ಟೊಯೊಟಾ ಕಾರುಗಳ ಬೆಲೆಯಲ್ಲಿ ಏರಿಕೆ- ಯಾವ ಕಾರಿನ ಬೆಲೆ ಎಷ್ಟು ಹೆಚ್ಚಳ?
ದೇಶದ ಜನಪ್ರಿಯ ಕಾರು ಉತ್ಪಾದನಾ ಸಂಸ್ಥೆಗಳಲ್ಲಿ ಒಂದಾಗಿರುವ ಟೊಯೊಟಾ ಸಂಸ್ಥೆಯು ಕಾರುಗಳ ಬೆಲೆ ಹೆಚ್ಚಳಕ್ಕೆ ನಿರ್ಧರಿಸಿದ್ದು, ಮುಂಬರುವ ಜನವರಿ 1ರಿಂದಲೇ ಹೊಸ ದರ ಪರಿಷ್ಕರಣೆ ಮಾಡುವುದಾಗಿ ಹೇಳಿಕೊಂಡಿದೆ.

ಡಾಲರ್ ಎದುರು ರೂಪಾಯಿ ಮೌಲ್ಯ ಸತತ ಕುಸಿತ ಮತ್ತು ಕಾರುಗಳ ಬೀಡಿಭಾಗಗಳ ಆಮದು ಮೇಲಿನ ಸುಂಕಗಳು ಹೆಚ್ಚಳಗೊಂಡಿರುವ ಹಿನ್ನೆಲೆ ಕಾರಿನ ಬೆಲೆ ಏರಿಕೆ ಮಾಡುವ ನಿರ್ಧಾರ ಕೈಗೊಂಡಿರುವುದಾಗಿ ಹೇಳಿಕೊಂಡಿರುವ ಟೊಯೊಟಾ ಸಂಸ್ಥೆಯು, ಜನವರಿ 1ರಿಂದ ಹೊಸ ದರ ಪಟ್ಟಿಯಂತೆ ಕಾರು ಬೆಲೆಗಳು ಅನ್ವಯವಾಗಿವೆ ಎಂದಿದೆ.

ಮಾಹಿತಿಗಳ ಪ್ರಕಾರ, ಟೊಯೊಟಾ ಸಂಸ್ಥೆಯು ಕಾರಿನ ಬೆಲೆಯಲ್ಲಿ ಶೇ. 4ರಷ್ಟು ಹೆಚ್ಚಳ ಮಾಡುವ ಸುಳಿವು ನೀಡಿದ್ದು, ಎಂಟ್ರಿ ಲೆವಲ್ ಕಾರು ಮಾದರಿಯ ಇಟಿಯಾಸ್ ಲಿವಾ ಬೆಲೆಯಲ್ಲಿ ರೂ. 22 ಸಾವಿರ ಹೆಚ್ಚಳವಾಗಲಿದ್ದರೇ, ಹೈ ಎಂಡ್ ಮಾದರಿಯಾದ ಲ್ಯಾಂಡ್ ಕ್ರೂಸರ್ ಪ್ರಾಡೋ ಮಾದರಿಯ ಬೆಲೆಯಲ್ಲಿ ರೂ. 3. 60 ಲಕ್ಷ ಹೆಚ್ಚಳಲಾಗಲಿದೆ.

ಹಾಗೆಯೇ ಕ್ಯಾಬ್ ಸೇವೆಗಳಿಗಾಗಿ ಹೆಚ್ಚಾಗಿ ಬಳಕೆಯಾಗುವ ಇಟಿಯಾಸ್ ಸೆಡಾನ್ ಕಾರುಗಳ ಬೆಲೆಯು ರೂ. 25 ಸಾವಿರ ಹೆಚ್ಚಳವಾಗಲಿದ್ದರೆ, ಯಾರಿಸ್ ಬೆಲೆಯಲ್ಲಿ 35 ಸಾವಿರದಿಂದ 45 ಸಾವಿರ ಹಾಗೂ ಇನೋವಾ ಕ್ರಿಸ್ಟ್ರಾ ಕಾರುಗಳ ಬೆಲೆಯು ರೂ. 50 ಸಾವಿರದಿಂದ 65 ಸಾವಿರ ತನಕ ಹೆಚ್ಚಳವಾಗುವುದು ಖಚಿತವಾಗಿದೆ.

