ಭಾರತದಲ್ಲಿ ಆಡಿ ಇ-ಟ್ರಾನ್ ಬಿಡುಗಡೆಯ ಮಾಹಿತಿ ಬಹಿರಂಗ

ಆಡಿ ಸಂಸ್ಥೆಯು ತನ್ನ ಮೊದಲ ಎಲೆಕ್ಟ್ರಿಕ್ ಎಸ್‌ಯುವಿ ಇ-ಟ್ರಾನ್ ಆವೃತ್ತಿಯನ್ನು ಭಾರತದಲ್ಲಿ ಈಗಾಗಲೇ ಪ್ರದರ್ಶನಗೊಳಿಸಿದ್ದು, ಮುಂದಿನ ಕೆಲವೇ ತಿಂಗಳ ಅವಧಿಯಲ್ಲಿ ಬಿಡುಗಡೆಯ ಸುಳಿವು ನೀಡಿದೆ. ಮಾಹಿತಿಗಳ ಪ್ರಕಾರ ಹೊಸ ಕಾರು 2020ರ ಮೊದಲ ತ್ರೈಮಾಸಿಕ ಅವಧಿಯಲ್ಲಿ ಬಿಡುಗಡೆಯಾಗಲಿದ್ದು, ವಿನೂತನ ತಂತ್ರಜ್ಞಾನ ಪ್ರೇರಣೆ ಹೊಂದಿರುವ ಇ-ಟ್ರಾನ್ ಹಲವು ಕಾರಣಗಳಿಂದ ವಿಶೇಷ ಎನ್ನಿಸಲಿದೆ.

ಭಾರತದಲ್ಲಿ ಆಡಿ ಇ-ಟ್ರಾನ್ ಬಿಡುಗಡೆಯ ಮಾಹಿತಿ ಬಹಿರಂಗ

ಜರ್ಮನ್ ಆಟೋ ಉತ್ಪಾದನಾ ಸಂಸ್ಥೆಯಾದ ಆಡಿ ತನ್ನ ಬಹುನೀರಿಕ್ಷಿತ ಇ-ಟ್ರಾನ್ ಎಲೆಕ್ಟ್ರಿಕ್ ಎಸ್‌ಯುವಿ ಕಾರನ್ನು ಕಳೆದ ತಿಂಗಳ ಹಿಂದಷ್ಟೇ ಭಾರತದಲ್ಲಿ ಮೊದಲ ಬಾರಿಗೆ ಅನಾವರಣಗೊಳಿಸಿದ್ದು, ಹತ್ತು ಹಲವು ಅತ್ಯಾಧುನಿಕ ತಾಂತ್ರಿಕ ಸೌಲಭ್ಯಗಳ ಪ್ರೇರಣೆ ಹೊಂದಿರುವ ಇ-ಟ್ರಾನ್ ಕಾರು ಐಷಾರಾಮಿ ಕಾರುಗಳಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದ್ದು, ಹಸಿರು ವಾಹನಗಳ ಪಟ್ಟಿಯಲ್ಲಿ ಅಗ್ರಸ್ಥಾನ ಗಿಟ್ಟಿಸಿಕೊಳ್ಳುವ ನೀರಿಕ್ಷೆಯಲ್ಲಿದೆ.

