ರೋಡ್ ಟೆಸ್ಟಿಂಗ್ ನಡೆಸಿದ ಬಿಎಸ್-6 ಎಂಜಿನ್ ಪ್ರೇರಿತ ಮಹೀಂದ್ರಾ ಮರಾಜೋ

ಮಹೀಂದ್ರಾ ಸಂಸ್ಥೆಯು ಸದ್ಯ ಮರಾಜೋ ಎಂಪಿವಿ ಆವೃತ್ತಿಯನ್ನು ಡೀಸೆಲ್ ಮಾದರಿಯಲ್ಲಿ ಮಾತ್ರವೇ ಮಾರಾಟ ಮಾಡುತ್ತಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಪೆಟ್ರೋಲ್ ಮಾದರಿಯನ್ನು ಕೂಡಾ ಬಿಡುಗಡೆಗೊಳಿಸುವ ಯೋಜನೆಯಲ್ಲಿದೆ. ಹೀಗಾಗಿ ಹೊಸ ಕಾರಿನ ಇಂಧನ ಕಾರ್ಯಕ್ಷಮತೆ ಕುರಿತಂತೆ ರೋಡ್ ಟೆಸ್ಟಿಂಗ್ ನಡೆಸಿರುವ ಮಹೀಂದ್ರಾ ಸಂಸ್ಥೆಯು ಮುಂಬರುವ ದೀಪಾವಳಿ ಹೊತ್ತಿಗೆ ಬಿಡುಗಡೆ ಮಾಡುತ್ತದೆ ಎನ್ನಲಾಗಿದೆ.

ರೋಡ್ ಟೆಸ್ಟಿಂಗ್ ನಡೆಸಿದ ಬಿಎಸ್-6 ಎಂಜಿನ್ ಪ್ರೇರಿತ ಮಹೀಂದ್ರಾ ಮರಾಜೋ

ಮಲ್ಟಿ ಪರ್ಪಸ್ ವೆಹಿಕಲ್(ಎಂಪಿವಿ) ಕಾರುಗಳ ವಿಭಾಗದಲ್ಲಿ ಮಹೀಂದ್ರಾ ಮರಾಜೋ ಕಾರುಗಳು ಉತ್ತಮ ಬೇಡಿಕೆ ಹರಿದು ಬರುತ್ತಿರುವ ಹಿನ್ನೆಲೆಯಲ್ಲಿ ಪೆಟ್ರೋಲ್ ವರ್ಷನ್ ಅನ್ನು ಬಿಡುಗಡೆಗೊಳಿಸಲು ನಿರ್ಧರಿಸಿರುವ ಮಹೀಂದ್ರಾ ಸಂಸ್ಥೆಯು 2020ರ ಏಪ್ರಿಲ್ 1ರಿಂದ ಕಡ್ಡಾಯವಾಗಲಿರುವ ಬಿಎಸ್-6 ನಿಯಮದಂತೆಯೇ ಹೊಸ ಎಂಜಿನ್‌ನೊಂದಿಗೆಯೇ ಮಾರುಕಟ್ಟೆ ಪ್ರವೇಶಿಸುವ ತಯಾರಿಯಲ್ಲಿದೆ.

ರೋಡ್ ಟೆಸ್ಟಿಂಗ್ ನಡೆಸಿದ ಬಿಎಸ್-6 ಎಂಜಿನ್ ಪ್ರೇರಿತ ಮಹೀಂದ್ರಾ ಮರಾಜೋ

ಬಿಎಸ್-6 ಎಂಜಿನ್ ಮಾದರಿಯು ಸದ್ಯ ಮಾರುಕಟ್ಟೆಯಲ್ಲಿರುವ ಬಿಎಸ್-4 ಎಂಜಿನ್‌ಗಿಂತ ಹೆಚ್ಚು ಬಲಿಷ್ಠತೆ ಹೊಂದಿರುವುದಲ್ಲದೇ ಅಧಿಕ ಮಟ್ಟದ ಇಂಧನ ಕಾರ್ಯಕ್ಷಮತೆ ಹಾಗೂ ಅತಿ ಕಡಿಮೆ ಪ್ರಮಾಣದ ಮಾಲಿನ್ಯ ಹೊರಸೂಸುವಿಕೆಯ ಗುಣವೈಶಿಷ್ಟ್ಯತೆ ಹೊಂದಿದೆ.

