ಹೊಸ ಸ್ವರೂಪದಲ್ಲಿ ಅನಾವರಣಗೊಂಡ ಆಡಿ ಎ4

2020ರ ಹೊಸ ಆಡಿ ಎ4 ಕಾರನ್ನು ಅನಾವರಣಗೊಳಿಸಲಾಗಿದೆ. ಈ ಕಾರಿನಲ್ಲಿ ಹೊಸ ವಿನ್ಯಾಸ ಮತ್ತು ಅಪ್‍‍ಡೇಟ್ ಆಗಿರುವ ಪವರ್‍‍ಟ್ರೇನ್‍‍ಗಳ ಜೊತೆಗೆ ಹೈಬ್ರಿಡ್ ಡ್ರೈವ್‍‍ಟ್ರೇನ್‍‍ಗಳನ್ನು ನೀಡಲಾಗಿದೆ. ಹೊಸ ಸ್ವರೂಪದಲ್ಲಿರುವ ಆಡಿ ಎ4 ಹುರುಪಿನಿಂದ ಕಾಣುತ್ತದೆ.

ಹೊಸ ಸ್ವರೂಪದಲ್ಲಿ ಅನಾವರಣಗೊಂಡ ಆಡಿ ಎ4

ಹೊಸ ಕಾರಿನಲ್ಲಿ ಎದ್ದು ಕಾಣುವ ಬದಲಾವಣೆಯೆಂದರೆ ಹೊಸ ಹೆಡ್‍‍ಲ್ಯಾಂಪಿನ ವಿನ್ಯಾಸ. ಈ ಹೆಡ್‍‍ಲ್ಯಾಂಪಿನಲ್ಲಿ ಎಲ್‍ಇ‍‍ಡಿ ಪ್ರೊಜೆಕ್ಟರ್‍‍ಗಳಿದ್ದರೂ, ಗಮನಿಸಬೇಕಾದ ಅಂಶವೆಂದರೆ ಹೊಸ ಎಲ್ಇ‍‍ಡಿ ಡಿ‍ಆರ್‍ಎಲ್ ಗಳು. ಇವು ಹೊಸ ವಿನ್ಯಾಸದಲ್ಲಿದ್ದು, ಡೈನಾಮಿಕ್ ಟರ್ನ್ ಸಿಗ್ನಲ್ ಇಂಡಿಕೇಟರ್‍‍ಗಳನ್ನು ಒಂದುಗೂಡಿಸುತ್ತವೆ. ಬಂಪರ್ ಅನ್ನು ಮರು ವಿನ್ಯಾಸಗೊಳಿಸಲಾಗಿದ್ದು, ಅದು ಹೊಸ ಗ್ರಿಲ್ ಅನ್ನು ಒಳಗೊಂಡಿದೆ.

ಹೊಸ ಸ್ವರೂಪದಲ್ಲಿ ಅನಾವರಣಗೊಂಡ ಆಡಿ ಎ4

ಏರ್ ಡ್ಯಾಮ್, ವೆಂಟ್ ಮತ್ತು ಫಾಗ್ ಲ್ಯಾಂಪ್ ಹೌಸಿಂಗ್‍‍ಗಳನ್ನೂ ಸಹ ಮರು ವಿನ್ಯಾಸಗೊಳಿಸಲಾಗಿದೆ. ದೊಡ್ಡ ಬದಲಾವಣೆಯಾಗಿರುವುದು ಕಾರಿನ ಪಕ್ಕದಲ್ಲಿರುವ ಹೊಸ ಅಲಾಯ್ ವ್ಹೀಲ್‍‍ಗಳಲ್ಲಿ. ಹಿಂಭಾಗದಲ್ಲಿ ಈಗಿರುವ ಕಾರಿನ ಸ್ವರೂಪವನ್ನೇ ಉಳಿಸಿಕೊಳ್ಳಲಾಗಿದೆ.

ಹೊಸ ಸ್ವರೂಪದಲ್ಲಿ ಅನಾವರಣಗೊಂಡ ಆಡಿ ಎ4

ಆದರೂ ಕೆಲವೊಂದು ಸಣ್ಣ ಪುಟ್ಟ ಬದಲಾವಣೆಗಳನ್ನು ಮಾಡಲಾಗಿದೆ. ಬಂಪರ್, ರಿಫ್ಲೆಕ್ಟರ್ ಮತ್ತು ಎಕ್ಸಾಸ್ಟ್ ಗಳಲ್ಲಿ ಬದಲಾವಣೆಗಳಾಗಿವೆ. ಈಗ ಮಾಡಿರುವ ಬದಲಾವಣೆಗಳು ಎಸ್ 4 ಮತ್ತು ಎ4 ಆಲ್ ರೋಡ್ ಮಾದರಿಯ ಕಾರುಗಳಿಗೆ, ಅಂತರ್‍‍ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅನ್ವಯವಾಗಲಿದೆ.

