ನಕಲಿ ಫೆರಾರಿ ಹಾಗೂ ಲ್ಯಾಂಬೊರ್ಗಿನಿ ವ್ಯವಹಾರಕ್ಕೆ ಬಿತ್ತು ಬ್ರೇಕ್..!

ಬ್ರೆಜಿಲ್ ಪೊಲೀಸರು ಈ ವಾರ ಸೂಪರ್ ಕಾರ್‍‍ಗಳ ಜಾಲವನ್ನು ಭೇದಿಸಿದ್ದಾರೆ. ಫಾಕ್ಸ್‌ರಾರಿಸ್ ಹಾಗೂ ಸ್ಕ್ಯಾಂಬೋರ್ಘಿನಿಸ್ ಹೆಸರಿನಲ್ಲಿ ಕಾರುಗಳನ್ನು ತಯಾರಿಸಿ ಅವುಗಳನ್ನು ಕಡಿಮೆ ದರದಲ್ಲಿ ಮಾರಾಟ ಮಾಡಲಾಗುತ್ತಿತ್ತು. ಈ ಅಕ್ರಮ ದಂಧೆಯನ್ನು ನಡೆಸುತ್ತಿದ್ದ ತಂದೆ ಹಾಗೂ ಮಗನನ್ನು ಬಂಧಿಸಲಾಗಿದೆ. ವಾಹನ ತಯಾರಕರು ಸ್ಥಳೀಯ ಅಧಿಕಾರಿಗಳಿಗೆ ದೂರು ನೀಡಿದ ನಂತರ ನಿರ್ಮಾಣದ ವಿವಿಧ ಹಂತಗಳಲ್ಲಿದ್ದ ಎಂಟು ಕಾರುಗಳನ್ನು ಸಾಂಟಾ ಕ್ಯಾಟರೀನಾ ರಾಜ್ಯದ ಗ್ಯಾರೇಜ್‌ನಿಂದ ವಶಪಡಿಸಿಕೊಳ್ಳಲಾಗಿದೆ.

ನಕಲಿ ಫೆರಾರಿ ಹಾಗೂ ಲ್ಯಾಂಬೊರ್ಗಿನಿ ವ್ಯವಹಾರಕ್ಕೆ ಬಿತ್ತು ಬ್ರೇಕ್..!

ವಶಪಡಿಸಿಕೊಳ್ಳಲಾದ ವಾಹನಗಳಲ್ಲಿ ಲ್ಯಾಂಬೊರ್ಗಿನಿ ಗಲ್ಲಾರ್ಡೊ ಹಾಗೂ ಹುರಾಕನ್ ಕಾರುಗಳ ಪ್ರತಿರೂಪಗಳು ಹಾಗೂ ಫೆರಾರಿ 430 ಕಾರಿನ ತದ್ರೂಪುಗಳು ಸೇರಿವೆ. ಈ ನಕಲಿ ಕಾರುಗಳನ್ನು ತಯಾರಿಸಲು ಬಳಸಿದ್ದ ಟೂಲ್ ಹಾಗೂ ಬಿಡಿಭಾಗಗಳನ್ನು ಸಹ ದಾಳಿಯಲ್ಲಿ ವಶಪಡಿಸಿಕೊಳ್ಳಲಾಗಿದೆ. ಇದರ ಜೊತೆಗೆ ಫೋನಿ ಬ್ರಾಂಡ್ ಬ್ಯಾಡ್ಜ್‌ಗಳು ಹಾಗೂ ಕಂಪನಿಗಳ ಲೋಗೊಗಳನ್ನು ಅಳವಡಿಸಿದ್ದ ಸೀಟುಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ.

ನಕಲಿ ಫೆರಾರಿ ಹಾಗೂ ಲ್ಯಾಂಬೊರ್ಗಿನಿ ವ್ಯವಹಾರಕ್ಕೆ ಬಿತ್ತು ಬ್ರೇಕ್..!

ಒ ಗ್ಲೋಬೊ ಪ್ರಕಾರ, ಈ ನಕಲಿ ಕಾರುಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಮಾರಾಟ ಮಾಡಲಾಗುತ್ತಿದ್ದು, ಪ್ರತಿಯೊಂದು ಕಾರಿಗೆ ತಲಾ 50,000 ಡಾಲರ್ ನಿಗದಿಪಡಿಸಲಾಗಿದೆ. ಅಸಲಿ ಕಾರುಗಳ ಬೆಲೆಯ 10%ನಷ್ಟಿದೆ. ತನಿಖಾಧಿಕಾರಿಗಳು ಈ ರೀತಿಯಲ್ಲಿ ಇತರ ಎಷ್ಟು ಕಾರುಗಳನ್ನು ತಯಾರಿಸಿ ಮಾರಾಟ ಮಾಡಿದ್ದಾರೆ ಎಂಬುದನ್ನು ತನಿಖೆ ನಡೆಸುತ್ತಿದ್ದು, ಹೆಚ್ಚುವರಿ ಕಾರ್ಮಿಕರನ್ನು ಕರೆಸಿ ಪರೀಕ್ಷಿಸಲಿದ್ದಾರೆ.