ರೋಡ್ ಟೆಸ್ಟಿಂಗ್ ನಡೆಸಿದ ಬಿಎಸ್-6 ಎಂಜಿನ್ ಪ್ರೇರಿತ ಮಹೀಂದ್ರಾ ಮರಾಜೋ

ಇದಕ್ಕಾಗಿಯೇ ಹೆಚ್ಚುತ್ತಿರುವ ಮಾಲಿನ್ಯವನ್ನು ತಡೆಯಲು ಹೊಸ ನಿಯಮವನ್ನು ಜಾರಿಗೆ ತರುತ್ತಿರುವ ಕೇಂದ್ರ ಸರ್ಕಾರವು ಈಗಾಗಲೇ ಎಲ್ಲಾ ವಾಹನ ಉತ್ಪಾದನಾ ಸಂಸ್ಥೆಗಳಿಗೂ ಖಡಕ್ ಸೂಚನೆ ನೀಡಿದ್ದು, ಡೆಡ್‌ಲೈನ್ ಒಳಗಾಗಿಯೇ ಹೊಸ ವಾಹನಗಳನ್ನು ಬಿಎಸ್-6 ನಿಯಮಕ್ಕೆ ಅನುಸಾರ ಉನ್ನತಿಕರಿಸುವಂತೆ ಸೂಚಿಸಲಾಗಿದೆ.

ರೋಡ್ ಟೆಸ್ಟಿಂಗ್ ನಡೆಸಿದ ಬಿಎಸ್-6 ಎಂಜಿನ್ ಪ್ರೇರಿತ ಮಹೀಂದ್ರಾ ಮರಾಜೋ

ಹೀಗಾಗಿ ಮಹೀಂದ್ರಾ ಸೇರಿದಂತೆ ಎಲ್ಲಾ ವಾಹನ ಉತ್ಪಾದನಾ ಸಂಸ್ಥೆಗಳು ಸಹ ಡೆಡ್‌ಲೈನ್‌ಗೂ ಮುನ್ನವೇ ಹೊಸ ಕಾರುಗಳನ್ನು ಬಿಡುಗಡೆ ಮಾಡುತ್ತಿದ್ದು, ಇದೇ ವರ್ಷಾಂತ್ಯಕ್ಕೆ ಮಹೀಂದ್ರಾ ಸಂಸ್ಥೆಯು ಮರಾಜೋ ಪೆಟ್ರೋಲ್ ಅಷ್ಟೇ ಅಲ್ಲದೇ ನ್ಯೂ ಜನರೇಷನ್ ಥಾರ್, ಎಕ್ಸ್‌ಯುವಿ 500 ಮತ್ತು ಸ್ಕಾರ್ಪಿಯೋ ಕಾರುಗಳನ್ನು ಸಹ ಮರುಅಭಿವೃದ್ಧಿಸಿ ಬಿಡುಗಡೆಯ ಸಂಬಂಧ ರೋಡ್ ಟೆಸ್ಟಿಂಗ್ ನಡೆಸುತ್ತಿದೆ.

ರೋಡ್ ಟೆಸ್ಟಿಂಗ್ ನಡೆಸಿದ ಬಿಎಸ್-6 ಎಂಜಿನ್ ಪ್ರೇರಿತ ಮಹೀಂದ್ರಾ ಮರಾಜೋ

ಇನ್ನು ಪ್ರಸ್ತುತ ಮಾರುಕಟ್ಟೆಯಲ್ಲಿ ಮರಾಜೋ ಕಾರುಗಳು ಟೊಯೊಟಾ ಇನೋವಾ ಕ್ರಿಸ್ಟಾ ಕಾರಿಗೆ ಪರ್ಯಾಯವಾಗಿ ಎಂಪಿವಿ ಕಾರು ಖರೀದಿದಾರರ ಮೆಚ್ಚುಗೆಗೆ ಪಾತ್ರವಾಗಿದ್ದು, 1.5-ಲೀಟರ್ ಡೀಸೆಲ್ ಎಂಜಿನ್‌ನೊಂದಿಗೆ ಎಂ2, ,ಎಂ4, ಎಂ6, ಎಂ8 ವರ್ಷಗಳಲ್ಲಿ ಖರೀದಿಗೆ ಲಭ್ಯವಿದೆ.

