ಬಿಡುಗಡೆಯಾಯ್ತು ಹೊಸ ಬಿಎಂಡಬ್ಲ್ಯು 3 ಸೀರಿಸ್
ಬಿಎಂಡಬ್ಲ್ಯು ಇಂಡಿಯಾ, ಹೊಸ ತಲೆಮಾರಿನ 3 ಸೀರಿಸ್ ಕಾರ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಹೊಸ ಬಿಎಂಡಬ್ಲ್ಯು 3 ಸೀರಿಸ್ ಕಾರಿನ ಆರಂಭಿಕ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.41.40 ಲಕ್ಷಗಳಾಗಿದೆ. 2019ರ 3 ಸೀರಿಸ್ ಸೆಡಾನ್ ಕಾರ್ ಅನ್ನು 2 ಡೀಸೆಲ್ ಮಾದರಿ ಹಾಗೂ ಒಂದು ಪೆಟ್ರೋಲ್ ಮಾದರಿಗಳಲ್ಲಿ ಮಾರಾಟ ಮಾಡಲಾಗುವುದು.

ಟಾಪ್ ಮಾದರಿಯ ಬಿಎಂಡಬ್ಲ್ಯು 3 ಸೀರಿಸ್ ಕಾರಿನ ಬೆಲೆಯು ಎಕ್ಸ್ ಶೋರೂಂ ದರದಂತೆ ರೂ.47.90 ಲಕ್ಷಗಳಾಗಲಿದೆ. ಹೊಸ ಬಿಎಂಡಬ್ಲ್ಯು 3 ಸೀರಿಸ್ ಕಾರ್ ಅನ್ನು ಜಾಗತಿಕವಾಗಿ ಮೊದಲ ಬಾರಿಗೆ 2018ರ ಪ್ಯಾರಿಸ್ ಮೋಟಾರ್ ಶೋದಲ್ಲಿ ಪ್ರದರ್ಶಿಸಲಾಗಿತ್ತು. ಈಗ ಬಿಡುಗಡೆಯಾಗಿರುವ ಕಾರು ಬಿಎಂಡಬ್ಲ್ಯು 3 ಸೀರಿಸ್‍ನಲ್ಲಿರುವ ಏಳನೇ ತಲೆಮಾರಿನ ಕಾರ್ ಆಗಿದೆ. ದೇಶಿಯ ಮಾರುಕಟ್ಟೆಯಲ್ಲಿ ಈ ಲಗ್ಷುರಿ ಸೆಡಾನ್ ಕಾರಿನ ಬುಕ್ಕಿಂಗ್‍ಗಳನ್ನು ಈಗಾಗಲೇ ಆರಂಭಿಸಲಾಗಿದೆ.

ಹೊಸ ಬಿಎಂಡಬ್ಲ್ಯು 3 ಸೀರಿಸ್ ಕಾರ್ ಅನ್ನು 320ಡಿ ಸ್ಪೋರ್ಟ್, 320ಡಿ ಐಷಾರಾಮಿ ಲೈನ್ ಹಾಗೂ 330ಐ ಎಂ ಸ್ಪೋರ್ಟ್ ಎಂಬ ಮೂರು ಮಾದರಿಗಳಲ್ಲಿ ಮಾರಾಟ ಮಾಡಲಾಗುವುದು. ಇದರಲ್ಲಿ ಮೂರು ಮಾದರಿಗಳು, ಎರಡು ಎಂಜಿನ್ ಆಯ್ಕೆಗಳನ್ನು ಹೊಂದಿರಲಿದೆ.

ಇದಲ್ಲಿರುವ 2.0 ಲೀಟರಿನ ನಾಲ್ಕು ಸಿಲಿಂಡರ್ ಡೀಸೆಲ್ ಎಂಜಿನ್, 190 ಬಿಹೆಚ್‍ಪಿ ಹಾಗೂ 400 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 320ಡಿ ಸ್ಪೋರ್ಟ್ ಹಾಗೂ 320 ಡಿ ಐಷಾರಾಮಿ ಲೈನ್ ಮಾದರಿಗಳಲ್ಲಿ ಅಳವಡಿಸಲಾಗಿದೆ.

