ಹ್ಯುಂಡೈ ಕ್ರೇಟಾಗೆ ಟಾಂಗ್ ಕೊಡುತ್ತಾ ಟಾಟಾ ಹೆಚ್5ಎಕ್ಸ್ ಹೊಸ ಎಸ್‌ಯುವಿ?

ಟಾಟಾ ಮೋಟಾರ್ಸ್ ಸಂಸ್ಥೆಯು ಹೆಚ್5ಎಕ್ಸ್ ಕೋಡ್ ಆಧಾರದಲ್ಲಿ 5 ಸೀಟರ್ ಮಾದರಿಯೊಂದನ್ನು ಅಭಿವೃದ್ಧಿಗೊಳಿಸುತ್ತಿದ್ದು, ಇದೀಗ ಹೊಸ ಕಾರಿನ ಎಂಜಿನ್ ಕಾರ್ಯಕ್ಷಮತೆಯನ್ನ ಪರೀಕ್ಷಿಸಲು ದೇಶದ ವಿವಿಧಡೆ ಸ್ಪಾಟ್ ಟೆಸ್ಟಿಂಗ್ ನಡೆಸುತ್ತಿದೆ.

By Praveen Sannamani

ಎಸ್‌ಯುವಿ ವಿಭಾಗಕ್ಕೆ ವಿನೂತನ ಕಾರು ಮಾದರಿಯನ್ನು ಪರಿಚಯಿಸಲು ಸಿದ್ದವಾಗುತ್ತಿರುವ ಟಾಟಾ ಮೋಟಾರ್ಸ್ ಸಂಸ್ಥೆಯು ಹೆಚ್5ಎಕ್ಸ್ ಕೋಡ್ ಆಧಾರದಲ್ಲಿ 5 ಸೀಟರ್ ಮಾದರಿಯೊಂದನ್ನು ಅಭಿವೃದ್ಧಿಗೊಳಿಸುತ್ತಿದ್ದು, ಇದೀಗ ಹೊಸ ಕಾರಿನ ಎಂಜಿನ್ ಕಾರ್ಯಕ್ಷಮತೆಯನ್ನ ಪರೀಕ್ಷಿಸಲು ದೇಶದ ವಿವಿಧಡೆ ಸ್ಪಾಟ್ ಟೆಸ್ಟಿಂಗ್ ನಡೆಸುತ್ತಿದೆ.

ಹ್ಯುಂಡೈ ಕ್ರೇಟಾಗೆ ಟಾಂಗ್ ಕೊಡುತ್ತಾ ಟಾಟಾ ಹೆಚ್5ಎಕ್ಸ್ ಹೊಸ ಎಸ್‌ಯುವಿ?

ದೇಶಿಯ ಮಾರುಕಟ್ಟೆಯಲ್ಲಿ ಕಾರುಗಳ ಉತ್ಪಾದನೆಯಲ್ಲಿ ಸ್ವಾಯತ್ತತೆ ಕಾಯ್ದುಕೊಳ್ಳುತ್ತಿರುವ ಟಾಟಾ ಮೋಟಾರ್ಸ್ ಸಂಸ್ಥೆಯು ಮುಂಬರುವ ದಿನಗಳಲ್ಲಿ ಗೇಮ್ ಚೇಂಜರ್ ಕಾರುಗಳನ್ನು ಬಿಡುಗಡೆಗೊಳಿಸಲಿದ್ದು, ಹೊಸ ಬಗೆಯ ವಿನ್ಯಾಸ ಮತ್ತು ಅದ್ಭುತ ಲುಕ್ ಹೊಂದಿರುವ ಹೆಚ್5ಎಕ್ಸ್ ಕಾರು ಟಾಟಾ ಸಂಸ್ಥೆಯನ್ನು ಮತ್ತಷ್ಟು ಜನಪ್ರಿಯಗೊಳಿಸುವುದರಲ್ಲಿ ಯಾವುದೇ ಅನುಮಾನವಿಲ್ಲ.

ಹ್ಯುಂಡೈ ಕ್ರೇಟಾಗೆ ಟಾಂಗ್ ಕೊಡುತ್ತಾ ಟಾಟಾ ಹೆಚ್5ಎಕ್ಸ್ ಹೊಸ ಎಸ್‌ಯುವಿ?