ಭಾರತದಲ್ಲಿ ಆಡಿ ಇ-ಟ್ರಾನ್ ಬಿಡುಗಡೆಯ ಮಾಹಿತಿ ಬಹಿರಂಗ

ವಿಶ್ವಾದ್ಯಂತ ಎಲೆಕ್ಟ್ರಿಕ್ ವಾಹನಗಳಿಗೆ ಭಾರೀ ಬೇಡಿಕೆ ಸೃಷ್ಠಿಯಾಗುತ್ತಿರುವ ಹಿನ್ನೆಲೆಯಲ್ಲಿ ಆಡಿ ಸಂಸ್ಥೆಯು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಇ-ಟ್ರಾನ್ ಎಲೆಕ್ಟ್ರಿಕ್ ಐಷಾರಾಮಿ ಎಸ್‌ಯುವಿ ಮಾದರಿಯನ್ನು ಅಭಿವೃದ್ಧಿಪಡಿಸಿದ್ದು, ಈಗಾಗಲೇ ಯುರೋಪ್ ಮಾರುಕಟ್ಟೆಗಳಲ್ಲಿ ಬಿಡುಗಡೆಗಾಗಿ ಸಿದ್ದತೆಗೊಳ್ಳುತ್ತಿರುವ ಇ-ಟ್ರಾನ್ ಇದೀಗ ಭಾರತದಲ್ಲೂ ಸದ್ದು ಮಾಡುವ ತವಕದಲ್ಲಿದೆ.

ಭಾರತದಲ್ಲಿ ಆಡಿ ಇ-ಟ್ರಾನ್ ಬಿಡುಗಡೆಯ ಮಾಹಿತಿ ಬಹಿರಂಗ

ಶಾರ್ಪ್ ಆ್ಯಂಡ್ ಸ್ಟೈಲ್ ಆವೃತ್ತಿಯಾಗಿರುವ ಇ-ಟ್ರಾನ್ ಕಾರಿನಲ್ಲಿ ಎಲ್ಇಡಿ ಹೆಡ್‌ಲ್ಯಾಂಪ್ಸ್, ಆಕರ್ಷಕ ರೂಫ್ ಲೈನ್, ಬೂಟ್ ಮೇಲೆ ಎಲ್ಇಡಿ ಬಾರ್ಸ್, 20.5-ಇಂಚಿನ ಅಲಾಯ್ ವೀಲ್ಹ್, ರಿಯರ್ ವ್ಯೂ ಮಿರರ್ ಮೇಲೆ ಕ್ಯಾಮೆರಾ ಸೇರಿದಂತೆ ಮುಂಭಾಗ ಚಕ್ರಗಳಲ್ಲಿ 125ಕೆವಿ ಮೋಟಾರ್ ಮತ್ತು ಹಿಂಭಾಗದ ಚಕ್ರಗಳಲ್ಲಿ 140 ಕೆ.ವಿ ಮೋಟಾರ್ ಸಹಾಯದೊಂದಿಗೆ ಆಲ್ ವೀಲ್ಹ್ ಪವರ್‌ ಪಡೆದುಕೊಂಡಿದೆ.

ಭಾರತದಲ್ಲಿ ಆಡಿ ಇ-ಟ್ರಾನ್ ಬಿಡುಗಡೆಯ ಮಾಹಿತಿ ಬಹಿರಂಗ

ಇ-ಟ್ರಾನ್ ಕಾರಿನಲ್ಲಿ 95kWh ಲೀಥಿಯಂ ಅಯಾನ್ ಬ್ಯಾಟರಿ ಸೌಲಭ್ಯವನ್ನು ಹೊಂದಿದ್ದು, ಪ್ರತಿ ಗಂಟೆಗೆ 200ಕಿ.ಮಿ ಟಾಪ್ ಸ್ಪೀಡ್ ಪಡೆದುಕೊಂಡಿದೆ. ಡಿಸಿ ಚಾರ್ಜರ್ ಮೂಲಕ ಅಥವಾ 400 ವೊಲ್ಟ್ಸ್ ಹೋಮ್ ಚಾರ್ಜರ್‌ನೊಂದಿಗೆ 95kWh ಬ್ಯಾಟರಿಯನ್ನು ಕೇವಲ 30 ನಿಮಿಷಗಳಲ್ಲಿ ಶೇ.80 ರಷ್ಟು ಚಾರ್ಜ್ ಮಾಡಿಕೊಳ್ಳಬಹುದಾಗಿದೆ. ಈ ಮೂಲಕ 5.7 ಸೇಕೆಂಡುಗಳಲ್ಲಿ 100 ಕಿ.ಮಿ ಗರಿಷ್ಠ ವೇಗ ಸಾಧಿಸುವ ಇ-ಟ್ರಾನ್ ಕಾರು ಟೆಸ್ಲಾ ಎಕ್ಸ್, ಜಾಗ್ವಾರ್ ಐಪೆಸ್ ಮತ್ತು ಮರ್ಸಿಡಿಸ್ ಬೆಂಝ್ ಇಕ್ಯೂಸಿ ಕಾರುಗಳಿಗೆ ಪ್ರತಿಸ್ಪರ್ಧಿಯಾಗಲಿದೆ.