ಹೊಸ ಸ್ವರೂಪದಲ್ಲಿ ಅನಾವರಣಗೊಂಡ ಆಡಿ ಎ4

ಈಗಿರುವ ಚಾಸೀಸ್ ಮತ್ತು ಸಸ್ಪೆಂಷನ್ ಗಳೇ ಮುಂದುವರೆಯಲಿದ್ದು, ಎ4 ಆಲ್ ರೋಡ್ ವಾಹನವು, 35.5 ಎಂಎಂ ನ ಗ್ರೌಂಡ್ ಕ್ಲಿಯರೆನ್ಸ್ ಅನ್ನು ಹೆಚ್ಚುವರಿಯಾಗಿ ಪಡೆಯಲಿದೆ. 2020 ರ ಆಡಿ ಎ 4 ಕಾರಿನ ಇಂಟಿರಿಯರ್ ನಲ್ಲಿ ಯಾವುದೇ ಬದಲಾವಣೆಗಳಾಗುವುದಿಲ್ಲ. ಇಂಟಿರಿಯರ್‍‍ನಲ್ಲಿರುವ ಕ್ಯಾಬಿನ್ ಮತ್ತು ಅಳವಡಿಸಲಾಗಿರುವ ವಸ್ತುಗಳೆಲ್ಲ ಹಾಗೆಯೇ ಮುಂದುವರೆಯಲಿವೆ. ಆದರೆ ಹೊಸದಾಗಿ ಇನ್ನೂ ಉತ್ತಮವಾದ ಮಲ್ಟಿ ಮೀಡಿಯಾ ಸಿಸ್ಟಂ ಮತ್ತು ದೊಡ್ಡದಾದ 10.1 ಇಂಚಿನ ಟಚ್‍‍ಸ್ಕ್ರೀನ್ ಇನ್ಫೋಟೇನ್‍‍ಮೆಂಟ್ ಯೂನಿಟ್‍‍ಗಳಿರಲಿವೆ.

ಹೊಸ ಸ್ವರೂಪದಲ್ಲಿ ಅನಾವರಣಗೊಂಡ ಆಡಿ ಎ4

2020ರ ಆಡಿ ಎ4 ಸರಣಿಯ ಕಾರುಗಳಲ್ಲಿರುವ ದೊಡ್ಡ ಬದಲಾವಣೆಯೆಂದರೆ, ಪವರ್‍‍ಟ್ರೇನ್ ಅನ್ನು ನೀಡುತ್ತಿರುವುದು. ಇದೇ ಮೊದಲ ಬಾರಿಗೆ ಹೈಬ್ರಿಡ್ ಡ್ರೈವ್‍‍ಟ್ರೇನ್ ಸಿಸ್ಟಂಗಳನ್ನು ಕೆಲವು ಮಾದರಿಗಳಲ್ಲಿ ನೀಡಲಾಗುತ್ತಿದೆ. ಆದರೆ ಎಷ್ಟು ಸಂಖ್ಯೆಯ ಪವರ್‍‍ಟ್ರೇನ್ ಆಯ್ಕೆಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ನೀಡಲಾಗುವುದು ಎಂಬುದು ಸ್ಪಷ್ಟವಾಗಿಲ್ಲ.

ಹೊಸ ಸ್ವರೂಪದಲ್ಲಿ ಅನಾವರಣಗೊಂಡ ಆಡಿ ಎ4

ಎಲ್ಲಾ ಎಂಜಿನ್‍‍ಗಳು ಟರ್ಬೊಚಾರ್ಜ್ ಆಗಿರಲಿವೆ. 2.0 ಲೀಟರಿನ ಟಿ‍‍ಡಿ‍ಐ 4 ಸಿಲಿಂಡರಿನ ಟರ್ಬೊ ಡೀಸೆಲ್ ಎಂಜಿನ್, ಹೆಚ್ಚಿನ ಪವರ್ ಆದ 187 ಬಿ‍‍ಹೆಚ್‍‍ಪಿ ಯನ್ನು ಉತ್ಪಾದಿಸಿದರೆ, 2.0 ಲೀಟರಿನ ಟಿ‍ಎಫ್‍ಎಸ್‍ಐ 4 ಸಿಲಿಂಡರಿನ ಟರ್ಬೋ ಪೆಟ್ರೋಲ್ ಎಂಜಿನ್, 241 ಬಿ‍‍ಹೆಚ್‍‍ಪಿ ಉತ್ಪಾದಿಸುತ್ತದೆ. ದೊಡ್ಡ ಗಾತ್ರದ 6 ಸಿಲಿಂಡರಿನ 3.0 ಲೀಟರಿನ ಡೀಸೆಲ್ ಎಂಜಿನ್, 227 ಬಿ‍‍ಹೆಚ್‍‍ಪಿ ಉತ್ಪಾದಿಸುತ್ತದೆ.

