ರೂ.10 ಲಕ್ಷದೊಳಗೆ ದೊರಕುವ ಆಟೋಮ್ಯಾಟಿಕ್ ಎಸ್‍‍ಯು‍‍ವಿಗಳಿವು

ಭಾರತದಲ್ಲಿ ಹಲವಾರು ಬಗೆಯ ಕಾರುಗಳ ಮಾರಾಟವಾಗುತ್ತಿದ್ದರೂ, ಎಸ್‍‍ಯು‍‍ವಿಗಳು ಬಹಳ ಜನಪ್ರಿಯವಾಗುತ್ತಿವೆ. ಜನರೂ ಸಹ ಎಸ್‍‍ಯುವಿಗಳನ್ನು ಮುಗಿಬಿದ್ದು ಖರೀದಿಸುತ್ತಿದ್ದಾರೆ. ಎಸ್‍‍ಯುವಿಗಳನ್ನು ಖರೀದಿಸುತ್ತಿರುವ ಜನರು ಮ್ಯಾನುವಲ್ ಎಸ್‍‍ಯುವಿಗಳ ಬದಲಿಗೆ, ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಎಸ್‍‍ಯುವಿಗಳಿಗೆ ಆದ್ಯತೆ ನೀಡುತ್ತಿದ್ದಾರೆ.

ರೂ.10 ಲಕ್ಷದೊಳಗೆ ದೊರಕುವ ಆಟೋಮ್ಯಾಟಿಕ್ ಎಸ್‍‍ಯು‍‍ವಿಗಳಿವು

ಇತ್ತೀಚಿನ ಟ್ರೆಂಡ್ ಅನ್ನು ಗಮನಿಸಿದರೆ, ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಹೊಂದಿರುವ ಬಹುತೇಕ ಎಸ್‍‍ಯು‍‍ವಿಗಳ ಬೆಲೆ ರೂ.10 ಲಕ್ಷಕ್ಕಿಂತ ಹೆಚ್ಚಾಗಿದೆ. ನೀವು ಆಟೋಮ್ಯಾಟಿಕ್ ಎಸ್‍‍ಯುವಿಗಳನ್ನು ಖರೀದಿಸಬಯಸುತ್ತಿದ್ದರೆ, ರೂ.10ಲಕ್ಷದೊಳಗೆ ದೊರೆಯುವ ಎಸ್‍‍ಯುವಿಗಳ ಬಗ್ಗೆ ಮಾಹಿತಿಯನ್ನು ನಿಮಗಾಗಿ ನೀಡುತ್ತಿದ್ದೇವೆ.

ರೂ.10 ಲಕ್ಷದೊಳಗೆ ದೊರಕುವ ಆಟೋಮ್ಯಾಟಿಕ್ ಎಸ್‍‍ಯು‍‍ವಿಗಳಿವು

ಟಾಟಾ ನೆಕ್ಸಾನ್

ಆರಂಭಿಕ ಬೆಲೆ ರೂ.7.94 ಲಕ್ಷ

ಟಾಟಾ ನೆಕ್ಸಾನ್, ಸಬ್ 4 ಮೀಟರ್ ಎಸ್‍‍ಯುವಿ ಸೆಗ್‍‍ಮೆಂಟಿನಲ್ಲಿ ಕೈಗೆಟುಕುವ ದರವನ್ನು ಹೊಂದಿದೆ. ಸ್ಟೈಲಿಶ್ ವಿನ್ಯಾಸವನ್ನು ಹೊಂದಿರುವ ಟಾಟಾ ಕಂಪನಿಯ ನೆಕ್ಸಾನ್ ಎಸ್‍‍ಯುವಿ ಪೆಟ್ರೋಲ್ ಹಾಗೂ ಡೀಸೆಲ್ ಎರಡೂ ಮಾದರಿಗಳಲ್ಲಿ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಗೇರ್‍‍ಬಾಕ್ಸ್ ಹೊಂದಿದೆ. ಈ ಮಾದರಿಗಳ ಬೆಲೆಯು ರೂ.10 ಲಕ್ಷದೊಳಗಿರಲಿದೆ.

