ಕೈಕೊಟ್ಟ ದುಬಾರಿ ಬೆಲೆಯ ಕಾರಿನ ಬ್ರೇಕ್..!

ಬ್ರಿಟಿಷ್ ಲಗ್ಷುರಿ ಕಾರು ತಯಾರಕ ಕಂಪನಿಯಾದ ಬೆಂಟ್ಲಿ ತನ್ನ ಮೂರನೇ ತಲೆಮಾರಿನ ಬೆಂಟ್ಲಿ ಕಾರ್ ಅನ್ನು ಕಳೆದ ವರ್ಷ ಭಾರತದಲ್ಲಿ ಬಿಡುಗಡೆಗೊಳಿಸಿತ್ತು. ಈ ಹೊಸ ಕಾರು ಭಾರತದಲ್ಲಿ ಸಾಕಷ್ಟು ಜನಪ್ರಿಯವಾಗಿದೆ. ಈ ಕಾರಿನ ವಿನ್ಯಾಸವು ಜನರ ಗಮನವನ್ನು ತನ್ನತ್ತ ಸೆಳೆಯುತ್ತದೆ.

ಕೈಕೊಟ್ಟ ದುಬಾರಿ ಬೆಲೆಯ ಕಾರಿನ ಬ್ರೇಕ್..!

ದುಬಾರಿ ಹಾಗೂ ಲಗ್ಷುರಿಯಾದ ಈ ಕಾರಿಗೆ ಯಾವುದೇ ತೊಂದರೆಯಾಗುವುದಿಲ್ಲವೆಂಬುದು ಬಹು ಜನರ ಅಭಿಪ್ರಾಯವಾಗಿದೆ. ಆದರೆ ಅದು ತಪ್ಪು ಅಭಿಪ್ರಾಯ. ಈ ಕಾರುಗಳನ್ನು ವಿದೇಶದಲ್ಲಿ ತಯಾರಿಸುವ ಕಾರಣಕ್ಕೆ, ಈ ಕಾರುಗಳಲ್ಲಿರುವ ಮೆಕಾನಿಕಲ್ ಹಾಗೂ ಎಲೆಕ್ಟ್ರಾನಿಕ್ ಸಿಸ್ಟಂಗಳು ಸಂಕೀರ್ಣವಾಗಿದ್ದು, ಬಹುಬೇಗನೇ ತೊಂದರೆಗೀಡಾಗುತ್ತವೆ.

ಕೈಕೊಟ್ಟ ದುಬಾರಿ ಬೆಲೆಯ ಕಾರಿನ ಬ್ರೇಕ್..!

ಹೊಸ ಕಾಂಟಿನೆಂಟಲ್ ಜಿಟಿ ಡಬ್ಲ್ಯು 12 ಕಾರ್ ಅನ್ನು ಟೆಸ್ಟ್ ಡ್ರೈವ್ ಮಾಡುವ ವೇಳೆಯಲ್ಲಿ ಆ ಕಾರಿನ ಬ್ರೇಕ್ ಡೌನ್ ಆಗಿ, ಭಾರೀ ಪ್ರಮಾಣದ ಸಂಚಾರದಟ್ಟಣೆ ಉಂಟಾಗಿರುವ ವೀಡಿಯೊವನ್ನು ಅಪ್‍‍ಲೋಡ್ ಮಾಡಲಾಗಿದೆ. ಈ ವೀಡಿಯೊದಲ್ಲಿ ಮುಂಬೈನಲ್ಲಿರುವ ಸೂಪರ್ ಕಾರುಗಳ ಮಾಲೀಕರು ಒಂದೆಡೆ ಸೇರಿರುವುದನ್ನು ಕಾಣಬಹುದು.

ಕೈಕೊಟ್ಟ ದುಬಾರಿ ಬೆಲೆಯ ಕಾರಿನ ಬ್ರೇಕ್..!

ಆದರೆ ಈ ವೀಡಿಯೊದಲ್ಲಿರುವ ಪ್ರಮುಖವಾದ ಸಂಗತಿಯೆಂದರೆ ಹೊಸ ಬೆಂಟ್ಲಿ ಕಾಂಟಿನೆಂಟಲ್ ಜಿಟಿ ಕಾರಿನ ಟೆಸ್ಟ್ ಡ್ರೈವ್. ಈ ಕಾರಿನಲ್ಲಿರುವ ಲಗ್ಷುರಿ ಇಂಟಿರಿಯರ್ ಅನ್ನು ತೋರಿಸಿದ ನಂತರ ಕಾರಿನ ಟೆಸ್ಟ್ ಡ್ರೈವ್ ಅನ್ನು ಶುರು ಮಾಡಲಾಗುತ್ತದೆ.

