ಮಾರಾಟದಲ್ಲಿ ಭಾರೀ ಕುಸಿತ ಕಂಡ ಟಾಟಾ ಮೋಟಾರ್ಸ್ ಕಾರುಗಳು

ಟಾಟಾ ಮೋಟಾರ್ಸ್ ಮಾದರಿಗಳ ಕಾರು ಮಾರಾಟದ ಆಗಸ್ಟ್ ತಿಂಗಳ ವರದಿಯನ್ನು ಬಿಡುಗಡೆಗೊಳಿಸಲಾಗಿದೆ. ಟಾಟಾ ಮೋಟಾರ್ಸ್ ಕಾರುಗಳ ಮಾರಾಟದ ವರದಿಯಲ್ಲಿ ಈ ವರ್ಷದ ಆಗಸ್ಟ್ ತಿಂಗಳಿನಲ್ಲಿ ಟಾಟಾ ಟಿಯಾಗೊ ಅತಿ ಹೆಚ್ಚು ಮಾರಾಟವಾಗಿ ಮೊದಲ ಸ್ಥಾನವನ್ನು ಪಡೆದುಕೊಂಡಿದೆ.

ಮಾರಾಟದಲ್ಲಿ ಭಾರೀ ಕುಸಿತ ಕಂಡ ಟಾಟಾ ಮೋಟಾರ್ಸ್ ಕಾರುಗಳು

ಟಾಟಾ ಟಿಯಾಗೊ ಕಾರಿನ 3,037 ಯುನಿಟ್‍‍ಗಳು ಮಾರಾಟವಾಗಿ ಆಗಸ್ಟ್ ತಿಂಗಳ ಟಾಟಾ ಮೋಟಾರ್ಸ್ ಕಾರು ಮಾರಾಟದಲ್ಲಿ ಮೊದಲ ಸ್ಥಾನವನ್ನು ಪಡೆದುಕೊಂಡಿದೆ. ಮೊದಲನೇ ಸ್ಥಾನಗಳಿಸಿದರೂ ಕಳೆದ ವರ್ಷ ಆಗಸ್ಟ್ ತಿಂಗಳಿಗೆ ಹೋಲಿಸಿದರೆ ಶೇ.67.27 ರಷ್ಟು ಕುಸಿತ ಕಂಡಿದೆ. ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ 9,277 ಯುನಿ‍‍ಟ್‍‍ಗಳು ಮಾರಾಟವಾಗಿದ್ದವು.

ಮಾರಾಟದಲ್ಲಿ ಭಾರೀ ಕುಸಿತ ಕಂಡ ಟಾಟಾ ಮೋಟಾರ್ಸ್ ಕಾರುಗಳು

ಟಾಟಾ ನೆಕ್ಸಾನ್ ಕಾರು ಟಾಟಾ ಮೋಟಾರ್ಸ್ ಕಂಪನಿಯ ಜನಪ್ರಿಯ ಕಾರುಗಳಲ್ಲಿ ಒಂದಾಗಿದೆ. ಎಸ್‍‍ಯು‍ವಿ ಸೆಗ್‍‍ಮೆಂ‍‍ಟ್‍ನಲ್ಲಿ ಕಠಿಣ ಸ್ಪರ್ಧೆ ಎದುರಿಸುತ್ತಿರುವ ಈ ಎಸ್‍‍ಯುವಿಯ 2,275 ಯುನಿ‍ಟ್‍‍ಗಳು ಆಗಸ್ಟ್ ನಲ್ಲಿ ಮಾರಾಟವಾಗಿವೆ. ಟಾಟಾ ನೆಕ್ಸಾನ್ ಕಾರು ಟಾಟಾ ಮೋಟಾರ್ಸ್ ಕಾರುಗಳ ಮಾರಾಟದಲ್ಲಿ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದೆ.

ಮಾರಾಟದಲ್ಲಿ ಭಾರೀ ಕುಸಿತ ಕಂಡ ಟಾಟಾ ಮೋಟಾರ್ಸ್ ಕಾರುಗಳು

ಟಾಟಾ ಮೋಟಾರ್ಸ್ ಕಂಪನಿಯ ಆಗಸ್ಟ್ ತಿಂಗಳ ಕಾರು ಮಾರಾಟದಲ್ಲಿ ಟಾಟಾ ಟಿಗೋರ್ ಕಾರು ಮೂರನೇ ಸ್ಥಾನವನ್ನು ಪಡೆದುಕೊಂಡಿದೆ. ಈ ವರ್ಷದ ಆಗಸ್ಟ್ ತಿಂಗಳಲ್ಲಿ 833 ಯುನಿಟ್‍ಗಳು ಮಾರಾಟವಾಗಿವೆ. ಟಿಗೋರ್ ಕಾರ್ ಅನ್ನು ಸ್ಟ್ಯಾಂಡರ್ಡ್ ಮತ್ತು ಎವಿ ಮಾದರಿಯಲ್ಲಿ ಮಾರಾಟ ಮಾಡಲಾಗುತ್ತಿದೆ. ಇವಿ ಮಾದರಿಯ ಕಾರನ್ನು ಹೆಚ್ಚಾಗಿ ಕಮರ್ಷಿಯಲ್ ಉದ್ದೇಶಕ್ಕಾಗಿ ಬಳಸಲಾಗುತ್ತಿದೆ.

