20 ವರ್ಷಗಳಲ್ಲಿ 100 ಕಾರುಗಳನ್ನು ಕದ್ದಿದ್ದ ಈ ಖದೀಮರು ಕೊನೆಗೆ ಸಿಕ್ಕಿ ಬಿದ್ದಿದ್ದೇ ರೋಚಕ..!

ಕಳೆದ ಬುಧವಾರ ರಾತ್ರಿ ಉಳಿದ ಮಾಮೂಲಿ ರಾತ್ರಿಗಳಂತೆಯೇ ಇತ್ತು. ಸಿಲ್ವರ್ ಬಣ್ಣದ ಮಾರುತಿ ಸುಜುಕಿ ಬ್ರಿಝಾ ಕಾರಿನಲ್ಲಿದ್ದ ಇಬ್ಬರು ವ್ಯಕ್ತಿಗಳನ್ನು 9 ಜನರಿದ್ದ ಪೊಲೀಸ್ ತಂಡವು ದೆಹಲಿಯ ಶಹ್ದಾರ ಜಿಲ್ಲೆಯಲ್ಲಿ ಬಂಧಿಸಲು ತೆರಳಿತ್ತು.

20 ವರ್ಷಗಳಲ್ಲಿ 100 ಕಾರುಗಳನ್ನು ಕದ್ದಿದ್ದ ಖದೀಮರು ಕೊನೆಗೆ ಸಿಕ್ಕಿ ಬಿದ್ದಿದ್ದೇ ರೋಚಕ..!

ಚಾಲಕ 40 ವರ್ಷದ ಕುನಾಲ್ ಪೊಲೀಸರಿಗೆ ಬೇಕಾಗಿದ್ದ ಆಸಾಮಿಯಾಗಿದ್ದ. ಅವನು ಮತ್ತು ಅವನ ಸಹಚರ ಶಾಹೀದ್, ಕಳೆದ 20 ವರ್ಷಗಳಿಂದ ಸುಮಾರು 100ಕ್ಕೂ ಹೆಚ್ಚು ಕಾರುಗಳ್ಳತನದಲ್ಲಿ ಭಾಗಿಯಾಗಿ ಪೊಲೀಸರ ಕೈಗೆ ಸಿಕ್ಕಿ ಹಾಕಿಕೊಳ್ಳದೇ ತಲೆ ಮರೆಸಿಕೊಂಡು ತಿರುಗುತ್ತಿದ್ದರು. ತಮ್ಮ ಬೆನ್ನುಬಿದ್ದಿದ್ದ ಪೊಲೀಸರಿಗೆ ಶರಣಾಗುವ ಉದ್ದೇಶವೇ ಈ ಕಾರುಗಳ್ಳರಿಗೆ ಇರಲಿಲ್ಲ. ಆದರೆ ಅಲ್ಲಿ ನಡೆದಿದ್ದೇಲ್ಲಾ ಥೇಟ್ ಬಾಲಿವುಡ್ ಸಿನಿಮಾಗಳ ರೀತಿಯಲ್ಲಿದೆ. ಪೊಲೀಸರು ತಮ್ಮನ್ನು ಅಡ್ಡಗಟ್ಟುತ್ತಿದ್ದಂತೆ, ಕುನಾಲ್ ತನ್ನ ಕಾರನ್ನು ರಿವರ್ಸ್ ತೆಗೆದು ಪೊಲೀಸ್ ವಾಹನಕ್ಕೆ ಗುದ್ದಿಸಿದ್ದಾನೆ.

20 ವರ್ಷಗಳಲ್ಲಿ 100 ಕಾರುಗಳನ್ನು ಕದ್ದಿದ್ದ ಖದೀಮರು ಕೊನೆಗೆ ಸಿಕ್ಕಿ ಬಿದ್ದಿದ್ದೇ ರೋಚಕ..!

