ಬಿ‍ಎಸ್4 v/s ಬಿ‍ಎಸ್6 - ಹೊಸ ನಿಯಮದಿಂದ ವಾಹನಗಳಲ್ಲಿ ಏನೆಲ್ಲಾ ಚೇಂಜ್?

ಕೇಂದ್ರ ಸರ್ಕಾರವು 2020ರ ಏಪ್ರಿಲ್ 1ರಿಂದ ಬಿ‍ಎಸ್ 4 ಎಂಜಿನ್‍‍ಗಳನ್ನು ಸ್ಥಗಿತಗೊಳಿಸಿ, ಬಿ‍ಎಸ್ 6 ಎಂಜಿನ್‍‍ಗಳನ್ನು ಜಾರಿಗೆ ತರಲಿದೆ. ಈ ಲೇಖನದಲ್ಲಿ ಬಿ‍ಎಸ್ 4 ಹಾಗೂ ಬಿ‍ಎಸ್ 6 ಎಂಜಿನ್‍‍ಗಳ ನಡುವಿನ ವ್ಯತ್ಯಾಸವನ್ನು ತಿಳಿಯೋಣ. ಈ ವ್ಯತ್ಯಾಸಗಳನ್ನು ತಿಳಿಯುವ ಮುನ್ನ ಬಿ‍ಎಸ್ 4 ಬಗ್ಗೆ ತಿಳಿಯೋಣ.

ಬಿ‍ಎಸ್4 v/s ಬಿ‍ಎಸ್6 - ಹೊಸ ನಿಯಮದಿಂದ ವಾಹನಗಳಲ್ಲಿ ಏನೆಲ್ಲಾ ಚೇಂಜ್?

ಬಿ‍ಎಸ್ 6 ಮಾಲಿನ್ಯ ನಿಯಮವು ಭಾರತದಲ್ಲಿ ಜಾರಿಯಾಗುತ್ತಿರುವ ಮಾಲಿನ್ಯ ನಿಯಮಗಳ ಆರನೇ ಆವೃತ್ತಿಯಾಗಿದೆ. ವಿಪರೀತವಾಗಿರುವ ವಾಯು ಮಾಲಿನ್ಯವನ್ನು ತಡೆಗಟ್ಟಲು ಭಾರತಕ್ಕೆ ಬಿ‍ಎಸ್6 ಅಗತ್ಯವಾಗಿ ಬೇಕಾಗಿದೆ. ಬಿ‍ಎಸ್4 ನಿಯಮಗಳಿಗೆ ಹೋಲಿಸಿದರೆ, ಬಿ‍ಎಸ್ 6 ನಿಯಮಗಳು ಹೆಚ್ಚು ಕಟ್ಟುನಿಟ್ಟಾಗಿವೆ. ಇದರಿಂದಾಗಿ ಮಾಲಿನ್ಯ ಪ್ರಮಾಣವು ಕಡಿಮೆಯಾಗಲಿದೆ.

ಬಿ‍ಎಸ್4 v/s ಬಿ‍ಎಸ್6 - ಹೊಸ ನಿಯಮದಿಂದ ವಾಹನಗಳಲ್ಲಿ ಏನೆಲ್ಲಾ ಚೇಂಜ್?

ಭಾರತದಲ್ಲಿ ಬಿಎಸ್6 ಎಂಜಿನ್‍ ವಾಹನಗಳು

ಭಾರತದಲ್ಲಿರುವ ವಾಹನಗಳಲ್ಲಿ ಬಿಎಸ್6 ಇಂಧನವನ್ನು ಬಳಸುವುದರಿಂದ ಬಿಎಸ್6 ಜಾರಿಯಾಗಲಿದೆ. ಬಿ‍ಎಸ್6 ಮಾಲಿನ್ಯ ಪ್ರಮಾಣವನ್ನು ಕಡಿಮೆಗೊಳಿಸುತ್ತದೆ. 2020ರ ಏಪ್ರಿಲ್ 1ರಿಂದ ಎಲ್ಲಾ ಇಂಧನಗಳನ್ನು ಬಿಎಸ್6 ನಿಯಮಗಳಿಗೆ ತಕ್ಕಂತೆ ರೂಪಿಸಲು ಭಾರತ ಸರ್ಕಾರವು ಎಲ್ಲಾ ಪೆಟ್ರೋಲಿಯಂ ತಯಾರಕರಿಗೆ ಗಡುವು ನೀಡಿದೆ.

