ಬಿಡುಗಡೆಯಾಯ್ತು ಆಡಿ ಎ4 ಫೇಸ್‍‍ಲಿಫ್ಟ್ ಕಾರು

ಜರ್ಮನ್ ಮೂಲದ ವಾಹನ ತಯಾರಕ ಕಂಪನಿಯಾದ ಆಡಿ ತನ್ನ ಎ4 ಫೇಸ್‍‍ಲಿಫ್ಟ್ ಮಾದರಿಯನ್ನು ಭಾರತದಲ್ಲಿ ಬಿಡುಗಡೆಗೊಳಿಸಿದೆ. ಎ4 ಕ್ವಿಕ್ ಲಿಫ್ಟ್ ಎಂದು ಕರೆಯಲ್ಪಡುವ ಮೂಲ ಮಾದರಿಗೆ ರೂ.42 ಲಕ್ಷ ಬೆಲೆಯನ್ನು ಹೊಂದಿದೆ. ಟಾಪ್ ಸ್ಪೆಕ್ ಟೆಕ್ನಾಲಜಿ ಮಾದರಿಯ ಬೆಲೆಯು ಭಾರತೀಯ ಎಕ್ಸ್ ಶೋರೂಂ ಪ್ರಕಾರ 44.44 ಲಕ್ಷಗಳಾಗಿದೆ.

ಬಿಡುಗಡೆಯಾಯ್ತು ಆಡಿ ಎ4 ಫೇಸ್‍‍ಲಿಫ್ಟ್ ಕಾರು

ಹೊಸ ಎ4 ಫೇಸ್‍‍ಲಿಫ್ಟ್ ಮಾದರಿಯು ಹಿಂದಿನ ಮಾದರಿಗಿಂತಲೂ ಸಣ್ಣ ಮಟ್ಟದ ಕಾಸ್ಮೆಟಿಕ್ ನವೀಕರಣಗಳನ್ನು ಮತ್ತು ಹೊಸ ವೈಶಿಷ್ಟ್ಯಗಳನ್ನು ಸೇರಿಸಿದೆ. ಹೊಸ ಮಾದರಿಯು ಪೆಟ್ರೋಲ್ ಎಂಜಿನ್‍‍ನೊಂದಿಗೆ ಮಾತ್ರ ಲಭ್ಯವಿರುತ್ತದೆ. ಹೊಸ ಮಾದರಿಯು ಕಾಸ್ಮೆಟಿಕ್ ಬದಲಾವಣಿಯು ಮುಂಭಾಗ ಮತ್ತು ಹಿಂಭಾಗದ ಬಂಪರ್ ವಿನ್ಯಾಸ, ನವೀಕರಿಸಿದ ಅಲಾಯ್ ವ್ಹೀಲ್ ಅನ್ನು ಹೊಂದಿದೆ.

ಬಿಡುಗಡೆಯಾಯ್ತು ಆಡಿ ಎ4 ಫೇಸ್‍‍ಲಿಫ್ಟ್ ಕಾರು

ಹೊಸ ಮಾದರಿಯಲ್ಲಿ ಫಾಗ್ ಲ್ಯಾಂಪ್, ಹಿಂದಿನ ಮಾದರಿಗೆ ಹೋಲುವಂತಹ ಗ್ರಿಲ್ ಆದರೆ ಈಗ ಅದು ಡಾರ್ಕ್ ಕ್ರೋಮ್ ಫಿನಿಂಶಿಗ್ ಅನ್ನು ಹೊಂದಿದೆ. ಹೊಸ ಆಡಿ ಎ4 ಫೇಸ್‍‍ಲಿಫ್ಟ್ ಆಕರ್ಷಕ ಲುಕ್ ಅನ್ನು ಹೊಂದಿದೆ.

ಬಿಡುಗಡೆಯಾಯ್ತು ಆಡಿ ಎ4 ಫೇಸ್‍‍ಲಿಫ್ಟ್ ಕಾರು

ಮುಂಭಾಗದಲ್ಲಿ ನವೀಕರಿಸಿದ ಡಿಆರ್‍ಎಲ್‍ನೊಂದಿಗೆ ಹೊಸ ಅಲ್ ವೆದರ್ ಎಲ್ಇಡಿ ಹೆಡ್‍‍ಲ್ಯಾಂಪ್‍‍ಗಳು ಡೈನಾಮಿಕ್ ಟರ್ನ್ ಇಂಡಿಕೇಟರ್ ಅನ್ನು ಹೊಂದಿದೆ. ಈ ಹೆಡ್‍‍ಲೈಟ್ ಸೆಟಪ್ ಕಂಪನಿಯ ಇತರ ಶ್ರೇಣಿಯ ಮಾದರಿಗಳಲ್ಲಿಯೂ ಕಂಡುಬಂದಿದೆ.