ಭಾರತದಲ್ಲಿ ಆಡಿ ಇ-ಟ್ರಾನ್ ಬಿಡುಗಡೆಯ ಮಾಹಿತಿ ಬಹಿರಂಗ

ಆದ್ರೆ ಇ-ಟ್ರಾನ್ ಕಾರಿನ ಅಧಿಕೃತ ಮೈಲೇಜ್ ಕುರಿತಾಗಿ ಯಾವುದೇ ಮಾಹಿತಿ ಹಂಚಿಕೊಳ್ಳದ ಆಡಿ ಸಂಸ್ಥೆಯು ಸದ್ಯ ಎಂಜಿನ್ ಕಾರ್ಯಕ್ಷಮತೆ ಕುರಿತಾಗಿ ವಿವಿಧ ಹಂತದ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುತ್ತಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಈ ಕುರಿತಾಗಿ ಮಾಹಿತಿ ಹಂಚಿಕೊಳ್ಳಲಿದೆ.

ಭಾರತದಲ್ಲಿ ಆಡಿ ಇ-ಟ್ರಾನ್ ಬಿಡುಗಡೆಯ ಮಾಹಿತಿ ಬಹಿರಂಗ

ಹಾಗೆಯೇ 4.9-ಮೀಟರ್ ಉದ್ದವಿರುವ ಇ-ಟ್ರಾನ್ ಕಾರು ಸದ್ಯ ಮಾರಾಟವಾಗುತ್ತಿರುವ ಕ್ಯೂ5 ಮತ್ತು ಕ್ಯೂ7 ಕಾರುಗಳಿಂತಲೂ ಉತ್ತಮ ಒಳವಿನ್ಯಾಸವನ್ನು ಹೊಂದಿದ್ದು, 5-ಸೀಟರ್ ಆಸನ ಸೌಲಭ್ಯದೊಂದಿಗೆ 660-ಲೀಟರ್ ಸಾಮಾರ್ಥ್ಯದ ಬೂಟ್ ಸ್ಪೆಸ್ ಪಡೆದುಕೊಂಡಿದೆ.

MOST READ: ಪ್ಲಾಸ್ಟಿಕ್‌ನಿಂದ ಉತ್ಪಾದನೆ ಮಾಡಲಾದ ಈ ಪೆಟ್ರೋಲ್ ದರ ಎಷ್ಟು ಗೊತ್ತಾ?

ಭಾರತದಲ್ಲಿ ಆಡಿ ಇ-ಟ್ರಾನ್ ಬಿಡುಗಡೆಯ ಮಾಹಿತಿ ಬಹಿರಂಗ

ಒಂದು ವೇಳೆ ಇನ್ನು ಹೆಚ್ಚಿನ ಮಟ್ಟದ ಬೂಟ್‌ಸ್ಪೆಸ್ ಬೇಕಿದ್ದಲ್ಲಿ ಎರಡನೇ ಸಾಲಿನ ಆಸನಗಳನ್ನು ಫೋರ್ಡ್ ಮಾಡುವ ಮೂಲಕ 1,725-ಲೀಟರ್‌ನಷ್ಟು ಸ್ಥಳಾವಕಾಶ ಮಾಡಿಕೊಳ್ಳಬಹುದಾಗಿದ್ದು, ಪ್ರಯಾಣಿಕರಿಗೆ ಅರಾಮದಾಯಕ ಪ್ರಯಾಣಕ್ಕೆ ಅನುಕೂಲಕರವಾಗಿದೆ.

