ಆಗಸ್ಟ್ ತಿಂಗಳಲ್ಲಿ ಮತ್ತೆ ಆಟೋಮೊಬೈಲ್ ಕ್ಷೇತ್ರದಲ್ಲಿ ಕುಸಿತ

ಆರ್ಥಿಕ ಹಿಂಜರಿತದ ದೇಶದ ಆಟೋಮೊಬೈಲ್ ಕ್ಷೇತ್ರವು ದೊಡ್ಡ ಮಟ್ಟದ ಕುಸಿತ ಸಂಭವಿಸಿದ್ದು, ಆಗಸ್ಟ್ ತಿಂಗಳ ವಿವಿಧ ಬ್ರ್ಯಾಂಡ್‍ಗಳ ಮಾರಾಟದ ವರದಿಯು ಬಿಡುಗಡೆಕೊಂಡಿದೆ. ದೇಶಿಯ ಮಾರುಕಟ್ಟೆಯಲ್ಲಿ ದಿನೆ ದಿನೆ ಉಲ್ಪಣವಾಗುತ್ತಿರುವ ಸಂದರ್ಭದಲ್ಲಿ ವಿವಿಧ ಕಂಪನಿಗಳ ಆಗಸ್ಟ್ ತಿಂಗಳ ಮಾರಾಟದ ವರದಿಯನ್ನು ನೋಡುವ.

ಆಗಸ್ಟ್ ತಿಂಗಳಲ್ಲಿ ಮತ್ತೆ ಆಟೋಮೊಬೈಲ್ ಕ್ಷೇತ್ರದಲ್ಲಿ ಕುಸಿತ

ಇತ್ತೀಚೆಗಷ್ಟೇ ಕಾರುಗಳ ಮಾರಾಟದಲ್ಲಿ ಕುಸಿತವಾದ ಕಾರಣಕ್ಕೆ ದೇಶದ ಅತಿದೊಡ್ಡ ಕಾರು ಉತ್ಪಾದನೆ ಸಂಸ್ಥೆಯಾದ ಮಾರುತಿ ಸುಜುಕಿ ತನ್ನ 3000 ಗುತ್ತಿಗೆ ನೌಕರರನ್ನು ಹುದ್ದೆಯಿಂದ ಹೊರ ಹಾಕಿದ್ರು. ಇದರ ನಡುವೆಯೇ ಭಾರತದ ದಿಗ್ಗಜ ಕಾರು ಉತ್ಪಾದಕ ಸಂಸ್ಥೆಗಳಾದ ಮಾರುತಿ ಸುಜುಕಿ, ಟಾಟಾ ಮೋಟಾರ್ಸ್‌, ಹ್ಯುಂಡೈ ಸೇರಿದಂತೆ ಹಲವು ಪ್ರಮುಖ ಕಂಪನಿಗಳು ಆಗಸ್ಟ್‌ ತಿಂಗಳ ವಾಹನ ಮಾರಾಟದಲ್ಲಿ ಭಾರೀ ಇಳಿಕೆ ದಾಖಲಿಸಿವೆ.

ಆಗಸ್ಟ್ ತಿಂಗಳಲ್ಲಿ ಮತ್ತೆ ಆಟೋಮೊಬೈಲ್ ಕ್ಷೇತ್ರದಲ್ಲಿ ಕುಸಿತ

ಮಾರುತಿ ಸುಜುಕಿ

ಮಾರುತಿ ಸುಜುಕಿ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಅತಿದೊಡ್ದ ಕಾರು ಬ್ರಾಂಡ್ ಆಗಿದೆ. ಕಳೆದ ಒಂಬತ್ತು ತಿಂಗಳಲ್ಲಿ ಕಂಪನಿಯ ಮಾರಟದಲ್ಲಿ ಕುಸಿವಾಗಿದೆ. ಆಗಸ್ಟ್ ತಿಂಗಳು ಇದಕ್ಕೆ ಹೊರತಾಗಿಲ್ಲ, ಮಾರುತಿ ಸುಜುಕಿ ಕಂಪನಿಯ ಇತಿಹಾಸದಲ್ಲಿ ಕಂಡು ಕೇಳಿಯರಿದಂತೆ ಕುಸಿತ ಸಂಭವಿಸಿದ್ದು, ಮಾರುತಿ ಸುಜುಕಿ ಕಾರ್ ಮಾರಾಟದಲ್ಲಿ ಶೇ. 35.9 ರಷ್ಟು ಕುಸಿದಿದೆ. ಆಗಸ್ಟ್ ತಿಂಗಳಿನಲ್ಲಿ ಕೇವಲ 94,728 ಯುನಿಟ್‍‍ಗಳ ಮಾರಾಟ ದಾಖಲಾಗಿದೆ. ಕಳೆದ ವರ್ಷ ಇದೇ ತಿಂಗಳಲ್ಲಿ 147,700 ಯುನಿಟ್ ಮಾರಟವಾಗಿದೆ. ರಫ್ತು ಮಾರಟವು ಕಳೆದ ವರ್ಷಕ್ಕೆ ಹೋಲಿಸಿದರೆ ಮಾರಾಟದಲ್ಲಿ ಶೇ. 10.2 ರಷ್ಟು ಕುಸಿತ ಕಂಡಿದೆ. ಕಂಪನಿಯು ಕಳೆದ ತಿಂಗಳು ರಫ್ತು ಮಾರಾಟದಲ್ಲಿ 9,352 ಯುನಿಟ್‍‍ಗಳನ್ನು ದಾಖಲಿಸಿದ್ದು, ಕಳೆದ ವರ್ಷ ಆಗಷ್ಟ್ ತಿಂಗಳಲ್ಲಿ 10,489 ಯುನಿಟ್‍ ದಾಖಲಾಗಿದೆ.

