ಪೆಟ್ರೋಲ್ ಆಯ್ಕೆಯಲ್ಲಿ ಮಾತ್ರ ಬಿಡುಗಡೆಯಾಗಲಿರುವ ಆಡಿ ಕ್ಯೂ7

ಭಾರತದಲ್ಲಿ ಬಿಡುಗಡೆಯಾಗಲಿರುವ ಹೊಸ ಆಡಿ ಕ್ಯೂ7 ಫೇಸ್‍‍ಲಿಫ್ಟ್ ಆವೃತ್ತಿಯು ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲಿ ಮಾತ್ರ ಲಭ್ಯವಿರಲಿದೆ. ಆಡಿ ಕಂಪನಿಯು ಡೀಸೆಲ್ ಮಾದರಿಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡದಿರಲು ನಿರ್ಧರಿಸಿದೆ ಎಂದು ವರದಿಗಳು ಪ್ರಕಟವಾಗಿದೆ.

ಪೆಟ್ರೋಲ್ ಆಯ್ಕೆಯಲ್ಲಿ ಮಾತ್ರ ಬಿಡುಗಡೆಯಾಗಲಿರುವ ಆಡಿ ಕ್ಯೂ7

ಆಡಿ ಕ್ಯೂ7 ದೇಶಿಯ ಮಾರುಕಟ್ಟೆಯಲ್ಲಿ ಐಷಾರಾಮಿ ಎಸ್‍ಯು‍ವಿ ವಿಭಾಗದಲ್ಲಿ ಬಹುಬೇಡಿಕೆಯ ಎಸ್‍ಯು‍ವಿಗಳಲ್ಲಿ ಅಗ್ರಸ್ಥಾನದಲ್ಲಿದೆ. ಆಡಿ ಕ್ಯೂ7 ಎಸ್‍ಯು‍ವಿಯು ಹೆಚ್ಚಾಗಿ ಸೆಲಬ್ರಿಟಿಗಳು ಮತ್ತು ಉದ್ಯಮಿಗಳ ಮೆಚ್ಚಿನ ಆಯ್ಕೆಯ ಎಸ್‍ಯು‍ವಿಯಾಗಿದೆ. ಈ ಎಸ್‍‍ಯು‍ವಿಯು ಆಕರ್ಷಕ ವಿನ್ಯಾಸ ಮತ್ತು ಉನ್ನತ ಮಟ್ಟದ ವೈಶಿಷ್ಟ್ಯಗಳನ್ನು ಹೊಂದಿದೆ.

ಪೆಟ್ರೋಲ್ ಆಯ್ಕೆಯಲ್ಲಿ ಮಾತ್ರ ಬಿಡುಗಡೆಯಾಗಲಿರುವ ಆಡಿ ಕ್ಯೂ7

ಆಡಿ ಕ್ಯೂ7 ಎಸ್‍‍ಯು‍ವಿಯು ಫೇಸ್‍ಲಿಫ್ಟ್ ಮಾದರಿಯು ಕಳೆದ ಸೆಪ್ಟೆಂಬರ್‍‍ನಲ್ಲಿ ಫ್ರಾಂಕ್‍‍ಫರ್ಟ್ ಮೋಟಾರ್‍ ಶೋನಲ್ಲಿ ಬಿಡುಗಡೆಗೊಳಿಸಿತ್ತು. ಹೊಸ ಮಾದರಿ ಪ್ರಸ್ತುತ ಮಾದರಿಗಿಂತ 11ಎಂಎಂ ಹೆಚ್ಚು ಉದ್ದವಿರಲಿದೆ. ಈ ಮಾದರಿಯು ಶೀಘ್ರದಲ್ಲೇ ವಿವಿಧ ದೇಶಗಳಲ್ಲಿ ಮಾರಾಟವಾಗಲಿದೆ.