ಅಡ್ಡ ಬಂದ ಮೂವರು ಪೊಲೀಸ್ ಅಧಿಕಾರಿಗಳ ಮೇಲೆಯೇ ಕಾರು ಹರಿಸಲು ಯತ್ನಿಸಿದ್ದಾನೆ. ನಂತರ ಬೇರೊಂದು ವಾಹನಕ್ಕೆ ಗುದ್ದಿದ್ದಾನೆ. ಕ್ರಿಮಿನಲ್ ಹಿನ್ನೆಲೆಯ ಕುನಾಲ್ ಈ ಹಿಂದೆ ಪೊಲೀಸರ ಮೇಲೆಯೇ ಗುಂಡು ಹಾರಿಸಿದ್ದ. ಪೊಲೀಸರ ತಂಡದಲ್ಲಿದ್ದ ಸಬ್ ಇನ್ಸ್ ಪೆಕ್ಟರ್ ರೋಹ್‍‍ತಾಶ್ ರವರಿಗೆ ಮುಂದಿನ ದುರಂತದ ಬಗ್ಗೆ ಅರಿವಾಗಿದೆ.

20 ವರ್ಷಗಳಲ್ಲಿ 100 ಕಾರುಗಳನ್ನು ಕದ್ದಿದ್ದ ಖದೀಮರು ಕೊನೆಗೆ ಸಿಕ್ಕಿ ಬಿದ್ದಿದ್ದೇ ರೋಚಕ..!

ಇಂಡಿಯನ್ ಎಕ್ಸ್ ಪ್ರೆಸ್ ವರದಿಗಳ ಪ್ರಕಾರ, ಕಾರಿನಿಂದ ಕೆಳಗಿಳಿದ ಕುನಾಲ್, ತನ್ನ ಬಳಿಯಿದ್ದ ಕಬ್ಬಿಣದ ರಾಡ್‍‍ನಿಂದ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾನೆ. ಇದಾದ ನಂತರ ನಾಟಕೀಯ ಘಟನೆಗಳು ನಡೆದಿವೆ. ಈ ವೃತ್ತಿಪರ ಕಳ್ಳ ತನ್ನ ಬಳಿಯಿದ್ದ ಪಿಸ್ತೂಲ್ ಹೊರತೆಗೆದು ಪೊಲೀಸರತ್ತ ಗುರಿಯಿಟ್ಟಿದ್ದಾನೆ.

20 ವರ್ಷಗಳಲ್ಲಿ 100 ಕಾರುಗಳನ್ನು ಕದ್ದಿದ್ದ ಖದೀಮರು ಕೊನೆಗೆ ಸಿಕ್ಕಿ ಬಿದ್ದಿದ್ದೇ ರೋಚಕ..!

ಧೈರ್ಯವಾಗಿ ಮುನ್ನುಗ್ಗಿದ ಸಬ್ ಇನ್ಸ್ ಪೆಕ್ಟರ್ ರೊಹ್‍‍ತಾಶ್ ಕುನಾಲ್‍‍ನಿಂದ ಪಿಸ್ತೂಲ್ ಕಸಿದುಕೊಂಡಿದ್ದಾರೆ. ಆದರೆ ಅವನ ಬಳಿ ಇದ್ದ ಗನ್ ಅಟಿಕೆಯಾಗಿತ್ತು. ಶಹ್ದಾರ ಜಿಲ್ಲೆಯ, ವಾಹನ ಕಳ್ಳತನ ತಡೆ ಸ್ಕ್ಯಾಡ್, ಕುನಾಲ್ ಮತ್ತು ಅವನ ಸಹಚರ ಶಾಹೀದ್ ನನ್ನು ಬಂಧಿಸಿ, 100 ಕ್ಕೂ ಹೆಚ್ಚು ಕಾರುಗಳನ್ನು ಕದ್ದ ಪ್ರಕರಣಗಳನ್ನು ದಾಖಲಿಸಿದೆ. ಡಿ‍‍ಸಿ‍‍ಪಿ ಮೇಘನಾ ಯಾದವ್ ರವರು ಮಾತನಾಡಿ, ಕುನಾಲ್ ಕುಖ್ಯಾತ ಕಾರುಗಳ್ಳನಾಗಿದ್ದು, ರಾತ್ರಿ ವೇಳೆಯಲ್ಲಿ ಕಾರುಗಳನ್ನು ಕಳ್ಳತನ ಮಾಡುತ್ತಿದ್ದ, ಪೊಲೀಸ್ ವಾಹನಗಳನ್ನು ಹೊರತು ಪಡಿಸಿ ಬೇರೆಲ್ಲಾ ವಾಹನಗಳನ್ನು ಕದಿಯುತ್ತಿದ್ದ ಎಂದು ತಿಳಿಸಿದರು.

