Just In
- 1 hr ago ಟಿವಿಎಸ್ ಐಕ್ಯೂಬ್ಗೆ ನಡುಕ ಶುರು!: ಸದ್ಯದಲ್ಲೇ ಕಡಿಮೆ ಬೆಲೆ ಮಾರುಕಟ್ಟೆಗೆ ಬಜಾಜ್ ಚೇತಕ್ ಎಲೆಕ್ಟ್ರಿಕ್
- 2 hrs ago ರಾಜ್ಯದಲ್ಲಿ ತಯಾರಾಗುವ ಟೊಯೊಟಾ ಇನ್ನೋವಾ ಹೈಕ್ರಾಸ್ಗೆ ಸೆಲೆಬ್ರಿಟಿಗಳು ಫಿಧಾ: ಈ ಕಾರು ಖರೀದಿಸಿದ ನಟಿ
- 2 hrs ago ಹ್ಯುಂಡೈನ ಈ ಕಾರಿಗೆ ಭಾರತದಲ್ಲಿ ಭರ್ಜರಿ ಡಿಸ್ಕೌಂಟ್: ಇದಕ್ಕಿಂತ ಉತ್ತಮ ಆಫರ್ ಸದ್ಯಕ್ಕಿಲ್ಲ!
- 2 hrs ago ರೈತರ ವಿಶ್ವಾಸದೊಂದಿಗೆ 40 ಲಕ್ಷ ಟ್ರ್ಯಾಕ್ಟರ್ ಮಾರಾಟ ಮೈಲಿಗಲ್ಲು ಸಾಧಿಸಿದ ಮಹೀಂದ್ರಾ
Don't Miss!
- Sports LSG vs CSK IPL 2024: ಲಕ್ನೋ vs ಚೆನ್ನೈ ಮಹಾಕದನ; ಟಾಸ್ ವರದಿ, ಆಡುವ 11ರ ಬಳಗ
- News Annamalai: ಒಂದು ಲಕ್ಷ ಮತದಾರರ ಹೆಸರು ಪಟ್ಟಿಯಿಂದ ಕಾಣೆಯಾಗಿದೆ: ಅಣ್ಣಾಮಲೈ ಆರೋಪ
- Movies 3ನೇ ಬಾರಿ ಜೊತೆಯಾದ್ರು ಶಿವಣ್ಣ- ಜಾಕಿ ಭಾವನಾ; ಯಾವ ಸಿನಿಮಾ ಗೊತ್ತಾ?
- Lifestyle ಸೌರಮಂಡಲದಲ್ಲಿದೆ 9ನೇ ಗ್ರಹ..! ಯಾವುದದು..? ಎಲ್ಲಿದೆ..?
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕಂಪ್ಯಾಕ್ಟ್ ಹೈಬ್ರಿಡ್ ಎಂಜಿನ್ ಹೊಂದಲಿದೆ 2020ರ ಹೋಂಡಾ ಸಿಟಿ
ಮಧ್ಯಮ ಗಾತ್ರದ ಸೆಡಾನ್ ಆವೃತ್ತಿಗಳಲ್ಲಿ ಭಾರೀ ಜನಪ್ರಿಯತೆ ಹೊಂದಿರುವ ಹೋಂಡಾ ಸಿಟಿ ಆವೃತ್ತಿಯು ಮುಂಬರುವ ದಿನಗಳಲ್ಲಿ ಮತ್ತಷ್ಟು ಬದಲಾವಣೆಗಳೊಂದಿಗೆ ಮಾರುಕಟ್ಟೆಗೆ ಪ್ರವೇಶಿಸಲು ಸಜ್ಜಾಗುತ್ತಿದ್ದು, ಮೊದಲ ಬಾರಿಗೆ ಸಿಟಿ ಕಾರಿನಲ್ಲಿ ಹೈಬ್ರಿಡ್ ತಂತ್ರಜ್ಞಾನ ಬಳಕೆ ಮಾಡಿರುವ ಕುರಿತು ಮಾಹಿತಿ ಲಭ್ಯವಾಗಿದೆ.