ಬಿ‍ಎಸ್4 v/s ಬಿ‍ಎಸ್6 - ಹೊಸ ನಿಯಮದಿಂದ ವಾಹನಗಳಲ್ಲಿ ಏನೆಲ್ಲಾ ಚೇಂಜ್?

ಇದರ ಜೊತೆಗೆ, ವಾಹನ ತಯಾರಕ ಕಂಪನಿಗಳೂ ಸಹ ಬಿ‍ಎಸ್6 ಇಂಧನಗಳಿಗೆ ತಕ್ಕಂತೆ ಎಂಜಿನ್‌ಗಳನ್ನು ತಯಾರಿಸಬೇಕಾಗುತ್ತದೆ. ಈ ಕಾರಣಕ್ಕಾಗಿಯೇ ದೇಶದ ಆಟೋಮೊಬೈಲ್ ಉದ್ಯಮವು ನಿಧಾನಗತಿಯನ್ನು ಎದುರಿಸುತ್ತಿದೆ.

ಬಿ‍ಎಸ್4 v/s ಬಿ‍ಎಸ್6 - ಹೊಸ ನಿಯಮದಿಂದ ವಾಹನಗಳಲ್ಲಿ ಏನೆಲ್ಲಾ ಚೇಂಜ್?

ಬಿಎಸ್ 6 ಹಾಗೂ ಬಿಎಸ್ 4 ಕಾರುಗಳ ನಡುವಿನ ವ್ಯತ್ಯಾಸ

ಭಾರತ್ ಸ್ಟೇಜ್‍‍ಗಳ ಪ್ರತಿ ಹಂತದ ಅಳವಡಿಕೆಯು ವಾಹನಗಳಿಂದ ಉಂಟಾಗುವ ಮಾಲಿನ್ಯವನ್ನು ನಿಯಂತ್ರಿಸುವುದಾಗಿದೆ. ಬಿಎಸ್4 ನಿಯಮಗಳನ್ನು 2010ರ ಏಪ್ರಿಲ್‍‍ನಿಂದ ಜಾರಿಗೆ ತರಲಾಗಿದೆ. 2017ರ ಏಪ್ರಿಲ್‍‍ನಿಂದ ದೇಶಾದ್ಯಂತ ಈ ನಿಯಮಗಳನ್ನು ಜಾರಿಗೆ ತರಲಾಗಿದೆ.

ಬಿ‍ಎಸ್4 v/s ಬಿ‍ಎಸ್6 - ಹೊಸ ನಿಯಮದಿಂದ ವಾಹನಗಳಲ್ಲಿ ಏನೆಲ್ಲಾ ಚೇಂಜ್?

ಅಂದಿನಿಂದ, ಎಲ್ಲಾ ವಾಹನಗಳು ಬಳಸುವ ಇಂಧನಗಳು ಬಿಎಸ್4 ನಿಯಮಗಳಿಗೆ ತಕ್ಕಂತೆ ಇವೆ. ಆದರೆ ಹೆಚ್ಚುತ್ತಿರುವ ವಾಯು ಮಾಲಿನ್ಯ ಹಾಗೂ ಹೆಚ್ಚುತ್ತಿರುವ ಕಾರ್ಬನ್ ಡೈ ಆಕ್ಸೈಡ್ ಪ್ರಮಾಣವನ್ನು ಕಡಿಮೆಗೊಳಿಸಲು 2016ರಲ್ಲಿ ಭಾರತ ಸರ್ಕಾರವು 2020ರ ಏಪ್ರಿಲ್ 1ರಿಂದ ಬಿಎಸ್6 ಇಂಧನವನ್ನು ಬಳಸಲು ಆದೇಶಿಸಿದೆ.

