ಕಾರುಗಳಿಗೆ ಹೊಲೊಗ್ರಾಮ್ ಸ್ಟಿಕರ್ ಕಡ್ಡಾಯವಂತೆ- ಯಾತಕ್ಕಾಗಿ ಈ ಹೊಸ ನಿಯಮ ಜಾರಿ?

ಕೇಂದ್ರ ಸಾರಿಗೆ ಇಲಾಖೆಯು ವಾಹನಗಳ ಸುರಕ್ಷತೆಗಾಗಿ ಹೊಸ ಹೊಸ ನಿಯಮಗಳನ್ನು ಜಾರಿ ತರುತ್ತಿರುವುದಲ್ಲದೆ ಅವುಗಳನ್ನು ಕಡ್ಡಾಯವಾಗಿ ಅಳವಡಿಸುವಂತೆ ಕಾಯ್ದೆ ರೂಪಿಸುತ್ತಿದೆ. ಕಳೆದ ವಾರವಷ್ಟೇ ಹೈ ಸೆಕ್ಯೂರಿಟಿ ರಿಜೆಸ್ಟ್ರೇಶನ್ ನಂಬರ್ ಪ್ಲೇಟ್ ಕಡ್ಡಾಯವೆಂದು ಆದೇಶ ಹೊರಡಿಸಲಾಗಿದ್ದು, ಇದೀಗ ಕಾರುಗಳಿಗೆ ಹೊಲೊಗ್ರಾಮ್ ಸ್ಟಿಕರ್‌ ಅಂಟಿಸುವುದು ಕಡ್ಡಾಯ ಮಾಡುತ್ತಿದೆ.

ಕಾರುಗಳಿಗೆ ಹೊಲೊಗ್ರಾಮ್ ಸ್ಟಿಕರ್ ಕಡ್ಡಾಯವಂತೆ- ಯಾತಕ್ಕಾಗಿ ಈ ಹೊಸ ನಿಯಮ ಜಾರಿ?

ಕಾರುಗಳು ಮತ್ತು ದ್ವಿಚಕ್ರ ವಾಹನಗಳಲ್ಲಿ ಹೈ ಸೆಕ್ಯೂರಿಟಿ ರಿಜಿಸ್ಟ್ರೇಶನ್ ಪ್ಲೇಟ್ ಮಾತ್ರವಲ್ಲದೇ ಪ್ರತಿ ಕಾರು ಆವೃತ್ತಿಯು ಯಾವ ಮಾದರಿಯ ಇಂಧನವನ್ನು ಬಳಕೆ ಮಾಡುತ್ತಿದೆ ಎಂದು ತಿಳಿಯಲು ಕಡ್ಡಾಯವಾಗಿ ಹೊಲೊಗ್ರಾಮ್ ಸಿಕ್ಟರ್ ಅಂಟಿಸುವ ನಿಯಮವನ್ನು ಜಾರಿಗೆ ತರಲಾಗುತ್ತಿದ್ದು, ಇದೇ ತಿಂಗಳು ಸೆ. 30ರಂದು ಹೊಸ ಕಾಯ್ದೆ ಅಳುವಡಿಕೆಗೆ ಡೆಡ್‌ಲೈನ್ ಎಂದು ಸುಪ್ರೀಂಕೋರ್ಟ್ ಆದೇಶ ನೀಡಿದೆ.

ಕಾರುಗಳಿಗೆ ಹೊಲೊಗ್ರಾಮ್ ಸ್ಟಿಕರ್ ಕಡ್ಡಾಯವಂತೆ- ಯಾತಕ್ಕಾಗಿ ಈ ಹೊಸ ನಿಯಮ ಜಾರಿ?

ಯಾತಕ್ಕಾಗಿ ಈ ಹೊಸ ನಿಯಮ ಜಾರಿ?

ಹೆಚ್ಚುತ್ತಿರುವ ಮಾಲಿನ್ಯ ತಡೆಗಾಗಿ ಡೀಸೆಲ್ ಮತ್ತು ಪೆಟ್ರೋಲ್ ಕಾರುಗಳ ಮೇಲೆ ನಿಯಂತ್ರಣ ಹೊಂದಲು ಮುಂದಾಗಿರುವ ಕೇಂದ್ರ ಸಾರಿಗೆ ಇಲಾಖೆಯು ಕಾರಿನ ಇಂಧನ ಮಾದರಿಯನ್ನು ತಿಳಿಯಲು ಈ ಕಾಯ್ದೆಯನ್ನು ಕಡ್ಡಾಯ ಜಾರಿಗೊಳಿಸುತ್ತಿದ್ದು, ಇದು ಮಾಲಿನ್ಯದ ಕೂಪವಾಗಿರುವ ದೆಹಲಿಯಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ಜಾರಿ ಬರಲಿದೆ.