20 ವರ್ಷಗಳಲ್ಲಿ 100 ಕಾರುಗಳನ್ನು ಕದ್ದಿದ್ದ ಖದೀಮರು ಕೊನೆಗೆ ಸಿಕ್ಕಿ ಬಿದ್ದಿದ್ದೇ ರೋಚಕ..!

ಕುನಾಲ್‍‍ನ ವಿರುದ್ಧ 21 ಕ್ಕೂ ಹೆಚ್ಚು ಕೇಸ್‍‍ಗಳು ದಾಖಲಾಗಿವೆ. ತನ್ನ ಮುಖಕ್ಕೆ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡು ಪೊಲೀಸರಿಂದ ತಪ್ಪಿಸಿಕೊಂಡಿದ್ದ. ತನ್ನ ಹೆಸರು ಮತ್ತು ವಿಳಾಸವನ್ನು ಸಹ ಬದಲಿಸಿ ಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಅವನು ಈಗ ತನ್ನ ಹೆಸರನ್ನು ಭೂತನಾಥ ಎಂದು ಬದಲಿಸಿಕೊಂಡಿದ್ದಾನೆ.

20 ವರ್ಷಗಳಲ್ಲಿ 100 ಕಾರುಗಳನ್ನು ಕದ್ದಿದ್ದ ಖದೀಮರು ಕೊನೆಗೆ ಸಿಕ್ಕಿ ಬಿದ್ದಿದ್ದೇ ರೋಚಕ..!

ಕುನಾಲ್‍‍ನನ್ನು ಬಂಧಿಸಿರುವ ಪೊಲೀಸರು, ಕೇವಲ ಐದು ನಿಮಿಷಗಳಲ್ಲಿ ಕಾರನ್ನು ಕದಿಯುತ್ತಿದ್ದ ಅವನು, ಕಪ್ಪು ಮುಖವಾಡ ಮತ್ತು ಗ್ಲೌಸ್‍‍ಗಳನ್ನು ಧರಿಸಿ, ವಿಂಡ್ ಶೀಲ್ಡ್ ನ ಸೀರಿಯಲ್ ನಂಬರ್‍‍ಗಳನ್ನು ಗಮನಿಸಿ ಕಾರುಗಳನ್ನು ಕಳವು ಮಾಡುತ್ತಿದ್ದ ಎಂದು ತಿಳಿಸಿದ್ದಾರೆ.

MOST READ: ಜಗತ್ತಿನ ಅತಿ ವೇಗದ ಆಟೋರಿಕ್ಷಾದ ಟಾಪ್ ಸ್ಪೀಡ್ ಎಷ್ಟು ಗೊತ್ತಾ?

20 ವರ್ಷಗಳಲ್ಲಿ 100 ಕಾರುಗಳನ್ನು ಕದ್ದಿದ್ದ ಖದೀಮರು ಕೊನೆಗೆ ಸಿಕ್ಕಿ ಬಿದ್ದಿದ್ದೇ ರೋಚಕ..!