ರೂ.10 ಲಕ್ಷದೊಳಗೆ ದೊರಕುವ ಆಟೋಮ್ಯಾಟಿಕ್ ಎಸ್‍‍ಯು‍‍ವಿಗಳಿವು

ಮೂಲ ಮಾದರಿಯಲ್ಲಿರುವ ಪೆಟ್ರೋಲ್ ಎಂಜಿನ್ ನೆಕ್ಸಾನ್ ಕಾರಿನ ಆರಂಭಿಕ ಬೆಲೆಯು ದೆಹಲಿಯ ಎಕ್ಸ್ ಶೋರೂಂ ದರದಂತೆ ರೂ, 7.94 ಲಕ್ಷಗಳಾಗಿದ್ದು, ದೇಶಿಯ ಮಾರುಕಟ್ಟೆಯಲ್ಲಿ ಕೈಗೆಟಕುವ ಬೆಲೆಯನ್ನು ಹೊಂದಿರುವ ಆಟೋಮ್ಯಾಟಿಕ್ ಎಸ್‍‍ಯು‍‍ವಿಯಾಗಿದೆ. ನೆಕ್ಸಾನ್ ಎಸ್‍‍ಯುವಿಯಲ್ಲಿರುವ 1.2 ಲೀಟರಿನ ಪೆಟ್ರೋಲ್ ಎಂಜಿನ್ 108 ಬಿ‍‍ಹೆಚ್‍‍ಪಿ ಪವರ್ ಹಾಗೂ 170 ಎನ್‍ಎಂ ಟಾರ್ಕ್ ಉತ್ಪಾದಿಸಿದರೆ, 1.5 ಲೀಟರಿನ ಡೀಸೆಲ್ ಎಂಜಿನ್ 160 ಬಿ‍‍ಹೆಚ್‍‍ಪಿ ಪವರ್ ಹಾಗೂ 260 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ.

ರೂ.10 ಲಕ್ಷದೊಳಗೆ ದೊರಕುವ ಆಟೋಮ್ಯಾಟಿಕ್ ಎಸ್‍‍ಯು‍‍ವಿಗಳಿವು

ಮಾರುತಿ ಸುಜುಕಿ ವಿಟಾರ ಬ್ರಿಝಾ

ಮೂಲ ಮಾದರಿಯ ಬೆಲೆ ರೂ.8.69 ಲಕ್ಷ

ಮಾರುತಿ ಸುಜುಕಿ ಕಂಪನಿಯ ಬ್ರಿಝಾ ಎಸ್‍‍ಯು‍‍ವಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದಾಗಿನಿಂದ ಸಬ್ 4 ಮೀಟರ್ ಎಸ್‍‍ಯುವಿ ಸೆಗ್‍‍ಮೆಂಟಿನಲ್ಲಿ ಹೆಚ್ಚು ಮಾರಾಟವಾಗುತ್ತಿರುವ ಎಸ್‍‍ಯುವಿಯಾಗಿದೆ. ಈ ಎಸ್‍‍ಯು‍‍ವಿಯನ್ನು ಡೀಸೆಲ್ ಎಂಜಿನ್‍‍ನಲ್ಲಿ ಮಾತ್ರ ಮಾರಾಟ ಮಾಡಲಾಗುತ್ತದೆ. ಗ್ರಾಹಕರ ಬೇಡಿಕೆಯ ಮೇರೆಗೆ ಈ ಎಸ್‍‍ಯು‍‍ವಿಯಲ್ಲಿ ಎ‍ಎಂಟಿ ಗೇರ್‍‍ಬಾಕ್ಸ್ ಅಳವಡಿಸಲಾಗಿದೆ.

