ಹೀಗಿತ್ತು 2019ರ ಮರ್ಸಿಡಿಸ್ ಲಕ್ಸ್ ಡ್ರೈವ್ ಈವೆಂಟ್

ಜರ್ಮನಿಯ ವಾಹನ ತಯಾರಕ ಕಂಪನಿಯಾದ ಮರ್ಸಿಡಿಸ್ ಬೆಂಜ್ ತನ್ನ ಲಕ್ಸ್ ಡ್ರೈವ್ ಲೈವ್ 2019 ಕಾರ್ಯಕ್ರಮವನ್ನು ಇತ್ತೀಚೆಗೆ ಬೆಂಗಳೂರಿನಲ್ಲಿ ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ ಮರ್ಸಿಡಿಸ್ ಬೆಂಜ್ ಸರಣಿಯ ಕಾರುಗಳನ್ನು ಪರೀಕ್ಷಿಸುವ ವಿಶೇಷ ಅವಕಾಶವನ್ನು ನೀಡಲಾಗಿತ್ತು.

ಹೀಗಿತ್ತು 2019ರ ಮರ್ಸಿಡಿಸ್ ಲಕ್ಸ್ ಡ್ರೈವ್ ಈವೆಂಟ್

ಮರ್ಸಿಡಿಸ್ ಕಂಪನಿಯು ಐದನೇ ಬಾರಿಗೆ ಈ ಲಕ್ಸ್ ಡ್ರೈವ್ ಈವೆಂಟ್ ಅನ್ನು ಆಯೋಜಿಸಿತ್ತು. ಇದರಲ್ಲಿ ಭಾಗವಹಿಸಿದ್ದವರಿಗೆ ಪ್ರಸಿದ್ಧ ಬಾಣಸಿಗ ಸಾರಾ ಟಾಡ್ ಸಿದ್ಧಪಡಿಸಿದ್ದ ಸೊಗಸಾದ, ಐಷಾರಾಮಿಯಾದ ಆಹಾರವನ್ನು ನೀಡಲಾಯಿತು.

ಹೀಗಿತ್ತು 2019ರ ಮರ್ಸಿಡಿಸ್ ಲಕ್ಸ್ ಡ್ರೈವ್ ಈವೆಂಟ್

ಈ ಈವೆಂಟ್‍ ಅಡ್ರಿನಾಲಿನ್ ಪಂಪಿಂಗ್ ಕ್ಲೈಂಬ್ ಹಾಗೂ ಸಂಗೀತವನ್ನು ಒಳಗೊಂಡಿತ್ತು. ಮರ್ಸಿಡಿಸ್ ಬೆಂಜ್ ಕಾರುಗಳನ್ನು ಹೊಂದಿರುವವರಿಗೆ ಮರ್ಸಿಡಿಸ್ ಜೀವನಶೈಲಿಯ ವಿಶಿಷ್ಟ ಅಭಿರುಚಿಯನ್ನು ಪ್ರದರ್ಶಿಸಲಾಯಿತು.

