2020ರ ಆಟೋ ಎಕ್ಸ್‌ಪೋಗೆ ದಿನಗಣನೆ- ಸದ್ದು ಮಾಡಲಿವೆ ಹತ್ತಾರು ಹೊಸ ಕಾರುಗಳು..!

ಭಾರತೀಯ ಆಟೋ ಉದ್ಯಮವು ಹಲವು ಬದಲಾವಣೆಗಳೊಂದಿಗೆ ಜಾಗತಿಕವಾಗಿ ಮುನ್ನಡೆ ಸಾಧಿಸುತ್ತಿದ್ದು, ಪ್ರತಿ ವರ್ಷಗಳಿಗೆ ಒಂದು ಬಾರಿ ಆಯೋಜನೆಗೊಳ್ಳುವ ದೆಹಲಿ ಎಕ್ಸ್‌ಪೋ ಇದಕ್ಕೆ ಪ್ರಮುಖ ಸಾಕ್ಷಿ ಅಂದ್ರೆ ತಪ್ಪಾಗುವುದಿಲ್ಲ. ಹಲವು ಹೊಸತನಗಳಿಗೆ ಸಾಕ್ಷಿಯಾಗಿದ್ದ 2018ರ ಆಟೋ ಎಕ್ಸ್‌ಪೋ ನಂತರ ಇದೀಗ 2020ರ ಆಟೋ ಎಕ್ಸ್‌ಪೋ ಆಯೋಜನೆಗೆ ದಿನಗಣನೆ ಶುರುವಾಗಿದ್ದು, ಫೆಬ್ರುವರಿ 7ರಿಂದ 12ರ ತನಕ ನಡೆಯಲಿರುವ ಆಟೋ ಎಕ್ಸ್‌ಪೋದಲ್ಲಿ ಈ ಬಾರಿ ಕೆಲವು ಹೊಸ ಕಾರುಗಳು ಭಾರತೀಯ ಆಟೋ ಉದ್ಯಮ ಹೊಸ ನೀರಿಕ್ಷೆ ಹುಟ್ಟುಹಾಕಿವೆ.

2020ರ ಆಟೋ ಎಕ್ಸ್‌ಪೋಗೆ ದಿನಗಣನೆ- ಸದ್ದು ಮಾಡಲಿವೆ ಹತ್ತಾರು ಹೊಸ ಕಾರುಗಳು..!

ಸದ್ಯ ಭಾರತದಲ್ಲಿ ಬಿಎಸ್-4 ಮತ್ತು ಅದಕ್ಕೂ ಮೇಲ್ಪಟ್ಟ ವಾಹನಗಳ ಉತ್ಪಾದನೆ ಮತ್ತು ಮಾರಾಟಕ್ಕೆ ಮಾತ್ರವೇ ಅವಕಾಶಗಳಿದ್ದು, ಇದು ಕೂಡಾ 2020ರ ಏಪ್ರಿಲ್ 1ರಿಂದ ಸಂಪೂರ್ಣವಾಗಿ ನಿಷೇಧಗೊಂಡು ಬಿಎಸ್-6 ನಿಯಮವು ಜಾರಿಗೆ ಬರಲಿದೆ. ಹೀಗಾಗಿ ಬಿಎಸ್-6 ನಿಯಮ ಜಾರಿಗೂ ಮುನ್ನವೇ ಹೊಸ ನಿಯಮಕ್ಕೆ ಅನುಗುಣವಾಗಿ ತಮ್ಮ ಜನಪ್ರಿಯ ವಾಹನಗಳ ಎಂಜಿನ್ ಮಾದರಿಯನ್ನು ಉನ್ನತಿಕರಿಸುತ್ತಿರುವ ಬಹುತೇಕ ಆಟೋ ಉತ್ಪಾದನಾ ಸಂಸ್ಥೆಗಳು ಫೆಬ್ರುವರಿಯಲ್ಲಿ ನಡೆಯಲಿರುವ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನಗೊಳಿಸಿದ ನಂತರ ಅಧಿಕೃತ ಮಾರಾಟಕ್ಕೆ ಚಾಲನೆ ನೀಡುವ ಯೋಜನೆಯಲ್ಲಿವೆ.