ಕುನಾಲ್ ಗಟ್ಟಿಮುಟ್ಟಾಗಿದ್ದ ಮ್ಯಾಗ್ನೇಟ್‍‍ಗಳನ್ನು ಬಳಸಿ ಸ್ಟೀಯರಿಂಗ್ ವ್ಹೀಲ್‍‍ಗಳ ಲಾಕಿಂಗ್ ಸಿಸ್ಟಂಗಳನ್ನು ಹಾಳುಮಾಡುತ್ತಿದ್ದ, ಹೆವಿ ರಾಡ್‍‍ಗಳನ್ನು ಬಳಸಿ ಬಾಗಿಲುಗಳನ್ನು ತೆಗೆಯುತ್ತಿದ್ದ ಮತ್ತು ವಾಹನದ ಭದ್ರತೆಯನ್ನು ಭೇದಿಸಲು ಎಲೆಕ್ಟ್ರಾನಿಕ್ ಕಂಟ್ರೋಲ್ ಮಾಡ್ಯೂಲ್‍‍ಗಳನ್ನು ಬಳಸುತ್ತಿದ್ದ. ಪೊಲೀಸರ ಪ್ರಕಾರ ಕುನಾಲ್ ಕಾರುಗಳನ್ನು ಕಳವು ಮಾಡುವುದು ಹೇಗೆ ಎಂಬ ವೀಡಿಯೊ ಮಾಡಿ ಅದನ್ನು ಯೂ ಟ್ಯೂಬ್ ನಲ್ಲಿ ಅಪ್ ಲೋಡ್ ಮಾಡಿದ್ದಾನೆ.

20 ವರ್ಷಗಳಲ್ಲಿ 100 ಕಾರುಗಳನ್ನು ಕದ್ದಿದ್ದ ಖದೀಮರು ಕೊನೆಗೆ ಸಿಕ್ಕಿ ಬಿದ್ದಿದ್ದೇ ರೋಚಕ..!

ಅವನು ಇತ್ತೀಚಿಗೆ ಕಳವು ಮಾಡಿರುವ ವಾಹನಗಳು 2019ರಲ್ಲಿ ಮಾರಾಟವಾಗಿದ್ದ ಕಾರುಗಳಾಗಿವೆ. ಅವುಗಳನ್ನು ಖರೀದಿಸಿರುವ ವ್ಯಕ್ತಿಗಾಗಿ ನಾವು ಹುಡುಕಾಟ ನಡೆಸಿದ್ದೇವೆ ಎಂದು ಡಿ‍‍ಸಿ‍‍ಪಿ ರವರು ತಿಳಿಸಿದರು. ಪೊಲೀಸರು ನಾಲ್ಕು ಬ್ರಿಝಾ ಕಾರುಗಳನ್ನು ವಶಕ್ಕೆ ಪಡೆದಿದ್ದು, ಉಳಿದ ಕಾರುಗಳಿಗಾಗಿ ಶೋಧ ನಡೆಸಿದ್ದಾರೆ.

20 ವರ್ಷಗಳಲ್ಲಿ 100 ಕಾರುಗಳನ್ನು ಕದ್ದಿದ್ದ ಖದೀಮರು ಕೊನೆಗೆ ಸಿಕ್ಕಿ ಬಿದ್ದಿದ್ದೇ ರೋಚಕ..!

ಕುನಾಲ್‍‍ನನ್ನು ಹಲವು ವರ್ಷಗಳ ಹಿಂದೆ ಬಂಧಿಸಿ, ಸಿಆರ್ ಪಾರ್ಕ್ ಪೊಲೀಸ್ ಠಾಣೆಯಲ್ಲಿಡಲಾಗಿತ್ತು. ಕುನಾಲ್‍‍ನನ್ನು ಬಂಧಿಸಿ ತರುವಾಗ ಪೊಲೀಸ್ ಜೀಪ್‍‍ನಿಂದ ಹಾರಲು ಯತ್ನಿಸಿದ್ದ. ಠಾಣೆಯಲ್ಲಿ ಆತ್ಮಹತ್ಯೆಗೂ ಯತ್ನಿಸಿದ್ದ. ಪೊಲೀಸರಿಂದ ತಪ್ಪಿಸಿಕೊಂಡ ನಂತರ ತನ್ನ ಕಳ್ಳತನವನ್ನು ಮತ್ತೆ ಮುಂದುವರೆಸಿದ್ದ.