ರೂ.10 ಲಕ್ಷದೊಳಗೆ ದೊರಕುವ ಆಟೋಮ್ಯಾಟಿಕ್ ಎಸ್‍‍ಯು‍‍ವಿಗಳಿವು

ಆಟೋ ಗೇರ್ ಸಿಸ್ಟಂ ಹೊಂದಿರುವ ಮೂಲ ಮಾದರಿಯ ವಿ‍‍ಡಿ‍ಐ ಬ್ರಿಝಾ ಎಸ್‍‍ಯು‍‍ವಿಯ ಬೆಲೆಯು ದೆಹಲಿಯ ಎಕ್ಸ್ ಶೋರೂಂ ದರದಂತೆ ರೂ.8.69 ಲಕ್ಷಗಳಾಗಿದೆ. ಹೆಚ್ಚಿನ ಫೀಚರ್‍‍ಗಳನ್ನು ಹೊಂದಿರುವ ಝಡ್‍‍ಡಿ‍ಐ ಆಟೋ ಗೇರ್ ಸಿಸ್ಟಂ ಮಾದರಿಯ ಬೆಲೆಯು ರೂ.9.47 ಲಕ್ಷಗಳಾಗಿದೆ. ವಿಟಾರ ಬ್ರಿಝಾ ಎಸ್‍‍ಯು‍‍ವಿ 1.5 ಲೀಟರಿನ ಡೀಸೆಲ್ ಎಂಜಿನ್ ಹೊಂದಿದ್ದು, ಈ ಎಂಜಿನ್ 89 ಬಿ‍‍ಹೆಚ್‍‍ಪಿ ಪವರ್ ಹಾಗೂ 200 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ.

ರೂ.10 ಲಕ್ಷದೊಳಗೆ ದೊರಕುವ ಆಟೋಮ್ಯಾಟಿಕ್ ಎಸ್‍‍ಯು‍‍ವಿಗಳಿವು

ಹ್ಯುಂಡೈ ವೆನ್ಯೂ

ಮೂಲ ಮಾದರಿಯ ಬೆಲೆ ರೂ.9.35 ಲಕ್ಷ

ಸಬ್ 4 ಮೀಟರ್ ಎಸ್‍‍ಯು‍‍ವಿ ಸೆಗ್‍‍ಮೆಂಟಿನಲ್ಲಿ ಹೊಸದಾಗಿ ಬಿಡುಗಡೆಯಾಗಿರುವ ಹ್ಯುಂಡೈ ಕಂಪನಿಯ ವೆನ್ಯೂ ಹಲವಾರು ಎಂಜಿನ್ ಹಾಗೂ ಗೇರ್ ಬಾಕ್ಸ್ ಆಯ್ಕೆಗಳನ್ನು ಹೊಂದಿದೆ. ಸದ್ಯಕ್ಕೆ ದೇಶಿಯ ಮಾರುಕಟ್ಟೆಯಲ್ಲಿರುವ ಬಲಶಾಲಿ ಎಸ್‍‍ಯುವಿಯಾದ ಈ ಎಸ್‍‍ಯುವಿ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಹೊಂದಿದ್ದು, ರೂ.10 ಲಕ್ಷದೊಳಗಿನ ಬೆಲೆ ಹೊಂದಿದೆ. ಮೂಲ ಮಾದರಿಯ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಹೊಂದಿರುವ ಎಸ್1.0 ಎ‍ಟಿ ಎಸ್‍‍ಯುವಿಯ ಬೆಲೆಯು ದೆಹಲಿಯ ಎಕ್ಸ್ ಶೋರೂಂ ದರದಂತೆ ರೂ.9.35 ಲಕ್ಷಗಳಾಗಿದೆ.

MOST READ: ಜಾಗ್ವಾರ್ ಬದಲು ಬಿ‍ಎಂ‍‍ಡಬ್ಲ್ಯು ಗಿಫ್ಟ್ ಪಡೆದ ಯುವಕ ಮಾಡಿದ್ದೇನು ಗೊತ್ತಾ?

