2020ರ ಆಟೋ ಎಕ್ಸ್‌ಪೋದಿಂದ ಹಿಂದೆ ಸರಿದ ಕಂಪನಿಗಳು

ದೇಶಿಯ ಆಟೋ ಮೊಬೈಲ್ ಉದ್ಯಮವು ನಿಧಾನಗತಿಯ ಪ್ರಗತಿಯನ್ನು ಎದುರಿಸುತ್ತಿದೆ. ಇದರ ಪರಿಣಾಮವು 2020ರಲ್ಲಿ ನಡೆಯುವ ಆಟೋ ಎಕ್ಸ್‌ಪೋದ ಮೇಲಾಗುವ ಸಾಧ್ಯತೆಗಳಿವೆ. ಭಾರತದ ದೊಡ್ಡ ವಾಹನ ತಯಾರಕ ಕಂಪನಿಗಳಾದ ಹೋಂಡಾ ಕಾರ್ಸ್, ಹೀರೋ ಮೊಟೊಕಾರ್ಪ್, ಬಿಎಂಡಬ್ಲ್ಯು ಹಾಗೂ ಅಶೋಕ್ ಲೇಲ್ಯಾಂಡ್ ಕಂಪನಿಗಳು ಈ ಆಟೋ ಎಕ್ಸ್‌ಪೋದಲ್ಲಿ ಭಾಗವಹಿಸುತ್ತಿಲ್ಲ.

2020ರ ಆಟೋ ಎಕ್ಸ್‌ಪೋದಿಂದ ಹಿಂದೆ ಸರಿದ ಕಂಪನಿಗಳು

ಈ ಕಂಪನಿಗಳು ಈಗಾಗಲೇ ಹೊಸ ವಾಹನಗಳನ್ನು ಬಿಡುಗಡೆಗೊಳಿಸಿರುವುದರಿಂದ, ಹೊಸದಾಗಿ ಯಾವುದೇ ವಾಹನಗಳನ್ನು ಪ್ರದರ್ಶಿಸುವುದಿಲ್ಲವಾದ್ದರಿಂದ ಆಟೋ ಎಕ್ಸ್ ಪೋದಲ್ಲಿ ಭಾಗವಹಿಸುತ್ತಿಲ್ಲ. ದೇಶಿಯ ಮಾರುಕಟ್ಟೆಗೆ ಹೊಸದಾಗಿ ಕಾಲಿಟ್ಟಿರುವ ಕಿಯಾ ಹಾಗೂ ಎಂಜಿ ಮೋಟರ್‌ ಕಂಪನಿಗಳು 2020ರ ಆಟೋ ಎಕ್ಸ್‌ಪೋದಲ್ಲಿ ಭಾಗವಹಿಸುತ್ತಿವೆ.

2020ರ ಆಟೋ ಎಕ್ಸ್‌ಪೋದಿಂದ ಹಿಂದೆ ಸರಿದ ಕಂಪನಿಗಳು

ಫೋಕ್ಸ್‌ವ್ಯಾಗನ್, ಸ್ಕೋಡಾ ಮತ್ತು ಗ್ರೇಟ್ ವಾಲ್ ಮೋಟಾರ್ಸ್ (ಚೀನಾದ ಎಸ್‌ಯುವಿ ಮತ್ತು ಪಿಕಪ್ ಟ್ರಕ್‌ಗಳ ಅತಿದೊಡ್ಡ ತಯಾರಕ ಕಂಪನಿ) ಈ ಆಟೋ ಎಕ್ಸ್‌ಪೋದಲ್ಲಿ ಭಾಗವಹಿಸಲಿವೆ. ಐದು ಕಂಪನಿಗಳು ತಲಾ 3,500 ಚದರ ಅಡಿಗಳಷ್ಟು ಜಾಗವನ್ನು ಹೊಂದಿರಲಿವೆ.

2020ರ ಆಟೋ ಎಕ್ಸ್‌ಪೋದಿಂದ ಹಿಂದೆ ಸರಿದ ಕಂಪನಿಗಳು

ಭಾರತದ ಅತಿದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ಸಹ ತನ್ನ ವಾಹನಗಳ ಪ್ರದರ್ಶನಕ್ಕಾಗಿ ಇಷ್ಟೇ ಪ್ರಮಾಣದ ಜಾಗವನ್ನು ಬಳಸಲಿದೆ. ಹ್ಯುಂಡೈ ಮೋಟಾರ್ ಇಂಡಿಯಾ ಈ ಆಟೋ ಎಕ್ಸ್‌ಪೋದಲ್ಲಿ ಭಾಗವಹಿಸುವುದನ್ನು ಖಚಿತಪಡಿಸಿದೆ.