ಹೀಗಿತ್ತು 2019ರ ಮರ್ಸಿಡಿಸ್ ಲಕ್ಸ್ ಡ್ರೈವ್ ಈವೆಂಟ್

ಈ ವರ್ಷ ಮರ್ಸಿಡಿಸ್ ಬೆಂಜ್‌ ಭಾರತಕ್ಕೆ ಕಾಲಿಟ್ಟು 25 ವರ್ಷಗಳಾಗಿದೆ. ಇದು ಐಷಾರಾಮಿ ಕಾರು ತಯಾರಕರಿಗೆ ಮಹತ್ವದ ಮೈಲಿಗಲ್ಲಾಗಿದೆ. ಲಕ್ಸ್ ಡ್ರೈವ್ ಈವೆಂಟ್‌ಗಳಲ್ಲಿ ಭಾಗವಹಿಸಿದ್ದವರು ಜಿಎಲ್‌ಎ, ಜಿಎಲ್‌ಸಿ, ಜಿಎಲ್‌ಇ ಹಾಗೂ ಜಿಎಲ್‌ಎಸ್ ಅನ್ನು ಸಿ-ಕ್ಲಾಸ್ ಹಾಗೂ ಇ-ಕ್ಲಾಸ್‌ಗೆ ಒಳಗೊಂಡಿರುವ ಮರ್ಸಿಡಿಸ್ ಬೆಂಜ್ ಸರಣಿಯ ಟೆಸ್ಟ್ ಡ್ರೈವ್ ತೆಗೆದುಕೊಳ್ಳಬಹುದಾಗಿತ್ತು.

ಹೀಗಿತ್ತು 2019ರ ಮರ್ಸಿಡಿಸ್ ಲಕ್ಸ್ ಡ್ರೈವ್ ಈವೆಂಟ್

ಇದರಲ್ಲಿ ಭಾಗವಹಿಸಿದ್ದವರಿಗೆ ಅತ್ಯಾಕರ್ಷಕ ಮತ್ತು ಅನುಭವವನ್ನು ನೀಡಲು ಮರ್ಸಿಡಿಸ್ ಹೆಚ್ಚುವರಿ ಆಫ್-ರೋಡ್ ಟ್ರ್ಯಾಕ್‍‍ನೊಂದಿಗೆ ಟೆಸ್ಟ್ ಡ್ರೈವ್ ಕೋರ್ಸ್ ಅನ್ನು ಸಹ ಆಯೋಜಿಸಿತ್ತು. ಈವೆಂಟ್‍‍ನಲ್ಲಿ ಸಾರಾ ಟಾಡ್‍‍ರವರ ವಿಶೇಷ ಗೌರ್ಮೆಟ್ ಕಾರ್ಯಾಗಾರವನ್ನು ಸಹ ನಡೆಸಲಾಯಿತು.

ಹೀಗಿತ್ತು 2019ರ ಮರ್ಸಿಡಿಸ್ ಲಕ್ಸ್ ಡ್ರೈವ್ ಈವೆಂಟ್

ಲಕ್ಸ್ ಡ್ರೈವ್ ಅನುಭವವನ್ನು ಮತ್ತಷ್ಟು ಹೆಚ್ಚಿಸಲು ಬಾಯಲ್ಲಿ ನೀರೂರಿಸುವ ಆಹಾರವನ್ನು ಸಹ ನೀಡಲಾಯಿತು. ಎಂಟಿವಿ ಸಹಯೋಗದೊಂದಿಗೆ ಹೆಸರಾಂತ ಕಲಾವಿದರಿಂದ ಲೈವ್ ಮ್ಯೂಸಿಕ್ ಗಿಗ್ಸ್ ಆಯೋಜಿಸಲಾಗಿತ್ತು. ಮೊದಲ ದಿನದಂದು ಮಾಲಿ ಹಾಗೂ ತೇಜಸ್ ಮೋಹನ್ ಅವರ ಪ್ರದರ್ಶನಗಳಿದ್ದರೆ, ಎರಡನೇ ದಿನ ಫೇಮ್ ಬ್ಯಾಂಡ್ ಹಾಗೂ ದಿ ಯೆಲ್ಲೊ ಡೈರಿ ಪ್ರದರ್ಶನಗಳಿದ್ದವು.

ಹೀಗಿತ್ತು 2019ರ ಮರ್ಸಿಡಿಸ್ ಲಕ್ಸ್ ಡ್ರೈವ್ ಈವೆಂಟ್

ಮಕ್ಕಳು ಹಾಗೂ ವಯಸ್ಕರಿಗಾಗಿ ಮೈಂಡ್ ಗೇಮ್ಸ್ ಜೋನ್ ಆಯೋಜಿಸಲಾಗಿತ್ತು. ಇದರಲ್ಲಿ ಭಾಗವಹಿಸಿ ಗೆದ್ದವರಿಗಾಗಿ ಮರ್ಸಿಡಿಸ್ ಬೆಂಜ್‌ನ ಮೊಟ್ಟಮೊದಲ ಇ-ಕ್ಲಾಸ್‌ನ ಮಾದರಿಗಳನ್ನು ಗೆಲ್ಲುವ ಅವಕಾಶವಿತ್ತು.

