ಹೊಸ ಕಾರುಗಳ ಉಚಿತ ನೋಂದಣಿಗಾಗಿ ಆರ್‌ಟಿಓದಿಂದ ಭರ್ಜರಿ ಆಫರ್

ಹೊಸ ವಾಹನಗಳ ಸಂಖ್ಯೆಯು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು, ಅತಿಯಾಗಿ ಮಾಲಿನ್ಯವನ್ನು ಹೊರಸೂಸುವ ಹಳೆಯ ವಾಹನಗಳಿಗೆ ಬ್ರೇಕ್ ಹಾಕಲು ಹೊಸದೊಂದು ರೂಲ್ಸ್ ಜಾರಿಗೆ ತರಲಾಗುತ್ತದೆ. ಹೀಗಾಗಿ ಎಲೆಕ್ಟ್ರಿಕ್ ವಾಹನಗಳ ಮೇಲೆ ಹೆಚ್ಚು ಗಮನಹರಿಸಿರುವ ಕೇಂದ್ರ ಸರ್ಕಾರವು ಇವಿ ಹೊರತುಪಡಿಸಿ ಸಾಮಾನ್ಯ ವಾಹಗಳ ನೋಂದಣಿಯಲ್ಲಿ ಶೇ.200ರಷ್ಟು ಬೆಲೆ ಹೆಚ್ಚಳ ಮಾಡಿದ್ದು, ಉಚಿತವಾಗಿಯೂ ವಾಹನ ನೋಂದಣಿ ಮಾಡಿಸಿವ ಹೊಸ ಯೋಜನೆಯೊಂದನ್ನು ಪರಿಚಯಿಸಿದೆ.

ಹೊಸ ಕಾರುಗಳ ಉಚಿತ ನೋಂದಣಿಗಾಗಿ ಆರ್‌ಟಿಓದಿಂದ ಭರ್ಜರಿ ಆಫರ್

ಕೇಂದ್ರ ಸರ್ಕಾರವು ಸದ್ಯ ದ್ವಿಚಕ್ರ ವಾಹನಗಳ ನೋದಂಣಿ ಶುಲ್ಕವನ್ನು ರೂ.50 ರಿಂದ ರೂ.1000ಕ್ಕೆ. ತ್ರಿ ಚಕ್ರ ವಾಹನಗಳ ನೋಂದಣಿ ಶುಲ್ಕವನ್ನು ರೂ. 300ರಿಂದ ರೂ.4,700ಕ್ಕೆ, ವಾಣಿಜ್ಯ ಮತ್ತು ವ್ಯಯಕ್ತಿಕ ಕಾರಗಳ ನೋಂದಣಿ ಶುಲ್ಕವನ್ನು ರೂ.1,500ರಿಂದ ರೂ. 20,000ಕ್ಕೆ ಹೆಚ್ಚಳ ಮಾಡಲಾಗಿದ್ದು, ಎಲೆಕ್ಟ್ರಕ್ ಕಾರುಗಳನ್ನು ಮತ್ತು 15 ವರ್ಷ ಮೇಲ್ಪಟ್ಟ ವಾಹನಗಳನ್ನು ಸ್ವಯಂ ಆಗಿ ಸ್ಕ್ರ್ಯಾಪ್‌ಗೊಳಿಸಿದ್ದಲ್ಲಿ ಹೊಸ ಕಾರಿನ ನೋಂದಣಿ ಶುಲ್ಕುದಲ್ಲಿ ಸಂಪೂರ್ಣ ವಿನಾಯ್ತಿ ಸಿಗಲಿದೆ.

ಹೊಸ ಕಾರುಗಳ ಉಚಿತ ನೋಂದಣಿಗಾಗಿ ಆರ್‌ಟಿಓದಿಂದ ಭರ್ಜರಿ ಆಫರ್

ಹೌದು, ಕೇಂದ್ರ ಸಾರಿಗೆ ಇಲಾಖೆಯು ಹೆಚ್ಚು ಮಾಲಿನ್ಯ ಉತ್ಪತ್ತಿ ಮಾಡುವ 15 ವರ್ಷ ಮೇಲ್ಪಟ್ಟ ವಾಹನಗಳನ್ನು ತಗ್ಗಿಸಲು ಇಂತದೊಂದು ಹೊಸ ನೀತಿ ಜಾರಿಗೆ ತಂದಿದ್ದು, ಹೊಸ ವಾಹನ ನೋಂದಣಿ ಮೇಲೆ ಜಾರಿಗೆ ತರಲಾಗಿರುವ ದುಬಾರಿ ಬೆಲೆಯ ಶುಲ್ಕದ ಹೊರೆಯನ್ನು ತಗ್ಗಿಸಲ ಹೊಸ ಅಸ್ತ್ರ ಪ್ರಯೋಗಿಸುತ್ತಿದೆ.

