ಅನಾವರಣಗೊಂಡ ಬಿಎಂ‍‍ಡಬ್ಲ್ಯು 1 ಸೀರಿಸ್‍‍ನ ಟೀಸರ್

ಬಿಎಂ‍‍ಡಬ್ಲ್ಯು ತನ್ನ ಹೊಸ ತಲೆಮಾರಿನ 1 ಸೀರಿಸ್ ನ ಕಾರುಗಳ ಮುಸುಕನ್ನು ನಿಧಾನವಾಗಿ ಸರಿಸುತ್ತಿದ್ದು, ಈ ಕಾಂಪ್ಯಾಕ್ಟ್ ಹ್ಯಾಚ್‍‍ಬ್ಯಾಕ್ ಕಾರಿನ ಚಿತ್ರಗಳನ್ನು ಪ್ರಪಂಚದ ಮುಂದೆ ಅನಾವರಣಗೊಳಿಸುತ್ತಿದೆ.

ಅನಾವರಣಗೊಂಡ ಬಿಎಂ‍‍ಡಬ್ಲ್ಯು 1 ಸೀರಿಸ್‍‍ನ ಟೀಸರ್

ಫೇಸ್‍‍ಬುಕ್‍‍ನಲ್ಲಿ ಈ ಕಾರಿನ ಚಿತ್ರಗಳನ್ನು ಬಿಡುಗಡೆಗೊಳಿಸಲಾಗಿದೆ. ಈ ಚಿತ್ರದಲ್ಲಿ ತೋರಿಸಿರುವಂತೆ ಉತ್ಪಾದನೆಯು ಬಹುತೇಕ ಮುಗಿದ್ದಿದ್ದು, ಅಂತಿಮ ಹಂತದಲ್ಲಿರುವ ಕಾರಿನ ಚಿತ್ರಗಳನ್ನೇ ಬಿಡುಗಡೆಗೊಳಿಸಲಾಗಿದೆ. ಚಿತ್ರದಲ್ಲಿ ಬಿಎಂ‍‍ಡಬ್ಲ್ಯು 1 ಸೀರಿಸ್‍ ಹ್ಯಾಚ್‍‍ಬ್ಯಾಕ್ ಕಾರನ್ನು ಮರೆಮಾಡಿದ್ದರೂ ನಾವು ಅನೇಕ ಸಂಗತಿಗಳನ್ನು ಗಮನಿಸಬಹುದಾಗಿದೆ. ಹೆಡ್‍‍ಲೈಟ್ ಮತ್ತು ಟೇಲ್‍‍ಲೈಟ್ ಗಳನ್ನು ಕಾಣಬಹುದಾಗಿದ್ದು, ಈಗಿರುವ ವಾಹನಕ್ಕಿಂತ ಹಲವು ಬದಲಾವಣೆಗಳಾಗಿದ್ದು, ಈ ಕಾರು ಹೊಸದಾದ ಹಾಗೂ ಆಕರ್ಷಕವಾದ ವಿನ್ಯಾಸದಲ್ಲಿ ಕಂಗೊಳಿಸುತ್ತಿದೆ.

ಅನಾವರಣಗೊಂಡ ಬಿಎಂ‍‍ಡಬ್ಲ್ಯು 1 ಸೀರಿಸ್‍‍ನ ಟೀಸರ್

ಈ ಹ್ಯಾಚ್‍‍ಬ್ಯಾಕ್ ಕಾರು ಈಗಿರುವ ಕಾರಿಗಿಂತ ಉದ್ದವಾಗಿದ್ದು, ಉದ್ದವಾದ ವ್ಹೀಲ್‍‍ಬೇಸ್‍‍ಗಳನ್ನು ಹೊಂದಿರುವ ಸಾಧ್ಯತೆಗಳಿವೆ. ಒಂದು ಚಿತ್ರವು ಇಂಟಿರಿಯರ್‍‍ನ ಸ್ವಲ್ಪ ಭಾಗವನ್ನು ತೋರಿಸುತ್ತದೆ, ಅದರಲ್ಲಿ ಈ ಕಾರು ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಹೊಂದಿರುವುದನ್ನು ತೋರಿಸುತ್ತದೆ. ಡಿಸ್‍‍ಪ್ಲೇ ಗಾಗಿ ಅನಲಾಗ್ ಡಯಲ್‍‍ಗಳನ್ನು ಹೊಂದಿದೆ.

ಅನಾವರಣಗೊಂಡ ಬಿಎಂ‍‍ಡಬ್ಲ್ಯು 1 ಸೀರಿಸ್‍‍ನ ಟೀಸರ್

ಆದರೆ ಡಿಜಿಟಲ್ ಸೆಟ್ ಅಪ್ ಈ ಸರಣಿಯ ಎಲ್ಲಾ ಕಾರುಗಳಲ್ಲಿ ಇರುತ್ತದೆಯೇ ಅಥವಾ ಟಾಪ್ ಮಾದರಿಯ ಕಾರುಗಳಲ್ಲಿ ಮಾತ್ರವೇ ಇರುತ್ತದೆಯೇ ಎಂಬುದು ತಿಳಿದು ಬಂದಿಲ್ಲ. ಫ್ರಾನ್ಸ್ ನ ಬಿಎಂ‍‍ಡಬ್ಲ್ಯು ಬಿಡುಗಡೆ ಮಾಡಿರುವ ಮತ್ತೊಂದು ಟೀಸರ್‍‍ನಲ್ಲಿ, 1ಸೀರಿಸ್‍‍‍ನ ಬೇರೆ ಚಿತ್ರವನ್ನು ಗಮನಿಸಬಹುದು.