ಹೋಂಡಾ ಸಂಸ್ಥೆಯು ಭಾರತ ಸೇರಿದಂತೆ ಯುರೋಪಿನ ಪ್ರಮುಖ ರಾಷ್ಟ್ರಗಳಲ್ಲಿ ತನ್ನ ಜನಪ್ರಿಯ ಸಿಟಿ ಸೆಡಾನ್ ಕಾರಿನ 5ನೇ ತಲೆಮಾರಿನ ಆವೃತ್ತಿಯನ್ನು ಬಿಡುಗಡೆ ಮಾಡುತ್ತಿದ್ದು, ಹೊಸ ಕಾರಿನ ಎಂಜಿನ್ ಕಾರ್ಯಕ್ಷಮತೆಯನ್ನು ಅರಿಯಲು ಮೊದಲ ಬಾರಿಗೆ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗೆ ಚಾಲನೆ ನೀಡಿದೆ. ಈ ವೇಳೆ ಹೊಸ ಕಾರಿನಲ್ಲಿ ಕಂಪ್ಯಾಕ್ಟ್ ಹೈಬ್ರಿಡ್ ಮಾದರಿ ಕೂಡಾ ಬಿಡುಗಡೆಯಾಗುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಹೋಂಡಾ ನಿರ್ಮಾಣದ ಕಾರುಗಳಲ್ಲಿ ಅಕಾರ್ಡ್ ಸೆಡಾನ್ ನಂತರ ಹೈಬ್ರಿಡ್ ತಂತ್ರಜ್ಞಾನ ಹೊಂದಿದ 2ನೇ ಕಾರು ಮಾದರಿ ಇದಾಗಲಿದೆ.
ಕಳೆದ ಮಾರ್ಚ್ನಲ್ಲಿ ಸಿವಿಕ್ ಬಿಡುಗಡೆಯ ನಂತರ ಸಿಟಿ ಸೆಡಾನ್ ಕಾರಿನ ಮೇಲೆ ಹೆಚ್ಚಿನ ಗಮನಹರಿಸಿರುವ ಹೋಂಡಾ ಸಂಸ್ಥೆಯು 2020ರ ದೆಹಲಿ ಆಟೋ ಎಕ್ಸ್ಪೋದಲ್ಲಿ ಹೊಸ ತಲೆಮಾರಿನ ಸಿಟಿ ಕಾರನ್ನು ಪ್ರದರ್ಶನ ಮಾಡಿದ ನಂತರವಷ್ಟೇ ಬಿಡುಗಡೆ ಮಾಡಲಿದೆ.
ಪ್ರಸ್ತುತ ಮಾರುಕಟ್ಟೆಯಲ್ಲಿರುವ ಸಿಟಿ ಕಾರಿಗಿಂತ ಹೊಸ ಆವೃತ್ತಿಯು ಸಾಕಷ್ಟು ಬದಲಾವಣೆಗಳನ್ನು ಪಡೆದುಕೊಳ್ಳಲಿದ್ದು, 2014ರಲ್ಲಿ 4ನೇ ತಲೆಮಾರಿನ ಸಿಟಿ ಸೆಡಾನ್ ಕಾರು ಬಿಡುಗಡೆ ಮಾಡಿದ ಬಳಿಕ ಯಾವುದೇ ಬದಲಾವಣೆ ತರದ ಹೋಂಡಾ ಸಂಸ್ಥೆಯು ಇದೇ ಮೊದಲ ಬಾರಿಗೆ ಹೈಬ್ರಿಡ್ ತಂತ್ರಜ್ಞಾನ ಪರಿಚಯಿಸುತ್ತಿದೆ.
