ಹೊಸ ಎಂಜಿನ್‍ನೊಂದಿಗೆ ಬರಲಿದೆ 2020ರ ಹ್ಯುಂಡೈ ಎಲೈಟ್ ಐ20 ಕಾರು

ಹ್ಯುಂಡೈ ಇಂಡಿಯ ಸಂಸ್ಥೆಯು ತಮ್ಮ ಎಲೈಟ್ ಐ20 ನೆಕ್ಸ್ಟ್ ಜನರೇಷನ್ ಕಾರನ್ನು ಭಾರತದಲ್ಲಿ ಈಗಾಗಲೇ ಟೆಸ್ಟ್ ನಡೆಸಲು ಪ್ರಾರಂಭಿಸಿದ್ದು, ಐ20 ಎರಡನೇ ಜನರೇಷನ್ ಸಾಲಿನಲ್ಲಿ ಇರುವುದಾದರೂ ಮೂರನೆ ಜನರೇಷನ್‍‍ಗೆ ಮಾದರಿ ಕಾರ್ ಆಗಿದೆ. ಮುಂದೆ 2020ರಲ್ಲಿ ಭಾರತದಲ್ಲಿ ಈ ಕಾರನ್ನು ಬಿಡುಗಡೆ ಮಾಡಲಿದ್ದಾರೆ.

ಹೊಸ ಎಂಜಿನ್‍ನೊಂದಿಗೆ ಬರಲಿದೆ 2020ರ ಹ್ಯುಂಡೈ ಎಲೈಟ್ ಐ20 ಕಾರು

ಇತ್ತಿಚೆಗೆ ಹ್ಯುಂಡೈ ನಿಯೋಸ್ ಕಾರನ್ನು ಬಿಡುಗಡೆ ಮಾಡುವ ಸಂದರ್ಭದಲ್ಲಿ ಕೆಲವು ಮಾಹಿತಿಗಳನ್ನು ಸಂಸ್ಥೆ ಸುಳಿವನ್ನು ನೀಡಿದೆ. ಅದರಂತೆ ಮುಂದಿನ ದಿನಗಳಲ್ಲಿ ಎಲ್ಲಾ ಹೊಸ ಹ್ಯುಂಡೈ ಎಲೈಟ್ ಐ20 ಕಾರಿನಲ್ಲಿ 1 ಲೀಟರ್‍-3 ಸಿಲಿಂಡರ್ ಟರ್ಬೋಜಾರ್ಜ್‍‍ಡ್ ಪೆಟ್ರೋಲ್ ಇಂಜಿನ್ ಅನ್ನು ಅಳವಡಿಸಲಾಗಿದೆ.

ಹೊಸ ಎಂಜಿನ್‍ನೊಂದಿಗೆ ಬರಲಿದೆ 2020ರ ಹ್ಯುಂಡೈ ಎಲೈಟ್ ಐ20 ಕಾರು

ಹ್ಯುಂಡೈ ಎಲೈಟ್ ಐ20 ಕಾರಿನಲ್ಲಿ ಟ್ರರ್ಬೋ ಪೆಟ್ರೋಲ್ ಇಂಜಿನ್ ಅನ್ನು ಅಳವಡಿಸಿದ್ದರೆ ಇದು ಭಾರತದಲ್ಲಿ ಮೊದಲ ಟರ್ಬೋ ಪೆಟ್ರೋಲ್ ಇಂಜಿನ್ ಕಾರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಈ ಇಂಜಿನ್ 118 ಬಿ‍ಎಚ್‍‍ಪಿ ಮತ್ತು 172 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಹೊಸ ಎಂಜಿನ್‍ನೊಂದಿಗೆ ಬರಲಿದೆ 2020ರ ಹ್ಯುಂಡೈ ಎಲೈಟ್ ಐ20 ಕಾರು

ಹುಂಡೈ ಐ20 ಯಲ್ಲಿ ಟರ್ಬೋ ಇಂಜಿನ್‍‍ನಲ್ಲಿ ಟರ್ಬೋ ಇಂಜಿನ್ ಅನ್ನು ಅಳವಡಿಸಿಕೊಂಡಾಗ ಮುಂದಿನ 2020ರಲ್ಲಿ ಮಾರುತಿ ಬಲೆನೊ ಆರ್‍ಎಸ್ ಕಾರಿಗೆ ನೇರವಾಗಿ ಪೈಪೋಟಿಯನ್ನು ನೀಡುತ್ತದೆ. ಯಾಕೆ ಅಂದ್ರೆ ಮಾರುತಿ ಬಲೆನೊ ಆರ್‍ಎಸ್ ಕೂಡ ಒಂದು ಲೀಟರ್ ಸಿಲಿಂಡರ್ ಟಾರ್ಬೋ ಪೆಟ್ರೋಲ್ ಇಂಜಿನ್‍‍ನಲ್ಲಿ 101 ಬಿ‍ಎಚ್‍‍ಪಿ ಮತ್ತು 150 ಎನ್‍ಎಮ್ ಟಾರ್ಕ್ ಉತ್ಪಾದಿಸುತ್ತದೆ.

