ಬಿಎಸ್ 6 ಜಾರಿಗೆ ದಿನಗಣನೆ- ಸೆಕೆಂಡ್ ಹ್ಯಾಂಡ್ ಕಾರು ಮಾರಾಟದಲ್ಲಿ ಭಾರೀ ಬದಲಾವಣೆ

ದೇಶದಲ್ಲಿ ದಿನಂಪ್ರತಿ ಸಾವಿರಾರು ಹೊಸ ವಾಹನಗಳು ರಸ್ತೆಗಿಳಿಯುತ್ತಿದ್ದು, ಮಾಲಿನ್ಯ ಪ್ರಮಾಣವು ಕೂಡಾ ಅದೇ ರೀತಿಯಲ್ಲಿ ಹೆಚ್ಚುತ್ತಲೇ ಇದೆ. ಹೀಗಾಗಿ ಮಾಲಿನ್ಯ ಪ್ರಮಾಣವನ್ನ ತಗ್ಗಿಸುವ ಸಂಬಂಧ ಸುಪ್ರೀಂಕೋರ್ಟ್ ನಿರ್ದೇಶನದಂತೆ ಬಿಎಸ್ 6 ಕಾಯ್ದೆಯನ್ನು ಜಾರಿ ತರಲು ಸಿದ್ದತೆ ನಡೆಸಲಾಗಿದ್ದು, ಹೊಸ ಕಾಯ್ದೆ ಜಾರಿಗೂ ಮುನ್ನ ಸೆಕೆಂಡ್ ಹ್ಯಾಂಡ್ ಕಾರು ಮಾರಾಟ ಪ್ರಮಾಣದಲ್ಲಿ ಭಾರೀ ಪ್ರಮಾಣದ ಬದಲಾವಣೆ ಕಂಡುಬಂದಿದೆ.

ಬಿಎಸ್ 6 ಜಾರಿಗೆ ದಿನಗಣನೆ- ಸೆಕೆಂಡ್ ಹ್ಯಾಂಡ್ ಕಾರು ಮಾರಾಟದಲ್ಲಿ ಭಾರೀ ಬದಲಾವಣೆ

ಸದ್ಯ ಮಾರುಕಟ್ಟೆಯಲ್ಲಿ ಬಿಎಸ್-4 ಮತ್ತು ಅದಕ್ಕೂ ಹೆಚ್ಚಿನ ಮಟ್ಟದ ತಾಂತ್ರಿಕ ಗುಣವೈಶಿಷ್ಟ್ಯ ಹೊಂದಿರುವ ವಾಹನಗಳಿಗೆ ಮಾತ್ರವೇ ಉತ್ಪಾದನೆ ಮತ್ತು ಮಾರಾಟಕ್ಕೆ ಅವಕಾಶವಿದ್ದು, ಇದು ಕೂಡಾ ಮುಂದಿನ ಕೆಲವೇ ದಿನಗಳಲ್ಲಿ ನಿಷೇಧವಾಗುವುದು ಖಚಿತವಾಗಿದೆ. ಇದೇ ಕಾರಣಕ್ಕೆ ಬಿಎಸ್ 3 ಮತ್ತು ಬಿಎಸ್ 4 ವಾಹನ ಮಾಲೀಕರು ತನ್ನ ವಾಹನಗಳನ್ನು ಮರುಮಾರಾಟ ಮಾಡಿ ಹೊಸ ನಿಯಮಗಳನ್ನು ಹೊತ್ತು ಬರುತ್ತಿರುವ ವಾಹನಗತ್ತ ಮುಖಮಾಡುತ್ತಿದ್ದು, ಬಳಸಿದ ವಾಹನಗಳನ್ನು ಮರು ಮಾರಾಟ ಮಾಡುವ ಸಂಸ್ಥೆಗಳು ಇದೀಗ ಭರ್ಜರಿಯಾಗಿ ಲಾಭ ಗಳಿಕೆ ಮಾಡುತ್ತಿವೆ.

