ಸ್ಟೈಲಿಷ್ ಡಿಸೈನ್‍ನೊಂದಿಗೆ ಬಿಡುಗಡೆಗೊಂಡ ಟಾಟಾ ನೆಕ್ಸಾಸ್ ಕ್ರೇಜ್..
ದೇಶಿಯ ವಾಹನ ತಯಾರಕ ಸಂಸ್ಥೆಯಾದ ಟಾಟಾ ಮೋಟಾರ್ಸ್ ತಮ್ಮ ಜನಪ್ರಿಯ ನೆಕ್ಸಾನ್ ಕಾಂಪ್ಯಾಕ್ಶ್ ಎಸ್‍ಯುವಿ ಕಾರನ್ನು ಬಿಡುಗಡೆಗೊಳಿಸಿ ಇಂದಿಗೆ ಒಂದು ವರ್ಷವಾಗಿದ್ದು, ಒಂದನೇ ವರ್ಷದ ವಾರ್ಷಿಕೋತ್ಸವದ ಸಂಭ್ರಮದ ಪ್ರಯುಕ್ತ ನೆಕ್ಸಾನ್ ಕಾರಿನ ಹೊಸ ಕ್ರೇಜ
ದೇಶಿಯ ವಾಹನ ತಯಾರಕ ಸಂಸ್ಥೆಯಾದ ಟಾಟಾ ಮೋಟಾರ್ಸ್ ತಮ್ಮ ಜನಪ್ರಿಯ ನೆಕ್ಸಾನ್ ಕಾಂಪ್ಯಾಕ್ಶ್ ಎಸ್‍ಯುವಿ ಕಾರನ್ನು ಬಿಡುಗಡೆಗೊಳಿಸಿ ಇಂದಿಗೆ ಒಂದು ವರ್ಷವಾಗಿದ್ದು, ಒಂದನೇ ವರ್ಷದ ವಾರ್ಷಿಕೋತ್ಸವದ ಸಂಭ್ರಮದ ಪ್ರಯುಕ್ತ ನೆಕ್ಸಾನ್ ಕಾರಿನ ಹೊಸ ಕ್ರೇಜ್ ಮತ್ತು ಕ್ರೇಜ್ ಪ್ಲಸ್ ಎಂಬ ಲಿಮಿಟೆಡ್ ಎಡಿಷನ್ ಕಾರುಗಳನ್ನು ಬಿಡುಗಡೆಗೊಳಿಸಿದೆ.

ಟಾಟಾ ನೆಕ್ಸಾನ್ ಕ್ರೇಜ್ ಲಿಮಿಟೆಡ್ ಎಡಿಷನ್ ಕಾರು ಕಪ್ಪು ಮತ್ತು ಗ್ರೇ ಬಣ್ಣದ ಡ್ಯುಯಲ್ ಟೋನ್ ಪೆಯಿಂಟ್ ಸ್ಕೀಮ್ ಅನ್ನು ಪಡೆದುಕೊಂಡಿದೆ. ಕಾರಿನ ಒಆರ್‍ವಿಎಮ್, ಫ್ರಂಟ್ ಗ್ರಿಲ್ ಮತು ವ್ಹೀಲ್‍ಗಳಿಗೆ ಹಸಿರು ಬಣ್ಣವನ್ನು ವಿಶೇಷವಾಗಿ ನೀಡಲಾಗಿದೆ. ಇನ್ನು ಕಾರಿನ ಹಿಂಭಾಗದಲ್ಲಿ ಮತ್ತು ಕಾರಿನ ತುದಿಯಲ್ಲಿ ಕ್ರೇಜ್ ಎಂಬ ಬ್ಯಾಡ್ಜಿಂಗ್ ಅನ್ನು ಒದಗಿಸಲಾಗಿದ್ದು, ಇದನ್ನು ಕೂಡಾ ಹಸಿರು ಬಣ್ಣದಿಂದ ಸಜ್ಜುಗೊಳಿಸಲಾಗಿದೆ.

ಟಾಟಾ ನೆಕ್ಸಾನ್ ಕ್ರೇಜ್ ಲಿಮಿಟೆಡ್ ಎಡಿಷನ್ ಕಾರಿನ ಒಳಭಾಗದಲ್ಲಿ ಸೆಂಟ್ರಲ್ ಕಂಸೋಲ್, ಎಸಿ ವೆಂಟ್ಸ್ ನ ಸುತ್ತ ಮತ್ತು ಸೀಟ್‍ನ ಮೇಲೆ ಹಸಿರು ಬಣ್ಣವನ್ನು ನೀಡಲಾಗಿದೆ. ಡಿಸೈನ್ ಅನ್ನು ಹೊರತು ಪಡಿಸಿ ನೆಕ್ಸಾನ್ ಎಕ್ಸ್ ಟಿ ಟ್ರಿಮ್ ಕಾರಿನಲ್ಲಿದ್ದ ಎಲ್ಲಾ ಉಪಕರಣಗಳನ್ನು ಈ ಕಾರು ಪಡೆದುಕೊಂಡಿರಲಿದೆ.

| Variant | Petrol | Diesel |
| Nexon KRAZ | Rs 7,14,951 | Rs 8,07,566 |
| Nexon KRAZ+ | Rs 7,76,595 | Rs 8,64,058 |

