ಮಾರುತಿ ಸುಜುಕಿ ಸಂಸ್ಥೆಯು ಭಾರತೀಯ ಮಾರುಕಟ್ಟೆಗಾಗಿ ಮತ್ತಷ್ಟು ಹೊಸ ಕಾರು ಉತ್ಪನ್ನಗಳನ್ನು ಪರಿಚಯಿಸಲು ಮುಂದಾಗಿದ್ದು, ಸದ್ಯ ಮಾರುಕಟ್ಟೆಲ್ಲಿರುವ ಮಧ್ಯಮ ಗಾತ್ರದ ಪ್ರಮುಖ ಎಸ್‌ಯುವಿಗಳಿಗೆ ವಿಟಾರಾ ಕಾರುಗಳು ತೀವ್ರ ಪೈಪೋಟಿ ನೀಡುವ ಎಲ್ಲಾ ಗುಣಲಕ್ಷಣಗಳನ್ನು ಹೊಂದಿದೆ.
ಮಿಡ್ ರೇಂಜ್ ಎಸ್‍ಯುವಿ ಕಾರು ಮಾದರಿ ಇದಾಗಿದ್ದು, 2019ರ ವೇಳೆಗೆ ಬಿಡುಗಡೆಗೊಳಿಸಲು ನಿರ್ಧರಿಸುವ ಮಾರುತಿ ಸುಜುಕಿಯ ಹೊಸ ವಿಟಾರಾ ಎಸ್‍ಯುವಿ ಕಾರುಗಳನ್ನು ಈಗಾಗಲೇ ದೇಶದ ವಿವಿಧ ಕಡೆಗಳಲ್ಲಿ ಸ್ಪಾಟ್ ಟೆಸ್ಟಿಂಗ್ ನಡೆಸುವ ಮೂಲಕ ಎಂಜಿನ್ ಕಾರ್ಯಕ್ಷಮತೆ ಬಗೆಗೆ ಅಧ್ಯಯನ ನಡೆಸುತ್ತಿದೆ.
ಸುಜುಕಿ ವಿಟಾರಾ ಕಾರುಗಳು ಈಗಾಗಲೆೇ ಯೂರೋಪ್‍ನ ಮಾರುಕಟ್ಟೆಯಲ್ಲಿ ಯಶಸ್ವಿಯಾಗಿ ಮಾರಾಟಗೊಳ್ಳುತ್ತಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಮಾದರಿಗಳಲ್ಲಿ ದೊರೆಯುತ್ತಿದೆ. ಇನ್ನು ಈ ಕಾರು ಹ್ಯುಂಡೈ ಕ್ರೆಟಾ ಮತು ಮಹಿಂದ್ರಾ ಎಕ್ಸ್ ಯುವಿ ಕಾರುಗಳ ಬೆಲೆಗಳನ್ನು ಹೋಲಲಿದೆ.
ವಿಟಾರಾ ಕಾರಿನ ಪೆಟ್ರೋಲ್ ಆವೃತ್ತಿಯು 1.4 ಲೀಟರ್ ಟರ್ಬೋಚಾರ್ಜ್ಡ್ ಎಂಜಿನ್ ಹೊಂದಿದ್ದು, 140-ಬಿಹೆಚ್‍ಪಿ ಮತ್ತು 230-ಎನ್ಎಂ ಟಾರ್ಕ್ಅನ್ನು ಉತ್ಪಾದಿಸಲಿದೆ. ಹಾಗೆಯೇ ಈ ಎಂಜಿನ್ ಅನ್ನು 6 ಸ್ಪೀಡ್ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್‍ಬಾಕ್ಸ್ ಆಯ್ಕೆಯಲ್ಲಿ ಬರಲಿದೆ ಎನ್ನಲಾಗಿದೆ.
ವಿಟಾರಾ ಕಾರಿನ ಡೀಸೆಲ್ ಆವೃತ್ತಿಯು 1.6 ಲೀಟರ್ ಫಿಯೆಟ್ ಮಲ್ಟಿಜೆಟ್ ಟರ್ಬೋಚಾರ್ಜ್ಡ್ ಎಂಜಿನ್ ಎಂಜಿನ್ ಹೊಂದಿದ್ದು, 120-ಬಿಹೆಚ್‍ಪಿ ಮತ್ತು 320-ಎನ್ಎಂ ಟಾರ್ಕ್ ಅನ್ನು ಉತ್ಪಾದಿಸಲಿದ್ದು, 6 ಸ್ಪೀಡ್ ಮ್ಯಾನುವಲ್ ಗೇರ್‍ಬಾಕ್ಸ್ ಗೆ ಜೋಡಿಸಲಾಗಿದೆ ಎನ್ನಲಾಗಿದೆ.