ಇಂಪ್ಯಾಕ್ಟ್ ಡಿಸೈನ್ 2.0 ತಂತ್ರಜ್ಞಾನ ಆಧಾರದ ಮೇಲೆ ಹೆಚ್5ಎಕ್ಸ್ ನಿರ್ಮಾಣ ಮಾಡಲಾಗಿದ್ದು, ಹೊಸ ಕಾರುಗಳಲ್ಲಿ "ಅಪ್ಟಿಮಲ್ ಮಾಡ್ಯೂಲರ್ ಎಫಿಷಿಯೆಂಟ್ ಗ್ಲೋಬಲ್ ಅಡ್ವಾನ್ಸ್ (OMEGA)" ಆರ್ಕಿಟೆಕ್ಚರ್ ಬಳಕೆ ಮಾಡಿರುವುದೇ ಹೊಸ ವಿನ್ಯಾಸಗಳು ಅದ್ಭುತವಾಗಿವೆ.

ಹ್ಯುಂಡೈ ಕ್ರೇಟಾಗೆ ಟಾಂಗ್ ಕೊಡುತ್ತಾ ಟಾಟಾ ಹೆಚ್5ಎಕ್ಸ್ ಹೊಸ ಎಸ್‌ಯುವಿ?

ಇನ್ನೊಂದು ವಿಶೇಷ ಅಂದ್ರೆ ಭಾರತದಲ್ಲಿ ಟಾಟಾ ಜೊತೆ ಕೈಜೋಡಿಸಿರುವ ಜೆಎಲ್ಆರ್ (ಜಾಗ್ವಾರ್, ಲ್ಯಾಂಡ್ ರೋವರ್, ರೇಂಜ್ ರೋವರ್) ಕೂಡಾ "ಅಪ್ಟಿಮಲ್ ಮಾಡ್ಯೂಲರ್ ಎಫಿಷಿಯೆಂಟ್ ಗ್ಲೋಬಲ್ ಅಡ್ವಾನ್ಸ್ (OMEGA)" ಆರ್ಕಿಟೆಕ್ಚರ್ ಮಾದರಿಯಲ್ಲೇ ನಿರ್ಮಾಣವಾಗಿದ್ದು, ಇದೇ ಕಾರಣಕ್ಕೆ ಟಾಟಾ ಕಾರುಗಳಲ್ಲೂ ಜೆಎಲ್ಆರ್ ಹೊಸ ಪ್ರಯೋಗ ಮಾಡಲಾಗಿದೆ.

ಹ್ಯುಂಡೈ ಕ್ರೇಟಾಗೆ ಟಾಂಗ್ ಕೊಡುತ್ತಾ ಟಾಟಾ ಹೆಚ್5ಎಕ್ಸ್ ಹೊಸ ಎಸ್‌ಯುವಿ?

ಕಾರಿನ ವೈಶಿಷ್ಟ್ಯತೆಗಳು

ಹೆಚ್5ಎಕ್ಸ್ ಮಾದರಿಗಳು ಸ್ಲಿಕ್ ಆ್ಯಂಗರಲ್ ಎಲ್‌ಇಡಿ ಹೆಡ್ ಲೈಟ್ಸ್‌ಗಳನ್ನು ಹೊಂದಿದ್ದು, ಇಂಪ್ಯಾಕ್ಟ್ ಡಿಸೈನ್ ಗ್ರೀಲ್‌ಗಳು ಕಾರಿನ ಲುಕ್ ಹೆಚ್ಚಿಸಿವೆ. ಜೊತೆಗೆ ಪರಿಕಲ್ಪನೆ ಮಾದರಿಯನ್ನು ಗ್ರೇ ಪೇಟಿಂಗ್ ವಿನ್ಯಾಸಗಳು ಗಮನಸೆಳೆಯುತ್ತಿದ್ದು, ದೊಡ್ಡದಾದ ಚಕ್ರಗಳು, ವಿಸ್ತರಿತ ಬೂಟ್ ಸ್ಪೆಸ್ ಬಳಕೆ ಮಾಡಲಾಗಿದೆ.

ಹ್ಯುಂಡೈ ಕ್ರೇಟಾಗೆ ಟಾಂಗ್ ಕೊಡುತ್ತಾ ಟಾಟಾ ಹೆಚ್5ಎಕ್ಸ್ ಹೊಸ ಎಸ್‌ಯುವಿ?