ಎಂಜಿನ್ ಸಾಮರ್ಥ್ಯ
ಟಾಟಾ ನೆಕ್ಸಾನ್ ಕ್ರೇಜ್ ಲಿಮಿಟೆಡ್ ಎಡಿಷನ್ ಕಾರು ಪೆಟ್ರೋಲ್ ಮತ್ತು ಡೀಸೆಲ್ ಮಾದರಿಗಳಲ್ಲಿ ಖರೀದಿಗೆ ಲಭ್ಯವಿದ್ದು, ಪೆಟ್ರೋಲ್ ಆಧಾರಿತ ಕಾರುಗಳು 1.2 ಲೀಟರ್ ರೆವಾಟ್ರಾನ್ ಪೆಟ್ರೋಲ್ ಎಂಜಿನ್ ಸಹಾಯದಿಂದ 110ಬಿಹೆಚ್‍ಪಿ ಮತ್ತು 170ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದೆ.
MUST READ: ಆರ್‌ಇಯಿಂದ ಮೋಸದ ವ್ಯಾಪಾರ- ದುಬಾರಿ ಬೆಲೆಯ ಪೆಗಾಸಸ್ ಬೈಕ್ ತಿಪ್ಪೆಗೆ ಎಸೆದ ಬೈಕ್ ಮಾಲೀಕ

ಇನ್ನು ಡೀಸೆಲ್ ಆಧಾರಿತ ನೆಕ್ಸಾನ್ ಕ್ರೇಜ್ ಕಾರುಗಳು 1.5 ಲೀಟರ್ ರೆವಾಟ್ರಾನ್ ಡೀಸೆಲ್ ಎಂಜಿನ್ ಸಹಾಯದಿಂದ 110ಬಿಹೆಚ್‍ಪಿ ಮತ್ತು 260ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದ್ದು, ಎರಡು ಎಂಜಿನ್‍ಗಳನ್ನು 6 ಸ್ಪೀಡ್ ಮ್ಯಾನುವಲ್ ಗೇರ್‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಪ್ರಯಾಣಿಕರ ಸುರಕ್ಷತೆಗಾಗಿ ನೆಕ್ಸಾನ್ ಕ್ರೇಜ್ ಮತ್ತು ಕ್ರೇಜ್ ಪ್ಲಸ್ ಕಾರುಗಳಲ್ಲಿ ಡ್ಯುಯಲ್ ಫ್ರಂಟ್ ಏರ್‍ಬ್ಯಾಗ್ಸ್, ಎಬಿಎಸ್ ಹಾಗು ಇಬಿಡಿ, ಪವರ್ ವಿಂಡೋಸ್, ರೊಮೀಟ್ ಸೆಂಟ್ರಲ್ ಲಾಕಿಂಗ್, ಸ್ಪೀಡ್ ಸೆನ್ಸಿಟೀವ್ ಡೋರ್ ಲಾಕ್, ರಿವರ್ಸ್ ಪಾರ್ಕಿಂಗ್ ಸೆನ್ಸಾರ್ಸ್‍ಗಳನ್ನು ಒದಗಿಸಲಾಗಿದೆ.

ಇದಲ್ಲದೇ ಈ ಕಾರಿನಲ್ಲಿ ಆಧುನಿಕ ಫೀಚರ್‍ಗಳಾದ ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ವಿದ್ಯುತ್‍ನಿಂದ ಅಡ್ಜಸ್ಟ್ ಮಾಡಬಹುದಾದ ಮತ್ತು ಮಡಿಚಬಹುದಾದ ಒಆರ್‍ವಎಮ್‍ಗಳು, ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್ಸ್ ಮತ್ತು ಹರ್ಮಾನ್ ಮ್ಯೂಸಿಕ್ ಸಿಸ್ಟಮ್ ಅನ್ನು ನೀಡಲಾಗಿದೆ.
MUST READ: ಕಾರು ರಿಪೇರಿಗೆ ಹೋದ ಸ್ಕೋಡಾ ಮಾಲಕಿಗೆ ಡೀಲರ್ಸ್ ಹೀಗಾ ಮಾಡೋದು.?

ಡ್ರೈವ್‍ಸ್ಪಾರ್ಕ್ ಅಭಿಪ್ರಾಯ
ಟಾಟಾ ನೆಕ್ಸಾನ್ ದೇಶಿಯ ಮಾರುಕಟ್ಟೆಯಲ್ಲಿ ಕಾಂಪ್ಯಾಕ್ಟ್ ಎಸ್‍ಯುವಿ ಕಾರುಗಳ ಸರಣಿಯಲ್ಲಿ ಹೆಚ್ಚಿನ ಜನಪ್ರಿಯತೆಯನ್ನು ಪಡೆದುಕೊಂಡಿದ್ದು, ಈ ಕಾರು ಬಿಡುಗಡೆಗೊಂಡು ಇಂದಿಗೆ ಒಂದು ವರ್ಷವಾಯಿತು. ಈ ನಿಟ್ಟಿನಲ್ಲಿ ಒಂದು ವರ್ಷದ ಸಂಭ್ರಮದ ಪ್ರಯುಕ್ತ ಟಾಟಾ ಮೋಟರ್ಸ್ ತಮ್ಮ ನೆಕ್ಸಾಸ್ ಕಾರಿನ ಕ್ರೇಜ್ ಲಿಮಿಟೆಡ್ ಎಡಿಷನ್ ಕಾರನ್ನು ಬಿಡುಗಡೆಗೊಳಿಸಿದೆ. ಈ ಕಾರು ಕೇವಲ ವಿನ್ಯಾಸದಲ್ಲಿ ಮತ್ತು ಶೈಲಿಯಲ್ಲಿ ಬದಲಾವಣೆಗಳನ್ನು ಪಡೆದಿದ್ದು, ತಾಂತ್ರಿಕವಾಗಿ ಯಾವುದೇ ಬದಲಾವಣೆಗಳನ್ನು ಪಡೆದಿರುವುದಿಲ್ಲ.


Click it and Unblock the Notifications