ಬಿ‍ಎಸ್4 v/s ಬಿ‍ಎಸ್6 - ಹೊಸ ನಿಯಮದಿಂದ ವಾಹನಗಳಲ್ಲಿ ಏನೆಲ್ಲಾ ಚೇಂಜ್?

ಬಿಎಸ್6 ಇಂಧನವು, ಬಿ‍ಎಸ್4 ಇಂಧನಕ್ಕಿಂತ 20% ಕಡಿಮೆ ಸಲ್ಫರ್ ಅಂಶವನ್ನು ಹೊಂದಿರಲಿದೆ. ಇಂಧನದಲ್ಲಿರುವ ಸಲ್ಫರ್ ಅಂಶವು ಡೀಸೆಲ್ ಎಂಜಿನ್‌ಗಳಲ್ಲಿನ ಇಂಜೆಕ್ಟರ್‌ಗಳ ಲ್ಯುಬ್ರಿಕೇಶನ್‍‍ಗೆ ಸಹಾಯ ಮಾಡುತ್ತದೆ. ವಾಹನಗಳಿಂದ ಉಂಟಾಗುವ ಹೆಚ್ಚಿನ ಪ್ರಮಾಣದ ಕಾರ್ಬನ್ ಡೈ ಆಕ್ಸೈಡ್‍‍ಗೆ ಸಲ್ಫರ್ ಮುಖ್ಯ ಕಾರಣವಾಗಿದೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಬಿ‍ಎಸ್4 v/s ಬಿ‍ಎಸ್6 - ಹೊಸ ನಿಯಮದಿಂದ ವಾಹನಗಳಲ್ಲಿ ಏನೆಲ್ಲಾ ಚೇಂಜ್?

ಸಲ್ಫರ್ ಅಂಶವನ್ನು ಕಡಿಮೆ ಮಾಡುವುದರಿಂದ ವಾಹನಗಳಿಂದ ಉಂಟಾಗುವ ಮಾಲಿನ್ಯವು ಕಡಿಮೆಯಾಗಲಿದೆ. ಆದರೆ ವಾಹನಗಳ ಇಂಜೆಕ್ಟರ್‌ಗಳಿಗೆ ಲ್ಯುಬ್ರಿಕೇಷನ್ ನೀಡುವ ಸವಾಲು ಎದುರಾಗಲಿದೆ. ಇದಕ್ಕಾಗಿ ವಾಹನ ತಯಾರಕರು ವಿಭಿನ್ನ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕಾಗುತ್ತದೆ. ಎಂಜಿನ್ ಬಿಎಸ್6 ಇಂಧನದೊಂದಿಗೆ ಕಾರ್ಯನಿರ್ವಹಿಸುವಂತೆ ಮಾಡಬೇಕಾಗುತ್ತದೆ.

MOST READ: ಪೊಲೀಸ್ ಸ್ಟಿಕ್ಕರ್ ಅಂಟಿಸಿಕೊಂಡು ಸಿಕ್ಕಿಬಿದ್ದ ಐನಾತಿ..!

ಬಿ‍ಎಸ್4 v/s ಬಿ‍ಎಸ್6 - ಹೊಸ ನಿಯಮದಿಂದ ವಾಹನಗಳಲ್ಲಿ ಏನೆಲ್ಲಾ ಚೇಂಜ್?

