ಕಾರುಗಳಿಗೆ ಇನ್ಮುಂದೆ ಸಾರಿಗೆ ಇಲಾಖೆಯಿಂದ ಕಲರ್ ಕೋಡಿಂಗ್..

By Praveen Sannamani

ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ವಾಹನಗಳ ಸಂಖ್ಯೆಯಿಂದಾಗಿ ಮಾಲಿನ್ಯ ಪ್ರಮಾಣವು ಮಿತಿ ಮೀರಿದ್ದು, ಇದಕ್ಕೆ ಕಡಿವಾಣ ಹಾಕಲು ಮುಂದಾಗಿರುವ ಕೇಂದ್ರ ಸಾರಿಗೆ ಇಲಾಖೆಯು ಕಾರುಗಳಿಗೆ ಕಲರ್ ಕೋಡಿಂಗ್ ಎಂಬ ಹೊಸ ಸೂತ್ರವನ್ನು ಅಳವಡಿಸಲು ಮುಂದಾಗಿದೆ.

ಕಾರುಗಳಿಗೆ ಇನ್ಮುಂದೆ ಸಾರಿಗೆ ಇಲಾಖೆಯಿಂದ ಕಲರ್ ಕೋಡಿಂಗ್..

ರಾಜಧಾನಿ ದೆಹಲಿಯಲ್ಲಿ ಈ ಹಿಂದೆ ಸಮ-ಬೆಸ ಸೂತ್ರವನ್ನು ಅಳವಡಿಸುವ ಮೂಲಕ ಪೆಟ್ರೋಲ್ ಮತ್ತು ಡೀಸೆಲ್ ಕಾರುಗಳ ಓಡಾಟದ ಮೇಲೆ ನಿಯಂತ್ರಣ ಹೇರಿದ್ದ ಕೇಂದ್ರ ಸಾರಿಗೆ ಇಲಾಖೆಯು ಇದೀಗ ಮತ್ತೊಂದು ಹೊಸ ಸೂತ್ರವನ್ನು ಅಳವಡಿಸಲು ಮುಂದಾಗಿದ್ದು, ರಾಜಧಾನಿಯಲ್ಲಿ ಹೆಚ್ಚುತ್ತಿರುವ ಮಾಲಿನ್ಯ ನಿಯಂತ್ರಣಕ್ಕೆ ಮಹತ್ವದ ಯೋಜನೆಯೊಂದನ್ನ ರೂಪಿಸಲಾಗಿದೆ.

ಕಾರುಗಳಿಗೆ ಇನ್ಮುಂದೆ ಸಾರಿಗೆ ಇಲಾಖೆಯಿಂದ ಕಲರ್ ಕೋಡಿಂಗ್..

ಕಲರ್ ಕೋಡ್ ಅಂದ್ರೆ ಏನು?

ಈಗಾಗಲೇ ಮುಂದುವರಿದ ರಾಷ್ಟ್ರಗಳಲ್ಲಿ ಮಾಲಿನ್ಯ ನಿಯಂತ್ರಿಸುವ ನಿಟ್ಟಿನಲ್ಲಿ ಕಾರುಗಳಿಗೆ ಕಲರ್ ಕೋಡ್ ಸೂತ್ರವನ್ನು ಅಳವಡಿಸಲಾಗಿದ್ದು, ಇದರಿಂದ ಡಿಸೇಲ್ ಮತ್ತು ಪೆಟ್ರೋಲ್ ಸೇರಿದಂತೆ ಇತರೆ ವಾಹನಗಳ ಓಡಾಟದ ಮೇಲೆ ನಿಯಂತ್ರ ಸಾಧಿಸಬಹುದು.

ಕಾರುಗಳಿಗೆ ಇನ್ಮುಂದೆ ಸಾರಿಗೆ ಇಲಾಖೆಯಿಂದ ಕಲರ್ ಕೋಡಿಂಗ್..