5ನೇ ತಲೆಮಾರಿನ ಸಿಟಿ ಸೆಡಾನ್ ಕಾರು ಪ್ರಸ್ತುತ ಮಾದರಿಗಿಂತಲೂ ತುಸು ದೊಡ್ಡ ಗಾತ್ರವನ್ನು ಹೊಂದಿದ್ದು, ಬೂಟ್ ಸ್ಪೆಸ್ ಜೊತೆಗೆ ಹಿಂಬದಿಯ ಸವಾರರಿಗೆ ವಿಸ್ತರಿತ ಲೆಗ್ ರೂಂ ಮತ್ತು ಹೆಡ್ ರೂಂ ನೀಡಿರುವುದು ಆರಾಮದಾಯಕ ಪ್ರಯಾಣಕ್ಕೆ ಅನುಕೂಲಕರವಾಗಲಿದೆ. ಸದ್ಯ ಥೈಲ್ಯಾಂಡ್ನಲ್ಲಿ ಹೊಸ ತಲೆಮಾರಿನ ಕಾರಿನ ಟೆಸ್ಟಿಂಗ್ ಪ್ರಕ್ರಿಯೆ ಚಾಲನೆ ನೀಡಿರುವ ಹೋಂಡಾ ಸಂಸ್ಥೆಯು ಬಿಎಸ್-6 ನಿಯಮಗಳಿಗೆ ಅನುಗುಣವಾಗಿ ಹೊಸ ಕಾರಿನ ಎಂಜಿನ್ ಅನ್ನು ಅಲ್ಲಿಯೇ ಅಭಿವೃದ್ಧಿಪಡಿಸಿದೆ.
ಥೈಲ್ಯಾಂಡ್ನಲ್ಲಿರುವ ಹೋಂಡಾ ಕಾರು ಉತ್ಪಾದನಾ ಘಟಕವು ಏಷ್ಯಾದ ಅತಿದೊಡ್ಡ ಕಾರು ಉತ್ಪಾದನಾ ಘಟಕ ಎಂಬ ಹೆಗ್ಗಳಿಕೆ ಹೊಂದಿದ್ದು, ಇಲ್ಲಿಂದಲೇ ಹೊಸ ಸಿಟಿ ಸೆಡಾನ್ ಕಾರು ಅಂತಿಮ ರೂಪ ಪಡೆದುಕೊಂಡು ಭಾರತಕ್ಕೆ ಪ್ರವೇಶಿಸಲಿದೆ.
ಹೊಸ ಸಿಟಿ ಸೆಡಾನ್ ಕಾರಿನಲ್ಲಿ ಈ ಬಾರಿ ಹಲವು ಪ್ರೀಮಿಯಂ ಫೀಚರ್ಸ್ಗಳನ್ನು ನೀಡಲಾಗಿದ್ದು, ಮಾರುತಿ ಸುಜುಕಿ ಸಿಯಾಜ್ ಮತ್ತು ಹ್ಯುಂಡೈ ವೆರ್ನಾ ಕಾರಿಗೆ ಮಾತ್ರವಲ್ಲದೇ ಟೊಯೊಟಾ ಕರೊಲ್ಲಾ ಆಟ್ಲಿಸ್ ಕಾರಿಗೂ ಭರ್ಜರಿ ಪೈಪೋಟಿ ನೀಡುವ ನೀರಿಕ್ಷೆಯಲ್ಲಿದೆ.
MOST READ: ಸಂಕಷ್ಟದಲ್ಲಿ ಆಟೋ ಉದ್ಯಮ- ಕಾರು ಉತ್ಪಾದನೆಗೆ ಬ್ರೇಕ್ ಹಾಕಿದ ಮಾರುತಿ ಸುಜುಕಿ..!
ಎಂಜಿನ್ ಸಾಮರ್ಥ್ಯ
ಹೊಸ ತಲೆಮಾರಿನ ಹೋಂಡಾ ಕಾರು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ನಲ್ಲಿ ಮಾತ್ರವಲ್ಲದೇ ಪೆಟ್ರೋಲ್ ಎಂಜಿನ್ ಜೊತೆಗೆ ಈ ಬಾರಿ ಕಂಪ್ಯಾಕ್ಟ್ ಹೈಬ್ರಿಡ್ ಎಂಜಿನ್ ಆಯ್ಕೆಯನ್ನು ಸಹ ಪಡೆದುಕೊಳ್ಳಲಿದ್ದು, ಇದು ಸೆಡಾನ್ ಕಾರು ಪ್ರಿಯರನ್ನು ಮತ್ತಷ್ಟು ಸೆಳೆಯಲಿದೆ.