ಹೊಸ ಎಂಜಿನ್‍ನೊಂದಿಗೆ ಬರಲಿದೆ 2020ರ ಹ್ಯುಂಡೈ ಎಲೈಟ್ ಐ20 ಕಾರು

ಹೊಸ ಹ್ಯುಂಡೈನಲ್ಲಿ 6-ಸ್ಪೀಡ್ ಮ್ಯಾನುವಲ್ ಮತ್ತು 7-ಸ್ಪೀಡ್ ಟ್ವಿನ್ ಕ್ಲಚ್ ಆಟೋಮ್ಯಾಟೀಕ್ ಗೇರ್‍‍ಬಾಕ್ಸ್ ಅನ್ನು ಹೊಂದಿದೆ. ಇದೆ ಕಾರನ್ನು ಅಂತರಾಷ್ಟ್ರೀಯ ಮಾರುಕಟ್ಟೆಗೆ ಬಿಡುಗಡೆಗೊಳಿಸಿದ್ದು, ದೇಶೀಯ ಮಾರುಕಟ್ಟೆಗೂ ಅದನ್ನೇ ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ. ಇದರೊಂದಿಗೆ 1.5 ಲೀಟರ್ ಟಾರ್ಬೋ ಡಿಸೇಲ್ ಇಂಜಿನ್ ಕಾರನ್ನು ಬಿಡುಗಡೆ ಮಾಡುವ ಯೋಜನೆ ಇದ್ದು, ಈಗಾಗಲೇ ಬಿಡುಗಡೆಯಾಗಿರುವ ಕಿಯಾ ಸೆಲ್ಟೋಸ್ ಎಸ್‍‍ಯುವಿ ಕಾರಿನಲ್ಲಿ ಮೊದಲ ಬಾರಿಗೆ ಇದೆ ಇಂಜಿನ್ ಅನ್ನು ಬಳಸಲಾಗಿದೆ. ಆದ್ರೆ ಇದು ಬಿ‍ಎಸ್6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿದೆ.

ಹೊಸ ಎಂಜಿನ್‍ನೊಂದಿಗೆ ಬರಲಿದೆ 2020ರ ಹ್ಯುಂಡೈ ಎಲೈಟ್ ಐ20 ಕಾರು

ಹ್ಯುಂಡೈ ಕಾರಿನಲ್ಲಿ ಸಧ್ಯ ಇರುವ 1.4 ಲೀಟರ್ ಮತ್ತು 1.6 ಲೀಟರ್ ಟರ್ಬೋ ಡಿಸೇಲ್ ಇಂಜಿನ್ ಅನ್ನು ಹೊಂದಿದ್ದು, ಅದನ್ನು ಬದಲಾಯಿಸುವ ಸಾಧ್ಯತೆಗಳಿವೆ. ಹ್ಯುಂಡೈ ಸಂಸ್ಥೆಯ ವೆನ್ಯೂ ಕಾರಿನಲ್ಲಿಯೂ ಕೂಡ ಮುಂದಿನ ವರ್ಷ 1.5 ಟಾರ್ಬೋ ಇಂಜಿನ್ ಅನ್ನು ಬಳಸಲಿದ್ದು, ಇದರೊಂದಿಗೆ ಐ20 ಮತ್ತು ವೆನ್ಯೂ ಎರಡರಲ್ಲಿಯೂ 6-ಸ್ಪೀಡ್ ಗೇರ್‍‍ಬಾಕ್ಸ್ ಸೌಲಭ್ಯವನ್ನು ಒದಗಿಸಲಿದೆ.

MOST READ: ಸೀಟ್ ಬೆಲ್ಟ್ ಧರಿಸದ ಪೊಲೀಸರನ್ನೇ ಅಡ್ಡಗಟ್ಟಿದ ಭೂಪ..!

