ವಿನ್ಯಾಸ ಮತ್ತು ಬೆಲೆಗಳು ಎಷ್ಟು ಮುಖ್ಯವೋ ಸುರಕ್ಷಾ ವಿಧಾನಗಳು ಅಷ್ಟೇ ಮುಖ್ಯ. ಆದ್ರೆ ಸುರಕ್ಷಾ ವಿಚಾರದಲ್ಲಿ ರೆನಾಲ್ಟ್ ಲೊಡ್ಜಿ ಕಾರು ಮಾದರಿಯು ಸುರಕ್ಷಾ ವಿಭಾಗದ ರೇಟಿಂಗ್‌ನಲ್ಲಿ ಸೊನ್ನೆ ಅಂಕ ಪಡೆದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಏನಿದು ಕ್ರ್ಯಾಶ್ ಟೆಸ್ಟಿಂಗ್?
ಹೊಸ ಕಾರು ಮಾದರಿಗಳ ಸುರಕ್ಷತೆ ಕುರಿತಂತೆ ಪರೀಕ್ಷೆ ನಡೆಸುವ ಗ್ಲೋಬಲ್ ಎನ್‌ಸಿಎಪಿಯು ಮತ್ತು ಯುರೋ ಕ್ರ್ಯಾಶ್ ಟೆಸ್ಟಿಂಗ್‌ಗಳು ಕಾರುಗಳಲ್ಲಿನ ಸುರಕ್ಷತೆಗಾಗಿ ರೇಟಿಂಗ್ ನೀಡುತ್ತವೆ.

ಈ ವೇಳೆ ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ 5 ಸ್ಟಾರ್ ಪಡೆದರೆ ಅದು ಹೆಚ್ಚು ಸುರಕ್ಷಿತ ಕಾರು ಎಂದರ್ಥ. ಜೊತೆಗೆ 0 ಸ್ಟಾರ್ ರೇಟಿಂಗ್ ಬಂದಲ್ಲಿ ಅದು ಅಸುರಕ್ಷಿತ ಕಾರು ಎಂದು ಕರೆಯಲಾಗುತ್ತದೆ. ಆದ್ರೆ ಗ್ರಾಹಕರನ್ನು ಸೆಳೆಯುವಲ್ಲಿ ವಿಫಲವಾಗಿರುವ ರೆನಾಲ್ಟ್ ಲೊಡ್ಜಿಗಳು ರೇಟಿಂಗ್‌ನಲ್ಲಿ ಸೊನ್ನೆ ಸುತ್ತಿವೆ.

ಇದಲ್ಲದೇ ಪ್ರತಿ ಕಾರು ಮಾದರಿಗಳಿಗೂ ಸುರಕ್ಷಾ ವಿಚಾರವಾಗಿ ಜಾಗತಿಕ ಪ್ರಮಾಣ ಪತ್ರದ ಅವಶ್ಯಕತೆಯಿದ್ದು, ರೆನಾಲ್ಟ್ ಲೊಡ್ಜಿ ಬೇಸಿಕ್ ಮಾದರಿಯು ಸುರಕ್ಷಾ ವಿಚಾರದಲ್ಲಿ ಮುಗ್ಗಸಿರುವುದು ಕಾರು ಖರೀದಿಗೆ ಯೋಗ್ಯವಲ್ಲ ಎನ್ನುವುದು ಸಾಬೀತಾಗಿದೆ.

ಹೀಗಾಗಿ ಅಪಘಾತ ಸಂದರ್ಭಗಳಲ್ಲಿ ಕಾರು ಚಾಲಕನಿಗೆ ಮತ್ತು ಪ್ರಯಾಣಿಕರಿಗೆ ಭಾರೀ ಪ್ರಮಾಣದ ಹಾನಿ ಉಂಟಾಗುವ ಸಾಧ್ಯತೆಗಳಿದ್ದು, ರೆನಾಲ್ಟ್ ಲೊಡ್ಜಿ ಖರೀದಿಸುವುದು ಉತ್ತಮವೇ ಎಂಬ ಪ್ರಶ್ನೆ ಶುರುವಾಗಿವೆ.