ಮಾರಾಟದಲ್ಲಿ ಭಾರೀ ಕುಸಿತ ಕಂಡ ಟಾಟಾ ಮೋಟಾರ್ಸ್ ಕಾರುಗಳು

ಆಗಸ್ಟ್ ತಿಂಗಳಲ್ಲಿ ಟಾಟಾ ಹ್ಯಾರಿಯರ್‍‍ನ 633 ಯುನಿಟ್‍‍ಗಳು ಮಾರಾಟವಾಗಿವೆ. ಜನವರಿಯಲ್ಲಿ ಬಿಡುಗಡೆಯಾದ ಟಾಟಾ ಹ್ಯಾರಿಯರ್ ಕಾರಿನ ಆರಂಭಿಕ ಮಾರಾಟಕ್ಕೆ ಹೋಲಿಸಿದರೆ ಕಳೆದ ತಿಂಗಳು ಭಾರೀ ಕುಸಿತವನ್ನು ಅನುಭವಿಸಿದೆ. ಟಾಟಾ ಹ್ಯಾರಿಯರ್ ಕಾರು ಮಿಡ್-ಎಸ್‍‍ಯು‍ವಿ ಸೆಗ್‍ಮೆಂಟಿನಲ್ಲಿ ಕಿಯಾ ಸೆಲ್ಟೋಸ್ ಮತ್ತು ಎಂಜಿ ಹೆಕ್ಟರ್ ಕಾರುಗಳಿಂದ ತೀವ್ರ ಪೈಪೋಟಿಯನ್ನು ಎದುರಿಸುತ್ತಿದೆ.

ಸ್ಥಾನ ಮಾದರಿಗಳು ಆಗಸ್ಟ್-19 ಆಗಸ್ಟ್-18 ವ್ಯತ್ಯಾಸ(%)
1 ಟಾಟಾ ಟಿಯಾಗೊ 3,037 9,277 -67.26
2 ಟಾಟಾ ನೆಕ್ಸಾನ್ 2,275 4,499 -49.43
3 ಟಾಟಾ ಟಿಗೋರ್ 833 1,646 -49.39
4 ಟಾಟಾ ಹ್ಯಾರಿಯರ್ 635 - -
5 ಟಾಟಾ ಝೆಸ್ಟ್ 294 964 -69.50
6 ಟಾಟಾ ಹೆಕ್ಸಾ 136 759 -82.08
7 ಟಾಟಾ ಸಫಾರಿ 83 515 -83.88
8 ಟಾಟಾ ಬೋಲ್ಟ್ 23 127 -81.89
9 ಟಾಟಾ ಸುಮೋ - 623 -
10 ಟಾಟಾ ನ್ಯಾನೋ - 10 -
ಮಾರಾಟದಲ್ಲಿ ಭಾರೀ ಕುಸಿತ ಕಂಡ ಟಾಟಾ ಮೋಟಾರ್ಸ್ ಕಾರುಗಳು

ಟಾಟಾ ಜೆಸ್ಟ್ ಭಾರತೀಯ ಕಾರು ಉತ್ಪಾದಕರಿಂದ ಹೆಚ್ಚು ಮಾರಾಟವಾಗುವ ಮಾದರಿಗಳ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ಜೆಸ್ಟ್ 294 ಯುನಿ‍ಟ್‍ ಮಾರಾಟವಾಗಿದೆ ಎಂದು ದಾಖಲಾಗಿದೆ. ಈ ಕಾರು ದೇಶಿಯ ಮಾರುಕಟ್ಟೆಯಲ್ಲಿ ದೀರ್ಘಕಾಲದಿಂದ ಮಾರಾಟದಲ್ಲಿದೆ ಮತ್ತು ಬಹಳ ಹಳೆಯದಾಗಿದೆ.