ಬಿಡುಗಡೆಯಾಯ್ತು ಆಡಿ ಎ4 ಫೇಸ್‍‍ಲಿಫ್ಟ್ ಕಾರು

ಹೊಸ ಆಡಿ ಎ4 ಹಿಂಭಾಗದಲ್ಲಿ ಹೊಸ ಎಲ್‍ಇ‍ಡಿ ಟೈಲ್ ಲ್ಯಾಂಪ್‍ಗಳು ಮತ್ತು ಇಂಟಿಗ್ರೇಟೆಡ್ ಡೈನಾಮಿಕ್ ಟರ್ನ್ ಇಂಡಿಕೇಟರ್‍‍ಗಳೊಂದಿಗೆ ನವೀಕರಿಸಲಾಗಿದೆ. ಹೊಸ 17 ಇಂಚಿನ ಅಲಾಯ್ ವ್ಹೀಲ್‍ಗಳು 225/50 ವಿಭಾಗದ ಟಯರ್‍‍ಗಳನ್ನು ಹೊಂದಿದೆ. ಹೊಸ ಎ4 ಫೇಸ್‍‍ಲಿಫ್ಟ್ ಮಾದರಿಗೆ ಹೊಸ ಬಣ್ಣದ ಆಯ್ಕೆಗಳನ್ನು ಸೇರಿಸಲಾಗಿದೆ.

ಬಿಡುಗಡೆಯಾಯ್ತು ಆಡಿ ಎ4 ಫೇಸ್‍‍ಲಿಫ್ಟ್ ಕಾರು

ಫೇಸ್‍‍ಲಿಫ್ಟ್ ಮಾದರಿಯ ಇಂಟಿರಿಯರ್ ಎರಡು ಬಣ್ಣಗಳ ಆಯ್ಕೆಗಳೊಂದಿಗೆ ಹೊಸ ಡ್ಯುಯಲ್ ಟೋನ್ ಬಣ್ಣಗಳ ಆಯ್ಕೆಯನ್ನು ಹೊಂದಿದೆ. ಬ್ಲ್ಯಾಕ್ ಮತ್ತು ಅಟ್ಲಾಸ್ ಬೀಜ್, ನೌಗಾಟ್ ಬ್ರೌನ್ ಬಣ್ಣಗಳಾಗಿವೆ. ಹಿಂದಿನ ಮಾದರಿಯಲ್ಲಿ ಕ್ಯಾಬಿನ್‍‍ನಾದ್ಯಂತ ಇರಿಸಲಾಗಿರುವ ಡ್ಯಾಶ್ ಮತ್ತು ಸೆಂಟ್ರಲ್ ಕನ್ಸೋಲ್‍‍ನಲ್ಲಿ ಹೊಸ ಟಕ್ಸ್ಚರ್ಡ್ ಕ್ರೋಮ್ ಅನ್ನು ಹೊಂದಿದೆ. ಹೊಸ ಎ4 ಸೆಡಾನ್‍‍ನ ಟಾಪ್ ಮಾದರಿಯಲ್ಲಿ ಸ್ಟ್ಯಾಂಡರ್ಡ್ ಆಟೋ ಪಾರ್ಕ್ ಅಸಿಸ್ಟ್ ಅನ್ನು ಹೊಂದಿದೆ.

