ಹೊಸ ಸುರಕ್ಷಾ ಸೌಲಭ್ಯಗಳೊಂದಿಗೆ ಬಿಡುಗಡೆಯಾದ 2019ರ ದಟ್ಸನ್ ರೆಡಿ-ಗೋ
ಭಾರತದಲ್ಲಿ ಹೊಸ ಕಾರುಗಳ ಉತ್ಪಾದನೆಯಲ್ಲಿ ಕೆಲವು ಮಹತ್ವದ ಬದಲಾವಣೆಗಳನ್ನು ತರಲಾಗುತ್ತಿದ್ದು, ಗರಿಷ್ಠ ಮಟ್ಟದ ಸುರಕ್ಷಾ ಸೌಲಭ್ಯಗಳನ್ನು ಹೊಂದಿರುವ ಕಾರು ಮಾದರಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಈ ನಿಟ್ಟಿನಲ್ಲಿ ದಟ್ಸನ್ ಸಂಸ್ಥೆ ಕೂಡಾ ತನ್ನ ಜನಪ್ರಿಯ ಆವೃತ್ತಿಯಾದ ರೆಡಿ-ಗೋ 2019ರ ಮಾದರಿಯನ್ನು ಬಿಡುಗಡೆಗೊಳಿಸಿದೆ.

ಹೊಸ ಕಾರುಗಳಲ್ಲಿ ಪ್ರಯಾಣಿಕ ಸುರಕ್ಷತೆಗಾಗಿ ಗರಿಷ್ಠ ಮಟ್ಟದ ಸುರಕ್ಷತೆಗಳನ್ನು ಒದಗಿಸುವ ಸಂಬಂಧ ಬಹುತೇಕ ಕಾರು ಉತ್ಪಾದನಾ ಸಂಸ್ಥೆಗಳು ತಮ್ಮ ಜನಪ್ರಿಯ ಕಾರುಗಳನ್ನು ಕೇಂದ್ರ ಸರ್ಕಾರದ ಹೊಸ ನಿಯಮಗಳಿಗೆ ಅನುಗುಣವಾಗಿ ಉನ್ನತಿಕರಿಸಿ ಮರುಬಿಡುಗಡೆಗೊಳಿಸುತ್ತಿದ್ದು, ಇದೀಗ ಮಾರುಕಟ್ಟೆಗೆ ಲಗ್ಗೆಯಿಟ್ಟಿರುವ ರೆಡಿ-ಗೋ ಕಾರು ಕೂಡಾ ಹೊಸ ನಿಯಮಗಳಿಗೆ ಅನುಸಾರವಾಗಿ ಬಿಡುಗಡೆಯಾಗಿದೆ.

ಈ ಹಿಂದಿನ ಮಾದರಿಗಿಂತಲೂ ಹೊಸ ರೆಡಿ-ಗೋ ಕಾರು ಮಾದರಿಯಲ್ಲಿ ಡಿಸೈನ್ ಮತ್ತು ಒಳಭಾಗದ ವಿನ್ಯಾಸಗಳಲ್ಲಿ ಕೆಲವು ಬದಲಾವಣೆಗಳನ್ನು ತರಲಾಗಿದ್ದು, ಪ್ರಯಾಣಿಕ ಸುರಕ್ಷತೆಗಾಗಿ ಎಲ್ಲಾ ವೆರಿಯೆಂಟ್‌ಗಳಲ್ಲೂ ಎಬಿಎಸ್, ಇಬಿಡಿ ಮತ್ತು ಹೈ ಎಂಡ್ ಮಾದರಿಯಾದ ಎಸ್ ವೆರಿಯೆಂಟ್‌ನಲ್ಲಿ ಮಾತ್ರವೇ ಡ್ರೈವರ್ ಸೈಡ್ ಏರ್‌ಬ್ಯಾಗ್ ಒದಗಿಸಲಾಗಿದೆ.

ಹಾಗೆಯೇ ಹೊಸ ಕಾರಿನಲ್ಲಿ ರಿಮೋಟ್ ಕಂಟ್ರೋಲ್ ಸೆಂಟ್ರಲ್ ಲಾಕಿಂಗ್ ಸಿಸ್ಟಂ ಸೌಲಭ್ಯವನ್ನು ಸಹ ಜೋಡಣೆ ಮಾಡಲಾಗಿದ್ದು, ಎ ವೆರಿಯೆಂಟ್‌ನಲ್ಲಿ ಪವರ್ ಸ್ಟಿರಿಂಗ್, ಚೈಲ್ಡ್ ಸೆಫ್ಟಿ ಡೋರ್ ಲಾಕ್ ಮತ್ತು ತ್ರಿ ಪಾಯಿಂಟ್ ಸೀಟ್‌ಬೆಲ್ಟ್ ಪಡೆದುಕೊಂಡಿದೆ.

