ಡೀಸೆಲ್ ಕಾರುಗಳನ್ನೇ ಟೆಸ್ಲಾ ಕಾರುಗಳನ್ನಾಗಿ ಬದಲಿಸಿಕೊಂಡ ಸ್ವಿಸ್ ಪೊಲೀಸರು

By Praveen Sannamani

ವಿಶ್ವಾದ್ಯಂತ ಎಲೆಕ್ಟ್ರಿಕ್ ಕಾರುಗಳಿಗೆ ಹೆಚ್ಚುತ್ತಿರುವ ಬೇಡಿಕೆ ಹೊಸ ಮುನ್ನಡಿಗೆ ಕಾರಣವಾಗಿದೆ. ಇದಕ್ಕೆ ಕಾರಣ, ಬಹುತೇಕ ವಾಹನ ಪ್ರಿಯರು ಎಲೆಕ್ಟ್ರಿಕ್ ಕಾರುಗಳ ಖರೀದಿಸಲು ಉತ್ಸುಕರಾಗಿದ್ದು, ಸ್ವಿಸ್ ಪೊಲೀಸರು ಸಹ ತಮ್ಮ ಬಳಿಯಿದ್ದ ಡೀಸೆಲ್ ಕಾರುಗಳನ್ನೇ ಟೆಸ್ಲಾ ಮಾಡೆಲ್ ಎಕ್ಸ್ ಎಲೆಕ್ಟ್ರಿಕ್ ಕಾರುಗಳಿಗೆ ಬದಲಿಸಿಕೊಂಡಿದ್ದಾರೆ.

ಡೀಸೆಲ್ ಕಾರುಗಳನ್ನೇ ಟೆಸ್ಲಾ ಕಾರುಗಳನ್ನಾಗಿ ಬದಲಿಸಿಕೊಂಡ ಸ್ವಿಸ್ ಪೊಲೀಸರು

ಜನಪ್ರಿಯ ಎಲೆಕ್ಟ್ರಿಕ್ ಕಾರುಗಳ ನಿರ್ಮಾಣ ಸಂಸ್ಥೆಯಾದ ಟೆಸ್ಲಾ ಸದ್ಯ ವಿವಿಧ ಮಾದರಿಯ ಇವಿ ಕಾರುಗಳು ಮತ್ತು ಟ್ರಕ್‌ಗಳನ್ನು ಮಾರಾಟ ಮಾಡುತ್ತಿದ್ದು, ಇತರೆ ಎಲೆಕ್ಟ್ರಿಕ್ ಕಾರುಗಳಿಂತಲೂ ಹೆಚ್ಚಿನ ಮಟ್ಟದ ಮೈಲೇಜ್ ರೇಂಜ್ ಪಡೆದುಕೊಂಡಿವೆ. ಇದೇ ಕಾರಣಕ್ಕೆ ಸ್ಪಿಸ್ ಪೊಲೀಸರು ಸಹ ತಮ್ಮ ಬಳಿಯಿದ್ದ ಸಾವಿರಾರು ಎಸ್‌ಯುವಿ ಕಾರುಗಳನ್ನು ಇದೀಗ ಟೆಸ್ಲಾ ಕಾರುಗಳನ್ನಾಗಿ ಮಾರ್ಪಡಿಸಿಕೊಳ್ಳುತ್ತಿದ್ದು, ಹೊಸ ಕಾರುಗಳು ಆಧುನಿಕ ತಂತ್ರಜ್ಞಾನದೊಂದಿಗೆ ಭಾರೀ ಸುದ್ದಿ ಮಾಡುತ್ತಿವೆ.

ಡೀಸೆಲ್ ಕಾರುಗಳನ್ನೇ ಟೆಸ್ಲಾ ಕಾರುಗಳನ್ನಾಗಿ ಬದಲಿಸಿಕೊಂಡ ಸ್ವಿಸ್ ಪೊಲೀಸರು

ಸ್ವಿಸ್ ಪೊಲೀಸ್ ಇಲಾಖೆಯು ಗಸ್ತು ವಾಹನಗಳನ್ನು ಆಧುನಿಕರಣಗೊಳಿಸುವ ಉದ್ದೇಶದಿಂದ ಟೆಸ್ಲಾ ಸಂಸ್ಥೆಯೊಂದಿಗೆ ಮಹತ್ವದ ಒಡಂಬಡಿಕೆಗೆ ಸಹಿ ಹಾಕಿದ್ದು, ಇದರ ಪರಿಣಾಮ ಸ್ವಿಸ್ ಪೊಲೀಸ್ ಇಲಾಖೆಯ ಸಾವಿರಾರು ಎಸ್‌ಯುವಿ ಕಾರುಗಳಿಂದು ಟೆಸ್ಲಾ ಮಾಡೆಲ್ ಎಕ್ಸ್ ವಿನ್ಯಾಸದೊಂದಿಗೆ ಅತ್ಯಾಧುನಿಕ ಸೌಲಭ್ಯ ಪಡೆದಿವೆ.