ಪೆಟ್ರೋಲ್ ಹಾಗೂ ಡೀಸೆಲ್ ವಾಹನಗಳ ನಡುವಿನ ವ್ಯತ್ಯಾಸವನ್ನು ತಿಳಿಯೋಣ. ಬಿಎಸ್6 ನಿಯಮಗಳು ಹೆಚ್ಚಾಗಿ ಪೆಟ್ರೋಲ್ ಎಂಜಿನ್ ವಾಹನಗಳಿಗೆ ಅನ್ವಯಿಸುವುದಿಲ್ಲ. ಏಕೆಂದರೆ ಪೆಟ್ರೋಲ್ ಎಂಜಿನ್ ಕಂಬಸ್ಜನ್‍‍ಗಾಗಿ ಇಂಜೆಕ್ಟರ್‌ಗಳನ್ನು ಬಳಸುವುದಿಲ್ಲ. ಆದರೆ, ಡೀಸೆಲ್ ಎಂಜಿನ್‍‍ಗಳು ಕಂಬಸ್ಜನ್‍‍ಗಾಗಿ ಇಂಜೆಕ್ಟರ್‌ಗಳ ಮೇಲೆ ಹೆಚ್ಚು ಅವಲಂಬಿತವಾಗಿವೆ. ಆದ್ದರಿಂದ ಹೆಚ್ಚಿನ ಪ್ರಮಾಣದ ಮಾಲಿನ್ಯ ಉಂಟಾಗುತ್ತದೆ.

MOST READ: ಈ ನಟಿ ಈಗ ಟುಕ್‍‍ಟುಕ್ ಆಟೋರಾಣಿ..!

ಬಿ‍ಎಸ್4 v/s ಬಿ‍ಎಸ್6 - ಹೊಸ ನಿಯಮದಿಂದ ವಾಹನಗಳಲ್ಲಿ ಏನೆಲ್ಲಾ ಚೇಂಜ್?

ಡೀಸೆಲ್ ಎಂಜಿನ್‍‍ಗಳು ಕಂಬಸ್ಜನ್‍‍ಗಾಗಿ ಇಂಧನವನ್ನು ಮಂಜುಗಡ್ಡೆಯಾಗಿ ಪರಿವರ್ತಿಸಲು ಇಂಜೆಕ್ಟರ್‌ಗಳ ಮೇಲೆ ಅವಲಂಬಿತವಾಗಿವೆ. ಇಂಧನದಲ್ಲಿ ಸಲ್ಫರ್ ಅಂಶವನ್ನು ಕಡಿಮೆಗೊಳಿಸಿ ಕಂಬಸ್ಜನ್‍ಗಾಗಿ ಎಂಜಿನ್ ತಯಾರಿಸಲು ಕಂಪನಿಗಳು ವಿವಿಧ ಕಾಂಪೊನೆಂಟ್‍‍ಗಳನ್ನು ಬಳಸಬೇಕಾಗುತ್ತದೆ.

ಬಿ‍ಎಸ್4 v/s ಬಿ‍ಎಸ್6 - ಹೊಸ ನಿಯಮದಿಂದ ವಾಹನಗಳಲ್ಲಿ ಏನೆಲ್ಲಾ ಚೇಂಜ್?

ಇದರ ಜೊತೆಗೆ, ಡೀಸೆಲ್ ವಾಹನಗಳಲ್ಲಿ ಡೀಸೆಲ್ ಪಾರ್ಟಿಕುಲೇಟ್ ಫಿಲ್ಟರ್ (ಡಿಪಿಎಫ್) ಹಾಗೂ ಸೆಲೆಕ್ಟಿವ್ ಕ್ಯಾಟಲಿಟಿಕ್ ರಿಡಕ್ಷನ್ (ಎಸ್‌ಸಿಆರ್) ಸಹ ಅಳವಡಿಸಬೇಕಾಗುತ್ತದೆ. ಇವುಗಳು ಎನ್‍ಒ‍ಎಕ್ಸ್ ಹೊರಸೂಸುವಿಕೆಯನ್ನು ಕಡಿಮೆ ಮಾಡಲಿ ಎಕ್ಸಾಸ್ಟ್ ಗ್ಯಾಸ್‍‍ಗಳಿಗೆ ಸಹಾಯ ಮಾಡುತ್ತವೆ. ಇದರಿಂದಾಗಿ ಮಾಲಿನ್ಯವು ಕಡಿಮೆಯಾಗುತ್ತದೆ.

ಬಿ‍ಎಸ್4 v/s ಬಿ‍ಎಸ್6 - ಹೊಸ ನಿಯಮದಿಂದ ವಾಹನಗಳಲ್ಲಿ ಏನೆಲ್ಲಾ ಚೇಂಜ್?

