ಬಿ‍ಎಸ್6 ನಿಯಮ ಜಾರಿ ಕುರಿತು ಸ್ಪಷ್ಟನೆ ನೀಡಿದ ಸಚಿವ ಪ್ರಕಾಶ್ ಜಾವಡೇಕರ್

ಕೇಂದ್ರ ಪರಿಸರ ಖಾತೆ ಸಚಿವ ಪ್ರಕಾಶ್ ಜಾವಡೇಕರ್‍‍ರವರು ಗುರುವಾರ ನವದೆಹಲಿಯಲ್ಲಿ ಮಾತನಾಡಿ, ವಾಹನಗಳಿಂದ ಉಂಟಾಗುತ್ತಿರುವ ಮಾಲಿನ್ಯವನ್ನು ತಡೆಗಟ್ಟಲು ಬಿ‍ಎಸ್6 ಮಾಲಿನ್ಯ ನಿಯಮಗಳನ್ನು ಮುಂದಿನ ವರ್ಷದಿಂದ ಜಾರಿಗೊಳಿಸುವುದಾಗಿ ತಿಳಿಸಿದ್ದಾರೆ.

ಬಿ‍ಎಸ್6 ನಿಯಮ ಜಾರಿ ಕುರಿತು ಸ್ಪಷ್ಟನೆ ನೀಡಿದ ಸಚಿವ ಪ್ರಕಾಶ್ ಜಾವಡೇಕರ್

ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು, ನರೇಂದ್ರ ಮೋದಿರವರ ಸರ್ಕಾರವು ಭಾರತ್ ಸ್ಟೇಜ್ (ಬಿ‍ಎಸ್)6 ನಿಯಮಗಳನ್ನು 2022 ರಿಂದ ಜಾರಿಗೆ ತರಲು ನಿರ್ಧರಿಸಿತ್ತು. ಆದರೆ ಹೆಚ್ಚುತ್ತಿರುವ ವಾಯು ಮಾಲಿನ್ಯದ ಹಿನ್ನೆಲೆಯಲ್ಲಿ ಎರಡು ವರ್ಷ ಮುಂಚಿತವಾಗಿಯೇ ನಿಯಮಗಳನ್ನು ಜಾರಿಗೊಳಿಸುತ್ತಿದೆ ಎಂದು ಹೇಳಿದರು. 2020ರ ನಂತರ ಬಿ‍ಎಸ್6 ಮಾಲಿನ್ಯಕ್ಕೆ ಹೊಂದಿಕೊಳ್ಳುವ ವಾಹನಗಳನ್ನು ಮಾತ್ರ ಮಾರಾಟ ಮಾಡಲಾಗುವುದು ಎಂದು ಹೇಳಿದರು.

ಬಿ‍ಎಸ್6 ನಿಯಮ ಜಾರಿ ಕುರಿತು ಸ್ಪಷ್ಟನೆ ನೀಡಿದ ಸಚಿವ ಪ್ರಕಾಶ್ ಜಾವಡೇಕರ್

ದೆಹಲಿಯ ವಾಯು ಮಾಲಿನ್ಯವು ಕಳೆದ ಕೆಲವು ವರ್ಷಗಳಿಂದ ತುಂಬಾ ಹದಗೆಟ್ಟಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಇದನ್ನು ಸವಾಲಾಗಿ ಸ್ವೀಕರಿಸಿದ್ದು, ಬಿ‍ಎಸ್ 6 ಆಧಾರಿತ ವಾಹನಗಳನ್ನು ಬಿಡುಗಡೆ ಮಾಡುವಂತೆ ಎಲ್ಲಾ ವಾಹನ ತಯಾರಿಕರಿಗೆ ಸೂಚಿಸಿದೆ.

