ತಾಂತ್ರಿಕ ದೋಷ : ಟಿಗೋರ್ ಡೀಸೆಲ್ ಸೆಡಾನ್ ಕಾರುಗಳನ್ನು ಹಿಂಪಡೆಯಲಿದೆ ಟಾಟಾ ಮೋಟಾರ್ಸ್

ದೇಶಿಯ ವಾಹನ ತಯಾರಕ ಸಂಸ್ಥೆಯಾದ ಟಾಟಾ ಮೋಟರ್ಸ್‍ನ ಟಿಗೋರ್ ಡೀಸೆಲ್ ಕಾರುಗಳ ಎಮಿಷನ್‍‍ನಲ್ಲಿ ಲೋಪವಿದ್ದು, ಲೋಪವನ್ನು ಸರಿಪಡಿಸಲು ಸಂಸ್ಥೆಯು ಟಿಗೋರ್ ಡೀಸೆಲ್ ಕಾರುಗಳನ್ನು ಹಿಂಪಡೆಯಲಿದೆ. ಮಾರ್ಚ್ 6, 2017 ರಿಂದ ಡಿಸೆಂಬರ್ 1, 2017ರವರೆಗು ಉತ್

By Rahul Ts

ದೇಶಿಯ ವಾಹನ ತಯಾರಕ ಸಂಸ್ಥೆಯಾದ ಟಾಟಾ ಮೋಟರ್ಸ್‍ನ ಟಿಗೋರ್ ಡೀಸೆಲ್ ಕಾರುಗಳ ಎಮಿಷನ್‍‍ನಲ್ಲಿ ಲೋಪವಿದ್ದು, ಲೋಪವನ್ನು ಸರಿಪಡಿಸಲು ಸಂಸ್ಥೆಯು ಟಿಗೋರ್ ಡೀಸೆಲ್ ಕಾರುಗಳನ್ನು ಹಿಂಪಡೆಯಲಿದೆ. ಮಾರ್ಚ್ 6, 2017 ರಿಂದ ಡಿಸೆಂಬರ್ 1, 2017ರವರೆಗು ಉತ್ಪಾದಿಸಲಾದ ಟಾಟಾ ಟಿಗೋರ್ ಡೀಸೆಲ್ ವೇರಿಯೆಂಟ್ ಕಾರುಗಳಲ್ಲಿ ತಾಂತ್ರಿಕ ದೋಷವಿರುವುದು ಪತ್ತೆಯಾಗಿದೆ.

ತಂತ್ರಿಕ ದೋಷ : ಟಿಗೋರ್ ಡೀಸೆಲ್ ಸೆಡಾನ್ ಕಾರುಗಳನ್ನು ಹಿಂಪಡೆಯಲಿದ ಟಾಟಾ ಮೋಟರ್ಸ್..

ಡೀಸೆಲ್ ವೇರಿಯಂಟ್ ಟಾಟಾ ಟಿಗೋರ್ ಕಾರುಗಳಲ್ಲಿನ MAT629401GKP52721 ರಿಂದ MAT629401HKN89616 ಒಳಗೆ ಚಾಸಿಸ್ ನಂಬರ್ ಅನ್ನು ಪಡೆದಿರುವ ಕಾರುಗಳನ್ನು ಸಂಸ್ಥೆಯು ರೀಕಾಲ್ ಮಾಡಿದೆ. ಟಾಟಾ ಟಿಗೋರ್ ಡಿಸೇಲ್ ವೇರಿಯಂಟ್‍‍ನ ಮಾಲಿಕರು ನಿಮ್ಮ ಕಾರಿನ ಎಮಿಷನ್‍‍ನಲ್ಲಿ ಯಾವುದೇ ರೀತಿಯಾದ ಲೋಪದೋಷವಿದ್ದರೆ, ಈ ಕೂಡಲೆ ನಿಮ್ಮ ಹತ್ತಿರದ ಟಾಟಾ ಮೋಟರ್ಸ್‍ನ ಅಧಿಕೃತ ಡೀಲರ್‍‍ನ ಬಳಿ ಕೊಂಡೊಯ್ದು, ಯಾವುದೇ ಖರ್ಚಿಲ್ಲದೆ ಲೋಪವನ್ನು ಸರಿ ಪಡಿಸಿಕೊಳ್ಳಿ.

ತಂತ್ರಿಕ ದೋಷ : ಟಿಗೋರ್ ಡೀಸೆಲ್ ಸೆಡಾನ್ ಕಾರುಗಳನ್ನು ಹಿಂಪಡೆಯಲಿದ ಟಾಟಾ ಮೋಟರ್ಸ್..

