ಇನ್ಮುಂದೆ ಪೆಟ್ರೋಲ್ ಎಂಜಿನ್‍‍ನಲ್ಲಿ ಮಾತ್ರ ಮಾರಾಟವಾಗುವ ಕಾರುಗಳಿವು

ವಾಹನಗಳಿಂದ ಆಗುವ ವಾಯುಮಾಲಿನ್ಯ ತಡೆಗಟ್ಟಲು ಬಿಎಸ್-6 ಮಾಲಿನ್ಯ ನಿಯಮವು ಮುಂದಿನ ವರ್ಷ ಏಪ್ರಿಲ್ 1 ರಿಂದ ಜಾರಿಯಾಗಲಿದ್ದು, ಬಿ‍ಎಸ್-4 ಎಂಜಿನ್ ಇ‍ತಿಹಾಸದ ಪುಟ ಸೇರಲಿದೆ. ಸರ್ಕಾರದ ಹೊಸ ಮಾಲಿನ್ಯ ನಿಯಮಕ್ಕೆ ಮುಂದಿನ ವರ್ಷ ಏಪ್ರೀಲ್‍‍ವರೆಗೂ ಕಾಲವಕಾಶವನ್ನು ನೀಡಿದೆ. ಈ ಗಡುವಿನಲ್ಲಿ ಕೆಲವು ಕಾರು ಉತ್ಪಾದಕರು ತಮ್ಮ ಕಾರ್ಯತಂತ್ರದಲ್ಲಿ ಕೆಲವು ನಿರ್ಣಾಯಕ ಬದಲಾವಣೆಗಳನ್ನು ಮಾಡಿದ್ದಾರೆ.

ಇನ್ಮುಂದೆ ಪೆಟ್ರೋಲ್ ಎಂಜಿನ್‍‍ನಲ್ಲಿ ಮಾತ್ರ ಮಾರಾಟವಾಗುವ ಕಾರುಗಳಿವು

ಪ್ರತಿಷ್ಠಿತ ಕಂಪನಿಗಳು ಡೀಸೆಲ್ ಎಂಜಿನ್ ಶ್ರೇಣೆಯನ್ನು ಸಂಪೂರ್ಣವಾಗಿ ಕೈ‍ಬಿಡುವ ನಿರ್ಧಾರ ಮಾಡಿ ದೊಡ್ದ ಬದಲಾವಣೆ ಮಾಡಿದ್ದಾರೆ. ಜನಪ್ರಿಯತೆಯ ಪೆಟ್ರೋಲ್ ಚಾಲಿತ ಮಾದರಿಗಳು ಈಗ ಬಹಳ ಸಮಯದಿಂದ ಹೆಚ್ಚಾಗುತ್ತಿದ್ದರೂ, ವಿಶೇಷವಾಗಿ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಇಂಧನ ಬೆಲೆಗಳ ನಡುವಿನ ವ್ಯತ್ಸಾಸದೊಂದಿಗೆ , ಡೀಸೆಲ್ ಎಂಜಿನ್ ಚಾಲಿತ ವಾಹನಗಳ ಹೆಚ್ಚಿನ ಭಾಗವು ಹಾಗೆ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದಾರೆ.

ಇನ್ಮುಂದೆ ಪೆಟ್ರೋಲ್ ಎಂಜಿನ್‍‍ನಲ್ಲಿ ಮಾತ್ರ ಮಾರಾಟವಾಗುವ ಕಾರುಗಳಿವು

ಬಿಎಸ್-6 ನಿಯಮಕ್ಕೆ ಅನುಗುಣವಾಗಿ ಭಾರತದ ಅತಿದೊಡ್ಡ ಕಾರು ಉತ್ಪಾದನೆ ಕಂಪನಿಯಾದ ಮಾರುತಿ ಸುಜುಕಿ ಭಾರತದಲ್ಲಿ ಡೀಸೆಲ್ ಎಂಜಿನ್ ಚಾಲಿತ ವಾಹನ ಮಾದರಿಗಳನ್ನು ನಿಲ್ಲಿಸುವುದಾಗಿ ಘೋಷಿಸಿದರು. ಭಾರತದಲ್ಲಿ ಹೊಸ ಮಾಲಿನ್ಯ ನಿಯಾಮವಳಿಗೆ ನಂತರದಲ್ಲಿ ಡೀಸೆಲ್ ಎಂಜಿನ್ ನೀಡುವುದರಿಂದ ವಾಹನಗಳ ಬೆಲೆ ತೀವ್ರವಾಗಿ ಹೆಚ್ಚಾಗುತ್ತದೆ ಎಂದು ಮಾರುತಿ ಸುಜುಕಿಯ ಮುಖ್ಯಸ್ಥ ಆರ್.ಸಿ ಭಾರ್ಗವ ಹೇಳಿದ್ದಾರೆ. ಇದರ ಬದಲಾಗಿ ಎಲೆಕ್ಟ್ರಿಕ್ ವಾಹನಗಳು ಮತ್ತು ಸಿಎನ್‍ಜಿ ನಡೆಸುವ ವಾಹನಗಳಂತಹ ಪರ್ಯಾಯ ಇಂಧನಗಳನ್ನು ತರುತ್ತಾರೆ.

