ಬಿಎಸ್ 6 ಡೀಸೆಲ್ ಎಂಜಿನ್‍ನೊಂದಿಗೆ ಬಿಡುಗಡೆಗೆ ಸಿದ್ದವಾದ ಹೊಸ ಎರ್ಟಿಗಾ
ಮಾರುತಿ ಸುಜುಕಿ ಎರ್ಟಿಗಾದ ಜನಪ್ರಿಯತೆಯ ಲಾಭವನ್ನು ಪಡೆಯಲು ಈ ವರ್ಷದ ತಿಂಗಳಿನಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಹೆಚ್ಚು ಪ್ರೀಮಿಯಂ ಆದ ಎಕ್ಸ್‌ಎಲ್ 6 ಎಂಪಿವಿಯನ್ನು ಬಿಡುಗಡೆಗೊಳಿಸಿತು.

ಈ ಎಂಪಿವಿಯನ್ನು ದೇಶಾದ್ಯಂತವಿರುವ ನೆಕ್ಸಾ ಡೀಲರ್‍ಶಿಪ್‍ಗಳ ಮೂಲಕ ಮಾರಾಟ ಮಾಡಲಾಗುತ್ತದೆ. ಪ್ರತಿ ತಿಂಗಳು ಉತ್ತಮವಾಗಿ ಮಾರಾಟವಾಗುತ್ತಿರುವ ಈ ಎಂಪಿವಿಯ 10,000ಕ್ಕೂ ಹೆಚ್ಚು ಯುನಿಟ್‍ಗಳನ್ನು ಕೇವಲ 3 ತಿಂಗಳಲ್ಲಿ ಮಾರಾಟ ಮಾಡಲಾಗಿದೆ.

ಎರಡನೇ ತಲೆಮಾರಿನ ಎರ್ಟಿಗಾ ಕಾರ್ ಅನ್ನು 2018ರ ಕೊನೆಯ ಭಾಗದಲ್ಲಿ ಮೊದಲ ತಲೆಮಾರಿನ ಎರ್ಟಿಗಾ ಕಾರಿನ ಜಾಗದಲ್ಲಿ ಬಿಡುಗಡೆಗೊಳಿಸಲಾಯಿತು. ಈ ಕಾರಿನಲ್ಲಿದ್ದ ನವೀಕರಣಗಳು ಎರ್ಟಿಗಾ ಕಾರಿನ ಜನಪ್ರಿಯತೆಗೆ ಕಾರಣವಾದವು.

ದೇಶಿಯ ಮಾರುಕಟ್ಟೆಯಲ್ಲಿನ ಆಟೋ ಮೊಬೈಲ್ ಉದ್ಯಮದಲ್ಲಿನ ಕುಸಿತವು ಈ 7 ಸೀಟರ್ ಎಂಪಿವಿಯ ಮೇಲೆ ಅಷ್ಟಾಗಿ ಪರಿಣಾಮ ಬೀರಲಿಲ್ಲ. ಈ ಎಂಪಿವಿಯನ್ನು ಪೆಟ್ರೋಲ್, ಸಿಎನ್‌ಜಿ ಹಾಗೂ ಡೀಸೆಲ್ ಎಂಜಿನ್ ಆಯ್ಕೆಗಳೊಂದಿಗೆ ಮಾರಾಟ ಮಾಡಲಾಗುತ್ತದೆ.

1.5 ಲೀಟರ್ ಎಸ್‌ಎಚ್‌ವಿಎಸ್ ನಾಲ್ಕು ಸಿಲಿಂಡರ್ ಕೆ 15 ಬಿ ಯುನಿಟ್ ಗರಿಷ್ಠ 103.2 ಬಿಹೆಚ್‍ಪಿ ಪವರ್ ಹಾಗೂ 138 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 5 ಸ್ಪೀಡಿನ ಮ್ಯಾನುವಲ್ ಅಥವಾ 4 ಸ್ಪೀಡಿನ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್‍ನೊಂದಿಗೆ ಕನೆಕ್ಟ್ ಮಾಡಲಾಗಿದೆ.

1.5 ಲೀಟರ್ ಡಿಡಿಎಸ್ 225 ಡೀಸೆಲ್ ಯುನಿಟ್ 94 ಬಿಹೆಚ್‌ಪಿ ಪವರ್ ಹಾಗೂ 225 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍ನಲ್ಲಿ 6 ಸ್ಪೀಡಿನ ಮ್ಯಾನುವಲ್ ಗೇರ್‌ಬಾಕ್ಸ್ ಅಳವಡಿಸಲಾಗಿದೆ. ಪೆಟ್ರೋಲ್ ಎಂಜಿನ್ ಅನ್ನು ಶೀಘ್ರದಲ್ಲೇ ಬಿಡುಗಡೆಯಾಗಲಿರುವ ವಿಟಾರಾ ಬ್ರಿಝಾ ಫೇಸ್‌ಲಿಫ್ಟ್‌ನಲ್ಲಿ ಅಳವಡಿಸಲಾಗುವುದು.