MOST READ: ನಮ್ಮ ಬೆಂಗಳೂರಿನಲ್ಲಿ ಅನಾವರಣಗೊಂಡ ಬಹುನೀರಿಕ್ಷಿತ ಕಿಯಾ ಸೆಲ್ಟೊಸ್!
ಸದ್ಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮಾದರಿಯು 1.5-ಲೀಟರ್ ಮತ್ತು ಡೀಸೆಲ್ ಮಾದರಿಯು 1.5-ಲೀಟರ್ ಎಂಜಿನ್ ಆಯ್ಕೆಯನ್ನು ಹೊಂದಿದ್ದು, ಹೊಸ ತಲೆಮಾರಿನಲ್ಲೂ 1.5-ಲೀಟರ್ ಎಂಜಿನ್ ಆಯ್ಕೆಯನ್ನೇ ಮುಂದುವರಿಸಿದ್ದರೂ ಸಹ ಬಿಎಸ್-6 ವೈಶಿಷ್ಟ್ಯತೆಯಿಂದಾಗಿ ಕಾರಿನ ಪರ್ಫಾಮೆನ್ಸ್ ಮತ್ತು ಮೈಲೇಜ್ ಪ್ರಮಾಣದಲ್ಲಿ ಹೆಚ್ಚಳವಾಗಿದೆ.
MOST READ: ಹೊಸ ಕಾರುಗಳ ಉಚಿತ ನೋಂದಣಿಗಾಗಿ ಆರ್ಟಿಓದಿಂದ ಭರ್ಜರಿ ಆಫರ್
ಜೊತೆಗೆ 2020ರ ಏಪ್ರಿಲ್ 1ರಿಂದ ಬಿಎಸ್-6 ನಿಯಮ ಜಾರಿಗೆ ಹಿನ್ನೆಲೆಯಲ್ಲಿ ಹೊಸ ವಾಹನ ಎಂಜಿನ್ನಲ್ಲಿ ಸಾಕಷ್ಟು ಬದಲಾವಣೆ ಕಂಡುಬರುತ್ತಿದ್ದು, ಶೇ.25 ರಷ್ಟು ಹೊಗೆ ಉಗುಳುವ ಪ್ರಮಾಣ ಕಡಿಮೆಯಾದಲ್ಲಿ, ಶೇ.10ರಿಂದ 15ರಷ್ಟು ಮೈಲೇಜ್ ಪ್ರಮಾಣ ಹೆಚ್ಚಳವಾಗಲಿದೆ.
ಹಾಗೆಯೇ ಹೊಸ ಎಂಜಿನ್ ಹೊತ್ತುಬರುತ್ತಿರುವ ಬಿಎಸ್-6 ವಾಹನ ಬೆಲೆಯಲ್ಲೂ ತುಸು ದುಬಾರಿಯಾಗಲಿದ್ದು, ಬೆಲೆಗಳಿಗೆ ಅನುಗುಣವಾಗಿ ರೂ.80 ಸಾವಿರದಿಂದ ರೂ.2 ಲಕ್ಷದ ತನಕ ಈಗಿರುವ ಬೆಲೆಗಳಿಂತಲೂ ಹೆಚ್ಚು ಬೆಲೆ ಪಡೆದುಕೊಳ್ಳಲಿವೆ. ಇವುಗಳಲ್ಲಿ ಭಾರೀ ಬದಲಾವಣೆ ಪಡೆದುಕೊಳ್ಳುತ್ತಿರುವ ಹೋಂಡಾ ಸಿಟಿ ಸಹ ಈಗಿರುವ ವಿನ್ಯಾಸಕ್ಕಿಂತಲೂ ಹೆಚ್ಚಿನ ವೈಶಿಷ್ಟ್ಯತೆ ಹೊಂದಲಿದ್ದು, ಬೆಲೆಯೂ ಕೂಡಾ ತುಸು ದುಬಾರಿ ಎನ್ನಿಸಲಿದೆ.