ಟಾಟಾ ಮೋಟರ್ಸ್ ತಮ್ಮ ಟಿಗೋರ್ ಡೀಸೆಲ್ ಕಾರುಗಳಲ್ಲಿ ಆಗಿರುವುದು ಕೇವಲ ಎಮಿಷನ್ ಕೊರತೆಯೆ ಹೊರತು ಇದರಿಂದ ವಾಹನದಲ್ಲಿ ಪ್ರಯಾಣಿಸುವವರಿಗೆ ಯಾವುದೆ ತೊಂದರೆ ಇಲ್ಲವೆಂದು ಹೇಳುತ್ತಿದ್ದು, ಕಾರುಗಳನು ರೀಕಾಲ್ ಮಾಡಲು ಸರಿಯಾದ ಕಾರಣವನ್ನು ಸಂಸ್ಥೆಯು ಇನ್ನು ಬಹಿರಂಗಗೊಳಿಸಲಿಲ್ಲ. ಜೊತೆಗೆ ಸುಮಾರು 7,000 ಯೂನಿಟ್ ಕಾರುಗಳಿಗೆ ಎಮಿಷನ್ ಲೋಪವಿರುವುದಾಗಿ ತಿಳಿದು ಬಂದಿದೆ.

ತಂತ್ರಿಕ ದೋಷ : ಟಿಗೋರ್ ಡೀಸೆಲ್ ಸೆಡಾನ್ ಕಾರುಗಳನ್ನು ಹಿಂಪಡೆಯಲಿದ ಟಾಟಾ ಮೋಟರ್ಸ್..

ಈ ಹಿಂದೆ ಮ್ಯಾನುವಲ್ ಟಾಟಾ ಟಿಗೋರ್ ಎಡಿಷನ್ ಬಿಡುಗಡೆಗೊಳಿಸಿ ಭರ್ಜರಿ ಬೇಡಿಕೆ ಪಡೆದುಕೊಂಡಿದ್ದ ಟಾಟಾ ಮೋಟಾರ್ಸ್ ಸಂಸ್ಥೆಯು ಇದೀಗ ಆಟೋಮ್ಯಾಟಿಕ್ ಗೇರ್‌ಬಾಕ್ಸ್(ಎಎಂಟಿ) ಆವೃತ್ತಿಯನ್ನು ಹೊರ ತಂದಿದ್ದು, ಇಕೊ ಮತ್ತು ಸಿಟಿ ಜತೆಗೆ ಸ್ಪೋರ್ಟ್ ಡ್ರೈವ್ ಮೋಡ್‌ಗಳನ್ನು ಪರಿಚಯಿಸಿದೆ.

MOST READ: ಕಾರು ರಿಪೇರಿಗೆ ಹೋದ ಸ್ಕೋಡಾ ಮಾಲಕಿಗೆ ಡೀಲರ್ಸ್ ಹೀಗಾ ಮಾಡೋದು.?

ತಂತ್ರಿಕ ದೋಷ : ಟಿಗೋರ್ ಡೀಸೆಲ್ ಸೆಡಾನ್ ಕಾರುಗಳನ್ನು ಹಿಂಪಡೆಯಲಿದ ಟಾಟಾ ಮೋಟರ್ಸ್..

ಇದರೊಂದಿಗೆ ಟಾಟಾ ಟಿಗೋರ್ ಕಾರು ಎಕ್ಸ್‌ಟಿಎ, ಎಲ್ಇಡಿ ಟರ್ನ್ ಇಂಡಿಕೇಟರ್, ವಿದ್ಯುನ್ಮಾನವಾಗಿ ಹೊಂದಾಣಿಸಬಹುದಾದ ಹೊರಗಿನ ರಿಯರ್ ವ್ಯೂ ಮಿರರ್, ಸಂಪೂರ್ಣ ವೀಲ್ ಕವರ್ ಕಪ್ಪು ಬಿ ಪಿಲ್ಲರ್, ರಿಯರ್ ಪವರ್ ಔಟ್ಲೆಟ್, ಹರ್ಮನ್ ಕನೆಕ್ಟ್ ನೆಕ್ಸ್ಟ್ ಇನ್ಪೋಟೈನ್ಮೆಂಟ್ ಸಿಸ್ಟಂ ಹೊಂದಿದೆ.

ತಂತ್ರಿಕ ದೋಷ : ಟಿಗೋರ್ ಡೀಸೆಲ್ ಸೆಡಾನ್ ಕಾರುಗಳನ್ನು ಹಿಂಪಡೆಯಲಿದ ಟಾಟಾ ಮೋಟರ್ಸ್..

ಜೊತೆಗೆ ನಾಲ್ಕು ಸ್ಪೀಕರ್, ನೇವಿಗೇಷನ್, ಬ್ಲೂಟೂತ್ ಕನೆಕ್ಟಿವಿಟಿ, ಸ್ಟೀರಿಂಗ್ ಮೌಟೆಂಡ್ ಆಡಿಯೋ ಕಂಟ್ರೋಲ್ ಮತ್ತು ಎಲ್‌ಇಡಿ ತಾಪಮಾನ ಗೇಜ್ ಮುಂತಾದ ವೈಶಿಷ್ಟ್ಯಗಳನ್ನು ಒಳಗೊಂಡಿದ್ದು, 1.2 ಲೀಟರ್ ರೆವೆಟ್ರಾನ್ ಪೆಟ್ರೋಲ್ ಎಂಜಿನ್‌ಗಳಲ್ಲಿ ಟಾಪ್ ಎಂಡ್ ಎಕ್ಸ್‌ಟಿಎ ಮತ್ತು ಎಕ್ಸ್‌ಝಡ್ಎ ವೆರಿಯಂಟ್‌ಗಳಲ್ಲಿ ಇದು ಲಭ್ಯವಾಗಲಿದೆ.

