ಯುರೋ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ವೊಲ್ವೊ ಎಕ್ಸ್‌ಸಿ40 ಕಾರಿಗೆ ಫುಲ್ ಮಾರ್ಕ್ಸ್..!!
ಹೊಸ ಕಾರುಗಳಲ್ಲಿನ ಸುರಕ್ಷಾ ಸೌಲಭ್ಯಗಳ ಕುರಿತಾಗಿ ನಡೆಸಲಾಗುವ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ವೊಲ್ವೊ ನಿರ್ಮಾಣದ ವಿನೂತನ ಎಕ್ಸ್‌ಸಿ40 ಎಸ್‌ಯುವಿ ಕಾರುಗಳು ಅತ್ಯುತ್ತಮ ಮಾದರಿಯಾಗಿ ಹೊರಹೊಮ್ಮಿದ್ದು, ಹೊಸ ಕಾರಿನಲ್ಲಿರುವ ಸುರಕ್ಷಾ ತಂತ್ರಜ್ಞಾನಗಳ ಸಂಪೂರ್ಣ ಮಾಹಿತಿ ಇಲ್ಲಿದೆ.

ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿರುವ ಎಕ್ಸ್‌ಸಿ40 ಕಾರುಗಳು ಯುರೋ ವಿಭಾಗದ ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಪೂರ್ಣ ಪ್ರಮಾಣದ ಅಂಕಗಳನ್ನು ಗಳಿಸಿದ್ದು, ವಿವಿಧ ಹಂತದ ಸುರಕ್ಷಾ ಕ್ರಮಗಳ ಕುರಿತಾದ ಟೆಸ್ಟಿಂಗ್‌ನಲ್ಲಿ 5 ಸ್ಟಾರ್ ರೇಟಿಂಗ್ ತನ್ನದಾಗಿಸಿಕೊಂಡಿದೆ.

ಏನಿದು ಕ್ರ್ಯಾಶ್ ಟೆಸ್ಟಿಂಗ್?
ಹೊಸ ಕಾರು ಮಾದರಿಗಳ ಸುರಕ್ಷತೆ ಕುರಿತಂತೆ ಪರೀಕ್ಷೆ ನಡೆಸುವ ಗ್ಲೋಬಲ್ ಎನ್‌ಸಿಎಪಿ ಸಂಸ್ಥೆಯು ಯುರೋ, ಏಷಿಯಾ ವಿಭಾಗದಲ್ಲಿ ಪ್ರತ್ಯೇಕವಾಗಿ ಹೊಸ ಕಾರುಗಳಲ್ಲಿನ ಸುರಕ್ಷಾ ವೈಶಿಷ್ಟ್ಯತೆಗಳಿಗೆ ರೇಟಿಂಗ್ ನೀಡುತ್ತದೆ. ಇದರ ಆಧಾರದ ಮೇಲೆಯೇ ಕಾರಿನ ಗುಣಮಟ್ಟ ನಿರ್ಧಾರವಾಗುತ್ತೆ.

ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ 5 ಸ್ಟಾರ್ ಪಡೆದರೆ ಅದು ಹೆಚ್ಚು ಸುರಕ್ಷಿತ ಕಾರು ಎಂದರ್ಥ. ಜೊತೆಗೆ 0 ಸ್ಟಾರ್ ರೇಟಿಂಗ್ ಬಂದಲ್ಲಿ ಅದು ಅಸುರಕ್ಷಿತ ಕಾರು ಎಂದು ಕರೆಯಲಾಗುತ್ತದೆ.

ಇದೀಗ ವೊಲ್ವೊ ಎಕ್ಸ್‌ಸಿ40 ಹೊಸ ಎಸ್‌ಯುವಿ ಮಾದರಿಗಳು ಸಹ ಗುಣಮಟ್ಟದ ಬೀಡಿಭಾಗಗಳೊಂದಿಗೆ 5 ಸ್ಟಾರ್ ರೇಟಿಂಗ್ ಪಡೆದಿದ್ದು, ಅಪಘಾತ ಸಂದರ್ಭಗಳಲ್ಲಿ ಕಾರು ಪ್ರಯಾಣಿಕರಿಗೆ ಹೆಚ್ಚಿನ ಸುರಕ್ಷತೆ ನೀಡುವಲ್ಲಿ ಶಕ್ತವಾಗಿದೆ ಎಂಬುವುದನ್ನು ಸಾಬೀತುಪಡಿಸಿದೆ.

ಪ್ರತಿ ಹೊಸ ಕಾರು ಮಾದರಿಗಳಿಗೂ ಸುರಕ್ಷೆಗಳ ವಿಚಾರಕ್ಕೆ ಜಾಗತಿಕ ಮಟ್ಟದ ಸುರಕ್ಷಾ ಗುಣಮಟ್ಟದ ಪ್ರಮಾಣ ಪತ್ರದ ಅವಶ್ಯಕತೆಯಿದ್ದು, ವೊಲ್ವೊ ಎಕ್ಸ್‌ಸಿ ಕಾರುಗಳು ಪಡೆದುಕೊಂಡಿರುವ ಉತ್ತಮ ರೇಟಿಂಗ್‌ನಿಂದಾಗಿ ಸುರಕ್ಷತೆಯಲ್ಲಿ ಯಾವುದೇ ರಾಜಿ ಮಾಡಿಕೊಂಡಿಲ್ಲ ಎಂಬುವುದು ಖಾತ್ರಿಯಾಗಿದೆ.

ಹೀಗಾಗಿ ಅಪಘಾತಗಳ ಸಂದರ್ಭಗಳಲ್ಲಿ ಕಾರಿನಲ್ಲಿನಲ್ಲಿರುವ ಏರ್‌ಬ್ಯಾಗ್ ಸೌಲಭ್ಯವು ಪ್ರಯಾಣಿಕರಿಗೆ ಗರಿಷ್ಠ ಮಟ್ಟದ ಸುರಕ್ಷೆ ನೀಡಲಿದ್ದು, ಬಲಿಷ್ಠ ಕವಚದ ನಿರ್ಮಾಣವು ಕೂಡಾ ವೊಲ್ವೊ ಎಕ್ಸ್‌ಸಿ40 ಕಾರಿನ ಮೌಲ್ಯವನ್ನು ಹೆಚ್ಚಿಸಲಿದೆ ಎನ್ನಬಹುದು.

ಇನ್ನು ಭಾರತೀಯ ಮಾರುಕಟ್ಟೆಯಲ್ಲಿ ಕಳೆದ ವಾರವಷ್ಟೇ ಬಿಡುಗಡೆಯಾಗಿರುವ ವೊಲ್ವೊ ಎಕ್ಸ್‌ಸಿ40 ಕಾರುಗಳು ದೆಹಲಿ ಎಕ್ಸ್‌ಶೋರಂ ಪ್ರಕಾರ ಆರಂಭಿಕವಾಗಿ ರೂ. 39.90 ಲಕ್ಷ ಹಾಗೂ ಹೈ ಎಂಡ್ ಮಾದರಿಯು ರೂ. 43.90 ಲಕ್ಷ ಬೆಲೆಯೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿವೆ.
ಯುರೋ ಎಸಿಎಪಿ ನಡೆಸಿದ ಕ್ರ್ಯಾಶ್ ಟೆಸ್ಟಿಂಗ್ ವಿಡಿಯೋ ಇಲ್ಲಿದೆ ವೀಕ್ಷಿಸಿ.


Click it and Unblock the Notifications