ಈ ಎಲ್ಲಾ ಬದಲಾವಣೆಗಳನ್ನು ಹೊಂದಿರುವ ಡೀಸೆಲ್ ಎಂಜಿನ್ ತಯಾರಿಸಲು ಹೆಚ್ಚಿನ ಪ್ರಮಾಣದ ವೆಚ್ಚವಾಗುತ್ತವೆ. ಇದರಿಂದಾಗಿ ಕಾರುಗಳ ಬೆಲೆಯೂ ಹೆಚ್ಚಾಗಿ, ಗ್ರಾಹಕರಿಗೆ ಹೊರೆಯಾಗುತ್ತದೆ. ಮಾರುಕಟ್ಟೆಯ ವಿಶ್ಲೇಷಕರ ಪ್ರಕಾರ, ಬಿಎಸ್4 ನಿಂದ ಬಿಎಸ್6ಗೆ ಎಂಜಿನ್‍‍ಗಳನ್ನು ಬದಲಿಸುವುದರಿಂದ ಕಾರುಗಳ ಬೆಲೆಗಳು 10%ನಿಂದ 15%ನಷ್ಟು ಹೆಚ್ಚಾಗುತ್ತವೆ. ಆದರೆ ಇದರಿಂದ ವಾಯು ಮಾಲಿನ್ಯ ಕಡಿಮೆಯಾಗುವುದು ಖಚಿತ.

ಬಿ‍ಎಸ್4 v/s ಬಿ‍ಎಸ್6 - ಹೊಸ ನಿಯಮದಿಂದ ವಾಹನಗಳಲ್ಲಿ ಏನೆಲ್ಲಾ ಚೇಂಜ್?

ಸರ್ಕಾರವು, ಹೊಸ ಮಾಲಿನ್ಯ ನಿಯಮಗಳ ಜೊತೆಗೆ ಎಲ್ಲಾ ವಾಹನಗಳು ಆನ್‌ಬೋರ್ಡ್ ಡಯಾಗ್ನೋಸ್ಟಿಕ್ಸ್ (ಒಬಿಡಿ) ಅಳವಡಿಸಿಕೊಳ್ಳುವುದನ್ನು ಕಡ್ಡಾಯಗೊಳಿಸಿದೆ. ಬಿಎಸ್4ನಿಂದ ಬಿಎಸ್6ಗೆ ಬದಲಾಗುವುದರಿಂದ ಉಂಟಾಗುವ ಮಾಲಿನ್ಯ ಪ್ರಮಾಣವು ಡೀಸೆಲ್ ವಾಹನಗಳಿಂದ 70% ಹಾಗೂ ಪೆಟ್ರೋಲ್ ವಾಹನಗಳಿಂದ 25%ನಷ್ಟು ಕಡಿಮೆಯಾಗಲಿದೆ.

ಬಿ‍ಎಸ್4 v/s ಬಿ‍ಎಸ್6 - ಹೊಸ ನಿಯಮದಿಂದ ವಾಹನಗಳಲ್ಲಿ ಏನೆಲ್ಲಾ ಚೇಂಜ್?

ಬಿಎಸ್ 4 ವಾಹನವು ಬಿಎಸ್ 6 ಇಂಧನದಲ್ಲಿ ಚಲಿಸಬಹುದೇ?

ಪೆಟ್ರೋಲ್‌ ಎಂಜಿನ್ ವಾಹನಗಳಿಗೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ. ಆದರೆ ಡೀಸೆಲ್ ಎಂಜಿನ್‌ಗಾಗಿ, ಬಿಎಸ್6 ಇಂಧನವು ಕಡಿಮೆ ಸಲ್ಫರ್ ಹೊಂದುವುದರಿಂದ, ಡೀಸೆಲ್ ಎಂಜಿನ್‌ಗಳಲ್ಲಿನ ಇಂಜೆಕ್ಟರ್‌ಗಳನ್ನು ಸರಿಯಾಗಿ ಲ್ಯುಬ್ರಿಕೇಟ್ ಆಗುವುದಿಲ್ಲ. ಬಿಎಸ್4 ಕಾರುಗಳಲ್ಲಿ ಬಿಎಸ್6 ಇಂಧನವನ್ನು ಬಳಸುವುದರಿಂದ ಇಂಜೆಕ್ಟರ್‌ಗಳು ಹಾನಿಗೊಳಗಾಗಬಹುದು.