ಕೈಕೊಟ್ಟ ದುಬಾರಿ ಬೆಲೆಯ ಕಾರಿನ ಬ್ರೇಕ್..!

ಈ ವೀಡಿಯೊವನ್ನು ಚಿತ್ರಿಕರಿಸುತ್ತಿದ್ದ ವ್ಯಕ್ತಿಯ ಕಡೆಯವರು ಈ ಕಾರ್ ಅನ್ನು ಟೆಸ್ಟ್ ಡ್ರೈವ್ ಮಾಡುತ್ತಾರೆ. ಬೆಂಟ್ಲಿ ಕಾಂಟಿನೆಂಟಲ್ ಜಿಟಿ ಕಾರಿನ ಹಿಂದೆ ಬರುತ್ತಿದ್ದ ವಾಹನದಿಂದ ಈ ಟೆಸ್ಟ್ ಡ್ರೈವ್ ಅನ್ನು ರೆಕಾರ್ಡ್ ಮಾಡಲಾಗಿದೆ.

ಕೈಕೊಟ್ಟ ದುಬಾರಿ ಬೆಲೆಯ ಕಾರಿನ ಬ್ರೇಕ್..!

ಮುಂಬೈನ ರಸ್ತೆಗಳಲ್ಲಿ ಈ ಬೆಂಟ್ಲಿ ಕಾರನ್ನು ಚಲಾಯಿಸುತ್ತಿರುವುದನ್ನು ವೀಡಿಯೊದಲ್ಲಿ ಕಾಣಬಹುದು. ಡಬ್ಲ್ಯು 12 ಎಂಜಿನ್‌ನ ಎಕ್ಸಾಸ್ಟ್ ಶಬ್ದವನ್ನು ಸಹ ಈ ವೀಡಿಯೊದಲ್ಲಿ ಕೇಳಬಹುದು. ಆದರೆ, ಬೆಂಟ್ಲಿ ಕಾರಿನ ಬ್ರೇಕ್ ಮುರಿದು ರಸ್ತೆಯ ಮಧ್ಯದಲ್ಲಿ ಸ್ಥಗಿತಗೊಂಡಿತು.

ಕೈಕೊಟ್ಟ ದುಬಾರಿ ಬೆಲೆಯ ಕಾರಿನ ಬ್ರೇಕ್..!

ಮುಂಬೈನ ಪ್ರಸಿದ್ಧ ಸಮುದ್ರ ಸಂಪರ್ಕವನ್ನು ದಾಟಿದ ನಂತರ ಈ ಘಟನೆ ಸಂಭವಿಸಿದೆ. ಬೆಂಟ್ಲಿ ರಸ್ತೆಯ ಮಧ್ಯದಲ್ಲಿ ಸಿಲುಕಿಕೊಂಡಿದ್ದರಿಂದ, ಭಾರೀ ಪ್ರಮಾಣದ ಸಂಚಾರ ದಟ್ಟಣೆ ಉಂಟಾಯಿತು. ಈ ಟ್ರಾಫಿಕ್ ಜಾಮ್ ಬಹಳ ದೂರದವರೆಗೆ ವಿಸ್ತರಿಸಿ, ಸಮುದ್ರದ ಕೊನೆಯವರೆಗೂ ವಾಹನಗಳು ಸಾಲುಗಟ್ಟಿ ನಿಂತಿರುವುದನ್ನು ಈ ವೀಡಿಯೊದಲ್ಲಿ ಕಾಣಬಹುದು.

ಕೈಕೊಟ್ಟ ದುಬಾರಿ ಬೆಲೆಯ ಕಾರಿನ ಬ್ರೇಕ್..!

ನಂತರ ಬೆಂಟ್ಲಿಯನ್ನು ಫ್ಲಾಟ್‌ಬೆಡ್‌ನಲ್ಲಿ ಟೋಯಿಂಗ್ ಮಾಡಿ ಸರ್ವಿಸ್ ಸೆಂಟರ್‍‍ಗೆ ಕೊಂಡೊಯ್ಯಲಾಯಿತು. ಈ ಘಟನೆಯು ನಡೆದಾಗ ಸ್ಥಳದಲ್ಲಿದ್ದ ಬೆಂಟ್ಲಿ ಕಂಪನಿಯ ಅಧಿಕಾರಿಗಳಿಗೆ ಸಮಸ್ಯೆಯನ್ನು ಗುರುತಿಸಲು ಸಾಧ್ಯವಾಗಲಿಲ್ಲ ಎಂಬುದನ್ನು ಗಮನಿಸಬೇಕು.

ಕೈಕೊಟ್ಟ ದುಬಾರಿ ಬೆಲೆಯ ಕಾರಿನ ಬ್ರೇಕ್..!

