ಕಾರು ಮಾರಾಟದಲ್ಲಿ ಮತ್ತೆ ನಂ.1 ಸ್ಥಾನಕ್ಕೇರಿದ ಮಾರುತಿ ಆಲ್ಟೋ

ದೇಶಿಯ ಆಟೋ ಉದ್ಯಮವು ಕಳೆದ ಕೆಲವು ವರ್ಷಗಳಿಂದ ಸಂಕಷ್ಟ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಯಾವುದೇ ಕಂಪನಿಯ ಕಾರ್ ಆಗಿರಲಿ, ಯಾವುದೇ ಸೆಗ್‍‍ಮೆಂಟಿನ ಕಾರ್ ಆಗಿರಲಿ, ಕಾರುಗಳ ಮಾರಾಟವು ನಿರಂತರವಾಗಿ ಕುಸಿಯುತ್ತಿದೆ. ಈ ಕುಸಿತವು 2019ರ ಜೂನ್‍‍ನಲ್ಲಿಯೂ ಮುಂದುವರೆದಿದ್ದು, ಮಾರಾಟದಲ್ಲಿನ ಅಂಕಿ ಅಂಶವು ಸಹ ಇದನ್ನು ದೃಢಪಡಿಸಿದೆ. ದೊಡ್ಡ ದೊಡ್ಡ ಕಂಪನಿಗಳ ಮಾರಾಟದಲ್ಲಿಯೂ ಕುಸಿತವಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಮಾರಾಟವಾಗಿದ್ದಕ್ಕಿಂತಲೂ ಕಡಿಮೆ ಪ್ರಮಾಣದಲ್ಲಿ ಮಾರಾಟವಾಗಿವೆ.

ಕಾರು ಮಾರಾಟದಲ್ಲಿ ಮತ್ತೆ ನಂ.1 ಸ್ಥಾನಕ್ಕೇರಿದ ಮಾರುತಿ ಆಲ್ಟೋ

2019ರ ಜೂನ್‍‍ನಲ್ಲಿ ಮಾರಾಟವಾದ ಟಾಪ್ 10 ಕಾರುಗಳ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. ಮಾರುತಿ ಕಂಪನಿಯ ಆಲ್ಟೋ ಕಾರು, ಸ್ವಿಫ್ಟ್ ಕಾರ್ ಅನ್ನು ಹಿಂದಿಕ್ಕಿ ಮತ್ತೆ ಮೊದಲ ಸ್ಥಾನಕ್ಕೇರಿದೆ. ಈ ಆಲ್ಟೊ ಮಾದರಿಯ 18,733 ಕಾರುಗಳ ಮಾರಾಟವಾಗಿದ್ದರೆ, ಸ್ವಿಫ್ಟ್ ಮಾದರಿಯ 16,330 ಕಾರುಗಳ ಮಾರಾಟವಾಗಿದೆ. ಈ ವರ್ಷದ ಮೇ ತಿಂಗಳಿನಲ್ಲಿ ಸ್ವಿಫ್ಟ್ ನ 17,039 ಕಾರುಗಳನ್ನು ಮಾರಾಟ ಮಾಡಲಾಗಿತ್ತು.

ಕಾರು ಮಾರಾಟದಲ್ಲಿ ಮತ್ತೆ ನಂ.1 ಸ್ಥಾನಕ್ಕೇರಿದ ಮಾರುತಿ ಆಲ್ಟೋ

ಜೂನ್ ತಿಂಗಳಿನಲ್ಲಿ ಸ್ವಿಫ್ಟ್ ಕಾರಿನ ಮಾರಾಟದಲ್ಲಿ ಕುಸಿತ ಉಂಟಾಗಿದೆ. ಸೆಡಾನ್ ಕಾರುಗಳ ಮಾರಾಟದಲ್ಲಿ ಮಾರುತಿ ಡಿಜೈರ್ ನಂ 1 ಸ್ಥಾನದಲ್ಲಿದ್ದು, ಈ ಮಾದರಿಯ 14,868 ಕಾರುಗಳ ಮಾರಾಟವಾಗಿದೆ. ಒಟ್ಟಾರೆಯಾಗಿ ಡಿಜೈರ್ ದೇಶಿಯ ಮಾರುಕಟ್ಟೆಯಲ್ಲಿ ಮೂರನೇ ಸ್ಥಾನದಲ್ಲಿದೆ. ಹ್ಯಾಚ್ ಬ್ಯಾಕ್ ಮಾದರಿಯಲ್ಲಿ ಹೆಚ್ಚು ಜನಪ್ರಿಯವಾಗಿರುವ ಬಲೆನೊ ಕಾರಿನ ಮಾರಾಟದಲ್ಲಿಯೂ ಕುಸಿತವಾಗಿದ್ದು, 13,689 ಕಾರುಗಳ ಮಾರಾಟವಾಗಿದೆ.