ಕಾರುಗಳಿಗೆ ಹೊಲೊಗ್ರಾಮ್ ಸ್ಟಿಕರ್ ಕಡ್ಡಾಯವಂತೆ- ಯಾತಕ್ಕಾಗಿ ಈ ಹೊಸ ನಿಯಮ ಜಾರಿ?

ಸುಪ್ರೀಂಕೋರ್ಟ್ ಆದೇಶದ ಹಿನ್ನೆಲೆ ಹೊಸ ಕಾಯ್ದೆಯನ್ನು ಇದೇ ತಿಂಗಳು ಅಂತ್ಯಕ್ಕೆ ಕಡ್ಡಾಯಗೊಳಿಸಿರುವ ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಮೊದಲ ಹಂತವಾಗಿ ದೆಹಲಿಯಲ್ಲಿ ಹಾಗೂ ಮುಂದಿನ ದಿನಗಳಲ್ಲಿ ದೇಶಾದ್ಯಂತ ಹೊಸ ನಿಮಯವನ್ನು ಕಡ್ಡಾಯಗೊಳಿಸಲಿದೆ.

ಕಾರುಗಳಿಗೆ ಹೊಲೊಗ್ರಾಮ್ ಸ್ಟಿಕರ್ ಕಡ್ಡಾಯವಂತೆ- ಯಾತಕ್ಕಾಗಿ ಈ ಹೊಸ ನಿಯಮ ಜಾರಿ?

ಪ್ಯಾರಿಸ್ ಮಾದರಿಯಲ್ಲಿ ಈ ವ್ಯವಸ್ಥೆಯನ್ನು ಜಾರಿಗೆ ತರಲಾಗಿದ್ದು, ಈ ಸಂಬಂಧ ಸುಪ್ರೀಂಕೋರ್ಟ್‌ನಲ್ಲಿ ನಡೆದ ಅರ್ಜಿಯೊಂದರ ವಿಚಾರಣೆ ವೇಳೆ ಈ ಆದೇಶವನ್ನು ನೀಡಲಾಗಿದೆ. ಇದರಿಂದ ಇಂಧನ ಮಾದರಿಗೆ ಅನುಗುಣವಾಗಿ ವಿವಿಧ ರೀತಿಯ ಬಣ್ಣದ ಸ್ಟಿಕರ್‌ಗಳು ಕಾರಿನ ಫ್ಯೂಲ್ ಟ್ಯಾಂಕ್ ಕ್ಯಾಪ್ ಮೇಲೆ ಕಂಡುಬರಲಿವೆ.

ಕಾರುಗಳಿಗೆ ಹೊಲೊಗ್ರಾಮ್ ಸ್ಟಿಕರ್ ಕಡ್ಡಾಯವಂತೆ- ಯಾತಕ್ಕಾಗಿ ಈ ಹೊಸ ನಿಯಮ ಜಾರಿ?

ಮತ್ತೊಂದು ಪ್ರಮುಖ ಕಾರಣಕ್ಕಾಗಿ ಹೊಲೊಗ್ರಾಮ್ ಸ್ಟಿಕರ್ ಬಳಕೆಯು ಕಾರು ಮಾಲೀಕರ ಸಹಾಯಕ್ಕೆ ಬರುವುದಲ್ಲದೇ ಹೊಸ ಕಾಯ್ದೆ ಕಡ್ಡಾಯದಿಂದಾಗಿ ಪೆಟ್ರೋಲ್ ಬಂಕ್ ಸಿಬ್ಬಂದಿಯಿಂದ ಆಗಬಹುದಾದ ಅವಾಂತರಗಳಿಗೆ ಕಡಿವಾಣ ಹಾಕಬಹುದಾಗಿದೆ.

MOST READ: ಬೈಕ್ ಮೂಲಕವೇ ಬೆಂಗಳೂರು ಟು ಸಿಡ್ನಿಗೆ ಹೊರಟಿರುವ ಹುಬ್ಬಳ್ಳಿ ಹುಡುಗಿಯ ಕನಸು ಏನು?

