ಆಮದು ನೀತಿಯಲ್ಲಿ ಬದಲಾವಣೆ- ಭಾರತದಲ್ಲಿ ಆಡಿ ಕ್ಯೂ2 ಬಿಡುಗಡೆಯಾಗುವುದು ಪಕ್ಕಾ..!

ಆಡಿ ಸಂಸ್ಥೆಯು ಭಾರತದಲ್ಲಿ ಈಗಾಗಲೇ ಹಲವಾರು ಐಷಾರಾಮಿ ಕಾರುಗಳನ್ನು ಮಾರಾಟ ಮಾಡುತ್ತಿದ್ದು, ಮುಂಬರುವ ದಿನಗಳಲ್ಲಿ ತನ್ನ ಕ್ಯೂ ಸರಣಿಯ ಕ್ಯೂ2 ಮಾದರಿಯನ್ನು ಸಹ ಬಿಡುಗಡೆಯ ಸುಳಿವು ನೀಡಿದೆ. ಇದು ಆಡಿ ಸಂಸ್ಥೆಯ ಅಗ್ಗದ ಬೆಲೆಯ ಕಾರು ಮಾದರಿಯಾಗಿದ್ದು, ಭಾರತದಲ್ಲಿ ಭಾರೀ ಬೇಡಿಕೆ ಪಡೆದುಕೊಳ್ಳುವ ಸಾಧ್ಯತೆಗಳಿವೆ.

ಆಮದು ನೀತಿಯಲ್ಲಿ ಬದಲಾವಣೆ- ಭಾರತದಲ್ಲಿ ಆಡಿ ಕ್ಯೂ2 ಬಿಡುಗಡೆಯಾಗುವುದು ಪಕ್ಕಾ..!

ಕೇಂದ್ರ ಸರ್ಕಾರವು 2018ರ ಸೆಪ್ಟೆಂಬರ್‌ನಲ್ಲಿ ವಾಹನ ಉತ್ಪಾದನಾ ಸಂಸ್ಥೆಗಳ ಮೇಲೆ ಇಷ್ಟು ದಿನಗಳ ವಿಧಿಸಲಾಗಿದ್ದ ಆಮದು ಕಾರುಗಳ ಮಾರಾಟದ ಮೇಲಿನ ಕೆಲವು ನಿರ್ಬಂಧಗಳನ್ನು ಸಡಿಲಿಕೆ ಮಾಡಿದ್ದು, ಯಾವುದೇ ವಾಹನ ಉತ್ಪಾದನಾ ಸಂಸ್ಥೆಯು ಹೊರ ದೇಶದಲ್ಲಿ ಉತ್ಪಾದನೆಯಾಗುವ ತಮ್ಮದೆ ಸಂಸ್ಥೆಯ 2,500 ವಾಹನಗಳನ್ನು ವಾರ್ಷಿಕವಾಗಿ ಯಾವುದೇ ಷರತ್ತುಗಳಿಲ್ಲದೇ ಆಮದು ಮಾಡಿಕೊಳ್ಳಬಹುದು ಎಂಬ ಹೊಸ ನಿಯಮ ರೂಪಿಸಿದೆ. ಹೀಗಾಗಿ ಹೊಸ ನಿಯಮವು ಆಡಿ ಸಂಸ್ಥೆಗೂ ವರದಾನವಾಗಿ ಪರಿಣಮಿಸಿದೆ.

ಆಮದು ನೀತಿಯಲ್ಲಿ ಬದಲಾವಣೆ- ಭಾರತದಲ್ಲಿ ಆಡಿ ಕ್ಯೂ2 ಬಿಡುಗಡೆಯಾಗುವುದು ಪಕ್ಕಾ..!

ಹೊಸ ಆಮದು ನೀತಿಯ ಪ್ರಕಾರ, 3 ಸಾವಿರ ಸಿಸಿ ಕೆಳಮಟ್ಟದ ಪೆಟ್ರೋಲ್ ಎಂಜಿನ್ ಮತ್ತು 2,500 ಸಿಸಿ ಕೆಳಮಟ್ಟದ ಡೀಸೆಲ್ ಎಂಜಿನ್ ಪ್ರೇರಿತ 2,500 ವಾಹನಗಳನ್ನು ಯಾವುದೇ ಷರತ್ತುಗಳಿಲ್ಲದೇ ಆಮದುಪಡೆದುಕೊಳ್ಳಬಹುದಾಗಿದ್ದು, ಇದರಿಂದ ಕ್ಯೂ2 ಕಾರು ಭಾರತ ಪ್ರವೇಶ ಪಡೆಯಲು ಸುಮಗ ಹಾದಿಯಾಗಿದೆ.

