ಭಾರತಕ್ಕೂ ಕರೊಲ್ಲಾ ಸ್ಪೋರ್ಟ್ ಹ್ಯಾಚ್‌ಬ್ಯಾಕ್ ಪರಿಚಯಿಸುತ್ತಾ ಟೊಯೊಟಾ?
ಜಪಾನ್ ಮೂಲದ ಪ್ರತಿಷ್ಠಿತ ಕಾರು ಉತ್ಪಾದನಾ ಸಂಸ್ಥೆಯಾದ ಟೊಯೊಟಾ ಸದ್ಯದಲ್ಲೇ ತನ್ನ ಕರೊಲ್ಲಾ ಸರಣಿಯಲ್ಲಿ ಹ್ಯಾಚ್‌ಬ್ಯಾಕ್ ಮಾದರಿಯೊಂದನ್ನು ಬಿಡುಗಡೆಗೊಳಿಸುತ್ತಿದೆ.
ಜಪಾನ್ ಮೂಲದ ಪ್ರತಿಷ್ಠಿತ ಕಾರು ಉತ್ಪಾದನಾ ಸಂಸ್ಥೆಯಾದ ಟೊಯೊಟಾ ಸದ್ಯದಲ್ಲೇ ತನ್ನ ಕರೊಲ್ಲಾ ಸರಣಿಯಲ್ಲಿ ಹ್ಯಾಚ್‌ಬ್ಯಾಕ್ ಮಾದರಿಯೊಂದನ್ನು ಬಿಡುಗಡೆಗೊಳಿಸುತ್ತಿದ್ದು, ಸದ್ಯ ಹೊಸ ಕಾರಿನ ಎಂಜಿನ್ ಆಯ್ಕೆ ಮತ್ತು ಕಾರಿನ ವಿನ್ಯಾಸಗಳ ಕುರಿತಾದ ಮಾಹಿತಿಯನ್ನು ಬಿಡುಗಡೆ ಮಾಡಿದೆ.

ಈಗಾಗಲೇ ಭಾರತೀಯ ಮಾರುಕಟ್ಟೆಯಲ್ಲಿ ಕರೊಲ್ಲಾ ಸೆಡಾನ್ ಕಾರುಗಳು ಅತಿಹೆಚ್ಚು ಜನಪ್ರಿಯವಾಗುತ್ತಿದ್ದು, ಇದರ ಬೆನ್ನಲ್ಲೇ ಕರೊಲ್ಲಾ ಸ್ಪೋರ್ಟ್ ಹ್ಯಾಚ್‌ಬ್ಯಾಕ್ ಕಾರುಗಳನ್ನು ಮಾರುಕಟ್ಟೆಗೆ ಪರಿಚಯಿಸುವ ಬಗ್ಗೆ ಟೊಯೊಟಾ ಸಂಸ್ಥೆಯು ಸುಳಿವು ನೀಡಿದ್ದರೂ ಸಹ ಮೊದಲ ಹಂತವಾಗಿ ಕರೊಲ್ಲಾ ಸ್ಪೋರ್ಟ್ ಹ್ಯಾಚ್‌ಬ್ಯಾಕ್ ಕಾರುಗಳು ಜಪಾನ್ ಮಾರುಕಟ್ಟೆಗೆ ಮಾತ್ರವೇ ಅಭಿವೃದ್ಧಿಗೊಳಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಟಿಎನ್‌ಜಿಎ ಪ್ಲ್ಯಾಟ್ ಫಾರ್ಮ್ ಆಧರಿತ ವಿನ್ಯಾಸಗಳೊಂದಿಗೆ ಕರೊಲ್ಲಾ ಸ್ಪೋರ್ಟ್ ಹ್ಯಾಚ್‌ಬ್ಯಾಕ್‌ಗಳು ಅಭಿವೃದ್ಧಿಗೊಳಿಸುತ್ತಿರುವ ಟೊಯೊಟಾ, ಹೊಸ ಕಾರುಗಳನ್ನು 2019ಕ್ಕೆ ನಡೆಯಲಿರುವ ನ್ಯೂಯಾರ್ಕ್ ಆಟೋ ಮೇಳದಲ್ಲಿ ಮೊದಲ ಬಾರಿಗೆ ಪ್ರದರ್ಶನಗೊಳಿಸುವ ಯೋಜನೆಯಲ್ಲಿದೆ.