ಬಿಡುಗಡೆಯಾಯ್ತು ಆಡಿ ಎ4 ಫೇಸ್‍‍ಲಿಫ್ಟ್ ಕಾರು

ಹೊಸ ಆಡಿ ಎ4 ಕ್ವಿಕ್ ಲಿಫ್ಟ್ ಮಾದರಿಯಲ್ಲಿ ಮೆಕಾನಿಕಲ್ ಅಂಶಗಳನ್ನು ಯಾವುದೇ ಬದಲಾವಣೆಗಳನ್ನು ನಡೆಸಿಲ್ಲ. ಆಡಿ ಎ4 1.4 ಲೀಟರ್ ನಾಲ್ಕು ಸಿಲಿಂಡರ್ ಟರ್ಬೊ ಪೆಟ್ರೋಲ್ ಎಂಜಿನ್‍‍ನೊಂದಿಗೆ 147.5 ಬಿ‍ಹೆಚ್‍‍ಪಿ ಪವರ್ ಮತ್ತು 250 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಂಜಿನ್‍‍ನೊಂದಿಗೆ 7 ಸ್ಪೀಡ್ ಎಸ್-ಟ್ರಾನಿಕ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ.

MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ಬಿಡುಗಡೆಯಾಯ್ತು ಆಡಿ ಎ4 ಫೇಸ್‍‍ಲಿಫ್ಟ್ ಕಾರು

ಆಡಿ ಎ4 ಸೆಡಾನ್‍‍ನ ಹಿಂದಿನ ಮಾದರಿಯು 2.0 ಲೀಟರ್ ನಾಲ್ಕು ಟರ್ಬೊ ಡೀಸೆಲ್ ಎಂಜಿನ್‍‍ನೊಂದಿಗೆ 188 ಬಿಚ್‍ಪಿ ಪವರ್ ಮತ್ತು 400 ಎನ್‍ಎಂ ಟಾರ್ಕ್ ಅನ್ನು ಉತಾದಿಸುತ್ತದೆ. ಪೆಟ್ರೋಲ್ ರೂಪಾಂತರದಲ್ಲಿ 7 ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ. ಕಂಪನಿಯು ಹೊಸ ಫೇಸ್‍‍ಲಿಫ್ಟ್ ಮಾದರಿಯಲ್ಲಿ ಈ ಎಂಜಿನ್ ಅನ್ನು ಅಳವಡಿಸಲಾಗಿಲ್ಲ. ಕಂಪನಿಯು ಮುಂದಿನ ಹಂತದಲ್ಲಿ ಈ ಎಂಜಿನ್ ಅನ್ನು ಪರಿಚಸುತ್ತದೆ.

MOST READ: ಬೈಕ್ ಸವಾರನ ಪ್ರಾಣ ಉಳಿಸಿದ ಆಪಲ್ ವಾಚ್..!

ಬಿಡುಗಡೆಯಾಯ್ತು ಆಡಿ ಎ4 ಫೇಸ್‍‍ಲಿಫ್ಟ್ ಕಾರು

ದೇಶಿಯ ಮಾರುಕಟ್ಟೆಯಲ್ಲಿ ಮರ್ಸಿಡಿಸ್ ಸಿ-ಕ್ಲಾಸ್, ಬಿಎಂಡಬ್ಲ್ಯು3 ಸೀರಿಸ್ ಮತ್ತು ಜಾಗ್ವರ್ ಎಕ್ಸ್ ಇ ಕಾರುಗಳಿಗೆ ಆಡಿ ಎ4 ಕಾರು ಪೈಪೋಟಿಯನ್ನು ನೀಡಲಿದೆ. ಆಡಿ ಭಾರತದಲ್ಲಿ ಬಿಡುಗಡೆಗೊಳಿಸಿದ ಎ4 ಫೇಸ್‍ಲಿಫ್ಟ್ ಕಾಸ್ಮೆಟಿಕ್ ನವೀಕರಣವನ್ನು ನಡೆಸಿದ್ದಾರೆ, ಸಂಪೂರ್ಣ ಪ್ರಮಾಣದ ನವೀಕರಣವನ್ನು ನಡೆಸಲಾಗಿಲ್ಲ. ಆಡಿ ಎ4 ಕಾರು ಆಕರ್ಷಕ ಲುಕ್ ಅನ್ನು ಹೊಂದಿರುವುದರಿಂದ ಮತ್ತಷ್ಟು ಗ್ರಾಹಕರನ್ನು ಆಕರ್ಷಿಸಬಹುದು.

Most Read Articles

Kannada
Read more on ಆಡಿ audi
English summary
Audi A4 Facelift Launched In India: Prices Start At Rs 42 Lakh - Read in Kannada
Story first published: Monday, November 4, 2019, 19:26 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X