ರೂ.10 ಲಕ್ಷದೊಳಗೆ ದೊರಕುವ ಆಟೋಮ್ಯಾಟಿಕ್ ಎಸ್‍‍ಯು‍‍ವಿಗಳಿವು

ಬೇರೆ ಕಂಪನಿಯ ಎಸ್‍‍ಯುವಿಗಳು ಎ‍ಎಂಟಿ ಅಥವಾ ಸಿವಿಟಿ ಗೇರ್‍‍ಬಾಕ್ಸ್ ಗಳನ್ನು ನೀಡುತ್ತಿದ್ದರೆ, ವೆನ್ಯೂ ಡಿಸಿಟಿ ಗೇರ್‍‍ಬಾಕ್ಸ್ ಅನ್ನು ನೀಡುತ್ತಿರುವ ಏಕೈಕ ಎಸ್‍‍ಯು‍‍ವಿಯಾಗಿದೆ. ವೆನ್ಯೂ ಎಸ್‍‍ಯುವಿಯಲ್ಲಿ ಮೂರು ಸಿಲಿಂಡರ್‍‍ನ 1.0 ಲೀಟರಿನ ಟರ್ಬೊಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದ್ದು, ಈ ಎಂಜಿನ್ 118 ಬಿ‍‍ಹೆಚ್‍‍ಪಿ ಪವರ್ ಹಾಗೂ 172 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ.

MOST READ: ಹತ್ತು ಸಾವಿರಕ್ಕೆ ಎಲೆಕ್ಟ್ರಿಕ್ ಬೈಕ್ ತಯಾರಿಸಿದ ಮೆಕಾನಿಕ್

ರೂ.10 ಲಕ್ಷದೊಳಗೆ ದೊರಕುವ ಆಟೋಮ್ಯಾಟಿಕ್ ಎಸ್‍‍ಯು‍‍ವಿಗಳಿವು

ಮಹೀಂದ್ರಾ ನುವೊಸ್ಪೋರ್ಟ್

ಮೂಲ ಮಾದರಿಯ ಬೆಲೆ ರೂ.9.72 ಲಕ್ಷ

ಮಹೀಂದ್ರಾದ ನುವೊಸ್ಪೋರ್ಟ್ ಎಸ್‍‍ಯುವಿಯನ್ನು ಸ್ಥಗಿತಗೊಂಡಿರುವ ಕ್ವಾಂಟೊ ಎಸ್‍‍ಯುವಿಯ ಆಧಾರದ ಮೇಲೆ ನಿರ್ಮಿಸಲಾಗಿದೆ. ಈ ಎಸ್‍‍‍ಯುವಿ ಜೈಲೊ ಮಾದರಿಯ ಚಿಕ್ಕ ಕಾರ್ ಆಗಿದೆ. ನುವೊಸ್ಪೋರ್ಟ್ ಎಸ್‍‍ಯುವಿ ಸದ್ಯಕ್ಕೆ ಸಬ್ 4 ಮೀಟರ್ ಎಸ್‍‍ಯು‍‍ವಿಯಲ್ಲಿ ಅಷ್ಟೇನೂ ಜನಪ್ರಿಯತೆಯನ್ನು ಹೊಂದಿಲ್ಲವಾದರೂ ರೂ.10 ಲಕ್ಷದೊಳಗಿನ ಬೆಲೆಯನ್ನು ಹೊಂದಿದೆ.