ತದನಂತರವಷ್ಟೇ ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಮಾರಾಟಕ್ಕೆ ಲಭ್ಯವಾಗುವ ಕರೊಲ್ಲಾ ಸ್ಪೋರ್ಟ್ ಹ್ಯಾಚ್‌ಬ್ಯಾಕ್ ಕಾರುಗಳು, ಸ್ಪೋರ್ಟಿ ಮತ್ತು ಕ್ಲಾಸಿಕ್ ಲುಕ್‌ಗಳೊಂದಿಗೆ ಹ್ಯಾಚ್‌ಬ್ಯಾಕ್ ಪ್ರಿಯರನ್ನು ಮೋಡಿ ಮಾಡಲಿವೆ.

ಇನ್ನು ಕರೊಲ್ಲಾ ಸ್ಪೋರ್ಟ್ ಹ್ಯಾಚ್‌ಬ್ಯಾಕ್ ಕಾರುಗಳು ಮುಂಭಾಗದಲ್ಲಿ ವಿಸ್ತರಿತ ಗ್ರಿಲ್, ನ್ಯೂ ಎಲ್ಇಡಿ ಹೆಡ್‌ಲ್ಯಾಂಪ್, ಸ್ಲಿಕ್ ಎಲ್ಇಡಿ ಹೆಡ್‌ಲ್ಯಾಂಪ್, ಟೈಲ್ ಲೈಟ್, ರೂಫ್ ಮೌಂಟೆಂಡ್ ಮತ್ತು ಶಾರ್ಕ್ ಫೀನ್ ಆಂಟೆನಾಗಳನ್ನು ಹೊಂದಿರಲಿವೆ.

ಜೊತೆಗೆ ಕಾರಿನ ಒಳಭಾಗದಲ್ಲಿ ಪ್ರಿಮಿಯಂ ವೈಶಿಷ್ಟ್ಯತೆಗಳನ್ನು ಜೋಡಣೆ ಮಾಡಲಾಗಿದ್ದು, ಲಾರ್ಜ್ ಪ್ಲೋಟರಿಂಗ್ ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್, ಸ್ಪೋರ್ಟಿ ಕ್ಯಾಬಿನ್, ಆಲ್ ಬ್ಲ್ಯಾಕ್ ಥೀಮ್ ವಿನ್ಯಾಸಗಳನ್ನು ಪಡೆದುಕೊಂಡಿವೆ.

ಎಂಜಿನ್ ಸಾಮರ್ಥ್ಯ
ಕರೊಲ್ಲಾ ಸ್ಪೋರ್ಟ್ ಕಾರುಗಳು 1.2-ಲೀಟರ್ ಎಂಜಿನ್ ಮಾದರಿಯಲ್ಲಿ ಎರಡು ಆಯ್ಕೆಗಳನ್ನು ಹೊಂದಿರುವ ಕರೊಲ್ಲಾ ಸ್ಪೋರ್ಟ್ ಹ್ಯಾಚ್‌ಬ್ಯಾಕ್ ಕಾರುಗಳು ಟರ್ಬೋ-ಪೆಟ್ರೋಲ್ ಮತ್ತು ಪೆಟ್ರೋಲ್-ಹೈಬ್ರಿಡ್ ವರ್ಷನ್‌ಗಳಲ್ಲಿ ಖರೀದಿಗೆ ಲಭ್ಯವಾಗಲಿದ್ದು, ಟರ್ಬೋ-ಪೆಟ್ರೋಲ್ ಮಾದರಿಯು 114-ಬಿಎಚ್‌ಪಿ ಉತ್ಪಾದಿಸಿದ್ದಲ್ಲಿ ಪೆಟ್ರೋಲ್-ಹೈಬ್ರಿಡ್ ಮಾದರಿಯು 120-ಬಿಎಚ್‌ಪಿ ಉತ್ಪಾದಿಸಬಲ್ಲವು.

