ಹೊಸ ವೈಶಿಷ್ಟ್ಯತೆಗಳನ್ನು ಪಡೆದ ಟೊಯೊಟಾ ಇನೊವಾ ಮತ್ತು ಫಾರ್ಚ್ಯುನರ್..
ಟೋಯೊಟಾ ಸಂಸ್ಥೆಯು ಭಾರತೀಯ ಮಾರಕಟ್ಟೆಯಲ್ಲಿ ಅಧಿಕವಾಗಿ ಮಾರಾಟವಾಗುತ್ತಿರುವ ತಮ್ಮ ಇನೊವಾ ಕ್ರಿಸ್ಟಾ, ಇನೊವಾ ಕ್ರಿಸ್ಟಾ ಸ್ಪೋರ್ಟ್ ಮತ್ತು ಫಾರ್ಚ್ಯುನರ್ ಕಾರುಗಳಿಗೆ ಹೊಸ ವೈಶಿಷ್ಟ್ಯತೆಗಳನ್ನು ಅಳವಡಿಸಲು ಮುಂದಾಗಿದೆ. ಈ ಮೂರು ಕಾರುಗಳಿಗೆ ಸಂಸ್ಥ
ಟೋಯೊಟಾ ಸಂಸ್ಥೆಯು ಭಾರತೀಯ ಮಾರಕಟ್ಟೆಯಲ್ಲಿ ಅಧಿಕವಾಗಿ ಮಾರಾಟವಾಗುತ್ತಿರುವ ತಮ್ಮ ಇನೊವಾ ಕ್ರಿಸ್ಟಾ, ಇನೊವಾ ಕ್ರಿಸ್ಟಾ ಸ್ಪೋರ್ಟ್ ಮತ್ತು ಫಾರ್ಚ್ಯುನರ್ ಕಾರುಗಳಿಗೆ ಹೊಸ ವೈಶಿಷ್ಟ್ಯತೆಗಳನ್ನು ಅಳವಡಿಸಲು ಮುಂದಾಗಿದೆ. ಈ ಮೂರು ಕಾರುಗಳಿಗೆ ಸಂಸ್ಥೆಯು ಅತ್ತ ಸುರಕ್ಷತೆಗೆ ಮತ್ತು ಟೆಕ್ ಬಗೆಗಿನ ವೈಶಿಷ್ಟ್ಯತೆಗಳನ್ನು ಹೊಸದಾಗಿ ಅಳವಡಿಸಿದೆ.

ಟೊಯೊಟಾ ಇನೊವಾ ಕ್ರಿಸ್ಟಾ, ಇನೊವಾ ಕ್ರಿಸ್ಟಾ ಸ್ಪೋರ್ಟ್ ಮತ್ತು ಫಾರ್ಚ್ಯುನರ್ ಕಾರುಗಳಲ್ಲಿ ಹೊಸದಾಗಿ ಎಮರ್ಜೆನ್ಸಿ ಬ್ರೇಕ್ ಸಿಗ್ನಲ್, ರಿಯರ್ ಫಾಗ್ ಲ್ಯಾಂಪ್ಸ್, ಫ್ರಂಟ್ ಎಲ್ಇಡಿ ಫಾಗ್ ಲ್ಯಾಂಪ್ಸ್ ಮತ್ತು ಆಂಟಿ ಥೆಫ್ಟ್ ಅಲಾರ್ಮ್‍ನೊಂದಿಗೆ ಗ್ಲಾಸ್ ಬ್ರೇಕ್ ಮತ್ತು ಅಲ್ಟ್ರಾಸಾನಿಕ್ ಸೆನ್ಸಾರ್ನ್ ಅನ್ನು ನೀಡಲಾಗಿದೆ.

ಇದಲ್ಲದೇ ಟೊಯೊಟಾ ಇನೊವಾ ಮತ್ತು ಇನೊವಾ ಕ್ರಿಸ್ಟಾ ಟೂರಿಂಗ್ ಸ್ಪೋರ್ಟ್ ಕಾರುಗಳಲ್ಲಿ ಟಚ್‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಸ್ಟೀರಿಂಗ್ ಮೌಂಟೆಡ್ ಆಡಿಯೊ ಕಂಟ್ರೋಲ್, ಪವರ್-ಫೋಲ್ಡಿಂಗ್ ಒಆರ್‍ವಿಎಮ್, ಪ್ಯಾಡಲ್ ಲ್ಯಾಂಪ್ಸ್ ಮತ್ತು ಸ್ಪೀಡ್ ಆಂಡ್ ಇಂಪ್ಯಾಕ್ಟ್ ಸೆಸ್ನ್ಸಿಟೀವ್ ಡೋರ್ ಲಾಕ್/ಅನ್‍ಲಾಕ್ ವೈಶಿಷ್ಟ್ಯತೆಗಳನ್ನು ಒದಗಿಸಲಾಗಿದೆ.
Most Read:ಕೇರಳದಲ್ಲಿನ ಪ್ರವಾಹದಿಂದ ಕಾರು ಡೀಲರ್‍ಗಳಿಗೆ ಬರೊಬ್ಬರಿ 1,000 ಸಾವಿರ ಕೋಟಿ ನಷ್ಟ..!!