ಮಾರಾಟದಲ್ಲಿ ಭಾರೀ ಕುಸಿತ ಕಂಡ ಟಾಟಾ ಮೋಟಾರ್ಸ್ ಕಾರುಗಳು

ಈ ವರ್ಷದ ಆಗಸ್ಟ್ ತಿಂಗಳಿನ ಟಾಟಾ ಮೋಟಾರ್ಸ್ ಕಾರುಗಳ ಮಾರಾಟದ ಪಟ್ಟಿಯಲ್ಲಿ ಹೆಕ್ಸಾ, ಸಫಾರಿ ಮತ್ತು ಬೋಲ್ಟ್ ಕಾರುಗಳು ನಂತರದ ಸ್ಥಾನಗಳ್ಳಲ್ಲಿವೆ. ಮೂರು ಮಾದರಿಗಳು ಕ್ರಮವಾಗಿ 136, 83 ಮತ್ತು 23 ಯುನಿಟ್‍‍ಗಳಷ್ಟು ಮಾರಾಟವಾಗಿವೆ. ಈ ಮಾದರಿಗಳ ಹೊರತಾಗಿ ಟಾಟಾ ಮೋಟಾರ್ಸ್ ದೇಶಿಯ ಮಾರುಕಟ್ಟೆಯಲ್ಲಿ ಸುಮೋ ಮತ್ತು ನ್ಯಾನೋ ಮಾರಾಟವನ್ನು ಸ್ಥಗಿತಗೊಳಿಸಿದೆ.

MOST READ: ಸೀಟ್ ಬೆಲ್ಟ್ ಧರಿಸದ ಪೊಲೀಸರನ್ನೇ ಅಡ್ಡಗಟ್ಟಿದ ಭೂಪ..!

ಮಾರಾಟದಲ್ಲಿ ಭಾರೀ ಕುಸಿತ ಕಂಡ ಟಾಟಾ ಮೋಟಾರ್ಸ್ ಕಾರುಗಳು

ಟಾಟಾ ಸುಮೋ ಮತ್ತು ಟಾಟಾ ನ್ಯಾನೋ ಎರಡೂ ಹಳೆಯ ಮಾದರಿ, ಸುರಕ್ಷತೆ ನಿಯಮಕ್ಕೆ ತಕ್ಕಂತೆ ಹೆಚ್ಚಿನ ಸುರಕ್ಷತೆಯನ್ನು ಹೊಂದಿಲ್ಲದ ಕಾರಣಕ್ಕೆ ಮತ್ತು ಕೇಂದ್ರ ಸರ್ಕಾರವು 2020ರ ಏಪ್ರಿಲ್ 1 ರಿಂದ ಜಾರಿಗೆ ತರುತ್ತಿರುವ ಬಿಎಸ್-6 ಮಾಲಿನ್ಯ ನಿಯಮಾವಳಿಗೆ ಹೊಂದಿಕೊಳ್ಳುವಂತಹ ಎಂಜಿನ್ ಹೊಂದಿಲ್ಲವೆಂಬ ಕಾರಣಕ್ಕೆ ಈ ಎರಡೂ ಕಾರುಗಳನ್ನು ಸ್ಥಗಿತಗೊಳಿಸಲಾಗಿದೆ. ಟಾಟಾ ಮೋಟಾರ್ಸ್ 25 ವರ್ಷಗಳ ಮಾರಾಟದ ನಂತರ ಟಾಟಾ ಸುಮೋ ಮಾರಾಟವನ್ನು ಸ್ಥಗಿತಗೊಳಿಸಿದೆ.

MOST READ: ತಡೆದು ನಿಲ್ಲಿಸಿದ್ದು ಒಂದು ಕಾರಣಕ್ಕೆ, ದಂಡ ವಿಧಿಸಿದ್ದು ಇನ್ನೊಂದಕ್ಕೆ..!

ಮಾರಾಟದಲ್ಲಿ ಭಾರೀ ಕುಸಿತ ಕಂಡ ಟಾಟಾ ಮೋಟಾರ್ಸ್ ಕಾರುಗಳು

ಟಾಟಾ ಮೋಟಾರ್ಸ್ ಕಾರುಗಳ ಮಾರಾಟವು ಕೂಡ ಮಾರುತಿ ಸುಜುಕಿ, ಹೋಂಡಾ, ಮಹೀಂದ್ರಾ ಕಂಪನಿಗಳ ಮಾರಾಟದ ರೀತಿಯಲ್ಲೇ ದೊಡ್ಡ ಕುಸಿತ ಕಾಣುತ್ತಿದೆ. ಪ್ರಸ್ತುತ ಆಟೋಮೊಬೈಲ್ ಕ್ಷೇತ್ರವು ನಿಧಾನಗತಿಯ ಪ್ರಗತಿ ಕಾಣುತ್ತಿರುವ ಹಿನ್ನೆಲೆಯಲ್ಲಿ ಎಲ್ಲಾ ಕಂಪನಿಯ ವಾಹನ ಮಾರಾಟದಲ್ಲಿ ಕುಸಿತ ಉಂಟಾಗಿದೆ. ಮುಂದಿನ ತಿಂಗಳು ಹಬ್ಬದ ವೇಳೆಯಲ್ಲಿ ಕಾರು ಮಾರಾಟದಲ್ಲಿ ಏರಿಕೆಯಾಗಲಿದೆ ಎಂದು ಕಂಪನಿ ನಿರೀಕ್ಷಿಸಿದೆ.

Most Read Articles

Kannada
English summary
Tata Car Sales In August: A Model-Wise Sales Performance Report - Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X