ಕಾರುಗಳಿಗೆ ಹೊಲೊಗ್ರಾಮ್ ಸ್ಟಿಕರ್ ಕಡ್ಡಾಯವಂತೆ- ಯಾತಕ್ಕಾಗಿ ಈ ಹೊಸ ನಿಯಮ ಜಾರಿ?

ಯಾಕೆಂದ್ರೆ ಪೆಟ್ರೋಲ್ ಬಂಕ್‌ನಲ್ಲಿ ಇಂಧನ ತುಂಬಿಸುವಾಗ ಕೆಲವು ಬಾರಿ ಬಂಕ್ ಸಿಬ್ಬಂದಿಯು ಪೆಟ್ರೋಲ್ ಎಂಜಿನ್ ಕಾರುಗಳಿಗೆ ಪೆಟ್ರೋಲ್ ಬದಲಾಗಿ ಡೀಸೆಲ್ ತುಂಬಿಸುತ್ತಿರುವ ಅವಾಂತರ ನಡೆಯುತ್ತಲೇ ಇದ್ದು, ಈ ಹಿನ್ನೆಲೆ ಪ್ರತಿ ಕಾರುಗಳ ಇಂಧನ ಟ್ಯಾಂಕ್ ಕ್ಯಾಪ್ ಮೇಲೆ ಇಂಧನ ಮಾದರಿಯ ಹೆಸರು ಕಡ್ಡಾಯವಾಗಿರುವುದು ಒಂದು ರೀತಿ ಒಳ್ಳೆಯ ನಿರ್ಧಾರ ಎನ್ನಬಹುದು.

ಕಾರುಗಳಿಗೆ ಹೊಲೊಗ್ರಾಮ್ ಸ್ಟಿಕರ್ ಕಡ್ಡಾಯವಂತೆ- ಯಾತಕ್ಕಾಗಿ ಈ ಹೊಸ ನಿಯಮ ಜಾರಿ?

ಇದಕ್ಕೆ ಸ್ಪಷ್ಟ ಉದಾಹರಣೆ ಅಂದ್ರೆ, ಮಾಜಿ ಶಾಸಕ ಮೊಯಿದ್ದೀನ್ ಬಾವಾ ಅವರ ಐಷಾರಾಮಿ ವೊಲ್ವೊ ಎಕ್ಸ್‌ಸಿ 90 ಕಾರು ಕೂಡಾ ಇಂತದ್ದೆ ಸಂಕಷ್ಟಕ್ಕೆ ಸಿಲುಕಿಕೊಂಡಿತ್ತು. ಪೆಟ್ರೋಲ್ ಬದಲಾಗಿ ಡೀಸೆಲ್ ತುಂಬಿಸಿದ್ದರ ಪರಿಣಾಮ ಹೊಸ ಕಾರು ರೀಪೆರಿಗೆ ಒಳಗಾಗಿತ್ತು.

ಕಾರುಗಳಿಗೆ ಹೊಲೊಗ್ರಾಮ್ ಸ್ಟಿಕರ್ ಕಡ್ಡಾಯವಂತೆ- ಯಾತಕ್ಕಾಗಿ ಈ ಹೊಸ ನಿಯಮ ಜಾರಿ?

ಸುಮಾರು 1.65 ಕೋಟಿ ಬೆಲೆಯ ಎಕ್ಸ್‌ಸಿ 90 ಕಾರಿಗೆ ಪೆಟ್ರೋಲ್ ತುಂಬಿಸುವ ಉದ್ದೇಶದಿಂದ ಬಂಕ್‌ಗೆ ಬಂದಿದ್ದರು. ಈ ವೇಳೆ ಪೆಟ್ರೋಲ್‌ಗೆ ಬದಲಾಗಿ ಡೀಸೆಲ್ ತುಂಬಿಸಿದ್ದ ಬಂಕ್ ಸಿಬ್ಬಂದಿ ಹೊಸ ಕಾರು ಡೀಸೆಲ್ ಎಂಜಿನ್ ಹೊಂದಿರಬೇಕು ಎಂದುಕೊಂಡು ಇಂಧನ ತುಂಬಿಸಿ ಬಿಟ್ಟಿದ್ದ.