ಡೀಸೆಲ್ ಕಾರುಗಳನ್ನೇ ಟೆಸ್ಲಾ ಕಾರುಗಳನ್ನಾಗಿ ಬದಲಿಸಿಕೊಂಡ ಸ್ವಿಸ್ ಪೊಲೀಸರು

ಸ್ವಿಪ್ ಪೊಲೀಸರು ತಮ್ಮ ಗಸ್ತು ವಾಹನಗಳನ್ನು ಟೆಸ್ಲಾ ಮಾಡೆಲ್ ಎಕ್ಸ್ ಮಾದಿಯಲ್ಲೇ ಎಕ್ಸ್100 ಎನ್ನುವ ಟಾಪ್ ಎಂಡ್ ಮಾದರಿಯನ್ನು ಆಯ್ಕೆ ಮಾಡಿದ್ದು, ಇದು ಪ್ರತಿ ಚಾರ್ಜಿಂಗ್‌ಗೆ ಬರೋಬ್ಬರಿ 475 ಕಿ.ಮೀ ಮೈಲೇಜ್ ರೇಂಜ್ ಪಡೆದುಕೊಂಡಿದೆ.

ಡೀಸೆಲ್ ಕಾರುಗಳನ್ನೇ ಟೆಸ್ಲಾ ಕಾರುಗಳನ್ನಾಗಿ ಬದಲಿಸಿಕೊಂಡ ಸ್ವಿಸ್ ಪೊಲೀಸರು

ಜೊತೆಗೆ ಹೊಸ ಕಾರುಗಳು ಕೇವಲ 4.7 ಸೇಕೆಂಡುಗಳಲ್ಲಿ ಸೊನ್ನೆಯಿಂದ 100 ಕಿ.ಮೀ ವೇಗ ಪಡೆದುಕೊಳ್ಳುವ ಗುಣಹೊಂದಿದ್ದು, ಪ್ರತಿ ಗಂಟೆಗೆ ಗರಿಷ್ಠವಾಗಿ 220 ಕಿ.ಮಿ ವೇಗ ಸಾಧಿಸಬಲ್ಲವು ಎನ್ನಲಾಗಿದೆ. ಆದ್ರೆ ಡೀಸೆಲ್ ಕಾರುಗಳನ್ನು ಎಲೆಕ್ಟ್ರಿಕ್ ಎಂಜಿನ್‌ಗೆ ಬದಲಾಯಿಸಲು ಎಷ್ಟು ಖರ್ಚಾಗಿದೆ ಎನ್ನುವ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ.

ಡೀಸೆಲ್ ಕಾರುಗಳನ್ನೇ ಟೆಸ್ಲಾ ಕಾರುಗಳನ್ನಾಗಿ ಬದಲಿಸಿಕೊಂಡ ಸ್ವಿಸ್ ಪೊಲೀಸರು

ಆದ್ರೆ ಸ್ವಿಸ್ ಪೊಲೀಸರ ಈ ನಿರ್ಧಾರದಿಂದ ಎಲೆಕ್ಟ್ರಿಕ್ ಕಾರುಗಳ ಮಹತ್ವದ ಬಗ್ಗೆ ಉತ್ತಮ ಸಂದೇಶ ಎನ್ನಬಹುದಾಗಿದ್ದು, ಡಿಸೇಲ್ ಕಾರುಗಳನ್ನು ಇವಿ ಕಾರುಗಳಾಗಿ ಪರಿವರ್ತಿಸುವ ಯೋಜನೆಗೆ ಸ್ವತಃ ಟೆಸ್ಲಾ ಸಂಸ್ಥೆಯು ಹರ್ಷ ವ್ಯಕ್ತಪಡಿಸಿದೆ.