ಆಗಸ್ಟ್ ತಿಂಗಳಲ್ಲಿ ಮತ್ತೆ ಆಟೋಮೊಬೈಲ್ ಕ್ಷೇತ್ರದಲ್ಲಿ ಕುಸಿತ

ಹ್ಯುಂಡೈ

ದೇಶದ ಎರಡನೇ ಅತಿದೊಡ್ಡ ಕಾರು ಬ್ತ್ಯಾಂಡ್ ಹ್ಯುಂಡೈ ಸಹ ಆಗಸ್ಟ್ ತಿಂಗಳಲ್ಲಿ ಮಾರಾಟದಲ್ಲಿ ಕುಸಿತವಾಗಿದೆ. ಕೊರಿಯಾ ಮೂಲದ ಸಂಸ್ಥೆಯಾದ ಹ್ಯುಂಡೈ ಶೇ. 16.58 ರಷ್ಟು ಕುಸಿತ ಕಂಡಿದ್ದು,ಕಳೆದ ತಿಂಗಳು ಆಗಸ್ಟ್ ನಲ್ಲಿ 38,205 ಯುನಿಟ್ ಮಾರಟವಾಗಿದೆ. ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ 45,801 ಯುನಿಟ್‍‍ಗಳು ದಾಖಲಾಗಿದೆ. ಮಾರಾಟದಲ್ಲಿ ಶೇ 16.58 ಕುಸಿತ ಕಂಡಿದ್ದರು ಜುಲೈ ತಿಂಗಳಲ್ಲಿ ಹ್ಯುಂಡೈ ಸಂಸ್ಥೆಗೆ ಉತ್ತಮ ತಿಂಗಳು ಆಗಿತ್ತು.

ಆಗಸ್ಟ್ ತಿಂಗಳಲ್ಲಿ ಮತ್ತೆ ಆಟೋಮೊಬೈಲ್ ಕ್ಷೇತ್ರದಲ್ಲಿ ಕುಸಿತ

ಕಂಪನಿಯು ಎಸ್‍‍ಯುವಿ ಕಾರುಗಳನ್ನು ಬಿಡುಗಡೆ ಮಾಡುವ ಮೂಲಕ ದೊಡ್ಡ ಮಟ್ಟದ ಕುಸಿತದಿಂದ ಬದುಕುಳಿದಿದೆ. ಹೊಸ ಕಾಂಪ್ಯಾಕ್ಟ್-ಎಸ್‍ಯುವಿ ಬಿಡುಗಡೆಯೊಂದಿಗೆ ಹ್ಯುಂಡೈ 2019ರ ಜ್ಯುಲೈ‍‍ನಲ್ಲಿ ಕೇವಲ ಶೇ 3.8 ಕುಸಿತವನ್ನು ಕಂಡಿದೆ. ಆದರೆ ಆಗಸ್ಟ್ ನಲ್ಲಿ ಮಾರಾಟ ಕಡಿಮೆಯಾದ ಕಾರಣ ಕೊರಿಯಾದ ಕಾರು ತಯಾರಕರು ಉತ್ಪಾದನೆಯನ್ನುಕಡಿತಗೊಳಿಸಲಾಗಿದೆ. ಹ್ಯುಂಡೈ ತನ್ನ ಇತ್ತೀಚಿನ ಹ್ಯಾಚ್‍ಬ್ಯಾಕ್ ಕಾರ್ ಗ್ರ್ಯಾಂಡ್ ಐ 10 ಎನ್‍ಐಒಎಸ್ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಮಾಡಿದ್ದರು. ಮುಂದಿನ ಹಬ್ಬದ ಸಮಯದಲ್ಲಿ ತಮ್ಮ ಮಾರಾಟದಲ್ಲಿ ಸುಧಾರಿಸಲು ಗ್ರ್ಯಾಂಡ್ ಐ 10, ಎನ್‍ಐಒಎಸ್, ಕ್ರೆಟಾ, ವೆನ್ಯೂ ಮತ್ತು ಎಲೈಟ್ ಐ 20 ಕಾರ್‍‍ಗಳಲ್ಲಿ ಭರ್ಜರಿ ಆಫರ್ ನೀಡಲು ನಿರ್ಧರಿಸಿದೆ.