ಇನ್ಮುಂದೆ ಪೆಟ್ರೋಲ್ ಎಂಜಿನ್‍‍ನಲ್ಲಿ ಮಾತ್ರ ಮಾರಾಟವಾಗುವ ಕಾರುಗಳಿವು

ಮಾರುತಿ ಸುಜುಕಿ ಈ ವರ್ಷದ ಆರಂಭದಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಹೊಸದಾಗಿ ಅಭಿವೃದ್ದಿಪಡಿಸಿದ 1.5 ಲೀಟರ್ ಡೀಸೆಲ್ ಎಂಜಿನ್ ಅನ್ನು ಬಿಡುಗಡೆ ಮಾಡಿರುವುದು ಗಮನಿಸಬೇಕಾದ ಅಂಶ. ಎಲ್ಲ ಹೊಸ ಎಂಜಿನ್ ಅಭಿವೃದ್ದಿಪಡಿಸಲು ನೂರು ಕೋಟಿ ಹೊಡಿಕೆ ಮಾಡಿದ್ದಾರೆ. ಅದೇನೇ ಇದ್ದರೂ, ಭವಿಷ್ಯದಲ್ಲಿ ಹೆಚ್ಚಿನ ಬೇಡಿಕೆಯಿದ್ದರೆ ಡೀಸೆಲ್ ಎಂಜಿನ್ ಚಾಲಿತ ವಾಹನಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಮತ್ತೆ ಪರಿಚಯಿಸಬಹುದು ಎಂದು ಮಾರುತಿ ಸುಜುಕಿ ಹೇಳಿದ್ದಾರೆ. ಮಾರುತಿ ಪ್ರಸ್ತುತ ಏಳು ಬಿಎಸ್-6 ನಿಯಮಗಳಿಗೆ ತಕ್ಕಂತೆ ಪೆಟ್ರೋಲ್ ಮಾದರಿಗಳನ್ನು ದೇಶಿಯ ಮಾರುಕಟ್ಟೆಗೆ ನೀಡುತ್ತಿದೆ.

ಇನ್ಮುಂದೆ ಪೆಟ್ರೋಲ್ ಎಂಜಿನ್‍‍ನಲ್ಲಿ ಮಾತ್ರ ಮಾರಾಟವಾಗುವ ಕಾರುಗಳಿವು

ಹೊಸ ಮಾಲಿನ್ಯ ನಿಯಮದ ಅನುಷ್ಠಾನಗೊಂಡ ನಂತರ ಡೀಸೆಲ್ ಎಂಜಿನ್ ಚಾಲಿತ ವಾಹನಗಳನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುವುದಿಲ್ಲ ಎಂದು ಫ್ರೆಂಚ್ ಮೂಲದ ರೆನಾಲ್ಟ್ ಕಂಪನಿಯು ಅಧಿಕೃತವಾಗಿ ಹೇಳಿದ್ದಾರೆ. ಇಟಿ ಆಟೋ ಜಾಲತಾಣದ ಪ್ರಕಾರ ರೆನಾಲ್ಟ್ ಡೀಸೆಲ್ ಎಂಜಿನ್ ಚಾಲಿತ ಕಾರುಗಳನ್ನು ಮಾರಾಟ ಮಾಡುವುದಿಲ್ಲ ಏಕೆಂದರೆ ಹೊಸ ಬಿಎಸ್-6 ನಿಯಮದಿಂದ ಡೀಸೆಲ್ ಎಂಜಿನ್ ಚಾಲಿತ ಕಾರುಗಳ ಬೆಲೆ ಲಕ್ಷಗಳಷ್ಟು ಹೆಚ್ಚಾಗುತ್ತದೆ, ಇದು ಸಾಮಾನ್ಯ ಗ್ರಾಹಕರಿಂದ ನಿಭಾಯಿಸಲಾಗದು. ಇದೇ ಕಾರಣಗಳಿಂದ ಬೇಡಿಕೆ ಕಡಿಮೆ ಇರುವ ಕಾರಣದಿಂದ ಡೀಸೆಲ್ ಎಂಜಿನ್ ಚಾಲಿತ ವಾಹನಗಳನ್ನು ನಿಲ್ಲಿಸಲಾಗುವುದು.