ನಕಲಿ ಫೆರಾರಿ ಹಾಗೂ ಲ್ಯಾಂಬೊರ್ಗಿನಿ ವ್ಯವಹಾರಕ್ಕೆ ಬಿತ್ತು ಬ್ರೇಕ್..!

1960ರ ದಶಕದ 250 ಜಿಟಿಒ ಪ್ರತಿರೂಪಗಳನ್ನು ನೀಡುತ್ತಿದ್ದ ಇಟಾಲಿಯನ್ ಕಂಪನಿಯೊಂದರ ವಿರುದ್ಧ ಫೆರಾರಿ ಕಂಪನಿಯು ನ್ಯಾಯಾಲಯದಲ್ಲಿ ದಾವೆಯನ್ನು ಗೆದ್ದ ಕೆಲವೇ ವಾರಗಳ ನಂತರ ಈ ಘಟನೆ ನಡೆದಿದೆ. ಇದೊಂದು ಉದಾಹರಣೆಯಾಗಿದ್ದು, ಈ ರೀತಿಯಾಗಿ ನಕಲಿ ಕಾರುಗಳ ಹಲವು ಮಿಲಿಯನ್ ಡಾಲರ್ ಮೌಲ್ಯದ ವ್ಯವಹಾರಗಳು ನಡೆಯುತ್ತವೆ.

ಫೆರಾರಿ ಕಂಪನಿಯ ಬಗ್ಗೆ: 1939 ರಲ್ಲಿ ಎಂಜೊ ಫೆರಾರಿ ಸ್ಥಾಪಿಸಿದ ಕಂಪನಿಯು ತನ್ನ ಮೊದಲ ಕಾರನ್ನು 1940ರಲ್ಲಿ ನಿರ್ಮಿಸಿತು. ಆದರೆ, ಮೊದಲ ಫೆರಾರಿ ಬ್ಯಾಡ್ಜ್ ಕಾರುಗಳು ತಯಾರದ ನಂತರದಿಂದ ಕಂಪನಿಯ ಪ್ರಾರಂಭವನ್ನು ಗುರುತಿಸಲಾಗುತ್ತದೆ.

ನಕಲಿ ಫೆರಾರಿ ಹಾಗೂ ಲ್ಯಾಂಬೊರ್ಗಿನಿ ವ್ಯವಹಾರಕ್ಕೆ ಬಿತ್ತು ಬ್ರೇಕ್..!

ಬ್ರಾಂಡ್ ಫೈನಾನ್ಸ್, 2014ರಲ್ಲಿ ಫೆರಾರಿ ಕಂಪನಿಗೆ ವಿಶ್ವದ ಅತ್ಯಂತ ಶಕ್ತಿಶಾಲಿ ಕಂಪನಿ ಎಂದು ರೇಟಿಂಗ್ ನೀಡಿದೆ. 1964ರಲ್ಲಿ ನಿರ್ಮಾಣವಾದ 250 ಜಿಟಿಒ ಕಾರು ಜೂನ್ 2018ರಲ್ಲಿ, ಇತಿಹಾಸದ ಅತ್ಯಂತ ದುಬಾರಿ ಕಾರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಕಾರ್ ಅನ್ನು 70 ಮಿಲಿಯನ್ ಡಾಲರ್‍‍ಗಳಿಗೆ ಮಾರಾಟ ಮಾಡಲಾಗಿತ್ತು. ಇದು ಸಾರ್ವತ್ರಿಕ ದಾಖಲೆಯಾಗಿದೆ.

ನಕಲಿ ಫೆರಾರಿ ಹಾಗೂ ಲ್ಯಾಂಬೊರ್ಗಿನಿ ವ್ಯವಹಾರಕ್ಕೆ ಬಿತ್ತು ಬ್ರೇಕ್..!