ಬಿ‍ಎಸ್6 ನಿಯಮ ಜಾರಿ ಕುರಿತು ಸ್ಪಷ್ಟನೆ ನೀಡಿದ ಸಚಿವ ಪ್ರಕಾಶ್ ಜಾವಡೇಕರ್

2020ರ ನಂತರ ದೇಶಾದ್ಯಂತ ಬಿ‍ಎಸ್6 ಇಂಧನಗಳು ಲಭ್ಯವಿರಲಿವೆ. ವಾಹನಗಳನ್ನೂ ಸಹ ಈ ನಿಟ್ಟಿನಲ್ಲಿ ತಯಾರು ಮಾಡಲಾಗಿದ್ದು, ಈ ನಿಯಮಗಳನ್ನು ಜಾರಿಗೊಳಿಸಲು ಹೆಚ್ಚಿನ ಪರಿಶ್ರಮದ ಅವಶ್ಯಕತೆಯಿದೆ. ಆದರೆ ಇದೊಂದು ಬದ್ದತೆಯಾಗಿದ್ದು, ಅದನ್ನು ಪೂರ್ಣಗೊಳಿಸಲಾಗುವುದು.

ಬಿ‍ಎಸ್6 ನಿಯಮ ಜಾರಿ ಕುರಿತು ಸ್ಪಷ್ಟನೆ ನೀಡಿದ ಸಚಿವ ಪ್ರಕಾಶ್ ಜಾವಡೇಕರ್

ಹೊಸ ನಿಯಮಗಳಿಂದಾಗಿ ವಾಹನಗಳಿಂದ ಉಂಟಾಗುವ ಮಾಲಿನ್ಯವು ಗಣನೀಯವಾಗಿ ಕಡಿಮೆಯಾಗಲಿದೆ. ಇದಕ್ಕಾಗಿ ರೂ.60,000 ಕೋಟಿ ಬಂಡವಾಳ ಹೂಡಿಕೆ ಮಾಡಲಾಗಿದೆ. ವಾಯು ಮಾಲಿನ್ಯವು ಕೇವಲ ಭಾರತದ ಸಮಸ್ಯೆ ಮಾತ್ರವಾಗಿರದೇ ಇಡೀ ವಿಶ್ವದ ಸಮಸ್ಯೆಯಾಗಿದೆ. ಇದನ್ನು ತಡೆಗಟ್ಟಲು ಎಲ್ಲಾ ವಾಹನ ತಯಾರಕರು ಕೈ ಜೋಡಿಸಬೇಕಿದೆ. ವಾಯು ಮಾಲಿನ್ಯವೆಂಬುದು ಭಾರತಕ್ಕೆ ಮಾತ್ರ ಸವಾಲನ್ನು ಒಡ್ಡುತ್ತಿಲ್ಲ, ಬದಲಿಗೆ ಇಡೀ ವಿಶ್ವಕ್ಕೆ ಸವಾಲೊಡ್ಡಿದೆ.

ಬಿ‍ಎಸ್6 ನಿಯಮ ಜಾರಿ ಕುರಿತು ಸ್ಪಷ್ಟನೆ ನೀಡಿದ ಸಚಿವ ಪ್ರಕಾಶ್ ಜಾವಡೇಕರ್

ವಿಶ್ವದ ಬಹುತೇಕ ರಾಷ್ಟ್ರಗಳು ಮಾಲಿನ್ಯ ಭರಿತವಾಗಿದ್ದು, ಇದರ ಪರಿಹಾರಕ್ಕೆ ನೀಡುತ್ತಿರುವ ಸೌಲಭ್ಯಗಳೂ ಹೆಚ್ಚಾಗಿವೆ. ನಾವೆಲ್ಲರೂ ಈ ಸವಾಲನ್ನು ಎದುರಿಸಲು ಸಿದ್ದರಾಗಿದ್ದೇವೆ. ವಿಶ್ವಸಂಸ್ಥೆಯಿಂದ ವಿಶ್ವ ಹವಾಮಾನ ಬದಲಾವಣೆ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