ಕೇವಲ ಲೊಡ್ಜಿ ಟಾಪ್ ಎಂಡ್ ವೆರಿಯೆಂಟ್‌ಗಳಲ್ಲಿ ಮಾತ್ರವೇ ಡ್ಯುಯಲ್ ಏರ್‌ಬ್ಯಾಗ್ ಸೇರಿದಂತೆ ಕೆಲವು ಪ್ರಮುಖ ಸುರಕ್ಷಾ ಸೌವಲತ್ತುಗಳನ್ನು ನೀಡಲಾಗಿದ್ದು, ಬೆಸ್ ವೆರಿಯೆಂಟ್‌ಗಳನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡಿರುವುದು ಕ್ರ್ಯಾಶ್ ಟೆಸ್ಟ್‌ನಲ್ಲಿ ಬಹಿರಂಗವಾಗಿದೆ.

ಇದಲ್ಲದೇ ಗ್ರಾಹಕರು ಸಹ ಬೆಲೆ ಕಡಿಮೆ ಎನ್ನುವ ಉದ್ದೇಶದಿಂದ ಲೊಡ್ಜಿ ಬೆಸ್ ವೆರಿಯೆಂಟ್‌ಗಳನ್ನೇ ಹೆಚ್ಚಾಗಿ ಆಯ್ಕೆ ಮಾಡುತ್ತಿರುವುದು ಅಪಾಯಕ್ಕೆ ಆಹ್ವಾನ ಮಾಡಿಕೊಳ್ಳುತ್ತಿದ್ದು, ಅಪಘಾತಗಳ ಸಂದರ್ಭದಲ್ಲಿ ಕನಿಷ್ಠ ಮಟ್ಟದ ಸುರಕ್ಷಾ ಸೌಲಭ್ಯಗಳು ಇಲ್ಲದಿರುವುದು ಪ್ರಯಾಣಿಕರಿಗೆ ಹೆಚ್ಚಿನ ಹಾನಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಇದಲ್ಲದೇ ರೆನಾಲ್ಟ್ ಸಂಸ್ಥೆಯೇ ಅಭಿವೃದ್ಧಿ ಪಡಿಸಿದ 2018ರ ನಿಸ್ಸಾನ್ ಮೈಕ್ರಾ ಹ್ಯಾಚ್‌ಬ್ಯಾಕ್ ಕಾರುಗಳು ಉತ್ತಮ ಸುರಕ್ಷಾ ರೇಟಿಂಗ್ ಪಡೆದುಕೊಳ್ಳುವಲ್ಲಿ ವಿಫಲವಾಗಿದ್ದು, ಕಾರಿನಲ್ಲಿರುವ ಕಳಪೆ ಗುಣಮಟ್ಟದ ಸುರಕ್ಷಾ ಸೌಲಭ್ಯಗಳ ಹಿನ್ನೆಲೆ ಕೇವಲ 1 ಸ್ಟಾರ್ ರೇಟಿಂಗ್ ಪಡೆದುಕೊಳ್ಳಲ್ಲಿ ಶಕ್ತವಾಗಿತ್ತು.
ಗ್ಲೋಬಲ್ ಎನ್‌ಸಿಎಪಿ ಸಂಸ್ಥೆಯು ನಡೆಸಿದ ಕ್ರ್ಯಾಶ್ ಟೆಸ್ಟಿಂಗ್ ವೀಡಿಯೋ ಇಲ್ಲಿದೆ ನೋಡಿ.
ಸದ್ಯ ಎಂಪಿವಿ ಕಾರು ಪ್ರಿಯರ ಆಕರ್ಷಣೆಗೆ ಕಾರಣವಾಗಿರುವ ಮಹೀಂದ್ರಾ ಮರಾಜೊ ಕಾರಿನ ಮತ್ತಷ್ಟು ಚಿತ್ರಗಳಿಗಾಗಿ ಈ ಫೋಟೋ ಗ್ಯಾಲರಿ ನೋಡಿ.


Click it and Unblock the Notifications