ಆಮದು ನೀತಿಯಲ್ಲಿ ಬದಲಾವಣೆ- ಭಾರತದಲ್ಲಿ ಆಡಿ ಕ್ಯೂ2 ಬಿಡುಗಡೆಯಾಗುವುದು ಪಕ್ಕಾ..!

ಹಾಗೆಯೇ ಆಡಿ ಸಂಸ್ಥೆಯು ತನ್ನ ಆರ್8, ಕ್ಯೂ8 ಮತ್ತು ಎ8 ಮಾದರಿಗಳನ್ನು ಸಹ ಆಮದು ಮಾಡಿಕೊಂಡು ಮಾರಾಟ ಮಾಡುವ ತವಕದಲ್ಲಿದ್ದು, ಕೇಂದ್ರ ಸರ್ಕಾರವು ನಿಗದಿಪಡಿಸಿರುವ ಸಂಖ್ಯೆಗಿಂತ ಹೆಚ್ಚಿನ ಮಟ್ಟದ ವಾಹನಗಳನ್ನು ಆಮದು ಮಾಡಿಕೊಳ್ಳುವುದಾದರೇ ಹೆಚ್ಚಿನ ಮಟ್ಟದ ಆಮದು ಸುಂಕ ತೆರಬೇಕಾಗುತ್ತೆ.

ಆಮದು ನೀತಿಯಲ್ಲಿ ಬದಲಾವಣೆ- ಭಾರತದಲ್ಲಿ ಆಡಿ ಕ್ಯೂ2 ಬಿಡುಗಡೆಯಾಗುವುದು ಪಕ್ಕಾ..!

ಇನ್ನು ಕ್ಯೂ2 ಕಾರು ಬಿಡುಗಡೆಗಾಗಿ ಐಷಾರಾಮಿ ಕಾರು ಪ್ರಿಯರು ಕಾಯ್ದುಕುಳಿತಿದ್ದು, ಈ ಕಾರು ಭಾರತದಲ್ಲಿ ಬಿಡುಗೊಂಡಲ್ಲಿ ಹೊಸ ಬದಲಾವಣೆಗೆ ಕಾರಣವಾಗಲಿದೆ. ಯಾಕೆಂದ್ರೆ ಕ್ಯೂ ಸರಣಿ ಕಾರುಗಳಲ್ಲಿ ಅತಿ ಸಣ್ಣ ಕಾರು ಮಾದರಿ ಇದಾಗಿದ್ದು, ಎಕ್ಸ್‌ಶೋರೂಂ ಪ್ರಕಾರ ರೂ.22 ಲಕ್ಷ ರೂ.25 ಲಕ್ಷಕ್ಕೆ ದೊರೆಯುವುದರಲ್ಲಿ ಯಾವುದೇ ಅನುಮಾನವಿಲ್ಲ.

MOST READ: ಹಾಸನದ ಬಳಿ ಬರೋಬ್ಬರಿ 300ಕಿ.ಮೀ ಸ್ಪೀಡ್‌‌ನಲ್ಲಿ ಬೈಕ್ ರೈಡ್ ಮಾಡಿದ ಯುವಕ

ಆಮದು ನೀತಿಯಲ್ಲಿ ಬದಲಾವಣೆ- ಭಾರತದಲ್ಲಿ ಆಡಿ ಕ್ಯೂ2 ಬಿಡುಗಡೆಯಾಗುವುದು ಪಕ್ಕಾ..!

ಜೊತೆಗೆ ಈ ಕಾರು ಸಣ್ಣ ಮಾದರಿಯ ಐಷಾರಾಮಿ ಕಾರು ಎಂಬ ಹೆಗ್ಗಳಿಕೆ ಪಾತ್ರವಾಗಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಎರಡು ಮಾದರಿಗಳಲ್ಲೂ ಖರೀದಿ ಲಭ್ಯವಾಗಲಿರುವ ಕ್ಯೂ2 ಕಾರುಗಳು ಮಿನಿ ಕಂಟ್ರಿಮ್ಯಾನ್ ಮತ್ತು ಬಿಎಂಡಬ್ಲ್ಯು ಎಕ್ಸ್2 ಕಾರುಗಳಿಗೆ ಪೈಪೋಟಿ ನೀಡಲಿದೆ.

Source: Deccan Chronicle

Article Published On: Friday, March 8, 2019, 18:26 [IST]
English summary
Audi Q2 India-Launch Expected. Read in Kannada.
Read more on ಆಡಿ audi
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+