ನೆಕ್ಸಾನ್ ಕಾರುಗಳ ಉತ್ಪಾದನೆಯಲ್ಲಿ ಟಾಟಾದಿಂದ ಹೊಸ ಮೈಲಿಗಲ್ಲು..

By Praveen Sannamani

ದೇಶಿಯ ವಾಹನ ತಯಾರಕ ಸಂಸ್ಥೆಯಾದ ಟಾಟಾ ಮೋಟಾರ್ಸ್ 2017ರ ಸೆಪ್ಟೆಂಬರ್‍‍ನಲ್ಲಿ ತಮ್ಮ ನೆಕ್ಸಾನ್ ಕಂಪ್ಯಾಕ್ಟ್ ಎಸ್‌ಯುವಿ ಕಾರನ್ನು ಬಿಡುಗಡೆಗೊಳಿಸಿದ್ದು, ಬಿಡುಗಡೆಗೊಂಡ ಕೆಲವೇ ದಿನಗಳಲ್ಲಿ ಮಾರುಕಟ್ಟೆಯಲ್ಲಿನ ಗ್ರಾಹಕರ ಮೆಚ್ಚುಗೆಯನ್ನು ಪಡೆದುಕೊಳ್ಳುವ ಮೂಲಕ ಮಾರಾಟದಲ್ಲಿ ಹೊಸ ದಾಖಲೆ ಸೃಷ್ಟಿಸಿದೆ.

ನೆಕ್ಸಾನ್ ಕಾರುಗಳ ಉತ್ಪಾದನೆಯಲ್ಲಿ ಟಾಟಾದಿಂದ ಹೊಸ ಮೈಲಿಗಲ್ಲು..

ಟಾಟಾ ನೆಕ್ಸಾನ್ ಕಾರುಗಳು ಬಿಡುಗಡೆಯ ನಂತರ ಪ್ರತೀ ತಿಂಗಳು 4 ರಿಂದ 4,500 ಯೂನಿಟ್ ಮಾರಾಟಗೊಳ್ಳುತ್ತಿದ್ದು, ಸಂಸ್ಥೆಯ ಬೆಸ್ಟ್ ಸೆಲ್ಲಿಂಗ್ ಎಸ್‍‍ಯುವಿ ಕಾರು ಎಂಬ ಸ್ಥಾನವನ್ನು ಪಡೆದಿದೆ. ಈ ಮೂಲಕ 50 ಸಾವಿರ ಗಡಿ ದಾಟುತ್ತಿರುವ ನೆಕ್ಸಾನ್ ಕಾರುಗಳು ಮುಂಬರುವ ದಿನಗಳಲ್ಲಿ ಮತ್ತಷ್ಟು ಜನಪ್ರಿಯತೆ ಪಡೆಯುವ ನೀರಿಕ್ಷೆಯಲ್ಲಿವೆ.

ನೆಕ್ಸಾನ್ ಕಾರುಗಳ ಉತ್ಪಾದನೆಯಲ್ಲಿ ಟಾಟಾದಿಂದ ಹೊಸ ಮೈಲಿಗಲ್ಲು..

2018-19ರ ಮೊದಲನೆಯ ತ್ರೈಮಾಸಿಕ ಅವಧಿಯಲ್ಲಿ ಒಟ್ಟು 13,173 ಯೂನಿಟ್ ಕಾರುಗಳನ್ನು ಮಾರಾಟ ಮಾಡಲಾಗಿದ್ದು, ಎಪ್ರಿಲ್‍‍ನಲ್ಲಿ 4,128, ಮೇ ತಿಂಗಳಿನಲ್ಲಿ 4717, ಜೂನ್ ತಿಂಗಳಿನಲ್ಲಿ 4308 ಯೂನಿಟ್ ಕಾರುಗಳು ಮಾರಾಟಗೊಂಡಿರುವುದು ನೆಕ್ಸಾನ್ ಜನಪ್ರಿಯತೆ ಸೂಚಿಸುತ್ತದೆ.

ನೆಕ್ಸಾನ್ ಕಾರುಗಳ ಉತ್ಪಾದನೆಯಲ್ಲಿ ಟಾಟಾದಿಂದ ಹೊಸ ಮೈಲಿಗಲ್ಲು..

ಸದ್ಯ ಕಂಪ್ಯಾಕ್ಟ್ ಕಾರುಗಳ ಬೇಡಿಕೆಯಲ್ಲಿ ಫೋರ್ಡ್ ಇಕೋಸ್ಪೋರ್ಟ್ ಕಾರುಗಳಿಗೆ ತೀವ್ರ ಪೈಪೋಟಿ ನೀಡುತ್ತಿರುವ ನೆಕ್ಸಾನ್ ಕಾರುಗಳು ವಿಶೇಷ ಸೌಲಭ್ಯಗಳೊಂದಿಗೆ ಗ್ರಾಹಕರ ಆಕರ್ಷಣೆಗೆ ಕಾರಣವಾಗಿದ್ದು, ನಿನ್ನೆಯಷ್ಟೇ ಪುಣೆಯ ರಂಜನ್ಗಾಂವ್ ಘಟಕದಲ್ಲಿ 50 ಸಾವಿರ ನೆಕ್ಸಾನ್ ಕಾರುಗಳ ಉತ್ಪಾದನೆ ಗುರಿತಲುಪಿದ್ದು ವಿಶೇಷವಾಗಿತ್ತು.

ನೆಕ್ಸಾನ್ ಕಾರುಗಳ ಉತ್ಪಾದನೆಯಲ್ಲಿ ಟಾಟಾದಿಂದ ಹೊಸ ಮೈಲಿಗಲ್ಲು..