ಕಾರುಗಳಿಗೆ ಹೊಲೊಗ್ರಾಮ್ ಸ್ಟಿಕರ್ ಕಡ್ಡಾಯವಂತೆ- ಯಾತಕ್ಕಾಗಿ ಈ ಹೊಸ ನಿಯಮ ಜಾರಿ?

ಇದರಿಂದ ಕಾರಿನ ಎಂಜಿನ್ ಸಂಪೂರ್ಣ ನಿಷ್ಕೀಯಗೊಂಡಿಲ್ಲದೇ ಪೆಟ್ರೋಲ್ ಎಂಜಿನ್‌ಗೆ ಸೇರಿದ್ದ ಡೀಸೆಲ್ ಸ್ವಚ್ಚಗೊಳಿಸಲು ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದರು. ಆದ್ರೆ ಇದಕ್ಕೆ ತಗುಲಿದ ವೆಚ್ಚವನ್ನು ಭರಿಸಲು ಪೆಟ್ರೋಲ್ ಬಂಕ್ ಮಾಲೀಕರು ನಿರಾಕರಿಸಿದ್ದರು.

MOST READ: ಜಾಗ್ವಾರ್ ಕಾರು ಖರೀದಿಸಿದ ರೈತನ ಅಸಲಿ ಕಥೆ ಏನು.?

ಕಾರುಗಳಿಗೆ ಹೊಲೊಗ್ರಾಮ್ ಸ್ಟಿಕರ್ ಕಡ್ಡಾಯವಂತೆ- ಯಾತಕ್ಕಾಗಿ ಈ ಹೊಸ ನಿಯಮ ಜಾರಿ?

ಇದರಿಂದಾಗಿ ಅನಿವಾರ್ಯವಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದ ಮಾಜಿ ಶಾಸಕ ಮೊಯಿದ್ದೀನ್ ಬಾವಾ ಅವರು ಮತ್ತೊಮ್ಮೆ ಈ ರೀತಿಯಾಗದಂತೆ ಕಾರಿನ ಫ್ಯೂಲ್ ಟ್ಯಾಂಕ್ ಮೇಲೆ ಹೊಲೊಗ್ರಾಮ್ ಸ್ಟಿಕರ್ ಹಾಕಿಸಿದ್ದಲ್ಲದೇ ಆದ ಘಟನೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು.

Image Source: Daiji World

ಕಾರುಗಳಿಗೆ ಹೊಲೊಗ್ರಾಮ್ ಸ್ಟಿಕರ್ ಕಡ್ಡಾಯವಂತೆ- ಯಾತಕ್ಕಾಗಿ ಈ ಹೊಸ ನಿಯಮ ಜಾರಿ?

ಹೀಗಾಗಿ ನಿಮ್ಮ ಕಾರುಗಳ ಫ್ಯೂಲ್ ಟ್ಯಾಂಕ್‍ನ ಕ್ಯಾಪ್ ಮೇಲೆ ಕಡ್ಡಾಯವಾಗಿ ಯಾವ ಇಂಧನ ಮಾದರಿ ಎಂಬುವುದು ಸ್ಪಷ್ಟವಾಗಿ ತಿಳಿಯುವಂತೆ ಸ್ಟಿಕರ್ ಅಂಟಿಸಬೇಕಿದ್ದು, ಇದರಿಂದ ಪೆಟ್ರೋಲ್ ಬಂಕ್ ಸಿಬ್ಬಂದಿಗೆ ಅಷ್ಟೇ ಅಲ್ಲದೇ ಕಾರು ಮಾಲೀಕರಿಗೂ ಉಪಯುಕ್ತ ಎನ್ನಬಹುದು.

ವಾಹನಗಳಲ್ಲಿ ಈ ರೀತಿಯ ನಂಬರ್ ಪ್ಲೇಟ್ ಇಲ್ಲವಾದ್ರೆ ಜೈಲು ಗ್ಯಾರಂಟಿ..