ಇನ್ನು ಫಾರ್ಚೂನರ್ ಎಸ್‌ಯುವಿ, ಪ್ರಿಯಸ್, ಕ್ಯಾಮ್ರಿ ಮತ್ತು ಕರೊಲ್ಲಾ ಆಲ್ಟಿಸ್ ಸೆಡಾನ್ ಕಾರುಗಳ ಬೆಲೆಯಲ್ಲೂ ದರಕ್ಕೆ ಅನುಗುಣವಾಗಿ ಶೇ. 4 ರಷ್ಟು ಹೆಚ್ಚಳವಾಗಲಿದ್ದು, ಹೊಸ ವರ್ಷದ ಆರಂಭದಲ್ಲಿ ಕಾರು ಖರೀದಿಯ ಯೋಜನೆಯಲ್ಲಿರುವ ಗ್ರಾಹಕರಿಗೆ ಮತ್ತಷ್ಟು ಬೆಲೆ ಏರಿಕೆಯ ಬಿಸಿ ತಟ್ಟಲಿದೆ.

ಕಾರುಗಳ ಉತ್ಪಾದನೆ ಮತ್ತು ಮಾರಾಟ ಪ್ರಕ್ರಿಯೆಯಲ್ಲಿ ಹೆಚ್ಚುತ್ತಿರುವ ಖರ್ಚುಗಳನ್ನು ನಿಭಾಯಿಸಲು ಟೊಯೊಟಾ ಸೇರಿದಂತೆ ಇನ್ನು ಹಲವು ಆಟೋ ಉತ್ಪಾದನಾ ಸಂಸ್ಥೆಗಳು ಸದ್ಯದಲ್ಲೇ ತಮ್ಮ ಹೊಸ ದರ ಪಟ್ಟಿ ಪ್ರಕಟಿಸಲು ಸಜ್ಜಾಗುತ್ತಿದ್ದು, ಶೇ.3ರಿಂದ ಶೇ.4ರಷ್ಟು ಪ್ರತಿ ಕಾರುಗಳ ಬೆಲೆ ಹೆಚ್ಚಳವಾಗಲಿವೆ.

ಇನೋವಾ ಕ್ರಿಸ್ಟಾ ಮತ್ತು ಫಾರ್ಚೂನರ್ ಮಾರಾಟದಲ್ಲಿ ದಾಖಲೆ!
ಹೌದು, ಟೊಯೊಟಾ ಸಂಸ್ಥೆಯು ಸದ್ಯ ಎಂಟ್ರಿ ಲೆವಲ್ ಕಾರುಗಳಿಂತಲೂ ಇನೋವಾ ಕ್ರಿಸ್ಟಾ ಮತ್ತು ಫಾರ್ಚೂನರ್ ಎಸ್‌ಯುವಿ ಕಾರುಗಳ ಮಾರಾಟದಲ್ಲಿ ಭಾರೀ ಪ್ರಯಾಣದ ಆದಾಯ ಗಳಿಕೆ ಮಾಡುತ್ತಿದ್ದು, ಕಳೆದ ಮಾರ್ಚ್ ನಂತರ ಇದುವರೆಗೆ ರೂ.960 ಕೋಟಿ ಗಳಿಕೆ ಮಾಡಿದೆ.