2020ರ ಆಟೋ ಎಕ್ಸ್‌ಪೋಗೆ ದಿನಗಣನೆ- ಸದ್ದು ಮಾಡಲಿವೆ ಹತ್ತಾರು ಹೊಸ ಕಾರುಗಳು..!

ಈಗಾಗಲೇ ಮಾರುತಿ ಸುಜುಕಿ ಸೇರಿದಂತೆ ಕೆಲವು ಆಟೋ ಉತ್ಪಾದನಾ ಸಂಸ್ಥೆಗಳು ಆಯ್ದ ಕಾರು ಮಾದರಿಗಳಲ್ಲಿ ಬಿಎಸ್-6 ವೈಶಿಷ್ಟ್ಯತೆಯ ಎಂಜಿನ್ ಮಾದರಿಯನ್ನೇ ಜೋಡಣೆ ಮಾಡಿ ಮಾರಾಟಕ್ಕೆ ಚಾಲನೆ ನೀಡಿದ್ದು, ಆಟೋ ಎಕ್ಸ್‌ಪೋದಲ್ಲಿ ಭಾಗಿಯಾದ ಬಹುತೇಕ ವಾಹನ ಸಂಸ್ಥೆಗಳು ಹೊಸ ವಾಹನಗಳನ್ನು ಬಿಡುಗಡೆಗೊಳಿಸಲಿವೆ.

2020ರ ಆಟೋ ಎಕ್ಸ್‌ಪೋಗೆ ದಿನಗಣನೆ- ಸದ್ದು ಮಾಡಲಿವೆ ಹತ್ತಾರು ಹೊಸ ಕಾರುಗಳು..!

ಈ ಬಾರಿಯ ಆಟೋ ಮೇಳದಲ್ಲಿ ಮಾರುತಿ ಸುಜುಕಿ, ಕಿಯಾ ಮೋಟಾರ್ಸ್, ಹ್ಯುಂಡೈ, ಮಹೀಂದ್ರಾ, ಟೊಯೊಟಾ, ರೆನಾಲ್ಟ್, ಹೋಂಡಾ ಮತ್ತು ಟಾಟಾ ಮೋಟಾರ್ಸ್ ಸಂಸ್ಥೆಯ ಕೆಲವು ಹೊಸ ಕಾರು ಮಾದರಿಗಳು ಗಮನಸೆಳೆಯಲಿದ್ದು, ಬಿಎಸ್-6 ಎಂಜಿನ್ ಪ್ರೇರಿತ ವಾಹನಗಳ ಜೊತೆ ಜೊತೆಗೆ ಎಲೆಕ್ಟ್ರಿಕ್ ವಾಹನಗಳು ಸಹ ಈ ಬಾರಿ ಆಟೋ ಎಕ್ಸ್‌ಪೋದಲ್ಲಿ ಭರ್ಜರಿ ಗಮನಸೆಳೆಯುವ ವಿಶ್ವಾಸದಲ್ಲಿವೆ.

2020ರ ಆಟೋ ಎಕ್ಸ್‌ಪೋಗೆ ದಿನಗಣನೆ- ಸದ್ದು ಮಾಡಲಿವೆ ಹತ್ತಾರು ಹೊಸ ಕಾರುಗಳು..!