ಎಂಜಿನ್ ಸಾಮರ್ಥ್ಯ
ದಟ್ಸನ್ ರೆಡಿ-ಗೋ ಕಾರು ಮಾದರಿಯು ಎರಡು ಪೆಟ್ರೋಲ್ ಎಂಜಿನ್ ಆಯ್ಕೆಗಳನ್ನು ಹೊಂದಿದ್ದು, ಗ್ರಾಹಕರು ತಮ್ಮ ಬೇಡಿಕೆಗೆ ಅನುಗುಣವಾಗಿ 799ಸಿಸಿ ಮತ್ತು 998ಸಿಸಿ ಎಂಜಿನ್ ಮಾದರಿಗಳನ್ನು ಆಯ್ಕೆ ಮಾಡಬಹುದು. ಇದರಲ್ಲಿ 799ಸಿಸಿ ಎಂಜಿನ್ ಮಾದರಿಯ 54-ಬಿಎಚ್‌ಪಿ, 72-ಎನ್ಎಂ ಟಾರ್ಕ್ ಉತ್ಪಾದಿಸಿದ್ದಲ್ಲಿ, 998ಸಿಸಿ ಎಂಜಿನ್ ಮಾದರಿಯು 68-ಬಿಎಚ್‌ಪಿ, 91-ಎನ್ಎಂ ಟಾರ್ಕ್ ಉತ್ಪಾದಿಸುವ ಮೂಲಕ ಉತ್ತಮ ಇಂಧನ ದಕ್ಷತೆ ಪಡೆದಿವೆ.

ಇದರಲ್ಲಿ 799ಸಿಸಿ ಎಂಜಿನ್ ಮಾದರಿಯಲ್ಲಿ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಒದಗಿಸಿರುವ ದಟ್ಸನ್ ಸಂಸ್ಥೆಯು 998ಸಿಸಿ ಎಂಜಿನ್‌ನಲ್ಲಿ 5-ಸ್ಪೀಡ್ ಎಎಂಟಿ ಗೇರ್‌ಬಾಕ್ಸ್ ಹೊಂದಿದ್ದು, ಕಾರಿನ ಬೆಲೆಗಳು ಕ್ರಮವಾಗಿ ರೂ.2.67 ಲಕ್ಷ(ಎಕ್ಸ್‌ಶೋರೂಂ) ಮತ್ತು ರೂ.4.29 ಲಕ್ಷಕ್ಕೆ(ಎಕ್ಸ್‌ಶೋರೂಂ) ಲಭ್ಯವಿವೆ.
MOST READ: ಅಪಘಾತದಲ್ಲಿ ಹ್ಯಾರಿಯರ್ ಕಾರು ಪುಡಿಪುಡಿಯಾದ್ರು ಪ್ರಯಾಣಿಕರಿಗೆ ಏನೂ ಆಗಲಿಲ್ಲ..!

ದಟ್ಸನ್ ರೆಡಿ-ಗೋ ಸದ್ಯ ಮಾರುಕಟ್ಟೆಯಲ್ಲಿ ಒಟ್ಟು 11 ವೆರಿಯೆಂಟ್‌ಗಳೊಂದಿಗೆ ಮಾರಾಟವಾಗುತ್ತಿದ್ದು, ಪ್ರತಿ ಲೀಟರ್ ಪೆಟ್ರೋಲ್‌ಗೆ ಆರಂಭಿಕ ಆವೃತ್ತಿಯು 22.5 ಕಿ.ಮಿ ಮೈಲೇಜ್ ನೀಡಿದ್ದಲ್ಲಿ ಟಾಪ್ ಎಂಡ್ ಆವೃತ್ತಿಯು ಪ್ರತಿ ಲೀಟರ್ ಪೆಟ್ರೋಲ್‌ಗೆ 23ಕಿ.ಮಿ ಮೈಲೇಜ್ ನೀಡುತ್ತವೆ.
MOST READ: ಭದ್ರತೆಗಾಗಿ ಮತ್ತೊಂದು ದುಬಾರಿ ಕಾರು ಖರೀದಿಸಿದ ಉದ್ಯಮಿ ಮುಕೇಶ್ ಅಂಬಾನಿ..!

ಇನ್ನು ಸಣ್ಣ ಕಾರುಗಳ ಮಾರಾಟದಲ್ಲಿ ಉತ್ತಮ ಬೇಡಿಕೆ ಹೊಂದಿರುವ ರೆಡಿ-ಗೊ ಕಾರುಗಳು ಪ್ರಯಾಣಿಕ ಸುರಕ್ಷತೆಯಲ್ಲಿ ತುಸು ಹಿನ್ನಡೆ ಅನುಭವಿಸಿದ್ದು, ಈ ಬಾರಿ ಗ್ರಾಹಕರ ಬೇಡಿಕೆಯೆಂತೆ ದಟ್ಸನ್ ಸಂಸ್ಥೆಯು ಹೊಸ ಕಾರನ್ನು ಉನ್ನತಿಕರಿಸಿ ಬಿಡುಗಡೆ ಮಾಡಿದೆ.


Click it and Unblock the Notifications