ಪೆಟ್ರೋಲ್ ಮತ್ತು ಡಿಸೇಲ್ ಕಾರುಗಳಿಗೆ ಸಾರಿಗೆ ಇಲಾಖೆಯು ಕೋಡ್ ಆಧಾರದ ಮೇಲೆ ವಿವಿಧ ಮಾದರಿಯ ಬಣ್ಣದ ಆಯ್ಕೆ ನೀಡಲಿದ್ದು, ಇದರಿಂದ ಸಮ-ಬೆಸ ಸೂತ್ರವನ್ನು ಸರಿಯಾದ ಕ್ರಮದಲ್ಲಿ ಪಾಲನೆ ಮಾಡಲು ನೇರವಾಗಲಿದೆ ಎನ್ನಲಾಗಿದೆ.

ಕಾರುಗಳಿಗೆ ಇನ್ಮುಂದೆ ಸಾರಿಗೆ ಇಲಾಖೆಯಿಂದ ಕಲರ್ ಕೋಡಿಂಗ್..

ಕಾರಿನ ಫ್ರಂಟ್ ವೀಂಡ್‌ಶಿಲ್ಡ್ ಬಳಿ ಸಾರಿಗೆ ಇಲಾಖೆಯೇ ಕೋಡ್ ವಲ್ಡ್ ಮಾದರಿಯಲ್ಲಿ ಬಣ್ಣ ಬಳಿಯಲಿದ್ದು, ಪೆಟ್ರೋಲ್, ಡೀಸೆಲ್, ಎಲೆಕ್ಟ್ರಿಕ್, ಹೈಡ್ರೊಜನ್ ಮತ್ತು ಹೈಬ್ರಿಡ್ ಕಾರುಗಳಿಗೆ ಇದು ಭಿನ್ನವಾರಲಿದೆ. ಈ ಮೂಲಕ ಕಲರ್ ಕೋಡ್ ಮೂಲಕವೇ ನಗರದಲ್ಲಿ ಅಕ್ರಮವಾಗಿ ಸಂಚರಿಸುವ ಕಾರುಗಳನ್ನ ಪತ್ತೆಹಚ್ಚಲು ನೇರವಾಗಲಿದೆ.

ಕಾರುಗಳಿಗೆ ಇನ್ಮುಂದೆ ಸಾರಿಗೆ ಇಲಾಖೆಯಿಂದ ಕಲರ್ ಕೋಡಿಂಗ್..

ಜೊತೆಗೆ ಹೊಸದಾಗಿ ಪರಿಚಯಿಸಲಾಗಿರುವ ಬಿಎಸ್ 4 ವಾಹನವೋ ಇಲ್ಲವೋ ಬಿಎಸ್ 6 ವಾಹನವೋ ಮಾಹಿತಿ ಕೂಡಾ ಕಲರ್ ಕೋಡ್ ಮೂಲಕವೇ ತಿಳಿಯಲಿದ್ದು, ಅಕ್ರಮವಾಗಿ ನಗರದಲ್ಲಿ ಸಂಚರಿಸುವ ವಾಹನಗಳನ್ನ ಸಿಸಿಟಿವಿ ನೇರವಿನೊಂದಿಗೆ ಪತ್ತೆಹಚ್ಚಿ ದಂಡವಿಧಿಸುವ ಯೋಜನೆ ಹೊಂದಲಾಗಿದೆ.

ಕಾರುಗಳಿಗೆ ಇನ್ಮುಂದೆ ಸಾರಿಗೆ ಇಲಾಖೆಯಿಂದ ಕಲರ್ ಕೋಡಿಂಗ್..

ಇನ್ನು ಹೊಸ ಯೋಜನೆಯನ್ನು ಸುಪ್ರೀಂ ಕೋರ್ಟ್ ಸೂಚನೆ ಮೇರೆಗೆ ಜಾರಿಗೆ ತರಲಾಗುತ್ತಿದ್ದು, ಸಮ-ಬೆಸ ಸಾರಿಗೆ ಸೂತ್ರ ಜಾರಿಗೆ ಹೊರತಾಗಿಯೂ ಸಾವಿರಾರು ಕಾರುಗಳು ದೆಹಲಿಯಲ್ಲಿ ಅಕ್ರಮವಾಗಿ ಸಂಚಾರ ಮಾಡುತ್ತಿರುವುದು ಮಾಲಿನ್ಯ ಸಮಸ್ಯೆಯು ಉಲ್ಬಣವಾಗುವಂತೆ ಮಾಡಿದೆ.