ತಂತ್ರಿಕ ದೋಷ : ಟಿಗೋರ್ ಡೀಸೆಲ್ ಸೆಡಾನ್ ಕಾರುಗಳನ್ನು ಹಿಂಪಡೆಯಲಿದ ಟಾಟಾ ಮೋಟರ್ಸ್..

ಕಾಂಪ್ಯಾಕ್ಟ್ ಸೇಡಾನ್ ಕಾರುಗಳ ಸರಣಿಯ ಮಾರಾಟದಲ್ಲಿ ಟಾಟಾ ಟಿಗೋರ್ ಮೂರನೆಯ ಸ್ಥಾನವನ್ನು ಪಡೆದುಕೊಂಡಿದ್ದು, ಮೊದಲ ಸ್ಥಾನದಲ್ಲಿ ಮಾರುತಿ ಡಿಜೈರ್, ಎರಡನೆಯದಾಗಿ ಹೋಂಡಾ ಅಮೇಜ್ ಮತ್ತು ಮೂರನೆಯ ಸ್ಥಾನವನ್ನು ಹ್ಯುಂಡೈ ಎಕ್ಸ್ ಸೆಂಟ್ ಕಾರುಗಳಿವೆ.

ತಂತ್ರಿಕ ದೋಷ : ಟಿಗೋರ್ ಡೀಸೆಲ್ ಸೆಡಾನ್ ಕಾರುಗಳನ್ನು ಹಿಂಪಡೆಯಲಿದ ಟಾಟಾ ಮೋಟರ್ಸ್..

ಎಂಜಿನ್ ಸಾಮರ್ಥ್ಯ

ಟಾಟಾ ಟಿಗೋರ್ ಡೀಸೆಲ್ ವೇರಿಯಂಟ್ ಕಾರುಗಳು 1.5 ಲೀಟರ್ 3 ಸಿಲೆಂಡರ್ ಡೀಸೆಲ್ ಎಂಜಿನ್ ಸಹಾಯದಿಂದ 69ಬಿಹೆಚ್‍‍ಪಿ ಮತ್ತು 140ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದ್ದು, ಎಂಜಿನ್ ಅನ್ನು 5 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ. ಎಮಿಷನ್ ತೊಂದರೆಯಿಂದ ಕಾರಿನ ಸುರಕ್ಷತೆಯ ಬಗ್ಗೆ ಯಾವ ತೊಂದರೆಯು ಇರುವುದಿಲ್ಲ.

MOST READ: ಆರ್‌ಇಯಿಂದ ಮೋಸದ ವ್ಯಾಪಾರ- ದುಬಾರಿ ಬೆಲೆಯ ಪೆಗಾಸಸ್ ಬೈಕ್ ತಿಪ್ಪೆಗೆ ಎಸೆದ ಬೈಕ್ ಮಾಲೀಕ

ತಂತ್ರಿಕ ದೋಷ : ಟಿಗೋರ್ ಡೀಸೆಲ್ ಸೆಡಾನ್ ಕಾರುಗಳನ್ನು ಹಿಂಪಡೆಯಲಿದ ಟಾಟಾ ಮೋಟರ್ಸ್..

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಟಾಟಾ ಮೋಟರ್ಸ್ ಎಮಿಷನ್ ವಿಚಾರದಲ್ಲಿ ತಮ್ಮ ಟಿಗೋರ್ ಸೆಡಾನ್ ಕಾರುಗಳನ್ನು ಸ್ವಯಂಪ್ರೇರಿತ ರೀಕಾಲ್ ಮಾಡಿದೆ. ರೀಕಾಲ್‍‍ಗೆ ಸರಿಯಾದ ಕಾರಣ ಏನು ಎಂಬುದನ್ನು ಸಂಸ್ಥೆಯು ಇನ್ನು ಬಹಿರಂಗಪಡಿಸಲಿಲ್ಲ. ರೀಕಾಲ್ ಬಗೆಗಿನ ಇನ್ನು ಹೆಚ್ಚಿನ ಮಾಹಿತಿಯನ್ನು ಸಂಸ್ಥೆಯ ಅಧಿಕೃತ ವೆಬ್‍‍ಸೈಟ್‍‍ನಲ್ಲಿ ನೋಡಬಹುದಾಗಿದೆ.

More from DriveSpark

Article Published On: Wednesday, September 5, 2018, 9:48 [IST]
English summary
Tata Tigor Diesel Recalled Over Emission Issue.
Read more on tata motors recall sedan
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+