ಹೊಸ ಕಾರುಗಳ ಉಚಿತ ನೋಂದಣಿಗಾಗಿ ಆರ್‌ಟಿಓದಿಂದ ಭರ್ಜರಿ ಆಫರ್

ಇನ್ನು ನಗರ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ವಾಹನಗಳ ಸಂಖ್ಯೆಯಿಂದಾಗಿ ಮಾಲಿನ್ಯ ಪ್ರಮಾಣವು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಇದಕ್ಕೆ ಪರಿಣಾಮಕಾರಿಯಾಗಿ ತಡೆ ಹಾಕಲು ಮುಂದಾಗಿರುವ ಕೇಂದ್ರ ಸರ್ಕಾರವು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದೆ. ಹೀಗಾಗಿ ಸದ್ಯದಲ್ಲೇ ಸ್ವಯಂಚಾಲಿತ ಸ್ಕ್ರ್ಯಾರ್ಪಿಂಗ್ ಪ್ರಕ್ರಿಯೆಗೆ ಚಾಲನೆ ನೀಡಲಾಗುತ್ತಿದ್ದು, ಹೊಸ ನಿಯಮ ಜಾರಿಗೆ ಬಂದಲ್ಲಿ 15 ಮೇಲ್ಪಟ್ಟ ವಾಹನಗಳು ಗಣನೀಯ ಪ್ರಮಾಣದಲ್ಲಿ ತಗ್ಗುವುದರಲ್ಲಿ ಯಾವುದೇ ಅನುಮಾನವೇ ಇಲ್ಲ.

ಹೊಸ ಕಾರುಗಳ ಉಚಿತ ನೋಂದಣಿಗಾಗಿ ಆರ್‌ಟಿಓದಿಂದ ಭರ್ಜರಿ ಆಫರ್

ಈ ಬಗ್ಗೆ ಮಾತನಾಡಿರುವ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿಯವರು, ಹೊಸ ಯೋಜನೆಯು ಮಾಲಿನ್ಯ ತಡೆಗೆ ಸೂಕ್ತ ಮಾರ್ಗವಾಗಿದ್ದು, ಹಳೆಯ ಕಾರುಗಳನ್ನು ಸ್ಕ್ರ್ಯಾಪ್ ಮಾಡುವುದರಿಂದ ಆಟೋಮೊಬೈಲ್ ಉತ್ಪಾದನಾ ವೆಚ್ಚ ಕೂಡಾ ತಗ್ಗಲಿದೆ ಎಂದಿದ್ದಾರೆ. ಜೊತೆಗೆ ಸ್ಕ್ರ್ಯಾಪ್ ಪ್ರಕ್ರಿಯೆಯಿಂದ ಬಂದ ಬಿಡಿಭಾಗಗಳನ್ನು ಹೊಸ ಕಾರುಗಳ ತಯಾರಿಕೆಗೆ ಮರುಬಳಕೆ ಮಾಡಿಕೊಳ್ಳಬಹುದಾಗಿದ್ದು, ಈ ಮೂಲಕ ಕಾರುಗಳ ಬೆಲೆಯನ್ನು ಕೂಡಾ ತಗ್ಗಿಸಬಹುದೆಂದು ಎಂಬ ಸಲಹೆ ನೀಡಿದ್ದಾರೆ.

