ಬರಲಿದೆ ಟೊಯೊಟಾ ಇಟಿಯಾಸ್ ಸರಣಿಯ ಮತ್ತೊಂದು ಫೇಸ್‌ಲಿಫ್ಟ್

ಜಪಾನ್ ಮೂಲದ ಕಾರು ತಯಾರಕ ಸಂಸ್ಥೆಯಾದ ಟೊಯೊಟಾ ಸಂಸ್ಥೆಯು ತನ್ನ ಕಾರುಗಳಿಂದ ಭಾರತೀಯ ಮಾರುಕಟ್ಟೆಯಲ್ಲಿ ಬಹಳಷ್ಟು ಜನಪ್ರಿಯತೆಯನ್ನು ಪಡೆದಿದ್ದು, ಇದೀಗ ಇಟಿಯಾಸ್ ಸರಣಿ ಕಾರುಗಳಲ್ಲಿ ಮತ್ತೊಂದು ಫೇಸ್‌ಲಿಫ್ಟ್ ಮಾದರಿಯನ್ನು ಪರಿಚಯಿಸಲು ಮುಂದಾಗಿದೆ.

By Rahul Ts

ಜಪಾನ್ ಮೂಲದ ಕಾರು ತಯಾರಕ ಸಂಸ್ಥೆಯಾದ ಟೊಯೊಟಾ ಸಂಸ್ಥೆಯು ತನ್ನ ಕಾರುಗಳಿಂದ ಭಾರತೀಯ ಮಾರುಕಟ್ಟೆಯಲ್ಲಿ ಬಹಳಷ್ಟು ಜನಪ್ರಿಯತೆಯನ್ನು ಪಡೆದಿದ್ದು, ಇದೀಗ ಇಟಿಯಾಸ್ ಸರಣಿ ಕಾರುಗಳಲ್ಲಿ ಮತ್ತೊಂದು ಫೇಸ್‌ಲಿಫ್ಟ್ ಮಾದರಿಯನ್ನು ಪರಿಚಯಿಸಲು ಮುಂದಾಗಿರುವುದು ಹೊಸ ಚರ್ಚೆಗೆ ಕಾರಣವಾಗಿದೆ.

ಬರಲಿದೆ ಟೊಯೊಟಾ ಇಟಿಯಾಸ್ ಸರಣಿಯ ಮತ್ತೊಂದು ಫೇಸ್‌ಲಿಫ್ಟ್

ಮೂರನೇ ಬಾರಿ ಟೊಯೊಟಾ ಇಟಿಯಾಸ್ ಸರಣಿ ಕಾರುಗಳ ಫೇಸ್‌ಲಿಫ್ಟ್ ಇದಾಗಿದ್ದು, ಇಟಿಯಾಸ್ ಸಿರೀಸ್ ಫೇಸ್‌ಲಿಫ್ಟ್ ಮೊದಲನೆಯದಾಗಿ 2014ರಲ್ಲಿ ನಂತರ 2017ರಲ್ಲಿ ತನ್ನ 2ನೇ ಫೇಸ್‌ಲಿಫ್ಟ್ ಪರಿಚಯಿಸಿತ್ತು. ಇದೀಗ ಮಾರುಕಟ್ಟೆಯಲ್ಲಿನ ಬೇಡಿಕೆ ಅನುಗುಣವಾಗಿ ಮೂರನೇ ಆವೃತ್ತಿಯನ್ನು ಹೊರತರುತ್ತಿದೆ.

Recommended Video

New Maruti Swift Launch: Price; Mileage; Specifications; Features; Changes
ಬರಲಿದೆ ಟೊಯೊಟಾ ಇಟಿಯಾಸ್ ಸರಣಿಯ ಮತ್ತೊಂದು ಫೇಸ್‌ಲಿಫ್ಟ್

"ಸುಧಾರಿತ ಉತ್ಪನ್ನ ಮತ್ತು ಆಶಾದಾಯಕವಾಗಿ ಸೃಜನಶೀಲ ಮಾರುಕಟ್ಟೆಯ ತೀಕ್ಷ್ಣ ದೃಷ್ಟಿಯೊಂದಿಗೆ, ನಾವು ಇಟಿಯಾಸ್ ಸರಣಿಯ ಹೊಸ ಆವೃತ್ತಿಯನ್ನು ತರುತ್ತಿದ್ದು, ಇಟಿಯಾಸ್ ಮತ್ತು ಲಿವಾ ಕಾರುಗಳಂತೆಯೇ ಸಾಮಾನ್ಯ ಫೇಸ್‌ಲಿಫ್ಟ್ ಇದಾಗಿರಲಿದೆ ಎಂದು ಕಿರ್ಲೋಸ್ಕರ್ ಮೋಟಾರ್ ಉಪಾಧ್ಯಕ್ಷರಾದ ಶೇಖರ್ ವಿಶ್ವನಾಥನ್ ಮಾಹಿತಿ ಹೊರಹಾಕಿದ್ದಾರೆ.