ಕಾರುಗಳಿಗೆ ಇನ್ಮುಂದೆ ಸಾರಿಗೆ ಇಲಾಖೆಯಿಂದ ಕಲರ್ ಕೋಡಿಂಗ್..

ಹೀಗಾಗಿ ಕೇಂದ್ರ ಸಾರಿಗೆ ಇಲಾಖೆಯನ್ನು ತರಾಟೆ ತೆಗೆದುಕೊಂಡಿದ್ದ ಸುಪ್ರೀಂಕೋರ್ಟ್ ಮಾಲಿನ್ಯ ನಿಯಂತ್ರಣ ಮಾಡುವಲ್ಲಿ ಸಮ-ಬೆಸ ಸೂತ್ರದಿಂದ ಯಾವುದೇ ಪ್ರಯೋಜನವಾಗುತ್ತಿಲ್ಲ ಎನ್ನುವ ಆಪಾದನೆ ಹಿನ್ನೆಲೆಯಲ್ಲಿ ಇಂತದೊಂದು ಕಠಿಣ ಕ್ರಮ ಜಾರಿಗೊಳಿಸಲು ಯೋಜನೆ ರೂಪಿಸಲಾಗಿದೆ.

ಕಾರುಗಳಿಗೆ ಇನ್ಮುಂದೆ ಸಾರಿಗೆ ಇಲಾಖೆಯಿಂದ ಕಲರ್ ಕೋಡಿಂಗ್..

ರಾಜಧಾನಿ ದೆಹಲಿಯಲ್ಲಿ ಬಹುತೇಕ ಕಾರು ಮಾಲೀಕರು ಪೊಲೀಸರ ಕಣ್ಣು ತಪ್ಪಿಸಲು ಕಾರುಗಳ ಮೇಲೆ ಡಿಸೇಲ್ ಮತ್ತು ಪೆಟ್ರೋಲ್ ಮಾದರಿಯ ತಪ್ಪಾದ ಸ್ಟಿಕರ್ಸ್‌ಗಳನ್ನು ಅಂಟಿಸಿಕೊಂಡು ಕಾರು ಚಾಲನೆ ಮಾಡುತ್ತಿದ್ದು, ಇದರಿಂದ ಪೊಲೀಸರಿಗೆ ಕಾರುಗಳ ನಿಂಜಾಂಶವೇ ತಿಳಿಯದಂತಾಗಿದೆ.

ಕಾರುಗಳಿಗೆ ಇನ್ಮುಂದೆ ಸಾರಿಗೆ ಇಲಾಖೆಯಿಂದ ಕಲರ್ ಕೋಡಿಂಗ್..

ಇದರಿಂದ ಪ್ಯಾರಿಸ್‌ನಲ್ಲಿ ಜಾರಿಗೆ ತಂದಿರುವ ಕಲರ್ ಕೋಡ್ ಮಾದರಿಯಲ್ಲೇ ರಾಜಧಾನಿಯಲ್ಲಿರುವ ಕಾರುಗಳಿಗೂ ಅಳವಡಿಸಲಿದ್ದು, ಹೈಡ್ರೊಜನ್, ಎಲೆಕ್ಟ್ರಿಕ್ ಮತ್ತು ಹೈಬ್ರಿಡ್ ಎಂಜಿನ್ ಕಾರುಗಳನ್ನು ಹೊರತುಪಡಿಸಿ ಇನ್ನುಳಿದ ಪೆಟ್ರೋಲ್ ಮತ್ತು ಡೀಸೆಲ್ ಕಾರುಗಳ ಸಂಚಾರದ ಟ್ರಾಫಿಕ್ ಪೊಲೀಸರು ಹದ್ದಿನ ಕಣ್ಣಿಡಲಿದ್ದಾರೆ.

Most Read Articles

Kannada
Read more on traffic rules auto news
English summary
vehicles to be colour-coded to indicate fuel type
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X