ಭಾರತದ ಮಾರುಕಟ್ಟೆಯಲ್ಲಿ ಹೊಸ ಮಾರುತಿ ವಿಟಾರಾ ಫ್ರಂಟ್ ವೀಲ್ ಡ್ರೈವ್ ಎಸ್‍ಯುವಿ ರೂಪದಲ್ಲಿ ಬರಬಹುದು ಎಂದು ಅಂದಾಜಿಸಲಾಗಿದ್ದು, ಗ್ಲೋಬಲ್ ಮಾರುಕಟ್ಟೆಯಲ್ಲಿನ ವಿಟಾರಾಗಳು ಆಲ್ ವೀಲ್ ಡ್ರೈವ್ ರೂಪದಲ್ಲಿ ದೊರೆಯುತ್ತಿದೆ.
ಇದಲ್ಲದೇ ಹೊಸ ರೂಪದ ವಿಟಾರಾ ಕಾರುಗಳು ಎಸ್‌ಯುವಿ ಕಾರುಗಳಲ್ಲೇ ವಿಶೇಷ ಗುಣಲಕ್ಷಣಗಳನ್ನು ಹೊಂದಿದ್ದು, 5 ಸೀಟರ್ ವಿನ್ಯಾಸದೊಂದಿಗೆ ಪ್ರಯಾಣಿಕರ ಸುರಕ್ಷತೆಗಾಗಿ ಎಬಿಎಸ್ ಮತ್ತು 4 ಏರ್‍ಬ್ಯಾಗ್ ಗಳನ್ನು ಬಳಸಲಾಗಿದೆ.
ಹೊಸ ವಿಟಾರಾ ಕಾರುಗಳು ಪ್ರೀಮಿಯಂ ಮುಖಾಂತರ ಮಾರಾಟಗೊಳ್ಳುವುದಾಗಿ ಹೇಳಲಾಗುತ್ತಿದ್ದು, ನೆಕ್ಸಾನ್ ಡೀಲರ್‍ಶಿಪ್ ನೆಟ್ವರ್ಕ್ ಮುಖಾಂತರ ಮಾರಾಟಗೊಳ್ಳಬೇಕು ಎಂದು ನಿರೀಕ್ಷೆಯಿದೆ. ಹಾಗೆಯೇ ಕಾರಿನ ಬೆಲೆಯು ರೂ.9 ಲಕ್ಷದಿಂದ ರೂ.12 ಲಕ್ಷದವರೆಗೆ ಇರಬಹುದೆಂದು ಅಂದಾಜಿಸಲಾಗಿದೆ.
ಈಗಾಗಲೇ ವಿಟಾರಾ ಬ್ರೆಝಾ ಕಾರುಗಳು ಭಾರತದಲ್ಲಿ ಹೆಚ್ಚು ಜನಪ್ರಿಯತೆಯನ್ನು ಕಂಡಿದ್ದು, ಈ ಹಿನ್ನೆಲೆ ಕಾಂಪ್ಯಾಕ್ಟ್ ಎಸ್‍ಯುವಿ ಕಾರನ್ನು ಬಿಡುಗಡೆ ಮಾಡುವ ನಿರ್ಧಾರವನ್ನು ಮಾಡಲಾಗಿದೆ. ಒಮ್ಮೆ ಈ ಕಾರು ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡಲ್ಲಿ ಹ್ಯುಂಡೈ ಕ್ರೆಟಾ, ಮಹಿಂದ್ರಾ ಎಕ್ಸ್ ಯುವಿ 500 ಮತ್ತು ರೆನಾಲ್ಟ್ ಕ್ಯಾಪ್ಚರ್ ಕಾರಿಗೆ ಪೈಪೋಟಿಯನ್ನು ನೀಡಲಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:
ಹೆಲ್ಮೆಟ್ ವಿಚಾರವಾಗಿ ಮಾರಾಮಾರಿ- ಯುವಕನನ್ನು ಕಂಬಕ್ಕೆ ಕಟ್ಟಿ ಥಳಿಸಿದ ಪೊಲೀಸರು..
30 ಕೋಟಿಗೂ ಹೆಚ್ಚು ಬೆಲೆಬಾಳುವ ಈ ಐಷಾರಾಮಿ ಎಸ್‌ಯುವಿ ಕಾರಿನ ವಿಶೇಷತೆ ಏನು?
ಉಡುಪಿಯಲ್ಲಿ ಭೀಕರ ಅಪಘಾತ- ಇನೋವಾ ಗುದ್ದಿದ ರಭಸಕ್ಕೆ ಗಾಳಿಯಲ್ಲಿ ತೂರಿ ಹೋದ ಪಲ್ಸರ್ ಬೈಕ್...
ಮೋದಿ ಹೆಸರಿನಲ್ಲಿ ಭಾರೀ ಜನಪ್ರಿಯತೆ ಪಡೆಯುತ್ತಿರುವ ಈ ಬೈಕಿನ ಅಸಲಿಯತ್ತು ಏನು?
ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Subscribe to Kannada DriveSpark