Just In
Don't Miss!
- News
ರೈತರು 2024ರವರೆಗೂ ಪ್ರತಿಭಟನೆ ನಡೆಸಲು ಸಿದ್ಧರಿದ್ದಾರೆ:ಭಾರತೀಯ ಕಿಸಾನ್ ಯೂನಿಯನ್
- Finance
Gold, Silver Rate: ಪ್ರಮುಖ ನಗರಗಳಲ್ಲಿ ಜ. 17ರ ಚಿನ್ನ, ಬೆಳ್ಳಿ ದರ
- Sports
ಐಎಸ್ಎಲ್: ಜೆಮ್ಷೆಡ್ಪುರಕ್ಕೆ ಆಘಾತ ನೀಡಿದ ನಾರ್ಥ್ಈಸ್ಟ್
- Movies
ಹರ ಜಾತ್ರೆಯಲ್ಲಿ ಪುನೀತ್ ರಾಜ್ ಕುಮಾರ್; ಅಪ್ಪು ಹಾಡು ಕೇಳಿ ಸಂಭ್ರಮಿಸಿದ ಅಭಿಮಾನಿಗಳು
- Lifestyle
ಸಂಜೆ ಸ್ನ್ಯಾಕ್ಸ್ ಗೆ ಹೇಳಿಮಾಡಿಸಿದ್ದು ಈ ತಡ್ಕಾ ಮಸಾಲೆ ಮ್ಯಾಗಿ
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಫೋಕ್ಸ್‌ವ್ಯಾಗನ್ ನಂತರ ಡೀಸೆಲ್ ಎಂಜಿನ್ ಹಗರಣದಲ್ಲಿ ಸಿಲುಕಿದ ಆಡಿ..!
ನಿಮಗೆಲ್ಲಾ ಗೊತ್ತಿರುವ ಹಾಗೆ ಈ ಹಿಂದೆ 2015ರಲ್ಲಿ ಫೋಕ್ಸ್‌ವ್ಯಾಗನ್ ಸಂಸ್ಥೆಯು ಡೀಸೆಲ್ ಎಂಜಿನ್‌ಗಳಲ್ಲಿ ರಹಸ್ಯವಾಗಿ ಸಾಫ್ಟ್‌ವೇರ್ ಅಳವಡಿಸುವ ಮೂಲಕ ಮಾಲಿನ್ಯ ನಿಯಂತ್ರಣ ಪರೀಕ್ಷೆಯಲ್ಲಿ ಮೋಸ ಮಾಡಿದ್ದು ಅತಿ ಹಗರಣವಾಗಿ ಬೆಳಕಿಗೆ ಬಂದಿತ್ತು. ಇದೀಗ ಐಷಾರಾಮಿ ಕಾರು ಉತ್ಪಾದನಾ ಸಂಸ್ಥೆಯಾದ ಆಡಿ ಕೂಡಾ ಇಂತದ್ದೆ ಕೃತ್ಯದಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ.

ದೋಷಪೂರಿತ ಡೀಸೆಲ್ ಎಂಜಿನ್‌ಗಳ ಮೂಲಕ ಎಮಿಷನ್ (ಮಾಲಿನ್ಯ ನಿಯಂತ್ರಣ) ನಿಯಮಗಳನ್ನು ಗಾಳಿಗೆ ತೂರಿರುವ ಆಡಿ ಸಂಸ್ಥೆಯು ಜರ್ಮನಿವೊಂದರಲ್ಲೇ ಸುಮಾರು 2 ಲಕ್ಷ ದೋಷಪೂರಿತ ಎಂಜಿನ್ ಹೊಂದಿರುವ ಐಷಾರಾಮಿ ಕಾರುಗಳನ್ನು ಮಾರಾಟ ಮಾಡಿದ್ದು, ಕ್ಯೂ7 ಕಾರಿನಲ್ಲಿ ಬಳಸಲಾಗಿರುವ 3.0-ಲೀಟರ್ ಡೀಸೆಲ್ ಎಂಜಿನ್‌ನಲ್ಲಿ ಈ ಅಕ್ರಮ ಕಂಡುಬಂದಿದೆ. ಇದು ಯುರೋಪ್ ಮಾಲಿನ್ಯ ನಿಯಂತ್ರಣ ನಿಯಮಕ್ಕೆ ಸಂಪೂರ್ಣ ವಿರುದ್ಧವಾಗಿ ತಪ್ಪು ಸಾಬೀತಾದಲ್ಲಿ ನೂರಾರು ಕೋಟಿ ದಂಡ ಬೀಳುವುದರಲ್ಲಿ ಯಾವುದೇ ಅನುಮಾನವಿಲ್ಲ.