MOST READ: ವಿಮಾನಗಳಲ್ಲಿ ಬಿಳಿ ಬಣ್ಣವನ್ನೇ ಬಳಕೆ ಮಾಡುವುದರ ಹಿಂದಿನ ಕಾರಣವೇನು?

ಹೀಗಿತ್ತು 2019ರ ಮರ್ಸಿಡಿಸ್ ಲಕ್ಸ್ ಡ್ರೈವ್ ಈವೆಂಟ್

ಲಕ್ಸ್ ಡ್ರೈವ್ ಲೈವ್ 2019 ವಿಶೇಷವಾದ ಮರ್ಸಿಡಿಸ್-ಬೆಂಝ್ ಸಂಗ್ರಹಣೆಗಳೊಂದಿಗೆ ವ್ಯಾಪಾರ ವಲಯಕ್ಕೆ ಮೀಸಲಾದ ಎಎಂಜಿ ಜೀವನಶೈಲಿ ಸಂಗ್ರಹ ವಿಭಾಗವನ್ನು ಒಳಗೊಂಡಿತ್ತು. ಮರ್ಸಿಡಿಸ್ ಕಾರುಗಳನ್ನು ಹೊಂದಿರುವ ಮಾಲೀಕರು ತಮ್ಮ ಕಾರುಗಳನ್ನು ಉಚಿತವಾಗಿ ಮೌಲ್ಯಮಾಪನ ಮಾಡಿಸಿಕೊಳ್ಳುವ ಅವಕಾಶವನ್ನು ನೀಡಲಾಗಿತ್ತು.

MOST READ: ಮೈಲಿಗಲ್ಲುಗಳ ಬಣ್ಣದ ಹಿಂದಿರುವ ಕಾರಣಗಳೇನು ಗೊತ್ತಾ?

ಹೀಗಿತ್ತು 2019ರ ಮರ್ಸಿಡಿಸ್ ಲಕ್ಸ್ ಡ್ರೈವ್ ಈವೆಂಟ್

ತಮ್ಮ ಬಳಿಯಿರುವ ಮರ್ಸಿಡಿಸ್ ಕಾರುಗಳನ್ನು ವಿನಿಮಯ ಮಾಡಿಕೊಳ್ಳಲು ಬಯಸುವ ಗ್ರಾಹಕರಿಗಾಗಿ ಮರ್ಸಿಡಿಸ್ ಬೆಂಜ್ ಹಣಕಾಸು ಸೇವೆಗಳ ಮೂಲಕ ವಿಶೇಷ ರಿಯಾಯಿತಿಯನ್ನು ನೀಡಲಾಯಿತು. ಮರ್ಸಿಡಿಸ್ ಬೆಂಝ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ಮಾರ್ಟಿನ್ ಶ್ವೆಂಕ್‍‍ರವರು ಮಾತನಾಡಿ, ಬೆಂಗಳೂರು ಮರ್ಸಿಡಿಸ್ ಕಂಪನಿಗೆ ಪ್ರಮುಖವಾದ ಮಾರುಕಟ್ಟೆಯಾಗಿದೆ.

MOST READ: ಜೆ‍‍ಸಿ‍‍ಬಿ ಯಂತ್ರವು ಹಳದಿ ಬಣ್ಣದಲ್ಲೇ ಏಕಿರುತ್ತೆ?