ರೋಡ್ ಟೆಸ್ಟಿಂಗ್ ನಡೆಸಿದ ಬಿಎಸ್-6 ಎಂಜಿನ್ ಪ್ರೇರಿತ ಮಹೀಂದ್ರಾ ಮರಾಜೋ

ಇದೀಗ ಬಿಡುಗಡೆಗಾಗಿ ಸಿದ್ದವಾಗುತ್ತಿರುವ ಪೆಟ್ರೋಲ್ ವರ್ಷನ್ ಮಾದರಿ ಕೂಡಾ 1.5-ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿರಲಿದ್ದು, ಬಿಎಸ್-6 ವೈಶಿಷ್ಟ್ಯತೆಯಿಂದಾಗಿ ಉತ್ತಮ ಎಂಜಿನ್ ಕಾರ್ಯಕ್ಷಮತೆಯೊಂದಿಗೆ ಮೈಲೇಜ್ ವಿಚಾರದಲ್ಲೂ ಸದ್ದು ಮಾಡಲಿವೆ.

ರೋಡ್ ಟೆಸ್ಟಿಂಗ್ ನಡೆಸಿದ ಬಿಎಸ್-6 ಎಂಜಿನ್ ಪ್ರೇರಿತ ಮಹೀಂದ್ರಾ ಮರಾಜೋ

ಪ್ರೀಮಿಯಂ ವೈಶಿಷ್ಟ್ಯತೆಗಳನ್ನು ಹೊಂದಿರುವ ಮರಾಜೊ ಹೊಸ ಕಾರುಗಳು ಗುಣಮಟ್ಟದಲ್ಲಿ ಇತರೆ ಎಂಪಿವಿ ಕಾರುಗಳಿಂತಲೂ ಭಿನ್ನವಾಗಿದ್ದು, ಶಾರ್ಕ್ ಡಿಸೈನ್ ಡಿಸೈನ್ ಪ್ರೇರಿತ ಈ ಕಾರಿನ ಮುಂಭಾಗದ ಗ್ರಿಲ್ ಕೂಡಾಶಾರ್ಕ್ ಹಲ್ಲುಗಳ ಆಕಾರವನ್ನೇ ಹೊಂದಿರುವುದನ್ನು ನೀವು ಗಮನಿಸಬಹುದು.

ರೋಡ್ ಟೆಸ್ಟಿಂಗ್ ನಡೆಸಿದ ಬಿಎಸ್-6 ಎಂಜಿನ್ ಪ್ರೇರಿತ ಮಹೀಂದ್ರಾ ಮರಾಜೋ

ಆದ್ರೆ ಮರಾಜೋ ಕಾರಿನಲ್ಲಿ ಪೆಟ್ರೋಲ್ ಮಾದರಿ ಇಲ್ಲದಿರುವುದರಿಂದ ಬಹುತೇಕ ವ್ಯಯಕ್ತಿಕ ಕಾರು ಬಳಕೆದಾರರು ಮರಾಜೋ ಖರೀದಿ ಹಿಂದೇಟು ಹಾಕುತ್ತಿದ್ದು, ಇದೀಗ ಗ್ರಾಹಕರ ಬೇಡಿಕೆಯೆಂತೆ ಪೆಟ್ರೋಲ್ ಮಾದರಿಯನ್ನು ಬಿಡುಗಡೆ ಮಾಡಲಾಗುತ್ತಿದೆ.

ರೋಡ್ ಟೆಸ್ಟಿಂಗ್ ನಡೆಸಿದ ಬಿಎಸ್-6 ಎಂಜಿನ್ ಪ್ರೇರಿತ ಮಹೀಂದ್ರಾ ಮರಾಜೋ

ದೀಪಾವಳಿ ಹೊತ್ತಿಗೆ ಮರಾಜೋ ಪೆಟ್ರೋಲ್ ಕಾರು ಮಾದರಿಯು ಖರೀದಿಗೆ ಲಭ್ಯವಿರಲಿದ್ದು, ಪ್ರಸ್ತುತ ಬೆಲೆಗಳಿಂತಲೂ ದುಬಾರಿಯಾಗಲಿರುವ ಬಿಎಸ್-6 ವೈಶಿಷ್ಟ್ಯತೆಯ ಕಾರುಗಳು ಸದ್ಯ ಮಾರುಕಟ್ಟೆಯಲ್ಲಿರುವ ಕಾರುಗಳಿಂತಲೂ ರೂ.1 ಲಕ್ಷದಿಂದ ರೂ.1.50 ಲಕ್ಷದಷ್ಟು ಹೆಚ್ಚುವರಿ ಬೆಲೆ ಪಡೆದುಕೊಳ್ಳಲಿವೆ.

Source: Thrust Zone

Most Read Articles

Kannada
English summary
BS6 Mahindra Marazzo Spied in Testing. Read in Kannada.
Story first published: Friday, July 5, 2019, 19:14 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X