ಬಿ‍ಎಸ್4 v/s ಬಿ‍ಎಸ್6 - ಹೊಸ ನಿಯಮದಿಂದ ವಾಹನಗಳಲ್ಲಿ ಏನೆಲ್ಲಾ ಚೇಂಜ್?

ಬಿ‍ಎಸ್6 ಕಾರುಗಳಲ್ಲಿ ಬಿ‍ಎಸ್4 ಇಂಧನವನ್ನು ಬಳಸಬಹುದೇ?

ಪೆಟ್ರೋಲ್ ವಾಹನಗಳಿಗೆ ಯಾವುದೇ ತೊಂದರೆಯಾಗುವುದಿಲ್ಲ. ಆದರೆ, ಡೀಸೆಲ್ ವಾಹನಗಳು ಡೀಸೆಲ್ ಪರ್ಟಿಕ್ಯುಲೇಟ್ ಫಿಲ್ಟರ್‌ (ಡಿಪಿಎಫ್) ಹೆಚ್ಚಿನ ಸಲ್ಫರ್ ಅಂಶದಿಂದಾಗಿ ಮುಚ್ಚಿಹೋಗುತ್ತದೆ.

ಬಿ‍ಎಸ್4 v/s ಬಿ‍ಎಸ್6 - ಹೊಸ ನಿಯಮದಿಂದ ವಾಹನಗಳಲ್ಲಿ ಏನೆಲ್ಲಾ ಚೇಂಜ್?

ಭಾರತದಲ್ಲಿ ಬಿಎಸ್6 ಕಾರುಗಳು

ಬಹುತೇಕ ವಾಹನ ತಯಾರಕ ಕಂಪನಿಗಳು ತಮ್ಮ ಕಾರುಗಳನ್ನು ಬಿಎಸ್6 ಎಂಜಿನ್‍‍ಗಳೊಂದಿಗೆ ಮಾರಾಟ ಮಾಡುತ್ತಿದ್ದಾರೆ. ದೇಶಿಯ ಮಾರುಕಟ್ಟೆಯಲ್ಲಿರುವ ಬಿಎಸ್6 ಎಂಜಿನ್ ಹೊಂದಿರುವ ಕಾರುಗಳೆಂದರೆ

1. ಮರ್ಸಿಡಿಸ್ ಬೆಂಜ್ ಇ 200

2. ಜೀಪ್ ಕಂಪಾಸ್ ಟ್ರೈಲ್ಹಾಕ್

3. ಕಿಯಾ ಸೆಲ್ಟೋಸ್

4. ಮಾರುತಿ ಸುಜುಕಿ ಎರ್ಟಿಗಾ

ಬಿ‍ಎಸ್4 v/s ಬಿ‍ಎಸ್6 - ಹೊಸ ನಿಯಮದಿಂದ ವಾಹನಗಳಲ್ಲಿ ಏನೆಲ್ಲಾ ಚೇಂಜ್?

