ಭಾರತಕ್ಕೆ ಲಗ್ಗೆಯಿಡಲು ರೆಡಿಯಾಗಿವೆ ಚೀನಾ ಕಾರುಗಳು..!
ಕೆಲವು ತಿಂಗಳುಗಳ ಹಿಂದೆ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಎಂಜಿ ಹೆಕ್ಟರ್ ಎಸ್‍ಯುವಿಯ ಯಶಸ್ಸಿನ ನಂತರ ಅನೇಕ ಚೀನಾ ಮೂಲದ ಕಾರು ತಯಾರಕ ಕಂಪನಿಗಳು ದೇಶಿಯ ಮಾರುಕಟ್ಟೆಗೆ ಲಗ್ಗೆಯಿಡಲು ತಯಾರಾಗಿವೆ.

ಚೀನಾ ಮೂಲದ ಸೈಕ್ ಗ್ರೂಪ್ ಎಂಜಿ ಮೋಟಾರ್‍ನೊಂದಿಗೆ ಸಹಭಾಗಿತ್ವವನ್ನು ಹೊಂದಿದೆ. ಈ ಕಾರಣಕ್ಕೆ ಎಂಜಿ ಹೆಕ್ಟರ್ ಕಾರ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು. ಈ ಕಾರು ಭಾರತದ ಮೊದಲ ಇಂಟರ್‍ನೆಟ್ ಆಧಾರಿತ ಕಾರ್ ಎಂಬ ಹೆಗ್ಗಳಿಕೆಯನ್ನು ಹೊಂದಿದೆ. ಇದರಿಂದಾಗಿ ಸಾಕಷ್ಟು ಸಂಖ್ಯೆಯ ಗ್ರಾಹಕರನ್ನು ತನ್ನತ್ತ ಸೆಳೆದಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿದೆ.

ಈ ಯಶಸ್ಸಿನಿಂದ ಉತ್ತೇಜಿತವಾಗಿರುವ ಚೀನಾ ಮೂಲದ ಗ್ರೇಟ್ ವಾಲ್ ಮೋಟಾರ್ ಕಂಪನಿಯು ಸಹ ದೇಶಿಯ ಮಾರುಕಟ್ಟೆಯನ್ನು ಪ್ರವೇಶಿಸಲು ಉತ್ಸುಕವಾಗಿದೆ. ಚೀನಾದಲ್ಲಿ ಕಳೆದ 17 ತಿಂಗಳುಗಳಿಂದ ಕಾರು ಮಾರಾಟವು ಕುಸಿತವನ್ನು ಕಾಣುತ್ತಿದೆ.

ಈ ಕಾರಣಕ್ಕೆ ಚೀನಾದ ಕಾರು ತಯಾರಕ ಕಂಪನಿಗಳು ಭಾರತೀಯ ಮಾರುಕಟ್ಟೆಯನ್ನು ಗುರಿಯಾಗಿಸಿಕೊಂಡಿವೆ. ಚೀನಾದ ಮತ್ತೊಂದು ಕಂಪನಿಯಾದ ಸಂಕನ್ ಸಹ ಭಾರತದಲ್ಲಿ ಬಿಡುಗಡೆಗೊಳಿಸಲು ಅನೇಕ ಕಾರುಗಳನ್ನು ಅಭಿವೃದ್ಧಿಪಡಿಸಿದೆ.

ಆಕ್ಟಿವ್ ಗ್ರೂಪ್ ಗುಜರಾತ್‍ನಲ್ಲಿರುವ ಜನರಲ್ ಮೋಟಾರ್ಸ್ ಘಟಕವನ್ನು ಸ್ವಾಧೀನ ಪಡಿಸಿಕೊಂಡಿದ್ದು, ಎಂಜಿ ಹೆಕ್ಟರ್ ಎಸ್‍ಯುವಿಯನ್ನು ಉತ್ಪಾದಿಸುತ್ತಿದೆ. ಗ್ರೇಟ್ ವಾಲ್ ಮೋಟಾರ್ಸ್ ತನ್ನ ಕಾರುಗಳನ್ನು ಮಹಾರಾಷ್ಟ್ರದಲ್ಲಿರುವ ಜನರಲ್ ಮೋಟಾರ್ಸ್ ಘಟಕದಲ್ಲಿ ಉತ್ಪಾದಿಸುತ್ತಿದೆ.