ಎಸ್‌ಯುವಿ ಪ್ರಿಯರನ್ನು ಸೆಳೆಯುವಲ್ಲಿ ಯಶಸ್ವಿಯಾಗಿರುವ ಫಾರ್ಚೂನರ್ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ 27.27 ಲಕ್ಷಕ್ಕೆ ಮತ್ತು ಟಾಪ್ ಎಂಡ್ ಮಾದರಿಯು ರೂ.32.97 ಲಕ್ಷ ಬೆಲೆ ಹೊಂದಿದೆ. ಹೀಗಿದ್ದರೂ ಗ್ರಾಹಕರು ಮಾತ್ರ ಹೆಚ್ಚಿನ ಸಂಖ್ಯೆಯಲ್ಲಿ ಖರೀದಿ ಮಾಡುತ್ತಿದ್ದಾರೆ.
MOST READ: ಕಿಸೆಯಲ್ಲಿ 5 ಸಾವಿರಕ್ಕೂ ಗತಿ ಇಲ್ಲ ಎಂದಿದ್ದ ಈ ನಟ ಈಗ 4 ಕೋಟಿ ಬೆಲೆಯ ಬೆಂಟ್ಲಿ ಒಡೆಯ

ಜೊತೆಗೆ 8 ಸೀಟರ್ ಮಾದರಿಯಾಗಿರುವ ಇನೋವಾ ಕ್ರಿಸ್ಟಾ ಎಂಪಿವಿ ಕಾರುಗಳು ಸಹ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 14.65 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 23.06 ಲಕ್ಷ ಬೆಲೆ ಪಡೆದುಕೊಂಡಿವೆ.

ಇಷ್ಟೇಲ್ಲಾ ದುಬಾರಿ ಬೆಲೆಗಳ ನಡುವೆಯೂ ಗ್ರಾಹಕರ ಆಯ್ಕೆಯಲ್ಲಿ ಮುಂಚೂಣಿ ಸಾಧಿಸಿರುವ ಫಾರ್ಚೂನರ್ ಮತ್ತು ಇನೋವಾ ಕ್ರಿಸ್ಟಾ ಕಾರುಗಳು ಟೊಯೊಟಾ ಸಂಸ್ಥೆಗೆ ಭಾರೀ ಪ್ರಮಾಣದ ಆದಾಯ ತಂದುಕೊಡುತ್ತಿದ್ದು, ಮುಂಬರುವ ದಿನಗಳಲ್ಲಿ ಏರಿಕೆಯಾಗುವ ಬೆಲೆಗಳು ಕಾರಿನ ಮಾರಾಟ ಮೇಲೆ ಯಾವುದೇ ಪರಿಣಾಮ ಬಿರುವುದಿಲ್ಲ ಎನ್ನುವುದು ಟೊಯೊಟಾ ಲೆಕ್ಕಾಚಾರ.
MOST READ: ಅತಿ ಹೆಚ್ಚು ಮೈಲೇಜ್ ನೀಡುವ ಹೊಸ ಎರ್ಟಿಗಾ ಖರೀದಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್..!

ಒಟ್ಟಿನಲ್ಲಿ ಹೊಸ ವರ್ಷದ ವೇಳೆ ಕಾರು ಖರೀದಿ ಯೋಜನೆಯಲ್ಲಿರುವ ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ತಟ್ಟುವುದು ಖಚಿತವಾಗಿದ್ದು, ಒಂದು ವೇಳೆ ನೀವು ಕೂಡಾ ಹೊಸ ವರ್ಷದ ಹೊತ್ತಿಗೆ ಕಾರು ಖರೀದಿಸುವ ಯೋಜನೆಯಲ್ಲಿದ್ದರೆ ಈಗಲೇ ಖರೀದಿ ಮಾಡಿ ಬೆಲೆ ಹೆಚ್ಚಳ ಹೊಡೆತದಿಂದ ತಪ್ಪಿಸಿಕೊಳ್ಳಬಹುದು.
More from DriveSpark
ಅತಿ ಹೆಚ್ಚು ಮೈಲೇಜ್ ನೀಡುವ ಮಾರುತಿ ಸುಜುಕಿ ಹೊಸ ಎರ್ಟಿಗಾ ಕಾರಿನ ಚಿತ್ರಗಳು..!


Click it and Unblock the Notifications