ಬರಲಿದೆ ಟೊಯೊಟಾ ಇಟಿಯಾಸ್ ಸರಣಿಯ ಮತ್ತೊಂದು ಫೇಸ್‌ಲಿಫ್ಟ್

ಸದ್ಯ ಯಾರಿಸ್ ಮೇಲೆ ಹೆಚ್ಚು ಗಮನಹರಿಸಿರುವ ಟೊಯೊಟಾ ಸಂಸ್ಥೆಯು ಇಟಿಯಾಸ್ ಪ್ಲಾಟಿನಮ್ ಮತ್ತು ಇಟಿಯಾಸ್ ಲಿವಾ ಕಾರುಗಳನ್ನು ಮುಂದಿನ ವರ್ಷದಲ್ಲಿ ಮಾರುಕಟ್ಟೆಗೆ ಪರಿಚಯಿಸಲಿದೆ ಎನ್ನಲಾಗಿದ್ದು, ಯಾರಿಸ್‌ನ ಕೆಲವು ಫೀಚರ್ ವೈಶಿಷ್ಟ್ಯಗಳೊಂದಿಗೆ ಹೊಸ ಇಟಿಯಾಸ್ ಫೇಸ್‌ಲಿಫ್ಟ್ ಅಭಿವೃದ್ಧಿ ಹೊಂದಿರಲಿದೆ.

ಬರಲಿದೆ ಟೊಯೊಟಾ ಇಟಿಯಾಸ್ ಸರಣಿಯ ಮತ್ತೊಂದು ಫೇಸ್‌ಲಿಫ್ಟ್

ಇದು ಪ್ರತಿಸ್ಪರ್ಧಿ ಕಾರುಗಳಿಂದ ಪ್ರತ್ಯೇಕವಾಗಿದ್ದು, ಅತ್ಯುತ್ತಮ ಚಾಲನಾ ಸೌಲಭ್ಯಗಳನ್ನು ನೀಡಿರುವುದು ಎಸ್‌ಯುವಿಗಳಲ್ಲಿ ಜನಪ್ರಿಯತೆ ಸಾಧಿಸಿರುವ ಕ್ರೇಟಾಗೆ ನೇರ ಪೈಪೋಟಿ ಹೊಂದಲಿದೆ ಎನ್ನಲಾಗಿದೆ.

ಬರಲಿದೆ ಟೊಯೊಟಾ ಇಟಿಯಾಸ್ ಸರಣಿಯ ಮತ್ತೊಂದು ಫೇಸ್‌ಲಿಫ್ಟ್

ಇನ್ನು ಮೂರನೇ ಫೇಸ್‌ಲಿಫ್ಟ್ ಆವೃತ್ತಿಯಲ್ಲಿ ಸುರಕ್ಷತೆ ಮತ್ತು ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಇದು ಹೊಸ ಕಾರು ಮಾದರಿಗಳನ್ನು ಬಯಸುವ ಕಾರು ಖರೀದಿದಾರರಿಗೆ ಉತ್ತಮ ಆಯ್ಕೆಯಾಗಲಿದೆ.

ಬರಲಿದೆ ಟೊಯೊಟಾ ಇಟಿಯಾಸ್ ಸರಣಿಯ ಮತ್ತೊಂದು ಫೇಸ್‌ಲಿಫ್ಟ್

ಈ ಮೂಲಕ ಗ್ರಾಹಕರನ್ನು ಸೆಳೆಯಲು ಮುಂದಾಗಿರುವ ಟೊಯೊಟಾ ಸಂಸ್ಥೆಯು ಇಟಿಯಾಸ್ ಸರಣಿಗಳಲ್ಲಿ ಮತ್ತೊಮ್ಮೆ ಸದ್ದು ಮಾಡಲಿದ್ದು, ಸದ್ಯದಲ್ಲೆ ಹೊಸ ಕಾರಿನ ಬಿಡುಗಡೆ ಮತ್ತು ತಾಂತ್ರಿಕ ಅಂಶಗಳ ಮತ್ತಷ್ಟು ಮಾಹಿತಿ ಬಿಡುಗಡೆ ಮಾಡಲಿದೆ.

Trending On DriveSpark Kannada:

ರಾಯಲ್ ಎನ್‌ಫೀಲ್ಡ್ ಖರೀದಿ ಮಾಡೋದಕ್ಕೆ ಗ್ರಾಹಕರು ಯಾಕೆ ಹಿಂದೇಟು ಹಾಕ್ತಾರೆ ಗೊತ್ತಾ?

ಸದ್ಯದಲ್ಲೇ ಗುಜುರಿ ಸೇರಲಿವೆ 2.80 ಕೋಟಿ ಹಳೆಯ ಕಾರುಗಳು

ಐ20 ಫೇಸ್‌ಲಿಫ್ಟ್ v/s ಮಾರುತಿ ಸುಜುಕಿ ಬಲೆನೊ.. ಇವುಗಳಲ್ಲಿ ಯಾವುದು ಬೆಸ್ಟ್?

Article Published On: Tuesday, February 20, 2018, 13:46 [IST]
English summary
Toyota 'Etios Series' To Receive Yet Another Facelift.
Read more on toyota
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+