MOST READ: ಮಾರುತಿ ಎರ್ಟಿಗಾ ಕಾರಿಗೆ ಪೈಪೋಟಿಯಾಗಿ ವಿನೂತನ ಎಂಪಿವಿ ಬಿಡುಗಡೆ ಮಾಡಲಿದೆ ಹ್ಯುಂಡೈ

ಭಾರತದಲ್ಲಿ ಆಡಿ ಇ-ಟ್ರಾನ್ ಬಿಡುಗಡೆಯ ಮಾಹಿತಿ ಬಹಿರಂಗ

ಇನ್ನು ಇ-ಟ್ರಾನ್ ಕಾರು ಹೊರಭಾಗದ ವಿನ್ಯಾಸದಂತೆಯೇ ಒಳವಿನ್ಯಾಸದಲ್ಲೂ ಐಷಾರಾಮಿ ಕಾರು ಪ್ರಿಯರನ್ನು ಸೆಳೆಯಲಿದ್ದು, ಮ್ಯಾಟ್ರಿಕ್ಸ್ ಟೆಕ್ನಾಲಜಿ ಪ್ರೇರಣೆಯೊಂದಿಗೆ ಮಲ್ಟಿ ಟಚ್‌ಸ್ಕೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ, ಕ್ರಿಯೆಚರ್ ಕಂಫರ್ಟ್, ಬ್ಯಾಂಗ್ ಆ್ಯಂಡ್ ಓಲ್ಪ್‌ಸೆನ್ ಸೌಂಡ್ ಸಿಸ್ಟಂ ಸೌಲಭ್ಯವನ್ನು ಹೊಂದಿರಲಿದೆ.

MOST READ: ಬಿ‍ಎಸ್4 v/s ಬಿ‍ಎಸ್6 - ಹೊಸ ನಿಯಮದಿಂದ ವಾಹನಗಳಲ್ಲಿ ಏನೆಲ್ಲಾ ಚೇಂಜ್?

ಭಾರತದಲ್ಲಿ ಆಡಿ ಇ-ಟ್ರಾನ್ ಬಿಡುಗಡೆಯ ಮಾಹಿತಿ ಬಹಿರಂಗ

ಕಾರಿನ ಒಳಭಾಗವನ್ನು ಸಹ ಗ್ರಾಹಕ ಆದ್ಯತೆ ಮೇರೆಗೆ ವಿವಿಧ 4 ಮಾದರಿಯ ಡ್ಯುಯಲ್ ಬಣ್ಣಗಳ ಇಂಟಿರಿಯರ್ ನೀಡಲಾಗಿದ್ದು, ಹೊಸ ಭಾಗದಲ್ಲಿ 10 ಬಣ್ಣಗಳ ಆಯ್ಕೆ ನೀಡಲಾಗಿದೆ. ಒಟ್ಟಿನಲ್ಲಿ ಹಲವು ವಿಶೇಷತೆಗಳಿಗೆ ಕಾರಣವಾಗಿರುವ ಇ-ಟ್ರಾನ್ ಕಾರು 2020ರ ಆರಂಭದಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿದ್ದು, ಕಾರಿನ ಬೆಲೆಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 80 ಲಕ್ಷದಿಂದ ರೂ. 1.10 ಕೋಟಿ ಇರಬಹುದೆಂದು ಅಂದಾಜಿಸಲಾಗಿದೆ.

Most Read Articles

Kannada
Read more on ಆಡಿ audi
English summary
Audi e-tron will be launched in the Indian market by end 2019 or early 2020. Read in kannada.
Story first published: Saturday, August 31, 2019, 18:43 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X