ಆಗಸ್ಟ್ ತಿಂಗಳಲ್ಲಿ ಮತ್ತೆ ಆಟೋಮೊಬೈಲ್ ಕ್ಷೇತ್ರದಲ್ಲಿ ಕುಸಿತ

ಹೋಂಡಾ

ಹೋಂಡಾ ಕಾರ್ ಇಂಡಿಯ 2019 ರ ಆಗಸ್ಟ್ ತಿಂಗಳಲ್ಲಿ ಅತಿ ದೊಡ್ಡ ಕುಸಿತ ಕಂಡಿದ್ದು, ಜಪಾನಿನ ಮೂಲದ ಹೋಂಡಾ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟದಲ್ಲಿ ಶೇ 51.3 ರಷ್ಟು ಕುಸಿತ ದಾಖಲಿಸಿದೆ. ಕಳೆದ ವರ್ಷ ಆಗಸ್ಟ್ ತಿಂಗಳಿನಲ್ಲಿ 17,000 ಯುನಿಟ್ ಮಾರಾಟವನ್ನು ನೋಂದಾಯಿಸಿದ ಕಂಪನಿಯು ಈ ವರ್ಷದ ಆಗಸ್ಟ್ ತಿಂಗಳಲ್ಲಿ ಕೇವಲ 8,291 ಯುನಿಟ್‍‍ಗಳು ನೊಂದವಣೆಯಾಗಿದೆ.

ಆಗಸ್ಟ್ ತಿಂಗಳಲ್ಲಿ ಮತ್ತೆ ಆಟೋಮೊಬೈಲ್ ಕ್ಷೇತ್ರದಲ್ಲಿ ಕುಸಿತ

ಮಾರುಕಟ್ಟೆಯಲ್ಲಿ ಹೆಚ್ಚಿನ ರಿಯಾಯಿತಿಗಳು ಹೊಂದಿದ್ದು, ಇದು ಕಾರುಗಳನ್ನು ಖರೀದಿಸಲು ಉತ್ತಮವಾದ ಸಮಯ. ನಾವು ಕೈಗೊಂಡ ಇತ್ತೀಚಿನ ಕ್ರಮಗಳು ನಾವು ಮುಂದೆ ಸಾಗುತ್ತಿರುವಾಗ ಗ್ರಾಹಕರ ಮನೋಭಾವ ಮತ್ತು ಬೇಡಿಕೆ ಸೃಷ್ಟಿಗೆ ಸಹಾಯ ಮಾಡುತ್ತದೆ ಎಂದು ನಾವು ಭಾವಿಸುತ್ತೇವೆ. ಮುಂಬರುವ ಹಬ್ಬದ ಸಮಯದಲ್ಲಿ ಮಾರಾಟವು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಹೊಂಡಾ ಕಾರ್ ಇಂಡಿಯ ಲಿಮಿಟೆಡ್‍‍ನಾ ಸೆಲ್ಸ್ ಮತ್ತು ಮಾರ್ಕೆಟಿಂಗ್ ಡೈರೆಂಕ್ಟರ್ ರಾಜೇಶ್ ಗೋಯೆಲ್ ಹೇಳಿದ್ದಾರೆ.

ಆಗಸ್ಟ್ ತಿಂಗಳಲ್ಲಿ ಮತ್ತೆ ಆಟೋಮೊಬೈಲ್ ಕ್ಷೇತ್ರದಲ್ಲಿ ಕುಸಿತ

ಟಾಟಾ ಮೋಟಾರ್ಸ್

ಟಾಟಾ ಮೋಟಾರ್ಸ್ ಮಾರುಕಟ್ಟೆಯಲ್ಲಿ ತಮ್ಮ ಏರಿಳಿತ ಆಟವನ್ನು ಮುಂದುವರೆಸಿದ್ದು, ದೇಶದಲ್ಲಿ ಒಟ್ಟಾರೆ ಮಾರಾಟದಲ್ಲಿ ಶೇ. 49 ರಷ್ಟು ನಷ್ಟವನ್ನು ದಾಖಲಿಸಿದೆ. ಈ ಪೈಕಿ ಪ್ರಯಾಣಿಕರ ವಾಹನ ವಿಭಾಗವು ಕಳೆದ ತಿಂಗಳು ಕೇವಲ 7,319 ಯುನಿಟ್ ಮಾರಾಟದೊಂದಿಗೆ ಶೇ. 58 ರಷ್ಟು ದೊಡ್ಡ ಕುಸಿತ ಕಂಡಿದೆ. ಕಳೆದ ವರ್ಷ ಆಗಸ್ಟ್ ತಿಂಗಳು 17,319 ಯುನಿಟ್ ಮಾರಟವಾಗಿತ್ತು.