ಹೊಸ ಕಾರುಗಳ ಉಚಿತ ನೋಂದಣಿಗಾಗಿ ಆರ್‌ಟಿಓದಿಂದ ಭರ್ಜರಿ ಆಫರ್

ಇದಲ್ಲದೇ ಹೊಸ ಯೋಜನೆಯು ಯಶಸ್ವಿಯಾದಲ್ಲಿ ಪರೋಕ್ಷವಾಗಿ ಸರ್ಕಾರಕ್ಕೆ ರೂ. 10 ಸಾವಿರ ಕೋಟಿ ಆದಾಯ ಕೂಡಾ ಹರಿದುಬರಲಿದ್ದು, ಕಾರುಗಳ ಉತ್ಪಾದನಾ ವೆಚ್ಚ ತಗ್ಗುವುದಲ್ಲದೇ ಕಾರಿನ ಬೆಲೆಗಳು ಕೂಡಾ ಕಡಿತವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂಬುವುದು ಸಚಿವ ನಿತಿನ್ ಗಡ್ಕರಿ ಅಭಿಪ್ರಾಯವಾಗಿದೆ.

ಹೊಸ ಕಾರುಗಳ ಉಚಿತ ನೋಂದಣಿಗಾಗಿ ಆರ್‌ಟಿಓದಿಂದ ಭರ್ಜರಿ ಆಫರ್

ಹೋಂಡಾ ಸಿಟಿ ಮತ್ತು ಮಾರುತಿ ಸುಜುಕಿ ಸಿಯಾಜ್‌ಗೆ ಟಕ್ಕರ್ ನೀಡುತ್ತಿರುವ ಟೊಯೊಟಾ ಯಾರಿಸ್ ಖರೀದಿಗೆ ಈಗಲೇ ಟೆಸ್ಟ್ ಡ್ರೈವ್ ಮಾಡಿ..!

ಹೊಸ ನೀತಿ ಜಾರಿಯಾದಲ್ಲಿ ಸ್ಕ್ರ್ಯಾರ್ಪಿಂಗ್ ವಿಭಾಗಗಳಲ್ಲಿ ಕೂಡಾ ವಿಫುಲ ಉದ್ಯೋಗ ಅವಕಾಶಗಳು ಸೃಷ್ಠಿಯಾಗಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿರುವ ಮಾರುತಿ ಸುಜುಕಿ ಬಲೆನೊ(ಸೆಡಾನ್), ಮಾರುತಿ 800, ಹೋಂಡಾ ಸಿಟಿ ಟೈಪ್ 2 ವಿಟೆಕ್, ಫಿಯೆಟ್ ಫಾಲಿಯೋ ಎಸ್10 ಸೇರಿದಂತೆ ಹಲವಾರು ಮಾದರಿಯ ಕಾರುಗಳು ಸ್ಕ್ರ್ಯಾಪ್‌ಗೊಳ್ಳಲಿವೆ. ಇನ್ನು ಜಾರಿಗೆ ತರಲಾಗುತ್ತಿರುವ ವ್ಯಾಲೆಂಟರಿ ವೆಹಿಕಲ್ ಫ್ಲಿಟ್ ಮಾಡರ್ನೈಷನ್ ಪ್ರೋಗ್ರಾಂ (ವಿ-ವಿಎಂಪಿ) ಅಡಿ ದೇಶಾದ್ಯಂತ ಬರೋಬ್ಬರಿ 2.80 ಕೋಟಿ ಹಳೆಯ ಕಾರುಗಳು (2005ರ ಮಾರ್ಚ್ 31 ಮೊದಲು ಖರೀದಿ ಮಾಡಿದ) ಸ್ಕ್ರ್ಯಾರ್ಪಿಂಗ್‌ಗೊಳ್ಳಲಿವೆ.

ಹೊಸ ಕಾರುಗಳ ಉಚಿತ ನೋಂದಣಿಗಾಗಿ ಆರ್‌ಟಿಓದಿಂದ ಭರ್ಜರಿ ಆಫರ್

ಇನ್ನು ಕೆಲವು ಮಾಹಿತಿಗಳ ಪ್ರಕಾರ, ಸ್ವಯಂ ಚಾಲಿತ ಸ್ಕ್ರ್ಯಾಪಿಂಗ್ ನೀತಿ ಅನುಷ್ಠಾನಕ್ಕೆ ಬರಲು ಸಾಧ್ಯವಾಗದೇ ಇದ್ದಲ್ಲಿ 15 ವರ್ಷ ಮೇಲ್ಪಟ್ಟ ವಾಹನಗಳ ಫಿಟ್‌ನೆಸ್ ಸರ್ಟಿಫಿಕೇಟ್ ಶುಲ್ಕದಲ್ಲಿ ಮತ್ತಷ್ಟು ದುಬಾರಿ ಮಾಡುವ ಪ್ರಸ್ತಾಪವನ್ನು ಸಹ ಸೂಚಿಸಲಾಗಿದೆ ಎನ್ನಲಾಗುತ್ತಿದೆ.