ಹಾಗೆಯೆ ಟೊಯೊಟಾ ಫಾರ್ಚ್ಯುನರ್ ಎಸ್‍ಯುವಿ ಕಾರು ಕೂಡಾ ಪ್ಯಾಸ್ಸೆಂಜರ್ ಸೈಡ್ ಪವರ್ಡ್ ಸೀಟ್, ಆಂಟಿ ಥೆಫ್ಟ್ ಅಲಾರ್ಮ್, ಅನುಲ್ಯಾಟ್ರಿಕ್ ಸೆನ್ಸಾರ್, ಎಮರ್ಜೆನ್ಸಿ ಬ್ರೇಕ್ ಸಿಗ್ನಲ್, ರಿಯರ್ ಫಾಗ್ ಲ್ಯಾಂಪ್ಸ್ ಮತ್ತು ಎಲೆಕ್ಟ್ರೊ ಕ್ರೋಮಿಕ್ ಇನ್ನರ್ ವಿಂಡೊ-ವ್ಯೂ ಮಿರರ್ ವೈಶಿಷ್ಟ್ಯತೆಗಳನ್ನು ಪಡೆಯಲಿದೆ.

ಕೇವಲ ಹೊಸ ವೈಶಿಷ್ಟ್ಯತೆಗಳನ್ನು ಹೊರೆತು ಪಡಿಸಿ ಟೊಯೊಟಾ ಇನೊವಾ ಕ್ರಿಸ್ಟಾ, ಇನೊವಾ ಕ್ರಿಸ್ಟಾ ಟೂರಿಂಗ್ ಸ್ಪೋರ್ಟ್ ಮತ್ತು ಫಾರ್ಚ್ಯುನರ್ ಕಾರುಗಳಲ್ಲಿ ಬೇರಾವಾ ಬದಲಾವಣೆಗಳನ್ನು ಪಡೆದುಕೊಂಡಿರುವುದಿಲ್ಲ ಎನ್ನಲಾಗಿದ್ದು, ಈ ಮೂರು ಕಾರುಗಳ ಖರೀದಿಯೆ ಬೆಲೆಯನ್ನು ಕೂಡಾ ಅಧಿಕಗೊಳಿಸಿದೆ.

ಇನೊವಾ ಕ್ರಿಸ್ಟಾ ಕಾರು ಈ ಹಿಂದೆ ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 14.35 ಲಕ್ಷದ ಪ್ರಾರಂಭಿಕ ಬೆಲೆಯನ್ನು ಪದೆದುಕೊಂಡಿತ್ತು, ಆದರೆ ಹೊಸ ವೈಶಿಷ್ಟ್ಯತೆಗಳ ಅಳುವಡಿಕೆಯ ನಂತರ ರೂ. 14.65 ಲಕ್ಷದ ಪ್ರಾರಂಭಿಕ ಬೆಲೆಯನ್ನು ಪೆಡೆದುಕೊಂಡಿದೆ.

ಇನೊವಾ ಕ್ರಿಸ್ಟಾ ಟೂರಿಂಗ್ ಸ್ಪೋರ್ಟ್ ಕಾರು ಕೂಡಾ ಮೊದಲಿಗೆ ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 18.15 ಲಕ್ಷದ ಪ್ರಾರಂಭಿಕ ಬೆಲೆಯನ್ನು ಪಡೆದುಕೊಂಡಿತ್ತು, ಆದರೆ ಹೊಸ ವೈಶಿಷ್ಟ್ಯತೆಗಳ ಅಳಿವಡಿಕೆಯ ನಂತರ ರೂ.18.59 ಲಕ್ಷದ ಪ್ರಾರಂಭಿಕ ಬೆಲೆಯನ್ನು ಪಡೆದುಕೊಂಡಿದೆ.
Most Read:ಅಪಘಾತದಲ್ಲಿ ಗಾಯಾಳುಗಳನ್ನು ರಕ್ಷಣೆ ಮಾಡಿದ್ರೆ ಸಿಗಲಿದೆ ಭಾರೀ ಬಹುಮಾನ..

ಟೊಯೊಟಾ ಫಾರ್ಚುನರ್ ಕೂಡಾ ಮೊದಲಿಗೆ ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ.26.69 ಲಕ್ಷದ ಪ್ರಾರಂಭಿಕ ಬೆಲೆಯನ್ನು ಪಡೆದುಕೊಂಡಿದ್ದು, ಆದರೆ ಥರ್ಡ್ ಪಾರ್ಟಿ ವಿಮೆಯ ನಂತರ ರೂ. 27.27 ಲಕ್ಷದ ಪ್ರಾರಂಭಿಕ ಬೆಲೆಯನ್ನು ಪಡೆದುಕೊಂದಿರಲಿದೆ.

ಡ್ರೈವ್‍ಸ್ಪಾರ್ಕ್ ಅಭಿಪ್ರಾಯ
ಟೊಯೊಟಾ ಇಂಡಿಯಾ ತಮ್ಮ ಮೂರು ಕಾರುಗಳಲ್ಲಿ ಹೊಸ ವೈಶಿಷ್ಟ್ಯತೆಗಳನ್ನು ಅಳವದಿಸಲಾಗಿದ್ದು, ಮಾರುಕಟ್ಟೆಯಲ್ಲಿ ಟೊಯೊಟಾ ಇನೊವಾ ಕಾರುಗಳು ಬಿಡುಗಡೆಗೊಳ್ಳಲಿರುವ ಮಾರುತಿ ಎರ್ಟಿಗಾ ಮತ್ತು ಮಹೀಂದ್ರಾ ಮರಾಜೊ ಕಾರುಗಳಿಗೆ ಪೈಪೋಟಿ ನೀಡಲಿದೆ. ಇನ್ನು ಟೊಯೊಟಾ ಫಾರ್ಚುನರ್ ಫೋರ್ಡ್ ಎಂಡೀವರ್ ಕಾರಿಗೆ ಪೈಪೋಟಿ ನೀಡಲಿದೆ.
{document1}


Click it and Unblock the Notifications