2020ರ ಆಟೋ ಎಕ್ಸ್‌ಪೋದಿಂದ ಹಿಂದೆ ಸರಿದ ಕಂಪನಿಗಳು

ಫೋರ್ಡ್ ಹಾಗೂ ಫಿಯೆಟ್ ಕ್ರಿಸ್ಲರ್ ಕಂಪನಿಗಳು ಈ ಆಟೋ ಎಕ್ಸ್‌ಪೋದಲ್ಲಿ ಭಾಗವಹಿಸುವುದಿಲ್ಲವೆಂದು ತಿಳಿಸಿವೆ. ನಿಸ್ಸಾನ್ ಕಂಪನಿಯು ಈ ಬಗ್ಗೆ ಇನ್ನೂ ಯಾವುದೇ ಖಚಿತ ನಿರ್ಧಾರಕ್ಕೆ ಬಂದಿಲ್ಲ. ಐಷಾರಾಮಿ ಕಾರುಗಳ ಸೆಗ್‍‍ಮೆಂಟಿನಿಂದ ಮರ್ಸಿಡಿಸ್ ಬೆಂಝ್ ಹಾಗೂ ಲೆಕ್ಸಸ್ ಕಂಪನಿಗಳು ಭಾಗವಹಿಸಲಿವೆ.

2020ರ ಆಟೋ ಎಕ್ಸ್‌ಪೋದಿಂದ ಹಿಂದೆ ಸರಿದ ಕಂಪನಿಗಳು

ತಮ್ಮ ಕಂಪನಿಯ ಯಾವುದೇ ಹೊಸ ವಾಹನಗಳ ಬಿಡುಗಡೆಯು ಆಟೋ ಎಕ್ಸ್‌ಪೋದ ವೇಳೆಗೆ ಇರುವುದಿಲ್ಲವಾದರಿಂದ ಈ ಮೇಳದಲ್ಲಿ ಭಾಗವಹಿಸುತ್ತಿಲ್ಲವೆಂದು ಹೋಂಡಾ ಕಾರ್ಸ್ ಇಂಡಿಯಾದ ವಕ್ತಾರರು ತಿಳಿಸಿದ್ದಾರೆ.

2020ರ ಆಟೋ ಎಕ್ಸ್‌ಪೋದಿಂದ ಹಿಂದೆ ಸರಿದ ಕಂಪನಿಗಳು

ಮತ್ತೊಂದೆಡೆ ಎಂಜಿ ಮೋಟಾರ್ ಇಂಡಿಯಾ, 2020ರ ಆಟೋ ಎಕ್ಸ್‌ಪೋದಲ್ಲಿ ಭಾಗವಹಿಸಲು ಉತ್ಸುಕವಾಗಿದೆ. ಈ ಆಟೋ ಎಕ್ಸ್‌ಪೋದಿಂದಾಗಿ ಷೇರುದಾರಗು ಹಾಗೂ ಗ್ರಾಹಕರೊಂದಿಗೆ ಬೆರೆಯಲು ಸಾಧ್ಯವಾಗಲಿದೆ ಎಂದು ಭಾವಿಸಿದೆ. ಪ್ರತಿ ಬಾರಿ ಆಟೋ ಎಕ್ಸ್‌ಪೋ ನಡೆಯುವಾಗ ಅಕ್ಟೋಬರ್ ತಿಂಗಳ ವೇಳೆಗೆ ಬಹುತೇಕ ಎಲ್ಲಾ ಸ್ಥಳ ಹಾಗೂ ಸ್ಟಾಲ್‌ಗಳನ್ನು ಬುಕ್ಕಿಂಗ್ ಮಾಡಲಾಗಿರುತ್ತದೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

