ಅವೆಂಜರ್ ಟ್ರೇಲರ್ ಜೊತೆಯಲ್ಲಿ ಬಂದ ಆಡಿಯ ಇ-ಟ್ರಾನ್ ಜಾಹೀರಾತು

ಜರ್ಮನ್ ಕಾರು ತಯಾರಕ ಆಡಿ ಕಂಪನಿಯು ಮಾರ್ವೆಲ್ ಸಿನಿಮ್ಯಾಟಿಕ್ ಯುನಿವರ್ಸ್ ಜೊತೆಯಲ್ಲಿ ದೀರ್ಘ ಕಾಲದ ಸಂಬಂಧವನ್ನು ಹೊಂದಿದೆ. ಪ್ರಥಮ ಐರನ್ ಮ್ಯಾನ್ ಮೂವಿಯಲ್ಲಿ ಟೋನಿ ಸ್ಟಾರ್ಕ್ ಚಲಾಯಿಸಿದ ಆರ್8 ನಿಂದ ಹಿಡಿದು ನಂತರ ಬಂದ ಅನೇಕ ಮೂವಿಗಳಲ್ಲಿ ಆಡಿ ಕಾರನ್ನು ಕಾಣಬಹುದು. ಆವೆಂಜರ್ಸ್ ಸರಣಿಯ ಚಿತ್ರಗಳಲ್ಲಿ ಮುಂಭಾಗದಲ್ಲಿ 5 ರಿಂಗುಗಳನ್ನು ಹೊಂದಿರುವ ಆಡಿ ಕಾರನ್ನು ಕಾಣುವುದು ಸಾಮಾನ್ಯ ಸಂಗತಿಯಾಗಿದೆ.

ಅವೆಂಜರ್ಸ್, ಎಂಡ್ ಗೇಮ್ ಚಿತ್ರದ ಟ್ರೇಲರ್ ಜೊತೆಯಲ್ಲಿಯೇ ಆಡಿಯು ತನ್ನ ಹೊಸ ಇ-ಟ್ರಾನ್ ಕಾರಿಗೆ ಸಂಬಂಧಪಟ್ಟ ಜಾಹೀರಾತನ್ನು ಬಿಡುಗಡೆ ಮಾಡಿದೆ.

ಹೊಸ ಮೂವಿಯ ಟ್ರೇಲರ್ ನಲ್ಲಿ ಕ್ಯಾಪ್ಟನ್ ಮಾರ್ವೆಲ್, ತನ್ನ ಹೊಸ ಥಾನೋಸ್ ಫೈಟಿಂಗ್ ಪಾರ್ಟನರ್ ಬಗ್ಗೆ ಮತ್ತು ಚಿತ್ರದಲ್ಲಿ ಸ್ಕ್ರಲ್ ಗಳಿಗೆ ತಾನು ಮಾಡಿದ ಸಹಾಯದ ಬಗ್ಗೆ ವಿವರಿಸುತ್ತಾರೆ.

ಐರನ್ ಮ್ಯಾನ್, ಹಲ್ಕ್ ಮತ್ತು ಕಂಪನಿಯ ಬಗ್ಗೆ ವಿವರಿಸಲು ಅಟಿಕೆಗಳನ್ನು ಬಳಸಲಾಗಿತ್ತು ತದ ನಂತರ ಆಡ್ ಇ-ಟ್ರಾನ್ ಎಸ್‍ಯುವಿ ಯ ಬಗ್ಗೆ ತೋರಿಸಲಾಯಿತು.

ಅವೆಂಜರ್ ಟ್ರೇಲರ್ ಜೊತೆಯಲ್ಲಿ ಬಂದ ಆಡಿಯ ಇ-ಟ್ರಾನ್ ಜಾಹೀರಾತು

ಚಿತ್ರದ ಟ್ರೇಲರ್ ನಲ್ಲಿ ಈ ಕಾರು ಹಾರುವುದೇ ಎಂದು ಪ್ರಶ್ನಿಸುವ ಕ್ಯಾಪ್ಟನ್ ಮಾರ್ವೆಲ್ ಫೋಟಾನ್ ಬ್ಲಾಸ್ಟ್ ಅನ್ನು ಬಳಸಿ ಇವಿಯನ್ನು ಚಾರ್ಜ್ ಮಾಡುತ್ತಾರೆ. ನಂತರ ಕಾರಿನ ಡ್ರೈವರ್ ಸೀಟಿನಲ್ಲಿ ಕುಳಿತು ಕೊಳ್ಳುವರು. ಕ್ಯಾಪ್ಟನ್ ಮಾರ್ವೆಲ್ ರವರ ಮೂವಿಯಲ್ಲಿ ಮತ್ತೊಮ್ಮೆ ಬ್ಯಾಕ್ ಸೀಟ್ ನಲ್ಲಿ ಕುಳಿತಿರುವ ಗೂಸ್ ದಿ ಫ್ಲರ್ಕನ್ ಬೆಕ್ಕನ್ನು ಕಾಣಬಹುದು.