330ಐ ಎಂ ಸ್ಪೋರ್ಟ್ ಪೆಟ್ರೋಲ್ ಮಾದರಿಯಲ್ಲಿ 2.0 ಲೀಟರಿನ ನಾಲ್ಕು ಸಿಲಿಂಡರ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 258 ಬಿಹೆಚ್‍ಪಿ ಹಾಗೂ 400 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಹೊಸ ಬಿಎಂಡಬ್ಲ್ಯು 3 ಸೀರಿಸ್ ಕಾರಿನಲ್ಲಿರುವ ಎರಡೂ ಎಂಜಿನ್‍ಗಳಲ್ಲೂ 8 ಸ್ಪೀಡಿನ ಸ್ಟೆಪ್ಟ್ರಾನಿಕ್ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಯುನಿಟ್ ಅನ್ನು ಸ್ಟ್ಯಾಂಡರ್ಡ್ ಆಗಿ ಅಳವಡಿಸಲಾಗುವುದು.

ಹೊಸ ತಲೆಮಾರಿನ 3 ಸೀರಿಸ್ ಸೆಡಾನ್ ಬಿಎಂಡಬ್ಲ್ಯುನ ಸಿಎಲ್‍ಎಆರ್ ಪ್ಲಾಟ್‌ಫಾರಂನ ಭಾಗವಾಗಿದೆ. ಹೊಸ ತಲೆಮಾರಿನ 5 ಹಾಗೂ 7 ಸೀರಿಸ್‍ನ ಕಾರುಗಳೂ ಸಹ ಈ ಪ್ಲಾಟ್‍ಫಾರಂನ ಭಾಗವಾಗಿವೆ. ಹೊಸ ತಲೆಮಾರಿನ 3 ಸೀರಿಸ್ ಕಾರಿನಲ್ಲಿ ಸಿಎಲ್ಎಆರ್ ಇರುವುದರಿಂದ, ಈ ಸೆಡಾನ್ ಕಾರು ಹಳೆಯ ಮಾದರಿಯ ಕಾರುಗಳಿಗಿಂತ ಕಡಿಮೆ ತೂಕವನ್ನು ಹೊಂದಿದೆ.

ಹೊಸ 3 ಸೀರಿಸ್, ದೊಡ್ಡ ಗಾತ್ರವನ್ನು ಹೊಂದಿರುವುದರ ಜೊತೆಗೆ ದೊಡ್ಡದಾದ ವ್ಹೀಲ್‍ಬೇಸ್ ಅನ್ನು ಹೊಂದಿದೆ. ವಿನ್ಯಾಸದ ಬಗ್ಗೆ ಹೇಳುವುದಾದರೆ, ಹೊಸ ಬಿಎಂಡಬ್ಲ್ಯು 3 ಸೀರಿಸ್ ಮಾರುಕಟ್ಟೆಯಲ್ಲಿರುವ ಕಾರಿಗಿಂತ ಹೆಚ್ಚು ಶಾರ್ಪ್ ಆಗಿದೆ.
MOST READ: ಬುಗಾಟಿ ಹೈಪರ್ ಕಾರು ಹೊಂದಿರುವ ಭಾರತೀಯರು

ಈ ಕಾರು ದೊಡ್ಡ ಗಾತ್ರದ ಸಿಗ್ನೇಚರ್ ಕಿಡ್ನಿ ಫ್ರಂಟ್ ಗ್ರಿಲ್, ನಯವಾದ ಎಲ್ಇಡಿ ಹೆಡ್‍ಲ್ಯಾಂಪ್ ಹೊಂದಿರುವ ಇಂಟಿಗ್ರೇಟೆಡ್ ಎಲ್ಇಡಿ ಡಿಆರ್‍ಎಲ್, ಶಾರ್ಪ್ ಶೌಲ್ಡರ್ ಲೈನ್ಸ್, ಪಕ್ಕದಲ್ಲಿರುವ ಕ್ರೀಸ್‍ಗಳು ಹಾಗೂ ಹೊಸ ವಿನ್ಯಾಸದ ಎಲ್‍ಇಡಿ ಟೇಲ್‍ಲೈಟ್ ಸೆಟ್‍ಗಳನ್ನು ಹೊಂದಿದೆ.
MOST READ: ಸೀಟ್ ಬೆಲ್ಟ್ ಧರಿಸದ ಪೊಲೀಸರನ್ನೇ ಅಡ್ಡಗಟ್ಟಿದ ಭೂಪ..!