ಕಂಪನಿಗಳು ಬಿಎಸ್6 ಡೀಸೆಲ್ ಎಂಜಿನ್ ಹೊಂದಿರುವ ವಾಹನಗಳನ್ನು ತಯಾರಿಸಲು ಸ್ವಲ್ಪ ಸಮಯ ತೆಗೆದುಕೊಳ್ಳಲಿವೆ. ಬಹಳಷ್ಟು ಕಂಪನಿಗಳು ಸಣ್ಣ ಡೀಸೆಲ್ ಎಂಜಿನ್‌ ಹೊಂದಿರುವ ವಾಹನಗಳ ಉತ್ಪಾದನೆಯನ್ನು ನಿಲ್ಲಿಸಿ, ವಿದ್ಯುತ್ ಅಥವಾ ಪೆಟ್ರೋಲ್ ಹೈಬ್ರಿಡ್ ಪವರ್‌ಟ್ರೇನ್‌ ವಾಹನಗಳನ್ನು ಉತ್ಪಾದಿಸಲಿದ್ದಾರೆ. ಏಪ್ರಿಲ್ 2020ರ ವೇಳೆಗೆ ಸಣ್ಣ ಸಾಮರ್ಥ್ಯದ ಡೀಸೆಲ್ ಎಂಜಿನ್ ಹೊಂದಿರುವ ವಾಹನಗಳ ಉತ್ಪಾದನೆಯನ್ನು ನಿಲ್ಲಿಸುವುದಾಗಿ ಮಾರುತಿ ಸುಜುಕಿ ಹಾಗೂ ಟಾಟಾ ಮೋಟಾರ್ಸ್ ಕಂಪನಿಗಳು ಘೋಷಿಸಿವೆ.

ಬಿ‍ಎಸ್4 v/s ಬಿ‍ಎಸ್6 - ಹೊಸ ನಿಯಮದಿಂದ ವಾಹನಗಳಲ್ಲಿ ಏನೆಲ್ಲಾ ಚೇಂಜ್?

ಭಾರತದಲ್ಲಿ ಬಿ‍ಎಸ್ ಇತಿಹಾಸ

ಬಿ‍ಎಸ್ ಎಂದರೆ ಭಾರತ್ ಸ್ಟೇಜ್ ಎಂದಾಗಿದೆ. ಭಾರತ್ ಸ್ಟೇಜ್ ಹೇಗೆ ಮತ್ತು ಯಾವಾಗ ಜಾರಿಯಾಯಿತು ಎಂಬುದನ್ನು ನೋಡೋಣ.

2000ನೇ ಇಸವಿಯಲ್ಲಿ ಭಾರತ ಸರ್ಕಾರವು ಭಾರತ್ ಸ್ಟೇಜ್ ಎಂಬ ಮಾಲಿನ್ಯ ನಿಯಮಗಳನ್ನು ಪರಿಚಯಿಸಿತು. ಈ ನಿಯಮಗಳು ಯುರೋಪಿಯನ್ ಮಾಲಿನ್ಯ ನಿಯಮಗಳ ಮೇಲೆ ಆಧಾರಿತವಾಗಿವೆ. ಭಾರತ್ ಸ್ಟೇಜ್ ನಿಯಮಗಳು ವಾಹನಗಳಿಗೆ ಮಾತ್ರ ಅನ್ವಯಿಸುವುದಿಲ್ಲ, ಜೊತೆಗೆ ಈ ವಾಹನಗಳಲ್ಲಿ ಕಾರ್ಯನಿರ್ವಹಿಸಲು ಇಂಧನವನ್ನು ಬಳಸುವ ಎಲ್ಲಾ ಎಕ್ವಿಪ್‍‍ಮೆಂಟ್‍ಗಳಿಗೂ ಅನ್ವಯಿಸುತ್ತವೆ.

ಬಿ‍ಎಸ್4 v/s ಬಿ‍ಎಸ್6 - ಹೊಸ ನಿಯಮದಿಂದ ವಾಹನಗಳಲ್ಲಿ ಏನೆಲ್ಲಾ ಚೇಂಜ್?

ಭಾರತ ಸರ್ಕಾರ ಹಾಗೂ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಗಳು ಆಗಾಗ ಮಾಲಿನ್ಯ ನಿಯಮಗಳನ್ನು ಪರಿಷ್ಕರಿಸುತ್ತವೆ. ಭಾರತ್ ಸ್ಟೇಜ್ 3 ನಿಯಮಗಳು 2010ರ ಅಕ್ಟೋಬರ್‍‍ನಿಂದ ಜಾರಿಗೆ ಬಂದವು. ನಂತರ, ಭಾರತ್ ಸ್ಟೇಜ್4, 2017ರ ಏಪ್ರಿಲ್‍‍ನಿಂದ ದೇಶಾದ್ಯಂತ ಜಾರಿಗೆ ಬಂತು.