ಹೊಸ ಕಾರುಗಳ ಉಚಿತ ನೋಂದಣಿಗಾಗಿ ಆರ್‌ಟಿಓದಿಂದ ಭರ್ಜರಿ ಆಫರ್

ಒಂದು ವೇಳೆ ಸ್ಕ್ರ್ಯಾರ್ಪಿಂಗ್ ಪ್ರಕ್ರಿಯು ಜಾರಿಗೆ ಬರದೇ ಇದ್ದರೂ ಸಹ ಫಿಟ್‌ನೆಸ್ ಸರ್ಟಿಫಿಕೇಟ್ ಶುಲ್ಕ ದುಬಾರಿಯಾಗುವುದು ಖಾಯಂ ಎನ್ನಲಾಗುತ್ತಿದ್ದು, ಪ್ರಸ್ತುತ ಜಾರಿಗೆಯಲ್ಲಿರುವ ಫಿಟ್‌ನೆಸ್ ಸರ್ಟಿಫಿಕೇಟ್ ಶುಲ್ಕವನ್ನು ರೂ.1,200 ರಿಂದ ರೂ.2 ಸಾವಿರಕ್ಕೆ ಹೆಚ್ಚಳ ಮಾಡುವ ಸುಳಿವು ನೀಡಲಾಗಿದೆ.

ಹೊಸ ಕಾರುಗಳ ಉಚಿತ ನೋಂದಣಿಗಾಗಿ ಆರ್‌ಟಿಓದಿಂದ ಭರ್ಜರಿ ಆಫರ್

ಇಲ್ಲದೇ ಫಿಟ್‌ನೆಸ್ ಸರ್ಟಿಫಿಕೇಟ್ ಕಾಲಾವಧಿಯನ್ನು 1 ವರ್ಷದಿಂದ 6 ತಿಂಗಳಿಗೆ ಇಳಿಕೆ ಮಾಡಲಾಗುತ್ತಿದ್ದು, 15 ವರ್ಷ ಮೇಲ್ಪಟ್ಟ ವಾಹನಗಳನ್ನು ಹೊಂದಿರುವ ಮಾಲೀಕರು ವರ್ಷಕ್ಕೆ ಎರಡು ಬಾರಿ ರೂ. 2 ಸಾವಿರದಂತೆ ಹಣ ಪಾವತಿಸಿ ಫಿಟ್‌ನೆಸ್ ಸರ್ಟಿಫಿಕೇಟ್ ಪಡೆದುಕೊಳ್ಳಬೇಕಾಗುತ್ತದೆ.

ಹೊಸ ಕಾರುಗಳ ಉಚಿತ ನೋಂದಣಿಗಾಗಿ ಆರ್‌ಟಿಓದಿಂದ ಭರ್ಜರಿ ಆಫರ್

ಇದು ಹಳೆಯ ಕಾರುಗಳ ನಿರ್ವಹಣಾ ವೆಚ್ಚವನ್ನು ಹೆಚ್ಚಿಸಲಿದ್ದು, ಒಂದು ವೇಳೆ ದುಬಾರಿ ಹಣಪಾವತಿ ವೆಚ್ಚ ನಿರ್ವಹಣೆ ಮಾಡಬೇಕು ಇಲ್ಲವೇ ಹಳೆಯ ವಾಹನಗಳನ್ನ ನಿರ್ವಹಣೆ ಮಾಡಲು ಸಾಧ್ಯವಾಗದೇ ಸ್ವತಃ ವಾಹನ ಮಾಲೀಕರೇ ಗುಜುರಿ ಹಾಕಬೇಕಾದ ಪರಿಸ್ಥಿತಿ ಬಂದೊದಗುತ್ತದೆ ಎಂದು ಹೇಳಬಹುದು.

More from DriveSpark

Article Published On: Monday, July 29, 2019, 17:36 [IST]
English summary
New Car Registration For Free at RTO. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+