20 ವರ್ಷಗಳಲ್ಲಿ 100 ಕಾರುಗಳನ್ನು ಕದ್ದಿದ್ದ ಖದೀಮರು ಕೊನೆಗೆ ಸಿಕ್ಕಿ ಬಿದ್ದಿದ್ದೇ ರೋಚಕ..!

ಕುನಾಲ್‍‍ನನ್ನು ಬುಧವಾರ ರಾತ್ರಿ ಬಂಧಿಸಿದ ನಂತರ ಆನಂದ್ ವಿಹಾರ್ ಪೊಲೀಸ್ ಠಾಣೆಗೆ ಕರೆತರಲಾಯಿತು, ಆತನಿಂದ ಕಾರುಗಳನ್ನು ಕಳ್ಳತನ ಮಾಡುವ ವಿಧಾನದ ಬಗ್ಗೆ ವಿಚಾರಿಸಿ, ಲಾಕ್ ಆಗಿರುವ ಕಾರನ್ನು ಒಪನ್ ಮಾಡಲು ಹೇಳಿದಾಗ, ಆ ಕಾರನ್ನು ನಾಲ್ಕು ನಿಮಿಷಗಳಲ್ಲಿ ಒಪನ್ ಮಾಡಿದ್ದಾನೆ.

20 ವರ್ಷಗಳಲ್ಲಿ 100 ಕಾರುಗಳನ್ನು ಕದ್ದಿದ್ದ ಖದೀಮರು ಕೊನೆಗೆ ಸಿಕ್ಕಿ ಬಿದ್ದಿದ್ದೇ ರೋಚಕ..!

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಈಗ ಬಂಧಿಸಲಾಗಿರುವ ಕುನಾಲ್ ಕಾರುಗಳ್ಳತನವನ್ನೇ ತನ್ನ ವೃತ್ತಿಯಾಗಿಸಿಕೊಂಡಿದ್ದ, 20 ವರ್ಷಗಳಿಂದ ಪೊಲೀಸರಿಂದ ತಪ್ಪಿಸಿಕೊಳ್ಳುವ ಸಲುವಾಗಿ ಪ್ಲಾಸ್ಟಿಕ್ ಸರ್ಜರಿಗಳನ್ನು ಮಾಡಿಸಿಕೊಂಡಿದ್ದ. ತನ್ನ ಬಳಿಯಿದ್ದ ಅಟಿಕೆಯ ಪಿಸ್ತೂಲ್‍‍ನಿಂದಲೇ ಇಷ್ಟು ವರ್ಷ ಜನರನ್ನು ಆಟವಾಡಿಸುತ್ತಿದ್ದ. ಕಾರುಗಳ್ಳತನಕ್ಕೆ, 1990ರ ಸೆಕ್ಷನ್ 154 ಎಫ್ ಪ್ರಕಾರ 10 ವರ್ಷಗಳ ಗರಿಷ್ಟ ಕಾರಾಗೃಹ ಶಿಕ್ಷೆ ವಿಧಿಸಬಹುದಾಗಿದೆ.

20 ವರ್ಷಗಳಲ್ಲಿ 100 ಕಾರುಗಳನ್ನು ಕದ್ದಿದ್ದ ಖದೀಮರು ಕೊನೆಗೆ ಸಿಕ್ಕಿ ಬಿದ್ದಿದ್ದೇ ರೋಚಕ..!

ಈತನು ಮಾಡಿರುವ ಕೃತ್ಯಗಳಿಗೆ 10 ವರ್ಷಗಳ ಶಿಕ್ಷೆ ಏನೇನು ಸಾಲದು. ಈತನಿಂದ ಅನೇಕ ಕಾರುಗಳ್ಳತನದ ಪ್ರಕರಣಗಳು ಹೊರಬರುವ ನಿರೀಕ್ಷೆಗಳಿವೆ.

Most Read Articles

Kannada
English summary
Car Thief Who Stole Over 100 New Cars Caught — The Dude Carried A Toy Pistol! - Read in kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X