ಪೆಟ್ರೋಲ್ ಆಯ್ಕೆಯಲ್ಲಿ ಮಾತ್ರ ಬಿಡುಗಡೆಯಾಗಲಿರುವ ಆಡಿ ಕ್ಯೂ7

ಯುರೋಪಿಯನ್ ದೇಶಗಳಲ್ಲಿ ಈ ಹೊಸ ಮಾದರಿಯಲ್ಲಿ ಎರಡು ಹೊಸ ಡೀಸೆಲ್ ಎಂಜಿನ್ ಆಯ್ಕೆಗಳನ್ನು ನೀಡಲಾಗುವುದು. ಪೆಟ್ರೋಲ್ ಹೈಬ್ರಿಡ್ ಮಾದರಿಯನ್ನು ಕೂಡ ಯು‍ರೋಪಿನಲ್ಲಿ ಮಾರಾಟ ಮಾಡಲಾಗುತ್ತದೆ ಎಂದು ವರದಿಯಾಗಿದೆ. ಈ ಎಸ್‍ಯು‍ವಿಯನ್ನು ಭಾರತದಲ್ಲಿ ಪೆಟ್ರೋಲ್ ಹೈಬ್ರಿಡ್ ಮಾದರಿಯಲ್ಲಿ ಮಾತ್ರ ಬಿಡುಗಡೆಗೊಳಿಸಲಿದೆ ಎಂದು ವರದಿಯಾಗಿದೆ. ಡೀಸೆಲ್ ಮಾದರಿಯನ್ನು ಬಿಡುಗಡೆಗೊಳಿಸುವುದಿಲ್ಲ ಎಂಬ ಮಾಹಿತಿಗಳು ವರದಿಯಾಗಿದೆ. ಆಡಿ ಬೆಲೆಯು ದುಬಾರಿಯಾಗುವ ಸಾಧ್ಯತೆಗಳಿವೆ.

ಪೆಟ್ರೋಲ್ ಆಯ್ಕೆಯಲ್ಲಿ ಮಾತ್ರ ಬಿಡುಗಡೆಯಾಗಲಿರುವ ಆಡಿ ಕ್ಯೂ7

ಪ್ರಸ್ತುತ ದೇಶಿಯ ಮಾರುಕಟ್ಟೆಯಲ್ಲಿರುವ ಆಡಿ ಕ್ಯೂ7 ಎಸ್‍‍ಯು‍ವಿಯು ಎರಡು ಎಂಜಿನ್ ಆಯ್ಕೆಗಳನ್ನು ಹೊಂದಿದೆ. ಇದರಲ್ಲಿ 3.0 ಲೀಟರ್ ವಿ6 ಟರ್ಬೊ ಡೀಸೆಲ್ ಎಂಜಿನ್ 245.4 ಬಿ‍ಹೆಚ್‍‍ಪಿ ಪವರ್ ಮತ್ತು 600 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ನೂ 2.0 ಲೀಟರ್ ನಾಲ್ಕು ಸಿಲಿಂಡರ್ ಟರ್ಬೊ ಪೆಟ್ರೋಲ್ ಎಂಜಿನ್ 248 ಬಿ‍ಹೆಚ್‍‍ಪಿ ಪವರ್ ಮತ್ತು 370 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎರಡೂ ಎಂಜಿನ್‍‍ಗಳಲ್ಲಿ ಕ್ವಾಟ್ರೋ ಅಲ್-ವ್ಹೀಲ್ ಡ್ರೈವ್ ಸಿಸ್ಟಂನೊಂದಿಗೆ 8 ಸ್ಪೀಡ್ ಟಿಪ್ಟ್ರೋನಿಕ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ.

ಪೆಟ್ರೋಲ್ ಆಯ್ಕೆಯಲ್ಲಿ ಮಾತ್ರ ಬಿಡುಗಡೆಯಾಗಲಿರುವ ಆಡಿ ಕ್ಯೂ7

ದೇಶಿಯ ಮಾರುಕಟ್ಟೆಯಲ್ಲಿರುವ ಪ್ರಸ್ತುತ ಎಸ್‍‍ಯು‍ವಿಯು ಸ್ಟ್ಯಾಂಡರ್ಡ್ ಎಲ್‍ಇಡಿ ಲೈಟಿಂಗ್ ಅನ್ನು ಹೊಂದಿವೆ. ಅಲ್-ವೆದರ್ ಎಲ್ಇಡಿ ಹೆಡ್‍‍ಲ್ಯಾಂಪ್‍ಗಳು ಮತ್ತು ಡಿಆರ್‍ಎಲ್‍ಗಳನ್ನು ಹೊಂದಿದೆ. ಕಾರಿನಲ್ಲಿ ಅಲ್ಯೂಮಿನಿಯಂ ರೂಫ್ ರೈಲ್, ರೇರ್ ಸ್ಪಾಯ್ಲರ್, ಪನಾರೋಮಿಕ್ ಸನ್‍ರೂಫ್ ಸೇರಿದಂತೆ ಇತರ ವೈಶಿಷ್ಟ್ಯಗಳನ್ನು ಹೊಂದಿದೆ.

MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ಪೆಟ್ರೋಲ್ ಆಯ್ಕೆಯಲ್ಲಿ ಮಾತ್ರ ಬಿಡುಗಡೆಯಾಗಲಿರುವ ಆಡಿ ಕ್ಯೂ7

ಇಂಟಿರಿಯರ್‍‍ನಲ್ಲಿ ಕ್ಯಾಬಿನ್‍‍ನ ಪ್ರೀಮಿಯಂ ಲುಕ್ ಅನ್ನು ಹೆಚ್ಚಿಸಲು ಹಲವಾರು ವೈಶಿಷ್ಟ್ಯಗಳನ್ನು ಹೊಂದಿದೆ. ಇದರಲ್ಲಿ ಟಚ್‍ ಸ್ಕ್ರೀನ್ ಇನ್ಪೋಟೇನ್‍‍ಮೆಂಟ್ ಸಿಸ್ಟಂ, ಮಲ್ಟಿಪಲ್ ಝೋನ್ ಕ್ಲೈಮೆಂಟ್ ಕಂಟ್ರೋಲ್ ಸಿಸ್ಟಂ ಮತ್ತು ಇತರ ವೈಶಿಷ್ಟ್ಯಗಳನ್ನು ಹೊಂದಿದೆ.

MOST READ: ಬೈಕ್ ಸವಾರನ ಪ್ರಾಣ ಉಳಿಸಿದ ಆಪಲ್ ವಾಚ್..!

ಪೆಟ್ರೋಲ್ ಆಯ್ಕೆಯಲ್ಲಿ ಮಾತ್ರ ಬಿಡುಗಡೆಯಾಗಲಿರುವ ಆಡಿ ಕ್ಯೂ7

ಆಡಿ ಕ್ಯೂ7 ಬಹುಬೇಡಿಕೆಯನ್ನು ಹೊಂದಿದ್ದರು ಡೀಸೆಲ್ ಮಾದರಿಯಲ್ಲಿ ಬಿಡುಗಡೆಗೊಳಿಸದೆ ಇರುವುದರ ಹಿಂದಿನ ಕಾರಣ ತಿಳಿದು ಬಂದಿಲ್ಲ. ಆದರೆ ಬಿಎಸ್-6 ಮಾಲಿನ್ಯ ನಿಯಮ ಜಾರಿಯಾಗುದರಿಂದ ಈ ನಿರ್ಧಾರವನ್ನು ತೆಗೆದುಕೊಂಡಿರುವ ಸಾಧ್ಯತೆಗಳಿವೆ.

MOST READ: ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ಸಚಿವ ನಿತಿನ್ ಗಡ್ಕರಿ ..!

ಪೆಟ್ರೋಲ್ ಆಯ್ಕೆಯಲ್ಲಿ ಮಾತ್ರ ಬಿಡುಗಡೆಯಾಗಲಿರುವ ಆಡಿ ಕ್ಯೂ7

ಬಿಎಸ್-6 ಮಾಲಿನ್ಯ ನಿಯಮ ಜಾರಿಯಾಗುವುದರಿಂದ ಭಾರತದಲ್ಲಿ ಪೆಟ್ರೋಲ್ ಮತ್ತು ಎಲೆಕ್ಟ್ರಿಕ್ ಮಾದರಿಗಳನ್ನು ಆಡಿ ಬಿಡುಗಡೆಗೊಳಿಸುತ್ತಿದೆ. ಡೀಸೆಲ್ ಮಾದರಿಗಳತ್ತ ಗಮನ ಹರಿಸುವುದಿಲ್ಲ ಎಂದು ಆಡಿ ಕಂಪನಿಯು ಕೆಲವು ದಿನಗಳ ಹಿಂದೆ ಹೇಳಿದ್ದರು.

Most Read Articles

Kannada
Read more on ಆಡಿ audi
English summary
New Audi Q7 Will Be Launched in Petrol Only - Read in Kannada
Story first published: Wednesday, November 6, 2019, 19:33 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X