ಇನ್ಮುಂದೆ ಪೆಟ್ರೋಲ್ ಎಂಜಿನ್‍‍ನಲ್ಲಿ ಮಾತ್ರ ಮಾರಾಟವಾಗುವ ಕಾರುಗಳಿವು

ಭಾರತದ ರೆನಾಲ್ಟ್ ಪಾಲುದಾರ ನಿಸ್ಸಾನ್ ಮತ್ತು ಈ ಹಿಂದೆ ಪರಸ್ಪರ ರಿಬ್ಯಾಡ್ಜ್ ಮಾಡಿದ ವಾಹನಗಳನ್ನು ಬಿಡುಗಡೆ ಮಾಡಿದ ಬ್ತ್ಯಾಂಡ್ ಸಹ ಭವಿಷ್ಯದಲ್ಲಿ ಡೀಸೆಲ್ ಎಂಜಿನ್‍ ವಾಹನಗಳ ಉತ್ಪಾದನೆ ಮತ್ತು ಬಿಡುಗಡೆಯಾನ್ನು ನಿಲ್ಲಿಸುತ್ತದೆ. ನಿಸ್ಸಾನ್ ಪ್ರಸ್ತುತ ಡೀಸೆಲ್ ಎಂಜಿನ್ ವಾಹನಗಳಾದ ಮೈಕ್ರಾ, ಸನ್ನಿ, ಟೆರಾನೊ ಮತ್ತು ಕಿಕ್ಸ್ ಸೇರಿದಂತೆ ಎಲ್ಲಾ ಮಾದರಿಗಳನ್ನು ಕೈಗೆಟುಕುವ ದರದಲ್ಲಿ ನೀಡುತ್ತದೆ. ಟೀಮ್-ಬಿಎಚ್‍ಪಿ ಪ್ರಕಾರ, ನಿಸ್ಸಾನ್ ತನ್ನ ಡೀಸೆಲ್ ಚಾಲಿತ ಉತ್ಪನ್ನಗಳನ್ನು ಮುಂದಿನ ದಿನಗಳಲ್ಲಿ ಸ್ಥಗಿತಗೊಳಿಸಲಿದೆ.

ಇನ್ಮುಂದೆ ಪೆಟ್ರೋಲ್ ಎಂಜಿನ್‍‍ನಲ್ಲಿ ಮಾತ್ರ ಮಾರಾಟವಾಗುವ ಕಾರುಗಳಿವು

ಡೀಸೆಲ್ ಎಂಜಿನ್‍‍ಗಳ ಜಾಗತಿಕ ಹಗರಣದ ಸಿಲುಕಿರುವ ಫೋಕ್ಸ್ ವ್ಯಾಗನ್ ಗ್ರೋಪ್, ಇದೀಗ ಡೀಸೆಲ್ ಎಂಜಿನ್ ಆಯ್ಕೆಗಳನ್ನು ಭಾರತದಲ್ಲಿ ತಮ್ಮ ಸಾಲಿನಿಂದ ಕೈಬಿಡಲಿದೆ ಎಂದು ಎ‍ಸಿಐ ತಿಳಿಸಿದೆ. ಮುಂದಿನ ದಿನಗಳಲ್ಲಿ ಬಿಡುಗಡೆಯಾಗಲಿರುವ ಫೇಸ್‍‍ಲೀಫ್ಟ್ ಪೊಲೊಗೆ ಪೆಟ್ರೋಲ್ ಎಂಜಿನ್ ಮಾತ್ರ ದೊರೆಯುತ್ತದೆ. ಭವಿಷ್ಯದಲ್ಲಿ ಫೋಕ್ಸ್ ವ್ಯಾಗನ್ ಬಿಎಸ್-6 ನಿಯಮಗಳಿಗೆ ತಕ್ಕಂತೆ ಪೆಟ್ರೋಲ್ ಎಂಜಿನ್‍‍ಗಳೊಂದಿಗೆ ಉತ್ಪನ್ನಗಳನ್ನು ಬಿಡುಗಡೆ ಮಾಡುವುದನ್ನು ಮುಂದುವರೆಸಿದರೆ ಡೀಸೆಲ್ ಎಂಜಿನ್‍‍ಗಳನ್ನು ನಿಲ್ಲಿಸಲಾಗುವುದು.