ಸಂಕನ್ ಗ್ರೂಪ್ ಭಾರತದಲ್ಲಿ ಬೇರೆ ಕಂಪನಿಗಳ ಸಹಭಾಗಿತ್ವದಲ್ಲಿ ಕಾರುಗಳ ಉತ್ಪಾದನೆಯನ್ನು ಮಾಡುವ ಯೋಜನೆಯನ್ನು ಹೊಂದಿದೆ. ಸಂಕನ್ ರಷ್ಯಾ, ಇರಾನ್, ಬ್ರೆಜಿಲ್ ಹಾಗೂ ಪಾಕಿಸ್ತಾನಗಳಲ್ಲಿ ಉತ್ಪಾದನಾ ಘಟಕಗಳನ್ನು ಹೊಂದಿದೆ.

ಚೀನಾದಲ್ಲಿ ಫೋರ್ಡ್ ಕಂಪನಿಯು ಮಜ್ದಾ, ಸುಜುಕಿ ಹಾಗೂ ಬಿಎಸ್‍ಎಸ್ ಗ್ರೂಪ್‍ಗಳೊಂದಿಗೆ ಸಹಭಾಗಿತ್ವವನ್ನು ಹೊಂದಿ, ಕಾರುಗಳನ್ನು ಮಾರಾಟ ಮಾಡುತ್ತಿದೆ.

ಸಂಕನ್ ಗ್ರೂಪ್ ಭಾರತದಲ್ಲಿ ರೂ.4,000 ಕೋಟಿಗಳಷ್ಟು ಬಂಡವಾಳವನ್ನು ಹೂಡಿಕೆ ಮಾಡಲಿದೆ. ಈ ಬಂಡವಾಳವನ್ನು ಎಸ್‍ಯುವಿ ಹಾಗೂ ಎಲೆಕ್ಟ್ರಿಕ್ ಕಾರುಗಳ ಮೇಲೆ ಹೂಡಿಕೆ ಮಾಡಲಿದೆ. ಸಂಕನ್ ಭಾರತದಲ್ಲಿ ಎಸ್‍ಯುವಿ ಹಾಗೂ ಎಲೆಕ್ಟ್ರಿಕ್ ಕಾರುಗಳನ್ನು ಮಾರಾಟ ಮಾಡಲಿದೆ.

ಮರ್ಸಿಡಿಸ್ ಬೆಂಝ್, ನಿಸ್ಸಾನ್, ಫಿಯೆಟ್ ಕ್ರಿಸ್ಲರ್ ಗ್ರೂಪ್‍ಗಳು ತಮ್ಮ ಕಾರುಗಳನ್ನು ಲ್ಯಾಂಡ್‍ಮಾರ್ಕ್ ಗ್ರೂಪ್ ಮೂಲಕ ಮಾರಾಟ ಮಾಡಲು ಬಯಸಿವೆ. ಲ್ಯಾಂಡ್‍ಮಾರ್ಕ್ ಗ್ರೂಪ್ ಕಾರುಗಳನ್ನು ಮಾರಾಟ ಮಾಡುವುದರ ಜೊತೆಗೆ ಸರ್ವಿಸ್ ಸೆಂಟರ್‍ಗಳನ್ನು ಹೊಂದಿದೆ.

ಸಂಕನ್ ಗುರುಗ್ರಾಮದಲ್ಲಿ ತನ್ನ ಘಟಕವನ್ನು ತೆರೆಯಲು ಬಯಸಿದೆ. ಇದಾದ ನಂತರ ಭಾರತದಲ್ಲಿ 2022ರಿಂದ ಕಾರುಗಳನ್ನು ಮಾರಾಟ ಮಾಡಲಿದೆ.
Source: ET Auto


Click it and Unblock the Notifications