ಡೀಸೆಲ್ ಕಾರುಗಳನ್ನೇ ಟೆಸ್ಲಾ ಕಾರುಗಳನ್ನಾಗಿ ಬದಲಿಸಿಕೊಂಡ ಸ್ವಿಸ್ ಪೊಲೀಸರು

ಇದಕ್ಕಾಗಿಯೇ ಸ್ವಿಸ್ ಪೊಲೀಸರ ಗಸ್ತು ವಾಹನಗಳಿಗೆ ಹೆಚ್ಚಿನ ಮಟ್ಟದ ತಂತ್ರಜ್ಞಾನ ಸೌಲಭ್ಯ ನೀಡಿರುವ ಟೆಸ್ಲಾ ಸಂಸ್ಥೆಯು ಹೊಸ ಕಾರುಗಳ ಮೇಲೆ ನಾಲ್ಕು ವರ್ಷಗಳ ಕಾಲ ವಾರಂಟಿ ಮತ್ತು ಎಲೆಕ್ಟ್ರಿಕ್ ಬ್ಯಾಟರಿ, ಪವರ್‌ಟ್ರೈನ್ ಮೇಲೆ ಗರಿಷ್ಠ ಎಂಟು ವರ್ಷಗಳ ಕಾಲ ಖಾತ್ರಿ ನೀಡಿದೆ.

ಡೀಸೆಲ್ ಕಾರುಗಳನ್ನೇ ಟೆಸ್ಲಾ ಕಾರುಗಳನ್ನಾಗಿ ಬದಲಿಸಿಕೊಂಡ ಸ್ವಿಸ್ ಪೊಲೀಸರು

ಇನ್ನು ಗಸ್ತು ವಾಹನಗಳಲ್ಲಿ 17-ಇಂಚಿನ ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ ಹಾಗೂ ಆ್ಯಂಬಿಯೆಂಟ್ ಲೈಟಿಂಗ್, ಪ್ಯಾನೋರಮಿಕ್ ಸನ್‌ರೂಫ್, 7 ಜನ ಆರಾಮದಾಯಕವಾಗಿ ಪ್ರಯಾಣಿಸಬಹುದಾದ ಆಸನ ವ್ಯವಸ್ಥೆ, 2491 ಲೀಟರ್‌ ಸಾಮರ್ಥ್ಯದ ಬೂಟ್ ಸ್ಪೆಸ್ ಸೇರಿದಂತೆ ಗಸ್ತು ನಿರ್ವಹಣೆ ಬೇಕಾದ ಕೆಲವು ಸುಧಾರಿತ ಮಾಹಿತಿ ತಂತ್ರಜ್ಞಾನಗಳನ್ನು ಅಳವಡಿಸಲಾಗಿದೆ.

ಸ್ವಿಸ್ ಪೊಲೀಸರ ಗಸ್ತು ನಿರ್ವಹಣೆಗಾಗಿ ಸಿದ್ದವಾಗಿರುವ ಮಾಡೆಲ್ ಎಕ್ಸ್ ಎಸ್‌ಯುವಿ ಕಾರುಗಳ ವಿಡಿಯೋ ಇಲ್ಲಿದೆ ನೋಡಿ.

ಡೀಸೆಲ್ ಕಾರುಗಳನ್ನೇ ಟೆಸ್ಲಾ ಕಾರುಗಳನ್ನಾಗಿ ಬದಲಿಸಿಕೊಂಡ ಸ್ವಿಸ್ ಪೊಲೀಸರು

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಸದ್ಯ ವಿಶ್ವಾದ್ಯಂತ ಅತಿ ಹೆಚ್ಚು ಜನಪ್ರಿಯತೆ ಹೊಂದಿರುವ ಟೆಸ್ಲಾ ಸಂಸ್ಥೆಯು ಅಧಿಕ ಮೈಲೇಜ್ ನೀಡುವ ಎಲೆಕ್ಟ್ರಿಕ್ ಕಾರುಗಳ ನಿರ್ಮಾಣದಲ್ಲಿ ಮುಂಚೂಣಿಸಿ ಸಾಧಿಸಿದೆ. ಇದೇ ಕಾರಣಕ್ಕೆ ಎಲೆಕ್ಟ್ರಿಕ್ ಕಾರುಗಳ ನಿರ್ಮಾಣದಲ್ಲಿ ಹೊಸ ಬದಲಾವಣೆಗೆ ಕಾರಣವಾಗುತ್ತಿರುವ ಟೆಸ್ಲಾ ಸಂಸ್ಥೆಯು ಇದೀಗ ಸ್ವಿಸ್ ಪೊಲೀಸರ ಗಸ್ತು ವಾಹನಗಳನ್ನು ಇವಿ ಎಂಜಿನ್‌ಗೆ ಬದಲಾಯಿಸುವ ಮೂಲಕ ಮತ್ತೊಂದು ವಿಶೇಷತೆಗೆ ಕಾರಣವಾಗಿದೆ.

More from DriveSpark

Article Published On: Monday, June 18, 2018, 14:01 [IST]
English summary
Swiss Police Replace Old Diesel Cars With Tesla Model X SUV.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+