ಇನ್ನು ನಗರ ಪ್ರದೇಶಗಳಲ್ಲಿ ನಕಲಿ ನಂಬರ್ ಪ್ಲೇಟ್ ಬಳಕೆ ಮಾಡಿ ದುಷ್ಕೃತ್ಯವೆಸಗುವವರ ಸಂಖ್ಯೆ ಅತಿಯಾಗುತ್ತಿದ್ದು, ಇದಕ್ಕೆ ಲಗಾಮು ಹಾಕುವ ಸಲುವಾಗಿ ಕೇಂದ್ರ ಸಾರಿಗೆ ಸಚಿವಾಲಯವು ನಂಬರ್ ಪ್ಲೇಟ್ ವಿನ್ಯಾಸದಲ್ಲಿ ಹೊಸ ಬದಲಾವಣೆಗೆ ಮುಂದಾಗಿದೆ. ಇದರಿಂದ ನಿಯಮ ಉಲ್ಲಂಘಿಸುವವರ ವಿರುದ್ಧ ಹೊಸ ಅಸ್ತ್ರ ಪ್ರಯೋಗಿಸಲು ಮುಂದಾಗಿದೆ.

ವಾಹನಗಳಲ್ಲಿ ಈ ರೀತಿಯ ನಂಬರ್ ಪ್ಲೇಟ್ ಇಲ್ಲವಾದ್ರೆ ಜೈಲು ಗ್ಯಾರಂಟಿ..!

ಕೇಂದ್ರ ಸಾರಿಗೆ ಇಲಾಖೆಯು ವಾಹನಗಳ ಸುರಕ್ಷತೆಗಾಗಿ ಹಲವು ಹೊಸ ನಿಯಮಗಳನ್ನು ಕಡ್ಡಾಯಗೊಳಿಸುತ್ತಿದ್ದು, ಇದೀಗ ಹೈ ಸೆಕ್ಯೂರಿಟಿ ರಿಜಿಸ್ಟ್ರೇಶನ್ ಪ್ಲೇಟ್ ಅನ್ನು ಎಲ್ಲಾ ವಾಹನಗಳು ಕಡ್ಡಾಯವಾಗಿ ಹೊಂದಿರಬೇಕೆಂಬ ನಿಯಮವನ್ನು ಜಾರಿ ಮಾಡಲು ಮುಂದಾಗಿರುವುದು ವಾಹನ ಮಾಲೀಕರಿಗೆ ಹತ್ತು ಹಲವು ಪ್ರಯೋಜನಗಳಿವೆ ಎನ್ನಬಹುದು.

ವಾಹನಗಳಲ್ಲಿ ಈ ರೀತಿಯ ನಂಬರ್ ಪ್ಲೇಟ್ ಇಲ್ಲವಾದ್ರೆ ಜೈಲು ಗ್ಯಾರಂಟಿ..

ಎಚ್‌ಎಸ್‌ಆರ್‌ಪಿ ಇಲ್ಲವಾದ್ರೆ ಜೈಲು ವಾಸ.!

ಹೊಸ ನಿಯಮವನ್ನು ಉಲ್ಲಂಘಿಸುವ ವಾಹನ ಮಾಲೀಕರಿಗೆ ಭಾರೀ ಪ್ರಮಾಣದ ದಂಡ ಇಲ್ಲವೇ ಜೈಲು ವಾಸ ವಿಧಿಸಲು ಮುಂದಾಗಿರುವ ಕೇಂದ್ರ ಸಾರಿಗೆ ಇಲಾಖೆಯು, ಮೊದಲ ಹಂತವಾಗಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಈ ನಿಯಮವನ್ನು ಕಡ್ಡಾಯಗೊಳಿಸುತ್ತಿದೆ.

ವಾಹನಗಳಲ್ಲಿ ಈ ರೀತಿಯ ನಂಬರ್ ಪ್ಲೇಟ್ ಇಲ್ಲವಾದ್ರೆ ಜೈಲು ಗ್ಯಾರಂಟಿ..

ಅಕ್ಟೋಬರ್ 13ರಿಂದಲೇ ಹೊಸ ನಿಯಮ ಅನ್ವಯ!