ಅವೆಂಜರ್ ಟ್ರೇಲರ್ ಜೊತೆಯಲ್ಲಿ ಬಂದ ಆಡಿಯ ಇ-ಟ್ರಾನ್ ಜಾಹೀರಾತು

ಕ್ಯಾಪ್ಟನ್ ಮಾರ್ವೆಲ್ ಕಣ್ಣುಗಳು ಹೊತ್ತಿಕೊಂಡಂತೆ ಕಾಣುತ್ತವೆ ಮತ್ತು ಆಕೆಯ ಜೊತೆಯಲ್ಲಿರುವವರು ಕ್ಯಾಪ್ಟನ್ ಮಾರ್ವೆಲ್ ರವರಿಗೆ ಕಾರಿನ ಸ್ಪೀಡ್ ಲಿಮಿಟ್ ಬಗ್ಗೆ ಹೇಳುತ್ತಿರುವುದನ್ನು ಕಾಣಬಹುದು.

ಅವೆಂಜರ್ ಟ್ರೇಲರ್ ಜೊತೆಯಲ್ಲಿ ಬಂದ ಆಡಿಯ ಇ-ಟ್ರಾನ್ ಜಾಹೀರಾತು

ಆಡಿ ಇ-ಟ್ರಾನ್ ಕಾರನ್ನು ಕಾನ್ಸೆಪ್ಟ್ ಆಗಿ 2015ರ ಫ್ರಾಂಕ್ ಫರ್ಟ್ ಮೋಟಾರ್ ಶೋ ನಲ್ಲಿ ಅನಾವರಣಗೊಳಿಸಲಾಗಿತ್ತು. ಈ ಎಲೆಕ್ಟ್ರಿಕ್ ಎಸ್‍ಯುವಿ ಯ ಉತ್ಪಾದನಾ ಆವೃತ್ತಿಯನ್ನು ಕಳೆದ ವರ್ಷದ ಅಕ್ಟೋಬರ್‍‍‍‍‍ನಲ್ಲಿ ಪ್ಯಾರಿಸ್ ಮೋಟಾರ್ ಶೋನಲ್ಲಿ ಅನಾವರಣಗೊಳಿಸಲಾಗಿತ್ತು. ಆಡಿಯ ಇ-ಟ್ರಾನ್ ಎಸ್‍ಯುವಿ 2 ಎಲೆಕ್ಟ್ರಿಕ್ ಮೋಟಾರ್‍‍ಗಳನ್ನು ಹೊಂದಿದ್ದು, 402 ಬಿಹೆಚ್‍ಪಿ ಮತ್ತು 650 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

MUST READ: ಆಡಿ ಆರ್8ರ ಬದಲಿಗೆ ರಸ್ತೆಗಿಳಿಯಲಿರುವ ಆಲ್ ಎಲೆಕ್ಟ್ರಿಕ್ ಸೂಪರ್ ಕಾರು

ಅವೆಂಜರ್ ಟ್ರೇಲರ್ ಜೊತೆಯಲ್ಲಿ ಬಂದ ಆಡಿಯ ಇ-ಟ್ರಾನ್ ಜಾಹೀರಾತು

ಇ-ಟ್ರಾನ್ ಎಸ್‍ಯುವಿ 95 ಕೆಡಬ್ಲ್ಯೂಹೆಚ್ ಬ್ಯಾಟರಿ ಪ್ಯಾಕ್ ಹೊಂದಿದ್ದು, ಒಂದು ಬಾರಿಗೆ ಚಾರ್ಜ್ ಮಾಡಿದರೆ 417 ದೂರ ಚಲಿಸಬಹುದಾಗಿದೆ. ಈ ಬ್ಯಾಟರಿ ಪ್ಯಾಕನ್ನು 150 ಕೆಡಬ್ಲ್ಯೂ ಡಿಸಿ ಫಾಸ್ಟ್ ಚಾರ್ಜರ್ ನಲ್ಲಿ ಪ್ಲಗ್ ಮಾಡಿದರೆ, 30 ನಿಮಿಷಗಳಲ್ಲಿ 80% ಚಾರ್ಜನ್ನು ಮರಳಿ ಪಡೆಯಬಹುದು. ಮನೆಗಳಲ್ಲಿರುವ 11 ಕೆಡಬ್ಲ್ಯೂ ನಿಂದಲೂ ಚಾರ್ಜ್ ಮಾಡಬಹುದಾಗಿದ್ದು, ಹೀಗೆ ಚಾರ್ಜ್ ಮಾಡುವುದರಿಂದ ಇ-ಟ್ರಾನ್ ಎಸ್‍ಯುವಿ ಎಂಟೂವರೆ ಗಂಟೆಗಳಲ್ಲಿ ಪೂರ್ತಿಯಾಗಿ ಚಾರ್ಜ್ ಆಗುವುದು. 22 ಕೆಡಬ್ಲ್ಯೂ ಚಾರ್ಜರ್ ಬಳಸಿದರೆ ನಾಲ್ಕು ಕಾಲು ಗಂಟೆಗಳಲ್ಲಿ ಪೂರ್ತಿಯಾಗಿ ಚಾರ್ಜ್ ಮಾಡಬಹುದು.

Most Read Articles

Kannada
Read more on ಆಡಿ audi
English summary
Audi's 'The Debriefing' Is A Hilarious Avengers Themed e-Tron Ad — Video - Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X