ಹೊಸ ಬಿಎಂಡಬ್ಲ್ಯು 3 ಸೀರಿಸ್ ಕಾರು ಹಲವಾರು ಫೀಚರ್ಸ್ ಹಾಗೂ ಎಕ್ವಿಪ್‍ಮೆಂಟ್‍ಗಳನ್ನು ಹೊಂದಿದೆ. ಅವುಗಳಲ್ಲಿ 10.25 ಇಂಚಿನ ಕಂಟ್ರೋಲ್ ಡಿಸ್ಪ್ಲೇ, 12.3 ಇಂಚಿನ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಗೆಸ್ಚರ್ ಕಂಟ್ರೋಲ್ ಹೊಂದಿರುವ ಬಿಎಂಡಬ್ಲ್ಯು ಕನೆಕ್ಟೆಡ್ ಡ್ರೈವ್ ಟೆಕ್ನಾಲಜಿ, ವೈರ್‌ಲೆಸ್ ಚಾರ್ಜಿಂಗ್ ಹಾಗೂ ಆಪಲ್ ಕಾರ್ ಪ್ಲೇಗಳು ಸೇರಿವೆ.
MOST READ: ತಡೆದು ನಿಲ್ಲಿಸಿದ್ದು ಒಂದು ಕಾರಣಕ್ಕೆ, ದಂಡ ವಿಧಿಸಿದ್ದು ಇನ್ನೊಂದಕ್ಕೆ..!

ಬಿಎಂಡಬ್ಲ್ಯು ಕಂಪನಿಯು 3 ಸೀರಿಸ್ ಕಾರಿನಲ್ಲಿ ಇಕೋ ಪ್ರೊ, ಕಂಫರ್ಟ್, ಸ್ಪೋರ್ಟ್ ಹಾಗೂ ಸ್ಪೋರ್ಟ್ ಪ್ಲಸ್ ಎಂಬ ನಾಲ್ಕು ಡ್ರೈವಿಂಗ್ ಮೋಡ್‌ಗಳನ್ನು ನೀಡುತ್ತದೆ. ಸುರಕ್ಷ ಫೀಚರ್‍ಗಳ ಬಗ್ಗೆ ಹೇಳುವುದಾದರೆ, ಹೊಸ ಬಿಎಂಡಬ್ಲ್ಯು 3 ಸೀರಿಸ್ ಸೆಡಾನ್ ಕಾರಿನಲ್ಲಿ ಆರು ಏರ್‌ಬ್ಯಾಗ್‌ಗಳು, ಕಾರ್ನರಿಂಗ್ ಬ್ರೇಕ್ ಕಂಟ್ರೋಲ್, ಡೈನಾಮಿಕ್ ಸ್ಟೆಬಿಲಿಟಿ ಕಂಟ್ರೋಲ್, ಎಲೆಕ್ಟ್ರಿಕ್ ಪಾರ್ಕಿಂಗ್ ಬ್ರೇಕ್, ಸೈಡ್ ಇಂಪ್ಯಾಕ್ಟ್ ಪ್ರೊಟೆಕ್ಷನ್, ವೆಹಿಕಲ್ ಇಮೊಬೈಲೈಸರ್, ಕ್ರ್ಯಾಶ್ ಸೆನ್ಸಾರ್, ಅಟೆಂಟಿವ್ ಅಸಿಸ್ಟನ್ಸ್ ಹಾಗೂ ಐಎಸ್‌ಒಫಿಕ್ಸ್ ಚೈಲ್ಡ್ ಸೀಟ್ ಮೌಂಟ್‍ಗಳಿವೆ.
ಡ್ರೈವ್‍ಸ್ಪಾರ್ಕ್ ಅಭಿಪ್ರಾಯ
ಬಿಎಂಡಬ್ಲ್ಯು 3 ಸೀರಿಸ್ ಹೊಸ ತಲೆಮಾರಿನ ಕಾರ್ ಆಗಿದೆ. ಈ ಕಾರ್ ಅನ್ನು ದೇಶದಲ್ಲಿರುವ ಎಲ್ಲಾ ಬಿಎಂಡಬ್ಲ್ಯು ಶೋ ರೂಂಗಳಲ್ಲಿ ಮಾರಾಟ ಮಾಡಲಾಗುವುದು. ಹೊಸ ಬಿಎಂಡಬ್ಲ್ಯು 3 ಸೀರಿಸ್, ದೇಶಿಯ ಮಾರುಕಟ್ಟೆಯಲ್ಲಿ ಆಡಿ ಎ4, ಮರ್ಸಿಡಿಸ್ ಬೆಂಜ್ ಸಿ-ಕ್ಲಾಸ್ ಹಾಗೂ ಜಾಗ್ವಾರ್ ಎಕ್ಸ್‌ಎಫ್ ಕಾರುಗಳಿಗೆ ಪೈಪೋಟಿ ನೀಡಲಿದೆ.


Click it and Unblock the Notifications