2020ರ ಆಟೋ ಎಕ್ಸ್‌ಪೋದಿಂದ ಹಿಂದೆ ಸರಿದ ಕಂಪನಿಗಳು

ಆದರೆ ದೇಶಿಯ ಮಾರುಕಟ್ಟೆಯ ಆಟೋಮೊಬೈಲ್ ಉದ್ಯಮವು ಎದುರಿಸುತ್ತಿರುವ ನಿಧಾನಗತಿಯ ಪ್ರಗತಿ, ಬಿಎಸ್6 ನಿಯಮಗಳಿಗೆ ಬದಲಾವಣೆ, ಹೊಸ ವಾಹನಗಳನ್ನು ಈಗಾಗಲೇ ಬಿಡುಗಡೆಗೊಳಿಸಿರುವುದರಿಂದ ಹಾಗೂ ಹೆಚ್ಚಿನ ವೆಚ್ಚಗಳಿಂದಾಗಿ ಹಲವು ಕಂಪನಿಗಳು 2020ರ ಆಟೋ ಎಕ್ಸ್‌ಪೋದಿಂದ ದೂರ ಉಳಿಯುತ್ತಿವೆ.

MOST READ: ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ಸಚಿವ ನಿತಿನ್ ಗಡ್ಕರಿ ..!

2020ರ ಆಟೋ ಎಕ್ಸ್‌ಪೋದಿಂದ ಹಿಂದೆ ಸರಿದ ಕಂಪನಿಗಳು

ಬಿಎಂಡಬ್ಲ್ಯು ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕರಾದ ರುದ್ರತೇಜ್ ಸಿಂಗ್‍‍ರವರು ಮಾತನಾಡಿ, ಕಂಪನಿಯು ಈಗಾಗಲೇ ಹೊಸ ವಾಹನಗಳನ್ನು ಬಿಡುಗಡೆಗೊಳಿಸಿದ್ದು, ಯಾವುದೇ ಹೊಸ ವಾಹನಗಳನ್ನು ಪ್ರದರ್ಶಿಸುತ್ತಿಲ್ಲ. ಕಂಪನಿಯು ಈಗ ಮಾರ್ಕೆಟಿಂಗ್‍‍ನತ್ತ ಗಮನ ಹರಿಸಿದೆ ಎಂದು ಹೇಳಿದರು.

MOST READ: 35 ಸಾವಿರಕ್ಕೆ ಸಿಗಲಿದೆ ಮ್ಯಾಂಟಿಸ್ ಎಲೆಕ್ಟ್ರಿಕ್ ಬೈಕ್

2020ರ ಆಟೋ ಎಕ್ಸ್‌ಪೋದಿಂದ ಹಿಂದೆ ಸರಿದ ಕಂಪನಿಗಳು

ಬಿ‍ಎಂ‍‍ಡಬ್ಲ್ಯು ಕಂಪನಿಯು ಅಭಿವೃದ್ಧಿಪಡಿಸುತ್ತಿರುವ ವಾಹನಗಳ ಬಿಡುಗಡೆಗಾಗಿ ಹಣವನ್ನು ಬಳಸಲು ಉದ್ದೇಶಿಸಿದೆ. ಸರಿಯಾದ ವಾಹನಗಳೊಂದಿಗೆ, ಸರಿಯಾದ ಸಮಯದಲ್ಲಿ ಕಂಪನಿಯು ಮುಂಬರುವ ದಿನಗಳಲ್ಲಿ ನಡೆಯಲಿರುವ ಆಟೋ ಎಕ್ಸ್‌ಪೋಗೆ ಮರಳಲಿದೆ ಎಂದು ಅವರು ಹೇಳಿದರು.

2020ರ ಆಟೋ ಎಕ್ಸ್‌ಪೋದಿಂದ ಹಿಂದೆ ಸರಿದ ಕಂಪನಿಗಳು

ಹೀರೋ ಮೊಟೊಕಾರ್ಪ್, ಬಜಾಜ್ ಆಟೋ, ಟಿವಿಎಸ್ ಮೋಟಾರ್, ಯಮಹಾ ಹಾಗೂ ರಾಯಲ್ ಎನ್‌ಫೀಲ್ಡ್ ನಂತಹ ದ್ವಿಚಕ್ರ ವಾಹನ ತಯಾರಕ ಕಂಪನಿಗಳೂ ಸಹ 2020ರ ಆಟೋ ಎಕ್ಸ್‌ಪೋದಲ್ಲಿ ಭಾಗವಹಿಸುತ್ತಿಲ್ಲ.