ಕಾರುಗಳ ವಿಭಾಗದಲ್ಲಿ ಮಾರುತಿ ಸುಜುಕಿ ನಿರ್ಮಾಣದ ವ್ಯಾಗನ್ಆರ್ ಎಲೆಕ್ಟ್ರಿಕ್, ಸಾಲಿಯೋ ಹೈಬ್ರಿಡ್, ಟಾಟಾ ಹೆಚ್2ಎಕ್ಸ್ ಎಲೆಕ್ಟ್ರಿಕ್, ಆಲ್‌ಟ್ರೋಜ್ ಎಲೆಕ್ಟ್ರಿಕ್, ಹ್ಯುಂಡೈ ಫೇಸ್‌ಲಿಫ್ಟ್, ಮಹೀಂದ್ರಾ ಸಂಸ್ಥೆಯ ನೆಕ್ಸ್ಟ್ ಜನರೇಷನ್ ಬಲೆರೊ, ಸ್ಕಾರ್ಪಿಯೋ, ಎಕ್ಸ್‌ಯುವಿ 500,ಎಕ್ಸ್‌ಯುವಿ300, ಥಾರ್ ಕಾರುಗಳು ಪ್ರಮುಖ ಆಕರ್ಷಣೆಯಾಗಲಿವೆ. ಹಾಗೆಯೇ ಐಷಾರಾಮಿ ಕಾರು ಉತ್ಪಾದನಾ ಸಂಸ್ಥೆಗಳಾದ ಆಡಿ, ಮರ್ಸಿಡಿಸ್ ಬೆಂಝ್, ಬಿಎಂಡಬ್ಲ್ಯು ಸೇರಿದಂತೆ ಹಲವು ಸಂಸ್ಥೆಗಳು ತನ್ನ ಎಲೆಕ್ಟ್ರಿಕ್ ಕಾನ್ಸೆಪ್ಟ್ ಆವೃತ್ತಿಗಳನ್ನು ಪ್ರದರ್ಶನಗೊಳಿಸಲಿವೆ.

2020ರ ಆಟೋ ಎಕ್ಸ್‌ಪೋಗೆ ದಿನಗಣನೆ- ಸದ್ದು ಮಾಡಲಿವೆ ಹತ್ತಾರು ಹೊಸ ಕಾರುಗಳು..!

ಹೋಂಡಾ ಸಿಟಿ ಮತ್ತು ಮಾರುತಿ ಸುಜುಕಿ ಸಿಯಾಜ್‌ಗೆ ಟಕ್ಕರ್ ನೀಡುತ್ತಿರುವ ಟೊಯೊಟಾ ಯಾರಿಸ್ ಖರೀದಿಗೆ ಈಗಲೇ ಟೆಸ್ಟ್ ಡ್ರೈವ್ ಮಾಡಿ..!

ಒಟ್ಟಿನಲ್ಲಿ ಆಟೋ ಉತ್ಪಾದನಾ ಸಂಸ್ಥೆಗಳಿಗೆ ತಮ್ಮ ಭವಿಷ್ಯದ ವಾಹನ ಮಾದರಿಗಳನ್ನು ಪ್ರದರ್ಶನಗೊಳಿಸಲು ಇದೊಂದು ಉತ್ತಮ ವೇದಿಕೆಯಾಗಿದ್ದು, ಈ ಬಾರಿ ಸಾಂಪ್ರಾದಾಯಿಕ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳಿಂತ ಹೆಚ್ಚು ಎಲೆಕ್ಟ್ರಿಕ್ ಮತ್ತು ಹೈಬ್ರಿಡ್ ವಾಹನಗಳನ್ನು ಹೆಚ್ಚು ಪ್ರದರ್ಶನಗೊಳಿಸಲಿವೆ ಎನ್ನಬಹುದು.

2020ರ ಆಟೋ ಎಕ್ಸ್‌ಪೋಗೆ ದಿನಗಣನೆ- ಸದ್ದು ಮಾಡಲಿವೆ ಹತ್ತಾರು ಹೊಸ ಕಾರುಗಳು..!

ಇನ್ನು 2020ರ ಏಪ್ರಿಲ್ 1ರಿಂದ ಜಾರಿಗೆ ಬರುತ್ತಿರುವ ಬಿಎಸ್-6 ನಿಯಮವು ಭಾರತೀಯ ಆಟೋ ಉದ್ಯಮದಲ್ಲಿ ಹೊಸ ಬದಲಾವಣೆಗೆ ಮುನ್ನಡೆಯಾಗಲಿದ್ದು, ಹೆಚ್ಚುತ್ತಿರುವ ಮಾಲಿನ್ಯ ಪ್ರಮಾಣವನ್ನು ತಗ್ಗಿಸಲು ಅದು ಸಾಕಷ್ಟು ಅನುಕೂಲಕರವಾಗಿರುವುದಲ್ಲದೇ ಪ್ರಯಾಣಿಕರಿಗೆ ಹೆಚ್ಚಿನ ಮಟ್ಟದ ಸುರಕ್ಷತೆ ನೀಡುವಂತಹ ಮಹತ್ವದ ಯೋಜನೆಯಾಗಿದೆ.