ಆದರೆ, ಫ್ಯೂಯಲ್ ಇಂಜೆಕ್ಷನ್ ಸಿಸ್ಟಂ ಅಥವಾ ಇಗ್ನಿಷನ್‍‍ನಲ್ಲಿ ತೊಂದರೆಯಾಗಿರ ಬಹುದೆಂದು ಅವರು ಹೇಳಿದರು. ಕಳಪೆ ಗುಣಮಟ್ಟದ ಫ್ಯೂಯಲ್‍‍ನಿಂದಾಗಿ ಫ್ಯೂಯಲ್ ಇಂಜೆಕ್ಷನ್ ಸಿಸ್ಟಂನಲ್ಲಿ ಸಮಸ್ಯೆ ಉಂಟಾಗಬಹುದು.

ಬೆಂಟ್ಲಿ ಕಾರಿನಲ್ಲಿರುವ ಡಬ್ಲ್ಯು 12 ಎಂಜಿನ್ ಹೈಟೆಕ್ ಆಗಿರುವುದರಿಂದ ಕಳಪೆ ಗುಣಮಟ್ಟದ ಇಂಧನವು ಫ್ಯೂಯಲ್ ಇಂಜೆಕ್ಷನ್ ಸಿಸ್ಟಂ ಅನ್ನು ಸ್ಥಗಿತಗೊಳಿಸುತ್ತದೆ. ಈ ವೀಡಿಯೊದಲ್ಲಿ ಬೆಂಟ್ಲಿ ಕಾರ್ ಅನ್ನು ಪರೀಕ್ಷಿಸುತ್ತಿರುವ ವ್ಯಕ್ತಿ ಕಾರ್ ಅನ್ನು ಹೊಗಳುತ್ತಿರುವುದನ್ನು ಕಾಣಬಹುದು.

ಕೈಕೊಟ್ಟ ದುಬಾರಿ ಬೆಲೆಯ ಕಾರಿನ ಬ್ರೇಕ್..!

ಹೊಸ ಬೆಂಟ್ಲಿ ಕಾಂಟಿನೆಂಟಲ್ ಜಿಟಿ ಹಳೆಯ ಆವೃತ್ತಿಯ ಕಾರಿಗಿಂತ ಹಗುರವಾಗಿದ್ದು, ಹೆಚ್ಚು ಬಲಶಾಲಿಯಾಗಿದೆ. ಈ ಕಾರಿನಲ್ಲಿ 6.0 ಲೀಟರಿನ ಡಬ್ಲ್ಯು 12 ಟ್ವಿನ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ.

ಕೈಕೊಟ್ಟ ದುಬಾರಿ ಬೆಲೆಯ ಕಾರಿನ ಬ್ರೇಕ್..!

ಈ ಎಂಜಿನ್ 626 ಬಿ‍‍ಹೆಚ್‍‍‍ಪಿ ಪವರ್ ಹಾಗೂ 900 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ಕೇವಲ 3.7 ಸೆಕೆಂಡುಗಳಲ್ಲಿ ಬೆಂಟ್ಲಿಯನ್ನು 0 - 100 ಕಿ.ಮೀ ಆಕ್ಸೆಲೆರೇಟ್ ಮಾಡುತ್ತದೆ. ಈ ಎಂಜಿನ್‍‍ನಲ್ಲಿ ಹೊಸ ಡ್ಯುಯಲ್ ಕ್ಲಚ್‍‍ನ 8 ಸ್ಪೀಡ್ ಟ್ರಾನ್ಸ್ ಮಿಷನ್ ಅಳವಡಿಸಲಾಗಿದೆ.

ಕೈಕೊಟ್ಟ ದುಬಾರಿ ಬೆಲೆಯ ಕಾರಿನ ಬ್ರೇಕ್..!

ಸುರಕ್ಷತೆಯ ಕಾರಣಗಳಿಗಾಗಿ ಕಾರಿನ ಟಾಪ್ ಸ್ಪೀಡ್ ಅನ್ನು ಪ್ರತಿ ಗಂಟೆಗೆ 333 ಕಿ.ಮೀ ವೇಗಕ್ಕೆ ಎಲೆಕ್ಟ್ರಾನಿಕ್ ಆಗಿ ಸೀಮಿತಗೊಳಿಸಲಾಗಿದೆ. ಡೈನಾಮಿಕ್ ರೈಡ್ ಸಿಸ್ಟಂ ಅಡಾಪ್ಟಿವ್ ಚಾಸಿಸ್‍‍ಗಾಗಿ 48 ವಿ ಎಲೆಕ್ಟ್ರಿಕಲ್ ಸಿಸ್ಟಂ ಅನ್ನು ನೀಡಲಾಗಿದೆ.

Most Read Articles

Kannada
English summary
Bentley continental gt breakdown during test drive. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X