ಮಾದರಿಗಳು ಜೂನ್-19

ಜೂನ್-18

ಶೇಕಡವಾರು ವ್ಯತ್ಯಾಸ

1

ಮಾರುತಿ ಆಲ್ಟೋ

18,733

18,070

3.67

2

ಮಾರುತಿ ಸ್ವಿಫ್ಟ್

16,330

18,171

-10.13

3

ಮಾರುತಿ ಡಿಜೈರ್

14,868

24,465

-39.23

4

ಮಾರುತಿ ಬಲೆನೊ

13,689

17,850

-23.31

5

ಮಾರುತಿವ್ಯಾಗನ್ಆರ್ 10,228

11,311

-9.57

6

ಹ್ಯುಂಡೈ ಎಲೈಟ್ ಐ20

9,271

11,262

-17.68

7

ಮಾರುತಿ ಇಕೊ

9,265

5,612

65.09

8

ಮಾರುತಿ ವಿಟಾರಾ ಬ್ರಿಝಾ

8,871

10,713

-17.19

9

ಹ್ಯುಂಡೈ ವೆನ್ಯೂ

8,763

-

-

10

ಹ್ಯುಂಡೈ ಕ್ರೆಟಾ

8,334

11,111

-24.99

ಕಾರು ಮಾರಾಟದಲ್ಲಿ ಮತ್ತೆ ನಂ.1 ಸ್ಥಾನಕ್ಕೇರಿದ ಮಾರುತಿ ಆಲ್ಟೋ

ಇತ್ತೀಚೆಗೆ ಅಪ್‌ಗ್ರೇಡ್ ಆದ ಹೊಸ ತಲೆಮಾರಿನ ಮಾರುತಿ ವ್ಯಾಗನ್ಆರ್ ಮಾರಾಟವು ಉತ್ತಮವಾಗಿ ಮುಂದುವರೆದಿದ್ದು, ಐದನೇ ಸ್ಥಾನದಲ್ಲಿದೆ. ಜೂನ್ ತಿಂಗಳಿನಲ್ಲಿ ವ್ಯಾಗನ್ಆರ್‍‍ನ 10,228 ಕಾರುಗಳ ಮಾರಾಟವಾಗಿದೆ. ಹ್ಯುಂಡೈನ ಐ20 ಈ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ. ಈ ಪಟ್ಟಿಯಲ್ಲಿ ಮಾರುತಿ ಕಂಪನಿಯ ಕಾರುಗಳನ್ನು ಹೊರತು ಪಡಿಸಿ ಸ್ಥಾನ ಪಡೆದ ಮೊದಲ ಕಾರ್ ಆಗಿದೆ.

ಕಾರು ಮಾರಾಟದಲ್ಲಿ ಮತ್ತೆ ನಂ.1 ಸ್ಥಾನಕ್ಕೇರಿದ ಮಾರುತಿ ಆಲ್ಟೋ

ಐ20ಯ 9,271 ಕಾರುಗಳ ಮಾರಾಟವಾಗಿದೆ. ಮಾರುತಿ ಕಂಪನಿಯ ಇಕೊ ಜೂನ್ 2019ರಲ್ಲೂ ಹೆಚ್ಚು ಮಾರಾಟವಾದ ಟಾಪ್ 10 ಕಾರುಗಳಲ್ಲಿ ಕಾಣಿಸಿಕೊಂಡಿದೆ. ಪ್ರಯಾಣಿಕ ಸಾಗಾಣಿಕ (ಪೀಪಲ್ ಕ್ಯಾರಿಯರ್) ಇಕೊ ಮಾದರಿಯ 9,265 ಕಾರು‍ಗಳನ್ನು ಮಾರಾಟ ಮಾಡಲಾಗಿದೆ. ಮಾರುಕಟ್ಟೆಯಲ್ಲಿ ಹೆಚ್ಚುತ್ತಿರುವ ಪೈಪೋಟಿಯಿಂದಾಗಿ ಮಾರುತಿ ಕಂಪನಿಯ ಬ್ರಿಝಾ ಕಾರು 8,871 ಯೂನಿಟ್ ಮಾರಾಟದೊಂದಿಗೆ ಎಂಟನೇ ಸ್ಥಾನದಲ್ಲಿದೆ.

ಕಾರು ಮಾರಾಟದಲ್ಲಿ ಮತ್ತೆ ನಂ.1 ಸ್ಥಾನಕ್ಕೇರಿದ ಮಾರುತಿ ಆಲ್ಟೋ

ಹ್ಯುಂಡೈ ಕಂಪನಿಯ ವೆನ್ಯೂ ಕಾರಿನ ಬಿಡುಗಡೆಯ ನಂತರ ಬ್ರಿಝಾ ಕಾರಿನ ಮಾರಾಟದಲ್ಲಿ ಕುಸಿತವುಂಟಾಗಿದೆ. ಜೂನ್ ತಿಂಗಳಿನಲ್ಲಿ ವೆನ್ಯೂ ಮಾದರಿಯ 8,763 ಕಾರುಗಳ ಮಾರಾಟವಾಗಿದೆ. ವೆನ್ಯೂ ಕಾರು ತನ್ನದೇ ಕಂಪನಿಯ ಕ್ರೆಟಾ ಕಾರಿನ ಮಾರಾಟವನ್ನು ಹಿಂದಿಕ್ಕಿದೆ. ಕ್ರೆಟಾ 8,334 ಕಾರುಗಳ ಮಾರಾಟದೊಂದಿಗೆ 10 ನೇ ಸ್ಥಾನದಲ್ಲಿದೆ. ಪಟ್ಟಿಯಲ್ಲಿ ಸ್ಥಿರವಾಗಿರುವ ಗ್ರ್ಯಾಂಡ್ ಐ10 ಜೂನ್ ತಿಂಗಳಿನಲ್ಲಿ ವೆನ್ಯೂ ಕಾರಿಗೆ ತನ್ನ ಸ್ಥಾನವನ್ನು ಬಿಟ್ಟುಕೊಟ್ಟಿದೆ. ನವೀಕರಿಸಿದ ಗ್ರ್ಯಾಂಡ್ ಐ10 ಕಾರು ಬಿಡುಗಡೆಯಾದ ನಂತರ ಮತ್ತೊಮ್ಮೆ ಈ ಪಟ್ಟಿಯಲ್ಲಿ ಸ್ಥಾನ ಪಡೆಯುವ ಸಾಧ್ಯತೆಗಳಿವೆ.

Most Read Articles

Kannada
English summary
Maruti Alto takes No 1 spot – Best selling Top 10 cars June 2019 - Read in kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X