ಬಿ‍ಎಸ್4 v/s ಬಿ‍ಎಸ್6 - ಹೊಸ ನಿಯಮದಿಂದ ವಾಹನಗಳಲ್ಲಿ ಏನೆಲ್ಲಾ ಚೇಂಜ್?

2016ರಲ್ಲಿ ಭಾರತ ಸರ್ಕಾರವು ಬಿಎಸ್5 ಬದಲಿಗೆ 2020ರ ವೇಳೆಗೆ ಬಿಎಸ್6 ನಿಯಮಗಳನ್ನು ಅಳವಡಿಸಿಕೊಳ್ಳಲು ಸೂಚಿಸಿತು. ಇದಾದ ನಂತರ ಬಿ‍ಎಸ್6 ನಿಯಮಗಳನ್ನು ಅಳವಡಿಸಿಕೊಳ್ಳಲು ಪೆಟ್ರೋಲಿಯಂ ತಯಾರಕರು, ವಾಹನ ತಯಾರಕರು ಹಾಗೂ ಇತರ ಎಕ್ವಿಪ್‍‍ಮೆಂಟ್ ತಯಾರಕರಿಗೆ 2020ರ ಏಪ್ರಿಲ್ 1ರ ಗಡುವನ್ನು ನೀಡಲಾಯಿತು.

ಬಿ‍ಎಸ್4 v/s ಬಿ‍ಎಸ್6 - ಹೊಸ ನಿಯಮದಿಂದ ವಾಹನಗಳಲ್ಲಿ ಏನೆಲ್ಲಾ ಚೇಂಜ್?

ಕಾರುಗಳನ್ನು ಕೊಳ್ಳುವುದಾದರೆ ಬಿಎಸ್6 ನಿಯಮಗಳಿಗೆ ತಕ್ಕಂತೆ ತಯಾರಾಗಿರುವ ಕಾರುಗಳನ್ನು ಖರೀದಿಸುವುದು ಒಳಿತು. ಏಕೆಂದರೆ, ಮುಂಬರುವ ದಿನಗಳಲ್ಲಿ ಬಿ‍ಎಸ್4 ಸಂಪೂರ್ಣವಾಗಿ ಸ್ಥಗಿತಗೊಳ್ಳಲಿದೆ. ಎಲ್ಲಾ ಮೆಕ್ಯಾನಿಕಲ್‌ಗಳನ್ನು ಎಂಜಿನ್‌ನಲ್ಲಿ ಬಿಎಸ್6 ಆಧಾರಿತವಾಗಿರಲಿವೆ. ಬಿಎಸ್4 ವಾಹನಗಳನ್ನು 2020ರ ಏಪ್ರಿಲ್ 1ರ ನಂತರ ರಿಜಿಸ್ಟರ್ ಮಾಡುವಂತಿಲ್ಲ.

ಬಿ‍ಎಸ್4 v/s ಬಿ‍ಎಸ್6 - ಹೊಸ ನಿಯಮದಿಂದ ವಾಹನಗಳಲ್ಲಿ ಏನೆಲ್ಲಾ ಚೇಂಜ್?

ಬಿಎಸ್6 ಮಾಲಿನ್ಯ ನಿಯಮಗಳು ಜಾರಿಯಾದ ನಂತರ ವಾಯು ಮಾಲಿನ್ಯವು ಗಣನೀಯವಾಗಿ ಕಡಿಮೆಯಾಗಲಿದೆ. ವಾಯು ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಬಿಎಸ್6 ನಿಯಮಗಳಿಗೆ ತಕ್ಕಂತೆ ತಯಾರಾಗಿರುವ ವಾಹನಗಳ ಬಿಡುಗಡೆ ಮೊದಲ ಹೆಜ್ಜೆಯಾಗಿದೆ.

Most Read Articles

Kannada
English summary
BS6 vs BS4 Cars: What Are the Major Differences? Should You Wait For 2020 BS6 Cars? - Read in kannada
Story first published: Friday, August 30, 2019, 13:42 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X