MOST READ: ಟ್ಯೂಬ್‍‍ಲೆಸ್ ಟಯರ್ ಟ್ರೆಂಡ್ ಮುಗಿತು, ಇನ್ನು ಏರ್‍‍ಲೆಸ್ ಟಯರ್ ಸದ್ದು ಶುರು

ಬಿ‍ಎಸ್6 ನಿಯಮ ಜಾರಿ ಕುರಿತು ಸ್ಪಷ್ಟನೆ ನೀಡಿದ ಸಚಿವ ಪ್ರಕಾಶ್ ಜಾವಡೇಕರ್

ಭಾರತವು ಸಹ ಈ ಯೋಜನೆಯ ಭಾಗವಾಗಿರಲಿದ್ದು, ತನ್ನ ಕಾರ್ಯವನ್ನು ಉತ್ತಮವಾಗಿ ನಿಭಾಯಿಸಲಿದೆ ಎಂದು ಹೇಳಿದ ಜಾವಡೇಕರ್‍‍ರವರು ಮೋದಿ ಸರ್ಕಾರವು ದೆಹಲಿಯ ಹೊರವಲಯದಲ್ಲಿ ನಿರ್ಮಿಸಿರುವ ರಿಂಗ್ ರಸ್ತೆಯಿಂದಾಗಿ ಟ್ರಕ್ಕುಗಳು ದೆಹಲಿಯ ಒಳಗೆ ಬರದೇ ಇರುವ ಕಾರಣ ಮಾಲಿನ್ಯ ಪ್ರಮಾಣವು ಕುಸಿದಿದೆ ಎಂದು ತಿಳಿಸಿದರು.

MOST READ: ಮ್ಯಾನುವಲ್ ಕಾರ್ ಡ್ರೈವಿಂಗ್ ಮಾಡದಿದ್ರೆ ಲೈಸೆನ್ಸ್ ಸಿಗೋದಿಲ್ಲ

ಬಿ‍ಎಸ್6 ನಿಯಮಗಳ ಬಗ್ಗೆ ಸ್ಪಷ್ಟನೆ ನೀಡಿದ ಸಚಿವ ಪ್ರಕಾಶ್ ಜಾವಡೇಕರ್

ದೆಹಲಿಯ ಹೊರವಲಯದಲ್ಲಿರುವ ರಿಂಗ್ ರಸ್ತೆಯ ನಿರ್ಮಾಣವು ಕಳೆದ 20 ವರ್ಷಗಳಿಂದ ಬಾಕಿ ಉಳಿದಿತ್ತು. ನಾವು ಈ ಕೆಲಸವನ್ನು ಕಳೆದ ನಾಲ್ಕು ವರ್ಷಗಳಲ್ಲಿ ಪೂರ್ತಿಗೊಳಿಸಿದ್ದೇವೆ. ಇದರಿಂದಾಗಿ ಟ್ರಕ್ಕುಗಳು ದೆಹಲಿಯ ಒಳಗೆ ಬರುವುದಿಲ್ಲ.

MOST READ: ಈ ಹುಚ್ಚು ಸಾಹಸಕ್ಕೆ ಬಹುದೊಡ್ಡ ಸಲಾಂ..!

ಬಿ‍ಎಸ್6 ನಿಯಮ ಜಾರಿ ಕುರಿತು ಸ್ಪಷ್ಟನೆ ನೀಡಿದ ಸಚಿವ ಪ್ರಕಾಶ್ ಜಾವಡೇಕರ್

ಸಣ್ಣ ಪುಟ್ಟ ಕೆಲಸಗಳು ಬಾಕಿ ಉಳಿದಿದ್ದು, ಅದನ್ನು ಪೂರೈಸಿದ ನಂತರ ಯಾವುದೇ ಟ್ರಕ್ ದೆಹಲಿಗೆ ಬರದೇ ತಲುಪಬೇಕಿರುವ ಸ್ಥಳವನ್ನು ಮುಟ್ಟಲಿವೆ. ಇದರಿಂದಾಗಿ ವಾಯು ಮಾಲಿನ್ಯವು ಕಡಿಮೆಯಾಗಲಿದೆ ಎಂದು ತಿಳಿಸಿದರು.

Most Read Articles

Kannada
English summary
BS 6 norms to be implemented from 2020: environment minister prakash javadekar - Read in kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X