ಸದ್ಯ ಫೋಕ್ಸ್‌ವ್ಯಾಗನ್ ಅಂಗಸಂಸ್ಥೆಯಾಗಿರುವ ಆಡಿ ಮತ್ತು ಪೋರ್ಷೆ ಕಾರುಗಳು ಈಗಾಗಲೇ ವಿಶ್ವಾದ್ಯಂತ ಉತ್ತಮ ಬೇಡಿಕೆಯೊಂದಿಗೆ ಮಾರಾಟವಾಗುತ್ತಿದ್ದು, ಜರ್ಮನಿ ಸಾರಿಗೆ ಸಂಸ್ಥೆಯು ಆಡಿ ಕಳ್ಳಾಟವನ್ನು ಬಯಲಿಗೆ ತಂದಿದೆ. ಇದು ವಿಶ್ವ ಆಟೋ ಉದ್ಯಮದಲ್ಲಿ ತಲೆತಗ್ಗಿಸುವಂತಹ ಹಗರಣವಾಗಿದ್ದು, ಮಾಲಿನ್ಯನಿಯಂತ್ರಣ ಮಾಡಲು ಸಾಧ್ಯವಾಗದೇ ರಹಸ್ಯವಾಗಿ ಸಾಫ್ಟ್‌ವೇರ್ ಬಳಕೆ ಮಾಡಿ ನಿಷೇಧದಿಂದ ತಪ್ಪಿಸುಕೊಳ್ಳುವುದೇ ಈ ಕೃತ್ಯದ ಮೂಲ ಉದ್ದೇಶವಾಗಿದೆ.

ಆಡಿ ಸಂಸ್ಥೆಯು 2018ರಲ್ಲಿ ಹೊರತಂದ ವಿ6 ಡೀಸೆಲ್ ಮೋಟಾರ್ ಕೂಡಾ ಸದ್ಯ ಚಾಲ್ತಿಯಲ್ಲಿರುವ ಮಾಲಿನ್ಯ ನಿಯಂತ್ರಣ ಕಾಯ್ದೆಗೆ ವಿರುದ್ಧವಾಗಿದ್ದು, ಟೆಸ್ಟಿಂಗ್ ಸಂದರ್ಭದಲ್ಲಿ ಡೀಸೆಲ್ ಮೋಟಾರ್‌ನಲ್ಲಿ ಯಾವುದೇ ದೋಷವಿರುವ ಪತ್ತೆಯಾಗದಿರಲು ರಹಸ್ಯ ಸಾಫ್ಟ್‌ವೇರ್ ಅಳವಡಿಸಿ ತಪಾಸಣಾ ಅಧಿಕಾರಿಗಳ ಕಣ್ಣಿಗೆ ಮಣ್ಣೆರಚುವ ಕೃತ್ಯ ಎಸಗಿದ್ದಾರೆ.

ಮಾಲಿನ್ಯ ನಿಯಂತ್ರಣ ಅಂಶಗಳನ್ನು ಪರೀಕ್ಷಿಸುವಾಗ ಯಾವುದೇ ರೀತಿಯ ಅನುಮಾನ ಬರದಿರುವಂತೆ ಒಟ್ಟು ನಾಲ್ಕು ರಹಸ್ಯ ಸಾಫ್ಟ್‌ವೇರ್ ಅಳವಡಿಸಿದ್ದ ಆಡಿ ಸಂಸ್ಥೆಯು ಡೀಸೆಲ್ ಎಂಜಿನ್ ಯಾವುದೇ ದೋಷವಿಲ್ಲದಂತೆ ತೊರಿಸುತ್ತಿತ್ತು. ಆದರೆ ಪರೀಕ್ಷೆಯ ನಂತರ ಮತ್ತೆ ಅತಿ ಹೆಚ್ಚು ಮಾಲಿನ್ಯ ಉತ್ಪತ್ತಿ ಮಾಡುತ್ತಿರುವುದು ಬೆಳಕಿಗೆ ಬಂದಿತ್ತು. ಹೀಗಾಗಿ ಅನುಮಾನದ ಮೇಲೆ ವಿ6 ಡೀಸೆಲ್ ಎಂಜಿನ್ ಮಾದರಿಯನ್ನು ಹಲವು ವೈಜ್ಞಾನಿಕ ಪರೀಕ್ಷೆಗಳಿಗೆ ಒಳಪಡಿಸಿದಾಗ ರಹಸ್ಯ ಸಾಫ್ಟ್‌ವೇರ್ ಅಳವಡಿಸಿರುವುದು ಬೆಳಕಿಗೆ ಬಂದಿದೆ.
ಮುಖ್ಯಕೇಂದ್ರದಿಂದಲೇ ಸಾಫ್ಟ್‌ವೇರ್ ನಿಯಂತ್ರಣ ಮಾಡುತ್ತಿದ್ದ ಆಡಿ ಸಂಸ್ಥೆಯು ಮಾಲಿನ್ಯ ನಿಯಂತ್ರಣ ಪರೀಕ್ಷೆಗೆ ಒಳಪಡಿಸಿದಾಗ ಪೂರಕವಾದ ಮಾಹಿತಿಯನ್ನೇ ನೀಡುತ್ತಿತ್ತು. ಇದೇ ಅನುಮಾನದ ಮೇಲೆ ಪ್ರತ್ಯೇಕ ತಂಡ ರಚಿಸಿ ಪರೀಕ್ಷೆ ನಡೆಸಿದಾಗ ಯುರೋಪ್ ಮಾಲಿನ್ಯ ನಿಯಂತ್ರಣ ಕಾಯ್ದೆಗೆ ವಿರುದ್ಧವಾಗಿ ಮಾಲಿನ್ಯ ಉತ್ಪತ್ತಿ ಮಾಡುತ್ತಿರುವುದು ಗೊತ್ತಾಗಿದೆ.