ಹೋಂಡಾ ಸಿಟಿ ಮತ್ತು ಮಾರುತಿ ಸುಜುಕಿ ಸಿಯಾಜ್‌ಗೆ ಟಕ್ಕರ್ ನೀಡುತ್ತಿರುವ ಟೊಯೊಟಾ ಯಾರಿಸ್ ಖರೀದಿಗೆ ಈಗಲೇ ಟೆಸ್ಟ್ ಡ್ರೈವ್ ಮಾಡಿ..!

ಕಂಪನಿಯು ಶುರುವಾದಾಗಿನಿಂದಲೂ ಮೋಟಾರ್‌ಸ್ಪೋರ್ಟ್‌ನಲ್ಲಿ ತೊಡಗಿಸಿಕೊಂಡಿದ್ದು, ಫಾರ್ಮುಲಾ ಒನ್ ಹಾಗೂ ಸ್ಪೋರ್ಟ್ಸ್ ಕಾರ್ ರೇಸಿಂಗ್‍‍ಗಳಲ್ಲಿ ಕಂಪನಿಯ ಕ್ರೀಡಾ ವಿಭಾಗವಾದ ಸ್ಕುಡೆರಿಯಾ ಫೆರಾರಿ ಮೂಲಕ ಸ್ಪರ್ಧಿಸುತ್ತಿದೆ. ಇದರ ಜೊತೆಗೆ ಬೇರೆ ತಂಡಗಳಿಗೆ ಕಾರುಗಳನ್ನು ಹಾಗೂ ಎಂಜಿನ್‌ಗಳನ್ನು ಪೂರೈಸುತ್ತದೆ.

ನಕಲಿ ಫೆರಾರಿ ಹಾಗೂ ಲ್ಯಾಂಬೊರ್ಗಿನಿ ವ್ಯವಹಾರಕ್ಕೆ ಬಿತ್ತು ಬ್ರೇಕ್..!

ಲ್ಯಾಂಬೊರ್ಗಿನಿ ಕಂಪನಿಯ ಬಗ್ಗೆ: ಫೆರಾರಿ ಸೇರಿದಂತೆ ಉಳಿದ ಕಂಪನಿಗಳೊಂದಿಗೆ ಸ್ಪರ್ಧಿಸಲು ಇಟಲಿಯ ಉತ್ಪಾದನಾ ಉದ್ಯಮಿ ಫೆರುಸ್ಸಿಯೊ ಲ್ಯಾಂಬೊರ್ಗಿನಿ 1963ರಲ್ಲಿ ಆಟೊಮೊಬಿಲಿ ಫೆರುಸ್ಸಿಯೊ ಲ್ಯಾಂಬೊರ್ಗಿನಿ ಕಂಪನಿಯನ್ನು ಆರಂಭಿಸಿದರು.

ನಕಲಿ ಫೆರಾರಿ ಹಾಗೂ ಲ್ಯಾಂಬೊರ್ಗಿನಿ ವ್ಯವಹಾರಕ್ಕೆ ಬಿತ್ತು ಬ್ರೇಕ್..!

1966 ರಲ್ಲಿ ಬಿಡುಗಡೆಯಾದ ಮಿಯುರಾ ಸ್ಪೋರ್ಟ್ಸ್ ಕೂಪೆ ಕಾರು ವ್ಯಾಪಕ ಮೆಚ್ಚುಗೆಯನ್ನು ಗಳಿಸಿತು. ಈ ಕಾರ್ ಅನ್ನು ಹಿಂದಿನ ತಲೆಮಾರಿನ ಮಿಡ್-ಎಂಜಿನ್, ರಿಯರ್ ವೀಲ್ ಡ್ರೈವ್, ಹೈ ಪರ್ಫಾಮೆನ್ಸ್ ಕಾರುಗಳಿಗೆ ಸ್ಟಾಂಡರ್ಡ್ ವಿನ್ಯಾಸವಾಗಿ ತಯಾರಿಸಲಾಯಿತು. ಲ್ಯಾಂಬೊರ್ಗಿನಿ ಕಂಪನಿಯು ವೇಗವಾಗಿ ಬೆಳೆದರೂ ಸಹ, 1973ರ ವಿಶ್ವಾದ್ಯಂತ ಆರ್ಥಿಕ ಕುಸಿತ ಹಾಗೂ ತೈಲ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಮಾರಾಟದಲ್ಲಿ ಕುಸಿತ ಕಂಡಿತು.

Image Courtesy: Policia Civil de Santa Catarina

Article Published On: Thursday, July 18, 2019, 13:04 [IST]
English summary
Cops shut down fake Ferrari and sham Lamborghini business in Brazil - Read in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+