ಇನ್ಮುಂದೆ ಪೆಟ್ರೋಲ್ ಎಂಜಿನ್‍‍ನಲ್ಲಿ ಮಾತ್ರ ಮಾರಾಟವಾಗುವ ಕಾರುಗಳಿವು

ಫೋಕ್ಸ್ ವ್ಯಾಗನ್ ಗ್ರೂಪ್‍‍ಗಾಗಿ ಸ್ಕೋಡಾ ಇಂಡಿಯ 2.0 ಕಾರ್ಯತಂತ್ರವನ್ನು ಮುನ್ನಡೆಸಲಿದ್ದು, ವರದಿಗಳ ಪ್ರಕಾರ ಸ್ಕೋಡಾ ಮುಂದಿನ ತಿಂಗಳಲ್ಲಿ ರಾಪಿ‍‍ಡ್‍ನ ಡೀಸೆಲ್ ರೂಪಾಂತರಗಳನ್ನು ನಿಲ್ಲಿಸಲಿದ್ದು, ಡೀಸೆಲ್ ಎಂಜಿನ್ ಎಂಜಿನ್ ಹೊಂದಿರುವ ಬ್ರಾಂಡ್‍‍ನ ಇತರ ಎಲ್ಲಾ ಮಾದರಿಗಳು ಭವಿಷ್ಯದಲ್ಲಿ ನಿಲ್ಲಿಸಲಾಗುವುದು.

ಇನ್ಮುಂದೆ ಪೆಟ್ರೋಲ್ ಎಂಜಿನ್‍‍ನಲ್ಲಿ ಮಾತ್ರ ಮಾರಾಟವಾಗುವ ಕಾರುಗಳಿವು

ಮಾರುತಿ ಸುಜುಕಿ ಮತ್ತು ಕಿಯಾದಂತಹ ಇತರ ತಯಾರಕರು ಈಗಾಗಲೇ ಬಿಎಸ್ 6 ಪೆಟ್ರೋಲ್ ವಾಹನಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದ್ದರೆ, ಡೀಸೆಲ್ ಎಂಜಿನ್ ಅಭಿವೃದ್ಧಿಪಡಿಸುವ ಮತ್ತು ಬಿಎಸ್ 6 ಮಾನದಂಡಗಳಿಗೆ ಅನುಸಾರವಾಗಿ ಮಾಡುವ ವೆಚ್ಚವು ಸಾಕಷ್ಟು ಕೆಲಸ ಮತ್ತು ಹೂಡಿಕೆಯ ಅಗತ್ಯವಿದೆ. ಹೂಡಿಕೆಯು ವಾಹನಗಳ ಬೆಲೆಯನ್ನು ಹೆಚ್ಚಿಸುತ್ತದೆ ಮತ್ತು ಪೆಟ್ರೋಲ್ ಮತ್ತು ಡೀಸೆಲ್ ಕಾರುಗಳ ನಡುವಿನ ಬೆಲೆಯ ವ್ಯತ್ಯಾಸವನ್ನು ಬಹಳಷ್ಟು ಹೆಚ್ಚಿಸುತ್ತದೆ.

ಇನ್ಮುಂದೆ ಪೆಟ್ರೋಲ್ ಎಂಜಿನ್‍‍ನಲ್ಲಿ ಮಾತ್ರ ಮಾರಾಟವಾಗುವ ಕಾರುಗಳಿವು

ಮರುತಿ ಸುಜುಕಿ ಮತ್ತು ಕಿಯಾದಂತಹ ಇತರ ಉತ್ಪಾದಕರು ಈಗಾಗಳೇ ಬಿಎಸ್-6 ತಕ್ಕಂತೆ ಪೆಟ್ರೋಲ್ ವಾಹನಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದ್ದರೆ, ಡೀಸೆಲ್ ಎಂಜಿನ್ ಅಭಿವೃದ್ದಿಪಡಿಸುವ ಮತ್ತು ವಿಎಸ್-6 ನಿಯಮಕ್ಕೆ ತಕ್ಕಂತೆ ಹೊಡಿಕೆ ಮಾಡಲು ಸಾಕಷ್ಟು ಕೆಲಸದ ಅಗತ್ಯವಿದೆ. ಇದಕ್ಕಾಗಿಯೇ ಮೇಲೆ ತಿಳಿಸಿದ ತಯಾರಕರು ಡೀಸೆಲ್ ಚಾಲಿತ ವಾಹನಗಳನ್ನು ಮಾರುಕಟ್ಟೆಯಲ್ಲಿ ನೀಡುವುದಿಲ್ಲ ಎಂದು ಘೋಷಿಸಿದ್ದಾರೆ.

More from DriveSpark

Article Published On: Monday, September 2, 2019, 16:38 [IST]
English summary
5 car companies that will soon go petrol-only: Read in Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+