ಟಾಟಾ ನೆಕ್ಸಾನ್ ಕಾರುಗಳಲ್ಲಿ ಕ್ರೋಮ್ ಗಾರ್ನಿಶ್ಡ್ ಒಆರ್‍‍ವಿಎಂಎಸ್, ಬಂಪರ್, ಫ್ರಂಟ್ ಗ್ರಿಲಿ ಉಪಕರಣಗಳನ್ನು ಸೇರಿಸಲಾಗಿದ್ದು ಇದೀಗ ಸಂಸ್ಥೆಯು ಹೊಸದಾಗಿ ಈ ಕಾರುಗಳಿಗೆ ಮ್ಯಾನುವನ್ ಸನ್‍‍ರೂಫ್ ಅನ್ನು ಬಳಸಿಕೊಳ್ಳುವ ಆಫರ್ ನೀಡಿದೆ.

ನೆಕ್ಸಾನ್ ಕಾರುಗಳ ಉತ್ಪಾದನೆಯಲ್ಲಿ ಟಾಟಾದಿಂದ ಹೊಸ ಮೈಲಿಗಲ್ಲು..

ಇದಷ್ಟೇ ಅಲ್ಲದೇ ಟಾಟಾ ಮೋಟಾರ್ಸ್ ಮೊನ್ನೆಯಷ್ಟೆ ತಮ್ಮ ನೆಕ್ಸಾನ್ ಕಾರಿನ ಎಎಮ್‍‍ಟಿ ಕಾರಿನ ಮಾದರಿಯನ್ನು ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದ್ದು, ನೆಕ್ಸಾನ್ ಪೆಟ್ರೋಲ್ ಮಾದರಿಯ ಕಾರುಗಳ ಬೆಲೆಯು ರೂ. 9.41 ಲಕ್ಷಕ್ಕೆ ನಿಗದಿಪಡಿಸಲಾಗಿದ್ದು, ಇನ್ನು ಡೀಸೆಲ್ ಮಾದರಿಯ ಕಾರುಗಳ ಬೆಲೆಯು ರೂ 10.3 ಲಕ್ಷಕ್ಕೆ ನಿಗದಿಪಡಿಸಲಾಗಿದೆ.

ನೆಕ್ಸಾನ್ ಕಾರುಗಳ ಉತ್ಪಾದನೆಯಲ್ಲಿ ಟಾಟಾದಿಂದ ಹೊಸ ಮೈಲಿಗಲ್ಲು..

ನೆಕ್ಸಾನ್ ಎಎಮ್‍ಟಿ ಪೆಟ್ರೋಲ್ ಮಾದರಿಯ ಕಾರುಗಳು 1.2 ಲೀಟರ್ ಪೆಟ್ರೋಲ್ ಎಂಜಿನ್ ಸಹಾಯದಿಂದ 108 ಬಿಹೆಚ್‍ಪಿ ಮತ್ತು 170ಎನ್ಎಂ ಟಾರ್ಕ್ ಅನ್ನು ಉಪಾದಿಸುವ ಶಕ್ತಿಯನ್ನು ಪಡೆದಿದ್ದು, 6 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ನೆಕ್ಸಾನ್ ಕಾರುಗಳ ಉತ್ಪಾದನೆಯಲ್ಲಿ ಟಾಟಾದಿಂದ ಹೊಸ ಮೈಲಿಗಲ್ಲು..

ಇನ್ನು ನೆಕ್ಸಾನ್ ಎಎಮ್‍ಟಿ ಡೀಸೆಲ್ ಮಾದರಿಯ ಕಾರುಗಳು 1.5 ಲೀಟರ್ ಡೀಸೆಲ್ ಎಂಜಿನ್ ಸಹಾಯದಿಂದ 108ಬಿಹೆಚ್‍ಪಿ ಮತ್ತು 260ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಇದನ್ನು ಕೂಡ 6 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ನೆಕ್ಸಾನ್ ಕಾರುಗಳ ಉತ್ಪಾದನೆಯಲ್ಲಿ ಟಾಟಾದಿಂದ ಹೊಸ ಮೈಲಿಗಲ್ಲು..

ಫೋರ್ಡ್ ಇಕೋ ಸ್ಪೋರ್ಟ್ ಎಎಂಟಿ, ಮಹೀಂದ್ರಾ ಟಿಯುವಿ300 ಎಎಂಟಿ ಆವೃತ್ತಿಗಳಿಗೆ ತೀವ್ರ ಪೈಪೋಟಿ ನೀಡಲಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ನೆಕ್ಸಾನ್ ಎಎಂಟಿ ಮಾದರಿಯನ್ನು ಅಭಿವೃದ್ಧಿ ಮಾಡಲಾಗಿದೆ. ಹೀಗಾಗಿಯೇ ಬಿಡುಗೊಂಡ ಕೇವಲ 11 ತಿಂಗಳಲ್ಲಿ ಕಾರು ಮಾರಾಟವು 50 ಸಾವಿರ ಗಡಿ ದಾಟುತ್ತಿದ್ದು, ಇದು ಮುಂಬರುವ ದಿನಗಳಲ್ಲಿ ಇನ್ನಷ್ಟು ಹೆಚ್ಚಳವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

Most Read Articles

Kannada
Read more on tata motors suv
English summary
Tata Nexon Achieves 50,000 Units Production Milestone Since Launch.
Story first published: Friday, August 17, 2018, 19:53 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X