2020ರ ಆಟೋ ಎಕ್ಸ್‌ಪೋಗೆ ದಿನಗಣನೆ- ಸದ್ದು ಮಾಡಲಿವೆ ಹತ್ತಾರು ಹೊಸ ಕಾರುಗಳು..!

ಹೀಗಾಗಿ ಎಲೆಕ್ಟ್ರಿಕ್ ವಾಹನಗಳ ಮಾರಾಟವನ್ನು ಹೆಚ್ಚಿಸುವ ಸಂಬಂಧ ಫೇಮ್ 2 ಯೋಜನೆ ಜಾರಿಗೊಳಿಸಿರುವ ಕೇಂದ್ರ ಸರ್ಕಾರವು ಮತ್ತೊಂದು ಕಡೆಗೆ ಬಿಎಸ್ 4 ಎಂಜಿನ್ ವಾಹನ ಉತ್ಪಾದನೆ ಮತ್ತು ಮಾರಾಟಕ್ಕೆ ಬ್ರೇಕ್ ಹಾಕುತ್ತಿದ್ದು, 2020ರ ಏಪ್ರಿಲ್ 1ರಿಂದ ಜಾರಿಗೆ ಬರುವಂತೆ ಬಿಎಸ್-6 ಎಂಜಿನ್ ಮಾದರಿಯನ್ನು ಜಾರಿಗೆ ತರುತ್ತಿದೆ. ಇದರಿಂದ ಬಹುತೇಕ ವಾಹನ ಸಂಸ್ಥೆಗಳು ಹೊಸ ನಿಯಮಕ್ಕೆ ಅನುಗುಣವಾಗಿ ಎಂಜಿನ್ ಅಭಿವೃದ್ಧಿಗೊಳ್ಳಲು ಸಾಧ್ಯವಿರದ ಕೆಲವು ಡೀಸೆಲ್ ಎಂಜಿನ್‌ ಆಯ್ಕೆಯನ್ನು ಕೈಬಿಡುತ್ತಿವೆ.

2020ರ ಆಟೋ ಎಕ್ಸ್‌ಪೋಗೆ ದಿನಗಣನೆ- ಸದ್ದು ಮಾಡಲಿವೆ ಹತ್ತಾರು ಹೊಸ ಕಾರುಗಳು..!

ಮುಖ ವಿಚಾರ ಅಂದ್ರೆ, ಹೊಗೆ ಉಗುಳುವ ಪ್ರಮಾಣದಲ್ಲೂ ಈಗಿರುವ ಡೀಸೆಲ್ ಎಂಜಿನ್‌ಗಳಿಂತಲೂ ಶೇ.25 ರಷ್ಟು ಕಡಿತಗೊಳ್ಳಲಿದ್ದು, ಶೇ.10 ರಿಂದ 15ರಷ್ಟು ಮೈಲೇಜ್ ಹೆಚ್ಚಳವಾಗಲಿದೆ. ಇದರೊಂದಿಗೆ ಹೊಸ ಕಾರುಗಳ ಬೆಲೆಯಲ್ಲೂ ತುಸು ಏರಿಕೆಯಾಗಲಿದ್ದು, ಬಿಎಸ್-4 ಕಾರುಗಳ ಬೆಲೆಗಳಿಂತಲೂ ಬಿಎಸ್-6 ಕಾರುಗಳ ಬೆಲೆಯು ತಾಂತ್ರಿಕ ಸೌಲಭ್ಯಗಳ ಅಳವಡಿಕೆಯ ಆಧಾರದ ಮೇಲೆ ರೂ. 1.50 ಲಕ್ಷದಿಂದ ರೂ.2.50 ಲಕ್ಷದ ತನಕ ಹೆಚ್ಚಿನ ಬೆಲೆ ಪಡೆದುಕೊಳ್ಳಬಹುದು ಎಂದು ನೀರಿಕ್ಷಿಸಲಾಗಿದೆ.

Most Read Articles

Kannada
English summary
2020 Auto Expo Dates Revealed — WagonR Electric, Tata H2X, And Next-Gen Thar Expected.
Story first published: Tuesday, July 30, 2019, 19:47 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more