ಹೀಗಿತ್ತು 2019ರ ಮರ್ಸಿಡಿಸ್ ಲಕ್ಸ್ ಡ್ರೈವ್ ಈವೆಂಟ್

ಭಾರತದಲ್ಲಿರುವ ಗ್ರಾಹಕರ ಚಟುವಟಿಕೆಗಳ ಮೂಲಕ ಮರ್ಸಿಡಿಸ್ ಕಂಪನಿಯು ತನ್ನ ಇರುವಿಕೆಯನ್ನು ಬಲಪಡಿಸುತ್ತಿದೆ. ಲಕ್ಸ್ ಡ್ರೈವ್ ಲೈವ್ 2019, ಭಾರತದಲ್ಲಿ 25 ವರ್ಷಗಳನ್ನು ಪೂರೈಸಿದ ಕಂಪನಿಯ ಆಚರಣೆಯ ಒಂದು ಭಾಗವಾಗಿದೆ.

ಹೀಗಿತ್ತು 2019ರ ಮರ್ಸಿಡಿಸ್ ಲಕ್ಸ್ ಡ್ರೈವ್ ಈವೆಂಟ್

ಇದರಲ್ಲಿ ಭಾಗವಹಿಸುವ 25 ಜನರಿಗೆ ಸ್ಥಳದಲ್ಲಿ ನಡೆಯುವ ವಿಶೇಷ ಸ್ಪರ್ಧೆಯಲ್ಲಿ ಮರ್ಸಿಡಿಸ್ ಬೆಂಜ್ ಸರಕುಗಳನ್ನು ಗೆಲ್ಲುವ ಅವಕಾಶವಿದೆ. ಲಕ್ಸ್ ಡ್ರೈವ್, ಕಂಪನಿಯು ಗ್ರಾಹಕರಿಗೆ ಇನ್ನೂ ಹತ್ತಿರವಾಗಲು ಸಹಾಯ ಮಾಡಲಿದೆ. ಜೊತೆಗೆ ಗ್ರಾಹಕರಿಗೆ ಹೊಸ ಅನುಭವವನ್ನು ನೀಡುತ್ತದೆ ಎಂದು ಅವರು ಹೇಳಿದರು.

ಹೀಗಿತ್ತು 2019ರ ಮರ್ಸಿಡಿಸ್ ಲಕ್ಸ್ ಡ್ರೈವ್ ಈವೆಂಟ್

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಮರ್ಸಿಡಿಸ್ ಒಂದು ಐಷಾರಾಮಿ ಕಂಪನಿಯಾಗಿದ್ದು, ಲಕ್ಸ್ ಡ್ರೈವ್‍‍ನಂತಹ ಈವೆಂಟ್ ಅನ್ನು ಆಯೋಜಿಸುವ ಮೂಲಕ ಕಂಪನಿಯು ತನ್ನ ಗ್ರಾಹಕರಿಗೆ ವಿಶಿಷ್ಟ ಅನುಭವವನ್ನು ನೀಡಿದೆ. ಕಂಪನಿಯ ಚಿತ್ರಣವನ್ನು ಪ್ರದರ್ಶಿಸಲು ಹಾಗೂ ಗ್ರಾಹಕರಿಗೆ ಉತ್ತಮ ಆಹಾರ, ಸಂಗೀತವನ್ನು ನೀಡುವುದರ ಮೂಲಕ ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಿದೆ. ಲಕ್ಸ್ ಡ್ರೈವ್ ಈವೆಂಟ್ ಅನ್ನು ಆಯೋಜಿಸಲು ಮರ್ಸಿಡಿಸ್ ಸರಿಯಾದ ಸಮಯವನ್ನು ಆಯ್ಕೆ ಮಾಡಿಕೊಂಡಿತ್ತು.

Most Read Articles

Kannada
English summary
Mercedes-Benz Luxe Drive Bangalore Edition: Here Are The Highlights - Read in Kannada
Story first published: Tuesday, October 22, 2019, 18:10 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more