ಇತ್ತೀಚೆಗೆ, ಮುಂಬರುವ ದಿನಗಳಲ್ಲಿ ಬಿಡುಗಡೆಯಾಗಲಿರುವ 1.6 ಲೀಟರ್ ಡಿಡಿಎಸ್ 4 ಸಿಲಿಂಡರ್ ಡೀಸೆಲ್ ಎಂಜಿನ್ ಅನ್ನು ಪರೀಕ್ಷಿಸುವ ಎಸ್-ಕ್ರಾಸ್‍ನ ಸ್ಪೈ ಚಿತ್ರಗಳು ಬಿಡುಗಡೆಯಾಗಿದ್ದವು. ಕ್ರಾಸ್ಒವರ್ ವ್ಯಾಪ್ತಿಯನ್ನು ವಿಸ್ತರಿಸಲು ನಂತರದ ದಿನಗಳಲ್ಲಿ ಈ ಎಂಜಿನ್ ಅನ್ನು ಬಿಎಸ್ 6ಗೆ ಅಪ್‍ಗ್ರೇಡ್ ಮಾಡಲಾಗುವುದು.
MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಇತ್ತೀಚಿಗಷ್ಟೇ, ಬಿಎಸ್ 6 ಡೀಸೆಲ್ ಎಂಜಿನ್ ಅಳವಡಿಸಿ ಸ್ಪಾಟ್ ಟೆಸ್ಟ್ ಮಾಡುತ್ತಿರುವ ಹೊಸ ಎರ್ಟಿಗಾದ ಸ್ಪೈ ಚಿತ್ರಗಳು ಬಿಡುಗಡೆಯಾಗಿದ್ದವು. ಈ ಫಿಯೆಟ್ ಮೂಲದ ಎಂಜಿನ್ ಯುನಿಟ್ ಅನ್ನು 2016ರ ಆರಂಭದಲ್ಲಿ ಸ್ಥಗಿತಗೊಂಡಿದ್ದ ಎಸ್-ಕ್ರಾಸ್ ಕಾರಿನಲ್ಲಿ ಅಳವಡಿಸಲಾಗಿತ್ತು.
MOST READ: ಬೈಕುಗಳಲ್ಲಿ ಡೀಸೆಲ್ ಎಂಜಿನ್ ಏಕೆ ಬಳಸಲ್ಲ ಗೊತ್ತಾ?

ಈ ಎಂಜಿನ್ 118 ಬಿಹೆಚ್‍ಪಿ ಪವರ್ ಹಾಗೂ 320 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍ನಲ್ಲಿ 6 ಸ್ಪೀಡಿನ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್ ಎಂಜಿನ್ ಅಳವಡಿಸಲಾಗಿದೆ. ಬಹಳ ಹಿಂದೆಯೇ, ಮಾರುತಿ ಸುಜುಕಿ ಕಂಪನಿಯು ಫಿಯೆಟ್ ಮೂಲದ 1.3 ಲೀಟರ್ ಡೀಸೆಲ್ ಎಂಜಿನ್ ಅನ್ನು ಎರ್ಟಿಗಾದ ಸರಣಿಗಳಿಂದ ಸ್ಥಗಿತಗೊಳಿಸಿತ್ತು.
MOST READ: ಕೈಕೊಟ್ಟ ದುಬಾರಿ ಬೆಲೆಯ ಕಾರಿನ ಬ್ರೇಕ್..!

ಟೆಸ್ಟ್ ವಾಹನದ ಹಿಂಭಾಗದಲ್ಲಿ ಬಿಎಸ್ 6 ಎಫ್ಎಸ್ ಎಂಬ ಟ್ಯಾಗ್ ಅಳವಡಿಸಲಾಗಿತ್ತು. ಎಫ್ಎಸ್ ಎಂದರೆ ಫಿಯೆಟ್ ಸೋರ್ಸ್ಡ್ ಎಂದಾಗುತ್ತದೆ. ಅಥವಾ ಈ 1.5 ಲೀಟರ್ ಎಂಜಿನ್ ಮಾರುತಿ ಸುಜುಕಿ ಕಂಪನಿಯೇ ಸ್ವತಃ ಅಭಿವೃದ್ಧಿಪಡಿಸಿರುವ ಬಿಎಸ್ 6 ಡೀಸೆಲ್ ಎಂಜಿನ್ ಆಗಿರಬಹುದು.

ಎರ್ಟಿಗಾ ಕಾರಿನ ಬೆಲೆಯು ಸದ್ಯಕ್ಕೆ ಎಕ್ಸ್‌ಶೋರೂಂ ದರದಂತೆ ರೂ.7.55 ಲಕ್ಷಗಳಿಂದ ರೂ. 11.20 ಲಕ್ಷಗಳವರೆಗೆ ಇದೆ. ಬಿಎಸ್ 6 ಡೀಸೆಲ್ ಎಂಜಿನ್‍ನಲ್ಲಿ ಬಿಡುಗಡೆಗೊಳಿಸಿದ ನಂತರ ಹೆಚ್ಚಿನ ಜಿಎಸ್‌ಟಿ ತೆರಿಗೆಯನ್ನು ಅಳವಡಿಸುವುದರಿಂದ ಬೆಲೆಗಳು ಮತ್ತಷ್ಟು ಹೆಚ್ಚಾಗಲಿವೆ.

ಬಿಎಸ್ 6 ಎಂಜಿನ್ ಹೊಂದಿರುವ ಎರ್ಟಿಗಾ ಕಾರುಗಳನ್ನು 2020ರ ಏಪ್ರಿಲ್ 1ಕ್ಕಿಂತ ಮೊದಲು ಅಥವಾ ಅದಾದ ಕೆಲವು ತಿಂಗಳುಗಳ ನಂತರ ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ. 1.6 ಲೀಟರಿನ ಡೀಸೆಲ್ ಎಂಜಿನ್ ಹೊಂದಿರುವ ಎರ್ಟಿಗಾವನ್ನು 2020ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸಲಾಗುತ್ತದೆಯೇ, ಇಲ್ಲವೇ ಎಂಬುದು ಸದ್ಯಕ್ಕೆ ತಿಳಿದು ಬಂದಿಲ್ಲ.
Source: Gaadiwaadi


Click it and Unblock the Notifications