ಜೊತೆಗೆ ರೂಫ್ ಮೌಟೆಂಡ್ ಸ್ಪಾಯ್ಲರ್ ಮತ್ತು ಶಾರ್ಪ್ ಮಾದರಿಯ ರಿರ್ ವೀಂಡ್ ಸ್ಕ್ರೀನ್‌ಗಳನ್ನು ಅದ್ಭುತವಾಗಿ ಡಿಸೈನ್ ಮಾಡಲಾಗಿದೆ. ಹೀಗಾಗಿ ಸದ್ಯ ಮಾರುಕಟ್ಟೆಯಲ್ಲಿರುವ ನೆಕ್ಸಾನ್ ಆವೃತ್ತಿಗಿಂತ ಹೆಚ್ಚಿನ ಗುಣ ವಿನ್ಯಾಸ ಹೊಂದಿರುವ ಹೆಚ್5ಎಕ್ಸ್ ಕಾರುಗಳು ಎಸ್‌ಯುವಿ ಪ್ರಿಯರ ಹಾಟ್ ಫೆವರಿಟ್ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಹ್ಯುಂಡೈ ಕ್ರೇಟಾಗೆ ಟಾಂಗ್ ಕೊಡುತ್ತಾ ಟಾಟಾ ಹೆಚ್5ಎಕ್ಸ್ ಹೊಸ ಎಸ್‌ಯುವಿ?

ಎಂಜಿನ್ ಸಾಮರ್ಥ್ಯ

ಹೆಚ್5ಎಕ್ಸ್ ಕಾನ್ಸೆಪ್ಟ್ ಮಾದರಿಗಳ ಎಂಜಿನ್ ಬಗ್ಗೆ ಟಾಟಾ ಯಾವುದೇ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲವಾದರೂ ಕೆಲವು ವರದಿಗಳ ಪ್ರಕಾರ 2.0-ಲೀಟರ್ ಪೆಟ್ರೋಲ್ ಎಂಜಿನ್ ಅಥವಾ 2.0-ಲೀಟರ್ ಮಲ್ಟಿ ಜೆಟ್ ಡೀಸೆಲ್ ಎಂಜಿನ್ ಮಾದರಿಯಲ್ಲಿ ಹೊಸ ಕಾರುಗಳು ಅಭಿವೃದ್ಧಿಯಾಗಲಿವೆ.

ಹ್ಯುಂಡೈ ಕ್ರೇಟಾಗೆ ಟಾಂಗ್ ಕೊಡುತ್ತಾ ಟಾಟಾ ಹೆಚ್5ಎಕ್ಸ್ ಹೊಸ ಎಸ್‌ಯುವಿ?

ಬಿಡುಗಡೆ ಯಾವಾಗ?

ಟಾಟಾ ಹೆಚ್5ಎಕ್ಸ್ ಕಾರುಗಳು ಪರಿಕಲ್ಪನೆ ಮಾದರಿಗಳಾಗಿದ್ದು, 2018ರ ಕೊನೆಯಲ್ಲಿ ಇಲ್ಲವೇ 2019ರ ಮೊದಲ ತ್ರೈಮಾಸಿಕ ಅವಧಿಯಲ್ಲಿ ಮಾರುಕಟ್ಟೆಗೆ ಲಗ್ಗೆಯಿಡಲಿವೆ.

ಹ್ಯುಂಡೈ ಕ್ರೇಟಾಗೆ ಟಾಂಗ್ ಕೊಡುತ್ತಾ ಟಾಟಾ ಹೆಚ್5ಎಕ್ಸ್ ಹೊಸ ಎಸ್‌ಯುವಿ?

ಕಾರಿನ ಬೆಲೆಗಳು (ಅಂದಾಜು)

ಕ್ರೇಟಾ ಕಾರುಗಳನ್ನೇ ಪ್ರಮುಖವಾಗಿ ತನ್ನ ಪ್ರತಿಸ್ಪರ್ಧಿಯನ್ನಾಗಿ ಪರಿಗಣಿಸಿರುವ ಟಾಟಾ ಮೋಟಾರ್ಸ್ ಸಂಸ್ಥೆಯು ಹೊಸ ಕಾರಿನ ಬೆಲೆಯನ್ನು ಎಕ್ಸ್‌ಶೋರಂ ಪ್ರಕಾರ ಆರಂಭಿಕವಾಗಿ ರೂ.12 ಲಕ್ಷ ಮತ್ತು ಟಾಪ್ ಎಂಡ್ ಮಾದರಿಯನ್ನ ರೂ.15 ಲಕ್ಷಕ್ಕೆ ನಿಗದಿಪಡಿಸುವ ಸಾಧ್ಯತೆಗಳಿವೆ.

ಹಿಮಾಚಲ ಪ್ರದೇಶದಲ್ಲಿ ನಡೆಸಲಾದ ಹೆಚ್5ಎಕ್ಸ್ ಕಾರುಗಳ ಸ್ಪಾಟ್ ಟೆಸ್ಟಿಂಗ್ ವಿಡಿಯೋ ಇಲ್ಲಿದೆ ನೋಡಿ..

Most Read Articles

Kannada
Read more on tata motors suv
English summary
Tata H5X SUV Spied Testing In The Himalayas.
Story first published: Tuesday, July 3, 2018, 18:18 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X