ರಹಸ್ಯ ಸಾಫ್ಟ್‌ವೇರ್ ಮೂಲಕ ಕಾರಿನ ಇಂಧನ ವಿಸರ್ಜನೆ ಪರೀಕ್ಷೆಯಲ್ಲಿ ಕಾರುಗಳು ಸರಾಗವಾಗಿ ತೇರ್ಗಡೆ ಹೊಂದುತ್ತಿದ್ದವು. ಆದ್ರೆ ಅಸಲಿಗೆ ಬಂದಲ್ಲಿ ಇತರೆ ಡೀಸೆಲ್ ಕಾರುಗಳಿಂತ ಮೂರು ಪಟ್ಟು ಹೆಚ್ಚು ಮಾಲಿನ್ಯವನ್ನು ಉತ್ಪತ್ತಿ ಮಾಡಿದ್ದ ಕಾರುಗಳು ವಿಶೇಷ ಸಾಫ್ಟ್‌ವೇರ್ ಬಳಕೆ ಮೂಲಕ ಮೋಸ ಮಾಡಲಾಗುತ್ತಿತ್ತು.

ಸದ್ಯ ರಹಸ್ಯ ಸಾಫ್ಟ್‌ವೇರ್ ಕುರಿತಂತೆ ಹೆಚ್ಚಿನ ಮಟ್ಟದ ತನಿಖೆ ನಡೆಸಿರುವ ಜರ್ಮನ್ ಸಾರಿಗೆ ಸಂಸ್ಥೆಯು ಪ್ರಕರಣದ ಜಾಲವನ್ನು ಭೇದಿಸಲಾಗುತ್ತಿದ್ದು, ಒಂದು ವೇಳೆ ಆಡಿ ಕೃತ್ಯವು ಗಂಭೀರ ಎಂದು ಕಂಡುಬಂದಲ್ಲಿ ಭಾರೀ ಪ್ರಮಾಣದ ದಂಡದ ಜೊತೆ ದೋಷಪೂರಿತ ಎಂಜಿನ್‌ಗಳನ್ನು ಹೊಸ ನಿಯಮ ಅನುಸಾರವಾಗಿ ಉನ್ನತೀಕರಣ ಮಾಡಬೇಕಾಗುತ್ತೆ.

ಇನ್ನು ಈ ಹಿಂದೆ ಯುರೋಪ್ ಮಾರುಕಟ್ಟೆಯಲ್ಲಿ ಇಂತದ್ದೆ ಪ್ರಕರಣಕ್ಕೆ ಸಂಬಂಧಿಸಿದಂತೆ ಫೋಕ್ಸ್‌ವ್ಯಾಗನ್ ಡೀಸೆಲ್ ಕಾರುಗಳ ಮೇಲೆ ನಿಷೇಧ ಹೇರಿದ್ದ ಯುರೋಪ್ ಫೆಡರೇಷನ್ ಸಂಸ್ಥೆಯು ಫೋಕ್ಸ್‌ವ್ಯಾಗನ್‌ನಿಂದ ಸುಮಾರು 2 ಸಾವಿರ ಕೋಟಿಯಷ್ಟು ದಂಡ ಸಹ ವಸೂಲಿ ಮಾಡಿತ್ತು.

ಭಾರತದಲ್ಲೂ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ 2016ರಲ್ಲಿ ರಾಷ್ಟ್ರೀಯ ಹಸಿರು ಪೀಠದಲ್ಲಿ ಪ್ರಕರಣ ದಾಖಲಿಸಿದ್ದ ಕೇಂದ್ರ ಆರೋಗ್ಯ ಇಲಾಖೆಯು ಫೋಕ್ಸ್‌ವ್ಯಾಗನ್ ಡಿಸೇಲ್ ಕಾರುಗಳಿಂದಾಗಿರುವ ಆರೋಗ್ಯ ನಷ್ಟಕ್ಕೆ ಭಾರೀ ಪ್ರಮಾಣದ ಪರಿಹಾರ ಕೋರಿತ್ತು. ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ್ದ ನಾಲ್ವರು ನ್ಯಾಯಮೂರ್ತಿಗಳ ಹಸಿರು ಪೀಠವು ಫೋಕ್ಸ್‌ವ್ಯಾಗನ್‌ಗೆ ರೂ.171. 34 ಕೋಟಿ ಪರಿಹಾರ ನೀಡುವಂತೆ ಮಹತ್ವದ ತೀರ್ಪು ನೀಡಿದ್ದಲ್ಲದೇ ಮಾಲಿನ್ಯ ತಡೆಯಲು ಮತ್ತೆ ವಿಫಲವಾದಲ್ಲಿ ನಿಷೇಧದ ಅಸ್ತ್ರ ಪ್ರಯೋಗಿಸುವುದಾಗಿ ಖಡಕ್ ಸೂಚನೆ ನೀಡಿತ್ತು.