ಹೊಸ ಎಂಜಿನ್‍ನೊಂದಿಗೆ ಬರಲಿದೆ 2020ರ ಹ್ಯುಂಡೈ ಎಲೈಟ್ ಐ20 ಕಾರು

ಹೊಸ ಐ20 ಕಾರು ಒಳಾಂಗಣ ಹಾಗೂ ಹೊರ ಭಾಗದಲ್ಲಿಯೂ ಡಿಸೈನ್ ಬದಲಾಯಿಸಲಿದ್ದು, ಇದರ ಮೂಲಕ ಕಾರಿನ ಲುಕ್ ಮತಷ್ಟು ಹೆಚ್ಚಿಸುತ್ತದೆ. ಈ ಕಾರು ಹ್ಯಾಚ್‍‍ಬ್ಯಾಕ್ ವಿಭಾಗಕ್ಕೆ ಅನುಗುಣವಾಗಿ ವಿನ್ಯಾಸದಲ್ಲಿ ಸ್ವಲ್ಪ ದೊಡ್ಡದಾಗಬಹುದು. ಹ್ಯುಂಡೈ ಸಂಸ್ಥೆಯೂ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೈ-ಪರ್ಫಾಮೆನ್ಸ್ ಕಾರುಗಳನ್ನು ಬಿಡುಗಡೆ ಮಾಡಿ ಯಶಸ್ಸನ್ನುಗಳಸಿದ್ದರು, ಆದ್ರೆ ಭಾರತದಲ್ಲಿ ಹುಂಡೈ ಯಾವುದೇ ಎನ್-ಬ್ಯಾಡ್ಜ್ ಹೈ ಫಾರ್ಪುಮೆನ್ಸ್ ಕಾರುಗಳನ್ನು ಬಿಡುಗಡೆಯನ್ನು ಮಾಡಿರಲಿಲ್ಲ.

MOST READ: ತಡೆದು ನಿಲ್ಲಿಸಿದ್ದು ಒಂದು ಕಾರಣಕ್ಕೆ, ದಂಡ ವಿಧಿಸಿದ್ದು ಇನ್ನೊಂದಕ್ಕೆ..!

ಹೊಸ ಎಂಜಿನ್‍ನೊಂದಿಗೆ ಬರಲಿದೆ 2020ರ ಹ್ಯುಂಡೈ ಎಲೈಟ್ ಐ20 ಕಾರು

ಹ್ಯುಂಡೈ ಸಂಸ್ಥೆಯು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿ ಹೆಚ್ಚು ಮಾರಟವು ಆಗಿದ್ದರು, ಭಾರತದಲ್ಲಿ ಹೈ ಫಾರ್ಪ್‍‍ಮೆನ್ಸ್ ಕಾರು ಯಶಸ್ಸುಗಳಿಸುತ್ತಾ ಎಂಬುವುದು ಕಾದು ನೋಡಬೇಕು. ಮುಂದಿನ ವರ್ಷ ಈ ಕಾರು ಬಿಡುಗಡೆಯಾಗಲಿದ್ದು, ಹೈ ಫಾರ್ಪ್‍‍‍ಮೆನ್ಸ್ ಕಾರು ಪ್ರಿಯರಿಗೆ ಇದು ಸಿಹಿ ಸುದ್ದಿಯಾಗಿದೆ.

MOST READ: ಭಾರತದಲ್ಲಿ ಐಕಾನಿಕ್ ಯಜ್ಡಿ ಬೈಕ್‌ಗಳ ಮರುಬಿಡುಗಡೆ ಪಕ್ಕಾ

ಹೊಸ ಎಂಜಿನ್‍ನೊಂದಿಗೆ ಬರಲಿದೆ 2020ರ ಹ್ಯುಂಡೈ ಎಲೈಟ್ ಐ20 ಕಾರು

ಹ್ಯುಂಡೈ ಎಲೈಟ್ ಐ 20 ಕಾರು 2020 ರಲ್ಲಿ ನೇರವಾಗಿ ಮಾರುತಿ ಬಾಲೇನು ಕಾರಿಗೆ ಪೈಪೋಟಿ ನೀಡಲಿದ್ದು, ಎರಡು ಸಂಸ್ಥೆಗಳು ದೇಶಿಯ ಮಾರುಕಟ್ಟೆಯಲ್ಲಿ ತಮ್ಮದೆ ಛಾಪನ್ನು ಮೂಡಿಸಿ ಹೆಚ್ಚಿನ ಗ್ರಾಹಕರನ್ನು ಹೊಂದಿದೆ. ದೇಶಿಯ ಮಾರುಕಟ್ಟೆಯಲ್ಲಿ ಕಾರು ಪ್ರಿಯರಿಗೆ ಹೆಚ್ಚಿನ ಆಯ್ಕೆ ದೊರಯಲಿದೆ.

Most Read Articles

Kannada
English summary
Next-generation, 2020 Hyundai Elite i20 to go turbo petrol: Maruti Baleno RS in its sights? - Read In Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X