MOST READ: 20 ವರ್ಷಗಳಲ್ಲಿ 100 ಕಾರುಗಳನ್ನು ಕದ್ದಿದ್ದ ಈ ಖದೀಮರು ಕೊನೆಗೆ ಸಿಕ್ಕಿ ಬಿದ್ದಿದ್ದೇ ರೋಚಕ..!

ಹೊಸ ಸ್ವರೂಪದಲ್ಲಿ ಅನಾವರಣಗೊಂಡ ಆಡಿ ಎ4

2020ರ ಆಡಿ ಎಸ್4 ಕಾರಿನಲ್ಲಿ 3.0 ಲೀಟರಿನ ಟಿ‍ಎಫ್‍ಎಸ್‍ಐ 6 ಸಿಲಿಂಡರಿನ ಟರ್ಬೊ ಪೆಟ್ರೋಲ್ ಎಂಜಿನ್ ಅಥವಾ 3.0 ಲೀಟರಿನ ಟಿಡಿ‍ಐ 6 ಸಿಲಿಂಡರಿನ ಟರ್ಬೋ ಡೀಸೆಲ್ ಎಂಜಿನ್‍‍ಗಳಿರಲಿವೆ. ಈ ಟಿ‍ಎಫ್‍ಎಸ್‍ಐ ಎಂಜಿನ್ ಹೆಚ್ಚಿನ 349 ಬಿ‍‍ಹೆಚ್‍‍ಪಿ ಮತ್ತು 500 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಟಿಡಿ‍ಐ ಎಂಜಿನ್ 342 ಬಿ‍‍ಹೆಚ್‍‍ಪಿ ಮತ್ತು 699 ಎನ್‍ಎಂ ಟಾರ್ಕ್ ಬಿಡುಗಡೆ ಮಾಡುತ್ತದೆ.

ಹೊಸ ಸ್ವರೂಪದಲ್ಲಿ ಅನಾವರಣಗೊಂಡ ಆಡಿ ಎ4

ಹೊಸ ಸ್ವರೂಪದ 2020ರ ಆಡಿ ಎ4 ಕಾರ್ ಅನ್ನು ಈ ವರ್ಷದ ಕೊನೆಯಲ್ಲಿ ಅಥವಾ ಮುಂದಿನ ವರ್ಷದ ಆರಂಭದಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಗುವುದು.

ಹೊಸ ಸ್ವರೂಪದಲ್ಲಿ ಅನಾವರಣಗೊಂಡ ಆಡಿ ಎ4

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಲಗ್ಷುರಿ ಕಾರುಗಳನ್ನು ಬಯಸುವವರಿಗೆ ಆಡಿ ಎ4 ಕಾರು ನೆಚ್ಚಿನ ಆಯ್ಕೆಯಾಗಿರಲಿದೆ. ಎ4 ಕಾರನ್ನು ಬಹಳ ಹಿಂದೆಯೇ ಭಾರತದಲ್ಲಿ ಬಿಡುಗಡೆ ಮಾಡಲಾಗಿತ್ತು. ಆಡಿ ಕಂಪನಿಯ ಕಾರುಗಳಲ್ಲಿ ಅತಿ ಹೆಚ್ಚು ಮಾರಾಟವಾಗುವ ಕಾರುಗಳಲ್ಲಿ ಆಡಿ ಎ4 ಸಹ ಒಂದಾಗಿದೆ. ಆದ ಕಾರಣ ಆಡಿ ಕಂಪನಿಯು ತನ್ನ ಜನಪ್ರಿಯ ಕಾರ್ ಅನ್ನು ಅಪ್‍‍ಡೇಟ್ ಮಾಡುವುದು ಒಳ್ಳೆಯ ಬೆಳವಣಿಗೆ.

Article Published On: Saturday, May 18, 2019, 12:03 [IST]
English summary
2020 Audi A4 Facelift Debuts With Aggressive Styling & Hybrid Powertrain Options - Read in kannada
Read more on ಆಡಿ audi
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+