ಆಗಸ್ಟ್ ತಿಂಗಳಲ್ಲಿ ಮತ್ತೆ ಆಟೋಮೊಬೈಲ್ ಕ್ಷೇತ್ರದಲ್ಲಿ ಕುಸಿತ

ಟೊಯೋಟಾ ಇಂಡಿಯ

ಟೊಯೋಟಾ ಕಿರ್ಲೊಸ್ಕರ್ ಇಂಡಿಯ ದೇಶಿಯ ಮಾರುಕಟ್ಟೆಯ ಪ್ರಮುಖ ಬ್ರ್ಯಾಂಡ್‍‍ಗಳಲ್ಲಿ ಒಂದಾಗಿದೆ. ಜಪಾನ್ ಮೂಲದ ಈ ಕಂಪನಿ ಕಳೆದ ಆಗಸ್ಟ್ ತಿಂಗಳು 10,701 ಯುನಿಟ್‍‍ಗಳ ಮಾರಟವನ್ನು ದಾಖಲಿಸುವ ಮೂಲಕ ಶೇ. 24 ರಷ್ಟು ಕುಸಿತ ದಾಖಲಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಟೊಯೋಟಾ 14,100 ಯುನಿಟ್‍‍ಗಳು ಮಾರಾಟವಾಗಿತ್ತು.

ಆಗಸ್ಟ್ ತಿಂಗಳಲ್ಲಿ ಮತ್ತೆ ಆಟೋಮೊಬೈಲ್ ಕ್ಷೇತ್ರದಲ್ಲಿ ಕುಸಿತ

ಮಹೀಂದ್ರಾ

ಭಾರತೀಯ ಮಾರುಕಟ್ಟೆಯಲ್ಲಿನ ಮಾರಾಟ ಕುಸಿತ ಮಹೀಂದ್ರಾ ಕಂಪನಿಗೂ ಬಿಸಿ ಮುಟ್ಟಿದೆ. ಭಾರತೀಯ ಕಾರು ತಯಾರಕ ಕಂಪನಿಯಾದ ಮಹೀಂದ್ರಾ ದೇಶಿಯ ಮಾರುಕಟ್ಟೆಯಲ್ಲಿ ಶೇಕಡಾ 32 ರಷ್ಟು ಮಾರಾಟ ಕುಸಿತ ದಾಖಲಾಗಿದೆ. ಕಳೆದು ತಿಂಗಳು ಆಗಸ್ಟ್ ನಲ್ಲಿ 13,507 ಯುನಿಟ್ ಮಾರಾಟವಾಗಿದ್ದು, ಕಳೆದ ವರ್ಷದ ಆಗಸ್ಟ್ ತಿಂಗಳಲ್ಲಿ 19.758 ಯುನಿಟ್ ಮಾರಾಟವಾಗಿದೆ.

ಆಗಸ್ಟ್ ತಿಂಗಳಲ್ಲಿ ಮತ್ತೆ ಆಟೋಮೊಬೈಲ್ ಕ್ಷೇತ್ರದಲ್ಲಿ ಕುಸಿತ

ದೇಶಿಯ ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದ ಕುಸಿತ ಕಂಡಿದೆ. ಎಲ್ಲಾ ಪ್ರಮುಖ ಕಾರು ಬ್ರ್ಯಾಂಡ್‍‍ಗಳು ತಿಂಗಳಿಗೊಮ್ಮೆ ಮಾರಟದಲ್ಲಿ ಕುಸಿಯುತ್ತಿದೆ. ಆದರೆ ಹಬ್ಬದ ಸಮಯದಲ್ಲಿ ಹೆಚ್ಚಿನ ಆಫರ್‍‍ಗಳಿಂದ ಕಾರು ಮಾರಾಟದಲ್ಲಿ ಸುಧಾರಿಸಬಹುದು ಎಂದು ಆಟೋ ಮೊಬೈಲ್ ಸಂಸ್ಥೆಗಳು ನಿರೀಕ್ಷಿಸಿದೆ.

Most Read Articles

Kannada
English summary
Car Sales Report August 2019: Auto Industry Slowdown Continues To Affect All Major Car Brands - Read in kannada
Story first published: Tuesday, September 3, 2019, 19:48 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X