2020ರ ಆಟೋ ಎಕ್ಸ್‌ಪೋದಿಂದ ಹಿಂದೆ ಸರಿದ ಕಂಪನಿಗಳು

ಹೋಂಡಾ ಮೋಟಾರ್‌ಸೈಕಲ್ ಅಂಡ್ ಸ್ಕೂಟರ್ ಇಂಡಿಯಾ ಕಂಪನಿಯು ಸಹ ಈ ಆಟೋ ಎಕ್ಸ್‌ಪೋದಲ್ಲಿ ಭಾಗವಹಿಸುತ್ತಿಲ್ಲ ಎಂಬ ವದಂತಿಗಳಿವೆ. ಆದರೆ ಸುಜುಕಿ ಹಾಗೂ ಪಿಯಾಜಿಯೊ ಕಂಪನಿಗಳು ಈ ಆಟೋ ಎಕ್ಸ್‌ಪೋದಲ್ಲಿ ಭಾಗವಹಿಸುತ್ತಿರುವುದಾಗಿ ತಿಳಿಸಿವೆ.

2020ರ ಆಟೋ ಎಕ್ಸ್‌ಪೋದಿಂದ ಹಿಂದೆ ಸರಿದ ಕಂಪನಿಗಳು

ಹೀರೋ ಮೊಟೊಕಾರ್ಪ್ ಕಂಪನಿಯ ವಕ್ತಾರರು ಮಾತನಾಡಿ, ಬಿಎಸ್ 6 ಮಾಲಿನ್ಯ ನಿಯಮಗಳಿಗೆ ತಕ್ಕಂತೆ ವಾಹನಗಳನ್ನು ಅಭಿವೃದ್ಧಿಪಡಿಸುವ ಕಡೆಗೆ ಗಮನ ಹರಿಸುವ ಉದ್ದೇಶದಿಂದ ಕಂಪನಿಯು 2020ರ ಆಟೋ ಎಕ್ಸ್‌ಪೋದಲ್ಲಿ ಭಾಗವಹಿಸುತ್ತಿಲ್ಲವೆಂದು ತಿಳಿಸಿದರು.

2020ರ ಆಟೋ ಎಕ್ಸ್‌ಪೋದಿಂದ ಹಿಂದೆ ಸರಿದ ಕಂಪನಿಗಳು

ಹೀರೋ ಮೊಟೊಕಾರ್ಪ್‌ನ ವಕ್ತಾರರ ಪ್ರಕಾರ, 2020ರ ಆಟೋ ಎಕ್ಸ್‌ಪೋದಲ್ಲಿ ಭಾಗವಹಿಸಲು ಹಣ ಹಾಗೂ ಮಾನವಶಕ್ತಿಯ ವಿಷಯದಲ್ಲಿ ತಿಂಗಳುಗಳ ತಯಾರಿ ಹಾಗೂ ಸಂಪನ್ಮೂಲಗಳ ಹಂಚಿಕೆ ಅಗತ್ಯವಿರುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ ಇದು ಸಾಧ್ಯವಿಲ್ಲವೆಂದು ಹೇಳಿದರು.

2020ರ ಆಟೋ ಎಕ್ಸ್‌ಪೋದಿಂದ ಹಿಂದೆ ಸರಿದ ಕಂಪನಿಗಳು

ಟ್ರಕ್‌ಗಳ ಸೆಗ್‍‍ಮೆಂಟಿನಲ್ಲಿ ಟಾಟಾ ಮೋಟಾರ್ಸ್ ಮತ್ತು ಮಹೀಂದ್ರಾ ಕಂಪನಿಗಳು ಮಾತ್ರ ತಾವು ಈ ಆಟೋ ಎಕ್ಸ್‌ಪೋದಲ್ಲಿ ಭಾಗವಹಿಸುತ್ತಿರುವುದಾಗಿ ಖಚಿತಪಡಿಸಿವೆ. ಅಶೋಕ್ ಲೇಲ್ಯಾಂಡ್, ಐಷರ್ ಹಾಗೂ ಭಾರತ್ ಬೆಂಜ್‍‍ನಂತಹ ದೊಡ್ಡ ಕಂಪನಿಗಳು ದೆಹಲಿಯಲ್ಲಿ ನಡೆಯಲಿರುವ 2020ರ ಆಟೋ ಎಕ್ಸ್‌ಪೋದಲ್ಲಿ ಭಾಗವಹಿಸದಿರಲು ನಿರ್ಧರಿಸಿವೆ.