ಬಿಎಸ್ 6 ಜಾರಿಗೆ ದಿನಗಣನೆ- ಸೆಕೆಂಡ್ ಹ್ಯಾಂಡ್ ಕಾರು ಮಾರಾಟದಲ್ಲಿ ಭಾರೀ ಬದಲಾವಣೆ

ಹೌದು, 2020ರ ಏಪ್ರಿಲ್ 1ರಿಂದ ಜಾರಿಗೆ ಬರುತ್ತಿರುವ ಬಿಎಸ್ 6 ಕಾಯ್ದೆಯು ಭಾರತೀಯ ವಾಹನ ಉದ್ಯಮದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದ್ದು, ಹೊಸ ನಿಯಮಗಳಿಗೆ ಅನುಗುಣವಾಗಿ ಆಟೋ ಉತ್ಪಾದನಾ ಸಂಸ್ಥೆಗಳು ಸಹ ಬಿಎಸ್ 4 ವಾಹನಗಳ ಜೊತೆ ಜೊತೆಗೆ ಬಿಎಸ್ 6 ಎಂಜಿನ್ ಪ್ರೇರಿತ ವಾಹನ ಅಭಿವೃದ್ಧಿಗೂ ಹೆಚ್ಚಿನ ಗಮನಹರಿಸಿವೆ.

ಬಿಎಸ್ 6 ಜಾರಿಗೆ ದಿನಗಣನೆ- ಸೆಕೆಂಡ್ ಹ್ಯಾಂಡ್ ಕಾರು ಮಾರಾಟದಲ್ಲಿ ಭಾರೀ ಬದಲಾವಣೆ

ಕೇಂದ್ರ ಸರ್ಕಾರದ ಅಧಿಕೃತ ಘೋಷಣೆಯ ನಂತರ ಬಿಎಸ್ 4 ವಾಹನಗಳ ಉತ್ಪಾದನೆಗೆ ಗುಡ್ ಬೈ ಹೇಳಲಿರುವ ವಾಹನ ಉತ್ಪಾದನಾ ಸಂಸ್ಥೆಗಳು ಸಂಪೂರ್ಣವಾಗಿ ಬಿಎಸ್ 6 ನತ್ತ ಗಮನಹರಿಸಲಿವೆ. ಇದರಿಂದ ಸದ್ಯ ಮಾರುಕಟ್ಟೆಯಲ್ಲಿರುವ ಬಿಎಸ್ 3, ಬಿಎಸ್ 4 ವಾಹನಗಳು ತಮ್ಮ ಮೌಲ್ಯ ಕಳೆದುಕೊಳ್ಳಲಿದ್ದು, ಹೀಗಾಗಿ ಬಿಎಸ್ 6 ನಿಯಮ ಜಾರಿಗೂ ಮುನ್ನವೇ ಹಲವಾರು ಕಾರು ಮಾಲೀಕರು ತಮ್ಮ ಹಳೆಯ ವಾಹನಗಳನ್ನು ಮರುಮಾರಾಟ ಮಾಡುತ್ತಿದ್ದಾರೆ.

ಬಿಎಸ್ 6 ಜಾರಿಗೆ ದಿನಗಣನೆ- ಸೆಕೆಂಡ್ ಹ್ಯಾಂಡ್ ಕಾರು ಮಾರಾಟದಲ್ಲಿ ಭಾರೀ ಬದಲಾವಣೆ

ಈ ಕುರಿತಂತೆ ಸೆಕೆಂಡ್ ಹ್ಯಾಂಡ್ ಕಾರು ಮಾರಾಟ ಸಂಸ್ಥೆಗಳಾದ ಮಹೀಂದ್ರಾ ಫಸ್ಟ್ ಛಾಯ್ಸ್ ವೀಲ್ಹ್, ಒಎಲ್ಎಕ್ಸ್, ಟ್ರುಬಿಲ್ ಸೇರಿದಂತೆ ಕೆಲ ಜನಪ್ರಿಯ ಸಂಸ್ಥೆಗಳೇ ಮಾಹಿತಿ ಹಂಚಿಕೊಂಡಿದ್ದು, ಹೊಸ ಕಾಯ್ದೆ ಅನುಷ್ಠಾನಕ್ಕೆ ಬರುತ್ತಿರುವ ಹಿನ್ನೆಲೆಯಲ್ಲಿ ಮೆಟ್ರೋ ಸಿಟಿಗಳನ್ನು ಹೊರತುಪಡಿಸಿ 2ನೇ, 3ನೇ ಮತ್ತು 4ನೇ ದರ್ಜೆಯ ನಗರಗಳಲ್ಲಿ ಸೆಕೆಂಡ್ ಹ್ಯಾಂಡ್ ಕಾರುಗಳ ಮಾರಾಟ ಪ್ರಮಾಣವು ಕಳೆದ ವರ್ಷಕ್ಕಿಂತಲೂ ಶೇ.20 ರಷ್ಟು ಹೆಚ್ಚಳವಾಗಿದೆ ಎನ್ನಲಾಗಿದೆ.