MOST READ: ಆರ್ಟಿಕಲ್ 370 ರದ್ದಾದ ಬೆನ್ನಲ್ಲೆ ಜಮ್ಮು ಕಾಶ್ಮೀರದಲ್ಲಿ ಶುರುವಾಗಿದೆ ಹೊಸ ಕೈಗಾರಿಕಾ ಕ್ರಾಂತಿ

ರೂ.10 ಲಕ್ಷದೊಳಗೆ ದೊರಕುವ ಆಟೋಮ್ಯಾಟಿಕ್ ಎಸ್‍‍ಯು‍‍ವಿಗಳಿವು

ನುವೊಸ್ಪೋರ್ಟ್‍‍ನ ಎನ್ 6 ಎಎಂಟಿ ಮಾದರಿಯ ಬೆಲೆಯು ದೆಹಲಿಯ ಎಕ್ಸ್ ಶೋರೂಂ ದರದಂತೆ ರೂ.9.72 ಲಕ್ಷಗಳಾಗಿದೆ. ಮೂರು ಸಿಲಿಂಡರ್ 1.5 ಲೀಟರ್ ಡೀಸೆಲ್ ಎಂಜಿನ್ ಹೊಂದಿರುವ ಈ ಎಸ್‍‍ಯುವಿ 100 ಬಿಎಚ್‌ಪಿ ಪವರ್ ಹಾಗೂ 240 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.

ರೂ.10 ಲಕ್ಷದೊಳಗೆ ದೊರಕುವ ಆಟೋಮ್ಯಾಟಿಕ್ ಎಸ್‍‍ಯು‍‍ವಿಗಳಿವು

ರೆನಾಲ್ಟ್ ಡಸ್ಟರ್

ಮೂಲ ಮಾದರಿಯ ಬೆಲೆ ರೂ.9.99 ಲಕ್ಷ

ರೆನಾಲ್ಟ್ ಕಂಪನಿಯು ಇತ್ತೀಚಿಗಷ್ಟೇ ಡಸ್ಟರ್ ಎಸ್‍‍ಯುವಿಯ ನವೀಕೃತ ಆವೃತ್ತಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಎಸ್‍‍ಯುವಿಯ ಮುಂಭಾಗದಲ್ಲಿರುವ ವಿನ್ಯಾಸದಲ್ಲಿ ಹಲವು ಬದಲಾವಣೆಗಳನ್ನು ಮಾಡಲಾಗಿದೆ. ಅವುಗಳೆಂದರೆ ದೊಡ್ಡ ಗಾತ್ರದ ಗ್ರಿಲ್, ಹೊಸ ಅಲಾಯ್‍‍ಗಳು ಹಾಗೂ ವಿನ್ಯಾಸದಲ್ಲಿ ಸ್ವಲ್ಪ ಪ್ರಮಾಣದ ಬದಲಾವಣೆ ಹೊಂದಿರುವ ಹೆಡ್‌ಲ್ಯಾಂಪ್‌ಗಳು.

ರೂ.10 ಲಕ್ಷದೊಳಗೆ ದೊರಕುವ ಆಟೋಮ್ಯಾಟಿಕ್ ಎಸ್‍‍ಯು‍‍ವಿಗಳಿವು

ಟೇಲ್‍‍ಲ್ಯಾಂಪ್‌ಗಳೂ ಸಹ ಬದಲಾವಣೆಯನ್ನು ಹೊಂದಿವೆ. ಡಸ್ಟರ್‌ನ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಮಾದರಿಯನ್ನು ರೂ.10 ಲಕ್ಷಗಳಲ್ಲಿ ಖರೀದಿಸಬಹುದು. ಡಸ್ಟರ್‍‍ನ ಸಿವಿಟಿ ಮಾದರಿಯು 1.5 ಲೀಟರಿನ ಪೆಟ್ರೋಲ್ ಎಂಜಿನ್‌ ಹೊಂದಿದೆ. ಈ ಎಂಜಿನ್ 105 ಬಿಎಚ್‌ಪಿ ಪವರ್ ಹಾಗೂ 142 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.

Most Read Articles

Kannada
English summary
Automatic SUVs with in Rs.10 lakhs - Read in kannada
Story first published: Monday, August 12, 2019, 18:03 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X