2020ರ ಆಟೋ ಎಕ್ಸ್‌ಪೋದಿಂದ ಹಿಂದೆ ಸರಿದ ಕಂಪನಿಗಳು

ಆಟೋ ಎಕ್ಸ್‌ಪೋವನ್ನು ಕೊನೆಯ ಬಾರಿಗೆ 2018ರಲ್ಲಿ ನಡೆಸಲಾಗಿತ್ತು. ಅದರಲ್ಲಿ ಕಂಪನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದವು. ಒಟ್ಟು 119 ಕಂಪನಿಗಳು ಭಾಗವಹಿಸಿದ್ದ 2018ರ ಆಟೋ ಎಕ್ಸ್‌ಪೋದಲ್ಲಿ 500 ವಾಹನಗಳನ್ನು ಪ್ರದರ್ಶಿಸಿಲಾಗಿತ್ತು. ಆ ಪೈಕಿ 22 ವಾಹನಗಳನ್ನು ಬಿಡುಗಡೆಗೊಳಿಸಿದರೆ, 81 ವಾಹನಗಳನ್ನು ಅನಾವರಣಗೊಳಿಸಲಾಗಿತ್ತು. ಜೊತೆಗೆ 18 ಕಾನ್ಸೆಪ್ಟ್ ವಾಹನಗಳನ್ನು ಪ್ರದರ್ಶಿಸಲಾಗಿತ್ತು.

2020ರ ಆಟೋ ಎಕ್ಸ್‌ಪೋದಿಂದ ಹಿಂದೆ ಸರಿದ ಕಂಪನಿಗಳು

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಆಟೋಮೊಬೈಲ್ ಉದ್ಯಮದಲ್ಲಿನ ನಿಧಾನಗತಿಯ ಪ್ರಗತಿಯಿಂದಾಗಿ ಇನ್ನೂ ಹಲವು ಕಂಪನಿಗಳು ಆಟೋ ಎಕ್ಸ್‌ಪೋದಿಂದ ಹಿಂದೆ ಸರಿಯುವ ಸಾಧ್ಯತೆಗಳಿವೆ. ಆಟೋ ಎಕ್ಸ್‌ಪೋದಂತಹ ಮೇಳಗಳಲ್ಲಿ ಖರ್ಚು ಮಾಡುವುದರ ಬದಲಿಗೆ ಕಂಪನಿಗಳು ತಮ್ಮ ಹಣವನ್ನು ಸಂಶೋಧನೆ ಹಾಗೂ ವಾಹನಗಳ ಅಭಿವೃದ್ಧಿಗೆ ಖರ್ಚು ಮಾಡಲು ಬಯಸಿವೆ.

2020ರ ಆಟೋ ಎಕ್ಸ್‌ಪೋದಿಂದ ಹಿಂದೆ ಸರಿದ ಕಂಪನಿಗಳು

ಕೆಲವು ಕಂಪನಿಗಳು ಗುಣಮಟ್ಟದ ವಾಹನ, ಉದ್ದೇಶಿತ ಮಾರ್ಕೆಟಿಂಗ್ ಹಾಗೂ ಅದ್ದೂರಿಯಾದ ಬಿಡುಗಡೆಯನ್ನು ಬಯಸಿವೆ. 2020ರ ಆಟೋ ಎಕ್ಸ್‌ಪೋದಿಂದ ಇನ್ನೂ ಹೆಚ್ಚಿನ ಕಂಪನಿಗಳು ಹಿಂದೆ ಸರಿಯುವ ಸಾಧ್ಯತೆಗಳಿವೆ. ಈ ಆಟೋ ಎಕ್ಸ್‌ಪೋದಲ್ಲಿ ಹೆಚ್ಚಿನ ಪ್ರಮಾಣದ ಸ್ಟಾರ್ಟ್ ಅಪ್ ಹಾಗೂ ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿಗಳು ಭಾಗವಹಿಸುವ ಸಾಧ್ಯತೆಗಳಿವೆ.

Most Read Articles

Kannada
English summary
Auto Expo 2020: Honda, Hero, Royal Enfield, BMW And Others To Skip Event - Read in Kannada
Story first published: Saturday, October 12, 2019, 13:09 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X