ಬಿಎಸ್ 6 ಜಾರಿಗೆ ದಿನಗಣನೆ- ಸೆಕೆಂಡ್ ಹ್ಯಾಂಡ್ ಕಾರು ಮಾರಾಟದಲ್ಲಿ ಭಾರೀ ಬದಲಾವಣೆ

ಹೊಸ ನಿಯಮ ಜಾರಿ ಉದ್ದೇಶ ಏನು?

ವಿಶ್ವಾದ್ಯಂತ ಈಗಾಗಲೇ ಪರಿಸರ ಮಾಲಿನ್ಯ ಪ್ರಮಾಣವನ್ನು ತಗ್ಗಿಸುವ ಉದ್ದೇಶದಿಂದ ಹೆಚ್ಚು ಹೊಗೆ ಉಗುಳುವ ವಾಹನಗಳಿಗೆ ಬ್ರೇಕ್ ಹಾಕಲು ಯುರೋಪ್‌ನಲ್ಲಿ ಯುರೋ-6, ಇತರೆ ಖಂಡಗಳಲ್ಲಿ ವಿವಿಧ ಮಾದರಿಯ ಗುಣಮಟ್ಟದ ವಾಹನಗಳಿಗೆ ಮಾತ್ರವೇ ಅವಕಾಶವಿದ್ದು, ಇದರ ಭಾಗವಾಗಿ ಭಾರತದಲ್ಲಿ ಬಿಎಸ್-6 ವಾಹನಗಳು ರಸ್ತೆಗಿಳಿಯಲಿವೆ.

ಬಿಎಸ್ 6 ಜಾರಿಗೆ ದಿನಗಣನೆ- ಸೆಕೆಂಡ್ ಹ್ಯಾಂಡ್ ಕಾರು ಮಾರಾಟದಲ್ಲಿ ಭಾರೀ ಬದಲಾವಣೆ

ಹೊಸ ನಿಯಮ ಜಾರಿಯಿಂದಾಗಿ ವಾಹನ ಎಂಜಿನ್ ಮಾದರಿಗಳಲ್ಲಿ ಭಾರೀ ಬದಲಾವಣೆಯಾಗಲಿದ್ದು, ಸದ್ಯ ಮಾರುಕಟ್ಟೆಯಲ್ಲಿರುವ ಎಂಜಿನ್ ಮಾದರಿಗಿಂತಲೂ ಬಿಎಸ್-6 ಹೆಚ್ಚಿನ ಗುಣಮಟ್ಟದೊಂದಿಗೆ ಹೊಗೆ ಉಗುಳುವ ಪ್ರಮಾಣದಲ್ಲಿ ಪರಿಣಾಮಕಾರಿಯಾಗಿ ತಗ್ಗಿಸಲಿದೆ.