ರಾಜಧಾನಿ ದೆಹಲಿಯಲ್ಲಿ ಮೊದಲ ಹಂತವಾಗಿ ಎಚ್‌ಎಸ್‌ಆರ್‌ಪಿ(ಹೈ ಸೆಕ್ಯೂರಿಟಿ ರಿಜಿಸ್ಟ್ರೇಶನ್ ಪ್ಲೇಟ್) ಅಳವಡಿಕೆಯನ್ನು ಅಕ್ಟೋಬರ್ 13ರಿಂದಲೇ ಕಡ್ಡಾಯಗೊಳಿಸಿ ಆದೇಶ ಹೊರಡಿಸಲಾಗಿದ್ದು, ದೆಹಲಿಯೊಂದರಲ್ಲೇ ಬರೋಬ್ಬರಿ 40 ಲಕ್ಷಕ್ಕೂ ಹೆಚ್ಚು ವಾಹನಗಳಲ್ಲಿ ಎಹೆಚ್ಎಸ್ಆರ್‌ಪಿ ಸೌಲಭ್ಯವಿಲ್ಲದಿರುವುದು ವಾಹನಗಳ ದತ್ತಾಂಶ ಸಂಗ್ರಹಣೆಗೂ ತೊಡಕಾಗಿ ಪರಿಣಮಿಸಿದೆ.

ವಾಹನಗಳಲ್ಲಿ ಈ ರೀತಿಯ ನಂಬರ್ ಪ್ಲೇಟ್ ಇಲ್ಲವಾದ್ರೆ ಜೈಲು ಗ್ಯಾರಂಟಿ..

ಕೇಂದ್ರ ಸರ್ಕಾರವು 2001ರಲ್ಲೇ ಮೋಟಾರ್ ವೆಹಿಕಲ್ ಆ್ಯಕ್ಟ್ ಅನ್ವಯ ಹೈ ಸೆಕ್ಯೂರಿಟಿ ರಿಜಿಸ್ಟ್ರೇಶನ್ ಪ್ಲೇಟ್ (ಎಚ್‌ಎಸ್‌ಆರ್‌ಪಿ) ಅಳವಡಿಸಬೇಕೆಂಬ ನಿಯಮವನ್ನು ಜಾರಿಗೊಳಿಸಿದ್ದರೂ ಇದುವರೆಗೆ ಅದು ಯಾವ ರಾಜ್ಯಗಳಲ್ಲೂ ಅನುಷ್ಠಾನಕ್ಕೆ ಬಂದಿಲ್ಲ. ಹೀಗಾಗಿಯೇ ಈ ಕಾಯ್ದೆಗೆ ಹೊಸ ತಿದ್ದುಪಡಿ ತರುವ ಮೂಲಕ ಇದೀಗ ದೇಶಾದ್ಯಂತ ಹಂತ ಹಂತವಾಗಿ ಜಾರಿಗೆ ಮಾಡಲು ಸಿದ್ದತೆ ನಡೆಸಲಾಗುತ್ತಿದೆ.

ವಾಹನಗಳಲ್ಲಿ ಈ ರೀತಿಯ ನಂಬರ್ ಪ್ಲೇಟ್ ಇಲ್ಲವಾದ್ರೆ ಜೈಲು ಗ್ಯಾರಂಟಿ..

ಹೊಸ ನಂಬರ್ ಪ್ಲೇಟ್‌ಗೆ ರೇಟ್ ಫಿಕ್ಸ್.!

ಈ ಹಿಂದೆ ಈ ನಿಯಮ ಜಾರಿಗೆ ಬಂದಾಗ ಹೊಸ ವೈಶಿಷ್ಟ್ಯತೆಗಳನ್ನು ಹೊಂದಿದ್ದ ನಂಬರ್ ‌ಪ್ಲೇಟ್‌ಗಳು ದುಬಾರಿಯಾಗಿದ್ದವು. ಇದೇ ಕಾರಣಕ್ಕಾಗಿ ವಾಹನ ಸವಾರರು ಹೊಸ ನಿಯಮಕ್ಕೆ ಭಾರೀ ವಿರೋಧ ವ್ಯಕ್ತಪಡಿಸಿದ್ದರು. ಆದ್ರೆ ಕೇಂದ್ರ ಸಾರಿಗೆ ಇಲಾಖೆಯ ಈ ಬಾರಿ ನಿಗದಿ ಮಾಡಿರುವ ದರಗಳು ಅಷ್ಟೇನು ದುಬಾರಿ ಇಲ್ಲ ಎನ್ನಬಹುದು.

ವಾಹನಗಳಲ್ಲಿ ಈ ರೀತಿಯ ನಂಬರ್ ಪ್ಲೇಟ್ ಇಲ್ಲವಾದ್ರೆ ಜೈಲು ಗ್ಯಾರಂಟಿ..