ಕಾರಿನಲ್ಲಿ ಸುರಕ್ಷತೆಗಾಗಿ 7 ಏರ್‌ಬ್ಯಾಗ್ ಒದಗಿಸಲಾಗಿದ್ದು, ಎಬಿಎಸ್, ಇಬಿಡಿ, ಬ್ರೇಕ್ ಅಸಿಸ್ಟಂಟ್, ಲೈನ್ ಡಿಪಾರ್ಚರ್ ವಾರ್ನಿಂಗ್, ಡೈಮಾನಿಕ್ ರಡಾರ್ ಕ್ರೂಸ್ ಕಂಟ್ರೊಲರ್ ಮತ್ತು ಹೈ ಆಟೋ ಬೀಮ್ಸ್ ಅಳವಡಿಸಲಾಗಿದೆ.

ಒಟ್ಟಿನಲ್ಲಿ ಮಧ್ಯಮ ಗಾತ್ರದ ಹ್ಯಾಚ್‌ಬ್ಯಾಕ್‌ಗಳಲ್ಲಿ ತುಸು ದುಬಾರಿ ಎನ್ನಿಸಿದರೂ ಸ್ಪೋರ್ಟಿ ಲುಕ್ ಕಾರು ಪ್ರಿಯರನ್ನು ಸೆಳೆಯಲಿರುವ ಕರೊಲ್ಲಾ ಸ್ಪೋರ್ಟ್ ಹ್ಯಾಚ್‌ಬ್ಯಾಕ್ ಕಾರುಗಳು ಭಾರತೀಯ ಇದೇ ವರ್ಷದ ಕೊನೆಯಲ್ಲಿ ಜಾಗತಿಕ ಮಾರುಕಟ್ಟೆಗಳಲ್ಲಿ ಬಿಡುಗಡೆಯಾಗಲಿದ್ದು, ಇದು ಭಾರತದಲ್ಲಿ ಯಾವಾಗ ಬಿಡುಗಡೆ ಆಗಲಿವೆ ಎನ್ನುವ ಬಗ್ಗೆ ಯಾವುದೇ ಮಾಹಿತಿಗಳು ಲಭ್ಯವಾಗಿಲ್ಲ.

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:
ಇನೋವಾ ಕ್ರಿಸ್ಟಾ ಹಿಂದಿಕ್ಕಲು ಬರಲಿದೆ 11 ಸೀಟರ್ ಕಿಯಾ ಗ್ರ್ಯಾಂಡ್ ಕಾರ್ನಿವಾಲ್
ಬಿಎಂಡಬ್ಲ್ಯು ಹೊಚ್ಚ ಹೊಸ 310 ಟ್ವಿನ್ ಬೈಕ್‌ಗಳ ಬಿಡುಗಡೆಗೆ ಡೇಟ್ ಫಿಕ್ಸ್
ಲೆಕ್ಸಸ್ ವಿನ್ಯಾಸದಲ್ಲಿ ಮಿಂಚಿದ ಮಾಡಿಫೈ ಇನೋವಾ ಕ್ರಿಸ್ಟಾ
ಲಿಫ್ಟ್ ಕೊಟ್ಟ ತಪ್ಪಿಗೆ ಕೋರ್ಟ್‌ನಲ್ಲಿ ದಂಡ ಕಟ್ಟಿದ ಕಾರು ಮಾಲೀಕ..
ಕಳ್ಳಸಾಗಾಣಿಕೆಯಲ್ಲಿ ಸಿಕ್ಕಿಬಿದ್ದ 43 ಕೋಟಿ ಮೌಲ್ಯದ 122 ಬೈಕ್‌ಗಳು ಪೀಸ್ ಪೀಸ್..


Click it and Unblock the Notifications