ಅನಾವರಣಗೊಂಡ ಬಿಎಂ‍‍ಡಬ್ಲ್ಯು 1 ಸೀರಿಸ್‍‍ನ ಟೀಸರ್

ಸಾಟಿನ್ ಮಿರರ್ ಕ್ಯಾಪ್ ಮತ್ತು ಗ್ರಿಲ್‍‍ನ ವಿಧಾನಗಳಿಂದ ಆ ವಾಹನವು ಎಂ135ಐ ಆಗಿರ ಬಹುದೆಂದು ತಿಳಿದು ಬರುತ್ತದೆ. ಈ ವಾಹನವೇ ಈ ಸರಣಿಯಲ್ಲಿರುವ ಟಾಪ್ ಮಾದರಿಯ ಕಾರು ಆಗಿರುವ ಸಾಧ್ಯತೆಯಿದೆ. ಜರ್ಮನಿ ಮೂಲದ ಬಿ‍ಎಂ‍‍ಡಬ್ಲ್ಯು ಕಂಪನಿಯು ಎಂ ಮಾದರಿಯನ್ನು ಪೂರ್ತಿಯಾಗಿ ಚಿತ್ರಿಕರಿಸಿದೆ. ಟೀಸರ್ ಬಿಡುಗಡೆಯ ನಂತರ ಪೂರ್ತಿ ಚಿತ್ರವನ್ನು ಅತಿ ಶೀಘ್ರದಲ್ಲಿಯೇ ಪೂರ್ಣವಾಗಿ ಬಿಡುಗಡೆ ಮಾಡುವ ಸಾಧ್ಯತೆಗಳಿವೆ.

ಅನಾವರಣಗೊಂಡ ಬಿಎಂ‍‍ಡಬ್ಲ್ಯು 1 ಸೀರಿಸ್‍‍ನ ಟೀಸರ್

ಯೂರೋಪಿಯನ್ ಮಾರುಕಟ್ಟೆಯಲ್ಲಿ ಈ ವರ್ಷದ ಕೊನೆಗೆ ಈ ವಾಹನವನ್ನು ಬಿಡುಗಡೆ ಮಾಡಲಾಗುವುದೆಂಬ ಮಾಹಿತಿಯನ್ನು ಬಿ‍ಎಂ‍‍ಡಬ್ಲ್ಯು ವಿನ ಚೇರ್ಮನ್ ಹರಲ್ಡ್ ಕ್ರೂಗರ್ ರವರು 99ನೇ ವಾರ್ಷಿಕ ಜನರಲ್ ಮೀಟಿಂಗ್ ನ ವೇಳೆಯಲ್ಲಿ ನೀಡಿದ್ದಾರೆ. ಬಿಎಂ‍‍ಡಬ್ಲ್ಯು 1 ಸೀರಿಸ್ ಅನ್ನು ಭಾರತದಲ್ಲಿ 2017ರಿಂದ ಸ್ಥಗಿತಗೊಳಿಸಲಾಗಿದೆ. ಕಂಪನಿಯು ಭಾರತದಲ್ಲಿ ಕೇವಲ ಒಂದು ಮಾದರಿಯನ್ನು ಮಾತ್ರ ಮಾರಾಟ ಮಾಡುತ್ತಿತ್ತು. 118 ಡಿ ಸ್ಪೋರ್ಟ್ ಲೈನ್ ಮಾದರಿಯ ಆ ವಾಹನದಲ್ಲಿ 5 ಡೋರ್ ಇದ್ದು, 2.0 ಲೀಟರ್ ಟರ್ಬೋ-ಡೀಸೆಲ್ ಎಂಜಿನ್ ಹೊಂದಿದ್ದು, 150 ಬಿ‍‍ಹೆಚ್‍‍ಪಿ ಪವರ್ ಮತ್ತು 320 ಎನ್‍ಎಂ ಟಾರ್ಕ್ ಉತ್ಪಾದಿಸುತಿತ್ತು. ಈ ಎಂಜಿನ್‍‍ನಲ್ಲಿ 8 ಸ್ಪೀಡಿನ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಅಳವಡಿಸಲಾಗಿತ್ತು.

MOST READ: 20 ವರ್ಷಗಳಲ್ಲಿ 100 ಕಾರುಗಳನ್ನು ಕದ್ದಿದ್ದ ಖದೀಮರು ಕೊನೆಗೆ ಸಿಕ್ಕಿ ಬಿದ್ದಿದ್ದೇ ರೋಚಕ..!

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಬಿ‍ಎಂ‍‍ಡಬ್ಲ್ಯು 1 ಸೀರಿಸ್‍‍‍ನ ಹೊಸ ವಾಹನವು ಚಿತ್ರಗಳಲ್ಲಿ ತೋರಿಸಿರುವಂತೆ ಅತ್ಯುತ್ತಮವಾಗಿ ಕಾಣುತ್ತಿದೆ. ಈ ಹೊಸ ಸರಣಿಯ ಕಾರು ಭಾರತದಲ್ಲಿಯೂ ಬಿಡುಗಡೆಯಾಗಲಿ ಎಂದು ಆಶಿಸುತ್ತೇವೆ.

Most Read Articles

Kannada
English summary
BMW 1 Series Teaser Revealed — Primed For Adventure - Read in kannada
Story first published: Friday, May 17, 2019, 16:55 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X