ಇದಕ್ಕಾಗಿ ದೆಹಲಿಯಲ್ಲಿ 13 ಕಡೆಗಳಲ್ಲಿ ಹೈ ಸೆಕ್ಯೂರಿಟಿ ರಿಜಿಸ್ಟ್ರೇಶನ್ ಪ್ಲೇಟ್ ಅಳವಡಿಕೆ ಕೇಂದ್ರಗಳನ್ನು ತೆರೆಯಲಾಗಿದ್ದು, ಆನ್‌ಲೈನ್ ಮೂಲಕ ಹಣ ಪಾವತಿ ನಂತರ ಇಲ್ಲಿ ನಿಮ್ಮ ವಾಹನಗಳಿಗೆ ಹೈ ಸೆಕ್ಯೂರಿಟಿ ರಿಜಿಸ್ಟ್ರೇಶನ್ ಪ್ಲೇಟ್ ಪಡೆದುಕೊಳ್ಳಬಹುದು.

ವಾಹನಗಳಲ್ಲಿ ಈ ರೀತಿಯ ನಂಬರ್ ಪ್ಲೇಟ್ ಇಲ್ಲವಾದ್ರೆ ಜೈಲು ಗ್ಯಾರಂಟಿ..

ಹೊಸ ಕಾಯ್ದೆಯಿಂದ ಏನು ಲಾಭ?

ವಾಹನಗಳ ಮೇಲೆ ಸೂಕ್ತ ನಿಗಾ ಇಡಲು ಹೈ ಸೆಕ್ಯೂರಿಟಿ ರಿಜಿಸ್ಟ್ರೇಶನ್ ಪ್ಲೇಟ್ ಅವಶ್ಯಕತೆಯಿದ್ದು, ಡಿಕೋಡಿಂಗ್ ಮಾದರಿಯಲ್ಲಿರುವ ಹೊಸ ನಂಬರ್ ಪ್ಲೇಟ್‌ನಲ್ಲಿ ವಾಹನದ ಪ್ರತಿಯೊಂದು ದಾಖಲೆ ಸಹ ಸಂಗ್ರಹವಾಗಿರುತ್ತೆ. ಜೊತೆಗೆ ಹೊಸ ನಂಬರ್ ಪ್ಲೇಟ್ 5 ವರ್ಷಗಳ ವಾರಂಟಿ ಹೊಂದಿರುತ್ತೆ ಎನ್ನಬಹುದು.

ವಾಹನಗಳಲ್ಲಿ ಈ ರೀತಿಯ ನಂಬರ್ ಪ್ಲೇಟ್ ಇಲ್ಲವಾದ್ರೆ ಜೈಲು ಗ್ಯಾರಂಟಿ..

ಇನ್ನೊಂದು ಪ್ರಮಖ ವಿಚಾರ ಅಂದ್ರೆ, ಕಾರು ಉತ್ಪಾದಕರೇ ಪೂರೈಸುವ ನಂಬರ್ ಪ್ಲೇಟ್‌ಗಳು ಹೊಸ ಸುರಕ್ಷಾ ನೀತಿ ಅಡಿಯಲ್ಲೇ ಅಭಿವೃದ್ಧಿಪಡಿಸಿದ ಉತ್ಪನ್ನವಾಗಿದ್ದು, ಇದು ಕೇಂದ್ರ ಸರ್ಕಾರದ ಸಾರಿಗೆ ಇಲಾಖೆಯಿಂದ ಪ್ರಮಾಣಿಕೃತಗೊಂಡಿರುತ್ತದೆ.

Most Read Articles

ಟಾಟಾ ಸಂಸ್ಥೆಯು ಇತ್ತೀಚೆಗೆ ಬಿಡುಗಡೆ ಮಾಡಿರುವ ಅತಿ ವಿನೂತನ ಟಿಯಾಗೊ ಎನ್ಆರ್‌ಜಿ ಎಡಿಷನ್ ಬಿಡುಗಡೆಗೊಂಡಿದ್ದು, ರೂ.5.49 ಲಕ್ಷ ಬೆಲೆಯೊಂದಿಗೆ ಎಂಟ್ರಿ ಲೆವಲ್ ಕಾರುಗಳ ವಿಭಾಗದಲ್ಲಿ ಸದ್ದು ಮಾಡುತ್ತಿದೆ.

Kannada
Read more on auto news
English summary
New Supreme Court Order: Coloured Hologram Stickers For Fuel-Type Classification Of Vehicles.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X