ಬಿಎಸ್ 6 ಜಾರಿಗೆ ದಿನಗಣನೆ- ಸೆಕೆಂಡ್ ಹ್ಯಾಂಡ್ ಕಾರು ಮಾರಾಟದಲ್ಲಿ ಭಾರೀ ಬದಲಾವಣೆ

ಅದರಲ್ಲೂ ಮಾಲಿನ್ಯದಲ್ಲಿ ಬಹುದೊಡ್ಡ ಕೊಡುಗೆ ಹೊಂದಿರುವ ಭಾರತದಲ್ಲಿ ಬಿಎಸ್-6 ವೈಶಿಷ್ಟ್ಯತೆಯ ವಾಹನಗಳ ಉತ್ಪಾದನೆ ಮತ್ತು ಮಾರಾಟಕ್ಕೆ ಹೆಚ್ಚಿನ ಒತ್ತಡಗಳಿದ್ದು, ಇದೀಗ ಸುಪ್ರೀಂಕೋರ್ಟ ಕೂಡಾ ಈ ಕುರಿತಂತೆ ಮಹತ್ವದ ಆದೇಶವನ್ನು ಹೊರಡಿಸಿರುವುದು ಕೇಂದ್ರ ಸರ್ಕಾರವು ಪಾಲನೆ ಮಾಡಲೇಬೇಕಾದ ಅನಿವಾರ್ಯತೆಯಲ್ಲಿದೆ.

ಬಿಎಸ್ 6 ಜಾರಿಗೆ ದಿನಗಣನೆ- ಸೆಕೆಂಡ್ ಹ್ಯಾಂಡ್ ಕಾರು ಮಾರಾಟದಲ್ಲಿ ಭಾರೀ ಬದಲಾವಣೆ

ವಾಹನಗಳ ಬೆಲೆ ಗಗನಮುಖಿ..!

ಮೇಲೆ ಹೇಳಿದಂತೆ ಬಿಎಸ್ 6 ವಾಹನಗಳ ಎಂಜಿನ್ ಮಾದರಿಯು ಸುಧಾರಿತ ತಂತ್ರಜ್ಞಾನ ಹೊಂದಿರುವುದರಿಂದ ಪ್ರಸ್ತುತ ಬೆಲೆಗಳಿಂತ ಶೇ.25 ರಿಂದ ಶೇ. 30ರಷ್ಟು ಹೆಚ್ಚಳವಾಗಲಿದ್ದು, ಸರಾಸರಿಯಾಗಿ ರೂ. 2.50 ಲಕ್ಷದಿಂದ ರೂ. 3 ಲಕ್ಷದ ತನಕ ಬೆಲೆ ಹೆಚ್ಚಳವಾಗಲಿವೆ ಎನ್ನಲಾಗಿದೆ.

ಬಿಎಸ್ 6 ಜಾರಿಗೆ ದಿನಗಣನೆ- ಸೆಕೆಂಡ್ ಹ್ಯಾಂಡ್ ಕಾರು ಮಾರಾಟದಲ್ಲಿ ಭಾರೀ ಬದಲಾವಣೆ

ಹಾಗೆಯೇ ದ್ವಿಚಕ್ರ ವಾಹನಗಳ ಬೆಲೆಯಲ್ಲಿ ಪ್ರತಿ ಲಕ್ಷಕ್ಕೆ ರೂ. 10 ಸಾವಿರದಿಂದ ರೂ.15 ಸಾವಿರ ಹೆಚ್ಚಳವಾದಲ್ಲಿ ವಾಣಿಜ್ಯ ವಾಹನಗಳ ಬೆಲೆಯಲ್ಲೂ ಭಾರೀ ಹೆಚ್ಚಳ ಕಂಡುಬರಲಿದೆ. ಇದಲ್ಲದೇ ಬಿಎಸ್ 6 ಬರುವುದಕ್ಕೂ ಮುನ್ನ 2019ರ ಏಪ್ರಿಲ್ 1ರಿಂದ ಜಾರಿಗೆ ಬರಲಿರುವ 125 ಸಿಸಿ ಮೇಲ್ಪಟ್ಟ ವಾಹನಗಳಲ್ಲಿ ಎಬಿಎಸ್ ಕಡ್ಡಾಯ ನಿಯಮ ಕೂಡಾ ವಾಹನಗಳ ಬೆಲೆಯಲ್ಲಿ ಮತ್ತಷ್ಟು ಹೆಚ್ಚಳಕ್ಕೆ ಕಾರಣವಾಗಲಿದೆ.

Article Published On: Friday, February 15, 2019, 13:34 [IST]
English summary
BS3, BS4 Used Car Sales Increase — BS6 Emission Norms Effective From April 2020. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+